ಐದು ವರ್ಷಕ್ಕೇ ಇವ್ಳ ಮೇಲೆ ಕಣ್ಣು ಹಾಕಿದೀಯಲ್ಲ ನೀನು; ಅಂಬಿ ಡೈಲಾಗ್‌ಗೆ ಅಪ್ಪು ಬೆಪ್ಪು!
ಅದೊಂದು ದಿನ, ಅಂಬರೀಷ್ ಹುಟ್ಟುಹಬ್ಬದಂದು ನಟರಾದ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅವರಿಬ್ಬರೂ ಅಂಬಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಹೋಗಿದ್ದಾರೆ. ಅಲ್ಲಿ ರೆಬೆಲ್ ಸ್ಟಾರ್ ಅಂಬಿ ಪುನೀತ್ ಕೊಟ್ಟ ಗಿಫ್ಟ್ ತೆಗೆದುಕೊಂಡವರೇ...
ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಅಂದ್ರೆ ಹಾಗೇನೇ.. ಮನಸ್ಸು ಆಗತಾನೇ ಕರೆದಿಟ್ಟ ಹಾಲಿನಷ್ಟು ಶುಭ್ರ. ಯಾರನ್ನೂ ದ್ವೇಷಿಸದ ನೋಯಿಸದ ಜೀವ ಅದು. ಚಿತ್ರರಂಗದ ಒಳಗೆ ಹಾಗೂ ಹೊರಗೆ ಯಾರೂ ಶತ್ರುಗಳಿಲ್ಲ. ಯಾರನ್ನೇ ಕಂಡರೂ ಮಾತು, ಊಟ ಮಾಡಿ, ಅದು ಕುಡಿರಿ, ಇದು ತಿನ್ನಿ ಎಂದು ಹೇಳುವ ಧಾರಾಳಿ. ಕಷ್ಟ ಅಂತ ಮನೆ ಮುಂದೆ ಅಥವಾ ತಮ್ಮ ಮುಂದೆ ಯಾರಾದರೂ ಕೈ ಕಟ್ಟಿ ನಿಂತರೆ ಖಾಲಿ ಕೈನಲ್ಲಿ ಅವರನ್ನು ಕಳಿಸಿದ್ದೇ ಇಲ್ಲ 'ಕಲಿಯುಗದ ಕರ್ಣ' ಖ್ಯಾತಿಯ ನಟ ಅಂಬರೀಷ್.
ಇನ್ನು ಅಪ್ಪು ಖ್ಯಾತಿಯ ಕನ್ನಡದ ಕಂದ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಬಗ್ಗೆ ಹೇಳೋದು ಏನಿದೆ. ಅವರ ಮಗುವಿನಂಥ ಮುಗ್ಧ ನಗು ನೋಡಿದರೇ ಅವರು ಎಂಥವರು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಆ ನಿಶ್ಕಲ್ಮಶ ನಗುವಿನ ಹಿಂದೆ ಎಲ್ಲಾ ನೋವುಗಳೂ ಮರೆಯಾಗಿವೆ. ಎಲ್ಲರನ್ನೂ ಪ್ರೀತಿಸುವ, ಎಲ್ಲರಲ್ಲೂ ಪರಮಾತ್ಮನನ್ನು ಕಾಣುವ ಅಲ್ಪಾಯುಷಿಯಾದರೂ ದೀರ್ಘಾವಧಿ ಅಭಿಮಾನಿಗಳನ್ನು ಸಂಪಾದಿಸಿದ ಮುತ್ತುರಾಜನ ಮುದ್ದಿನ ಕಣ್ಮಣಿ.
ಪುನೀತ್ ಜೊತೆ ದಿನಕರ್ ಮಾಡಬೇಕಿದ್ದ ಸಿನಿಮಾ ಅಪ್ಡೇಟ್; 'ಅಪ್ಪು' ಜಾಗದಲ್ಲಿ ಯಾರು?
ಅದೊಂದು ದಿನ, ಅಂಬರೀಷ್ ಹುಟ್ಟುಹಬ್ಬದಂದು ನಟರಾದ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅವರಿಬ್ಬರೂ ಅಂಬಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಹೋಗಿದ್ದಾರೆ. ಅಲ್ಲಿ ರೆಬೆಲ್ ಸ್ಟಾರ್ ಅಂಬಿ ಪುನೀತ್ ಕೊಟ್ಟ ಗಿಫ್ಟ್ ತೆಗೆದುಕೊಂಡವರೇ ಅದೊಂದು ಡೈಲಾಗ್ ಹೇಳಿದರು ನೋಡಿ, ಸ್ವತಃ ಪುನೀತ್, ಶಿವಣ್ಣ ಸೇರಿದಂತೆ ಅಲ್ಲಿದ್ದ ಎಲ್ಲರೂ ನಗೆಗಡಲಿನಲ್ಲಿ ತೇಲಿಹೋದರು. ಇನ್ನು ಪುನೀತ್ ಮುಖವಂತೂ ನಾಚಿಕೆಯಿಂದ ಕೆಳಗಾಗಿ ಅವರು ಮುಖ ಒರೆಸಿಕೊಳ್ಳುತ್ತ ಮಗುವಿನಂತೆ ನಕ್ಕುಬಿಟ್ಟರು.
ಹಾಗಿದ್ದರೆ ರೆಬೆಲ್ ಅಂಬಿ ಅಲ್ಲೇ ಜೊತೆಯಲ್ಲಿದ್ದ ತಮ್ಮ ಪತ್ನಿಸುಮಲತಾ (Sumalatha Ambareesh) ಎದುರಿಗೇನೇ ಪುನೀತ್ ನೋಡಿ 'ಅಲ್ಲಾ, ಐದು ವರ್ಷಕ್ಕೇ ಇವಳ ಮೇಲೆ ಕಣ್ಣು ಹಾಕಿದೀಯಲ್ಲ ನೀನು, ಈಗ ನೋಡಿದ್ರೆ.. 'ಎಂದು ಹೇಳಿಯೇ ಬಿಟ್ಟರು. ಅಲ್ಲಿದ್ದ ಸುಮಲತಾ ಕೂಡ ಜೋರಾಗಿ ನಕ್ಕುಬಿಟ್ಟರು. ಪುನೀತ್ ರಾಜ್‌ಕುಮಾರ್ ಅಂತೂ ಏನು ಹೇಳಬೇಕು ಎಂದು ತೋಚದೇ ಕಕ್ಕಾಬಿಕ್ಕಿಯಾಗಿ ಮುಜುಗರದಿಂದ ನಗುತ್ತಾ ಮುಖದ ಮೇಲೆಲ್ಲಾ ಕೈ ಹಾಕಿಕೊಳ್ಳುತ್ತ ನಗುತ್ತ ನಿಂತುಬಿಟ್ಟರು.
ಅರ್ಧ ದೇಹ ಬಿಟ್ಕುಕೊಳ್ಳುವ ಹುಡ್ಗೀರಿಗೆ ಅಣ್ಣಾವ್ರು ಹೇಳಿದ ಕಿವಿ ಮಾತಿದು!
ಹೌದು, ನಟ ಅಂಬರೀಷ್ ಅವರು ಹಾಗೆಯೇ ಇದ್ದರು. ಅವರಿದ್ದಲ್ಲಿ ನಗು, ಅವರಿದ್ದಲ್ಲಿ ಖುಷಿ ಕೈಕಾಲು ಬಡಿಯುತ್ತಿತ್ತು. ಇಬ್ಬರು ಪರಸ್ಪರ ದ್ವೇಷಿಸುವ ವ್ಯಕ್ತಿಗಳೂ ಕೂಡ ನಟ ಅಂಬರೀಷ್ ಎದುರು ಇದ್ದರೆ ಪರಸ್ಪರ ದ್ವೇಷ ಮರೆತು ಸ್ನೇಹಿತರಂತೆ ಆಗಿಬಿಡುತ್ತಿದ್ದರು. ಚಿತ್ರರಂಗದಲ್ಲಿ 'ಅಜಾತಶತ್ರು' ಎಂಬಂತೆ ಬದುಕಿ ಬಾಳಿದವರು ನಟ ಅಂಬರೀಷ್. ಅಂಥವರು ಅಪ್ಪು ಸಿಕ್ಕಾಗ ಇಂಥ ಮಾತು ಹೇಳದೇ ಇರುತ್ತಾರೆಯೇ? ಅಂಬಿ ಯಾರಿಗೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲರನ್ನೂ ಕೇರ್ ಮಾಡುತ್ತಿದ್ದರು.
ಆದರೆ, ಅವರು ಅಲ್ಲಿ ಅಂದು ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿ ಯಾಕೆ ಹಾಗಂದ್ರು ಗೊತ್ತಾ? ಅಪ್ಪು ಚಿಕ್ಕವರಿದ್ದಾಗ ನಟಿ ಸುಮಲತಾರನ್ನು ನೋಡಿ 'ನಂಗೆ ಅವರು ಇಷ್ಟ, ಅವರನ್ನೇ ಮದುವೆ ಆಗ್ತೀನಿ' ಅಂದಿದ್ದರಂತೆ. ಪುನೀತ್ ಅವರಿಗೆ ಆಗಿನ್ನೂ ಐದು ವರ್ಷ, ನಟಿ ಸುಮಲತಾರನ್ನು ನೋಡಿ ಕ್ರಶ್ ಅಗಿಬಿಟ್ಟಿತ್ತು ಎನ್ನಲಾಗಿದೆ. ಅದನ್ನು ಸ್ವತಃ ಪುನೀತ್ ರಾಜ್‌ಕುಮಾರ್ ಕೂಡ ಒಮ್ಮೆ ಎಲ್ಲೋ ಹೇಳಿಕೊಂಡಿದ್ದಾರೆ. ಅದು ಸಮಲತಾ ಸೇರಿದಂತೆ ಅಂಬರೀಷ್ ಅವರಿಗೂ ಗೊತ್ತಿತ್ತು.
ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!