ಯಶ್ ಬೆಳೆದಿರುವುದು ನೋಡಿ ಹೊಟ್ಟೆ ಕಿಚ್ಚು ಇಲ್ಲ, ಆಸೆ ಪಟ್ಟಿದ್ದು ಸಿಕ್ಕಿದೆ: 'ಅಮೃತಾದಾರೆ' ರಾಜೇಶ್ ಹೇಳಿಕೆ ವೈರಲ್
ನಟ ಯಶ್ ಜೊತೆ ಉತ್ತಮ ಒಡನಾಟ ಹೊಂದಿರುವ ರಾಜೇಶ್ ನಟರಂಗ ಅವರ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ.....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿಯಲ್ಲಿ ಗೌತಮ್ ಧಿವಾನ್ ಪಾತ್ರದಲ್ಲಿ ಮಿಂಚುತ್ತಿರುವ ಸ್ಯಾಂಡಲ್‌ವುಡ್ ನಟ ರಾಜೇಶ್ ನಗರಂಗ ತಮ್ಮ ಆಪ್ತ ಸ್ನೇಹಿತ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳ ಆಯ್ಕೆ, ಬೆಳವಣಿಗೆ ಬಗ್ಗೆ ತಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ.
'ಯಶ್ ಬೆಳೆಯುವುದು ನೋಡಿ ಖುಷಿ ಇದೆ ಯಾವ ರೀತಿ ಹೊಟ್ಟೆ ಕಿಚ್ಚು ಇಲ್ಲ. ನಾನು ಒಂದು ವಿಚಾರವನ್ನು ನಂಬುತ್ತೀನಿ...ಅವರ ಪಾಲಿಂದು ಅವರ ಪಾಲಿಗೆ ಸೇರಿದ್ದು ಅವರಿಗೆ ಸಿಕ್ಕೆ ಸಿಗುತ್ತದೆ. ನಾನು ಆಸೆ ಪಟ್ಟಿದ್ದಲ್ಲಿ ದೊಡ್ಡದಾಗಿ ಸಿಗದೇ ಇರಬಹುದು ಆದರೆ ನನಗೆ ಯಾವತ್ತೂ ಮೋಸ ಆಗಿಲ್ಲ. ಹೀಗಾಗಿ ನಮ್ಮ ಜೊತೆಗಿದ್ದವರು ದೊಡ್ಡ ಮಟ್ಟದಲ್ಲಿ ಬೆಳೆದಿರುವುದಕ್ಕೆ ಯಾವ ಕಂಪ್ಲೇಂಟ್ ನನಗೆ ಇಲ್ಲ.. ಉದಾಹರಣೆಗೆ ಯಶ್‌ನ ನೋಡಿದರೆ ಕರಿಯರ್ ಶುರು ಮಾಡುವಾಗ ಅವನಿಗೆ ಎಲ್ಲಿ ಇರಬೇಕು ಅನ್ನೋದು ಚೆನ್ನಾಗಿ ಗೊತ್ತಿತ್ತು. ಹಲವರು ನಮಗೆ ಕೇಳುತ್ತಾರೆ ಯಾಕೆ ನೀವು ಹೀರೋ ಆಗಿಲ್ಲ ಅಂತ....ಅದಕ್ಕೆ ನನ್ನ ಉತ್ತರ ಏನು ಅಂದ್ರೆ ನಾನು ದೊಡ್ಡ ಪರದೆಯಲ್ಲಿ ಹೀರೋನ ನೋಡಿದಾಗ ನನ್ನಲ್ಲಿ ಆ ಕ್ವಾಲಿಟಿಗಳು ಇಲ್ಲ ಅನ್ನೋದು ಗೊತ್ತಾಗುತ್ತದೆ ಅಥವಾ ನಾನು ಅದಲ್ಲ ಅನ್ನೋದು ಗೊತ್ತಾಗುತ್ತದೆ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ರಾಜೇಶ್ ಮಾತನಾಡಿದ್ದಾರೆ.
ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್
'ನೋಡಿ ಎಂಜಾಯ್ ಮಾಡುತ್ತೀನಿ ಹಾಗಂತ ನಾನು ಹಾಗೆ ಆಗಬೇಕು ಅನ್ನೊ ಆಸೆ ಇಲ್ಲ. ಯಶ್, ಗಣೇಶ್, ದುನಿಯಾ ವಿಜಯ್....ಎಲ್ಲರನ್ನು ನೋಡಿದ್ದೀನಿ ಅವರು ಆ ಸ್ಥಾನಕ್ಕೆ ಆಸೆ ಪಟ್ಟವರು ಹಾಗೂ ಆ ಸ್ಥಾನಕ್ಕೆ ಹೋರಾಟ ಮಾಡಿದವರು. ಅವರಿಗೆ ಆ ಸ್ಥಾನ ಸಿಕ್ಕಿದೆ. ನನಗೆ ಯಾಕೆ ಹೀರೋ ಸ್ಥಾನ ಸಿಕ್ಕಿಲ್ಲ ಅಂದ್ರೆ ಅವರಷ್ಟು ದೇಹ ದಂಡಿಸಿಲ್ಲ ಅಲ್ಲದೆ ನಾನು ಸ್ಕ್ರೀನ್ ಮೇಲೆ ಅವೆಲ್ಲಾ ಮಾಡುವಾಗ ಸ್ಟುಪಿಡ್ ಆಗಿ ಕಾಣಿಸುತ್ತೀನಿ. ಅವರನ್ನು ನೋಡಿದಾಗ ಖುಷಿಯಾಗುತ್ತದೆ ಏಕೆಂದರೆ ಅವರು ಆಸೆ ಪಟ್ಟಿದ್ದನ್ನು ಪಡೆದುಕೊಂಡಿದ್ದಾರೆ. ಅವರ ಯಶಸ್ಸಿನಲ್ಲಿ ನಮ್ಮ ಪಾಲುದಾರಿಕೆ ಏನೂ ಇಲ್ಲ' ಎಂದು ರಾಜೇಶ್ ಹೇಳಿದ್ದಾರೆ.
ದೊಗಳೆ ಶರ್ಟ್ ಮೇಲೆ ಲಂಗಾ ಹಾಕಿಕೊಂಡ ಅನುಪಮಾ ಗೌಡ; ರೆಡಿಯಾಗುತ್ತಿರುವ ಫೋಟೋ ಲೀಕ್
ರಾಜೇಶ್ ಬಣ್ಣದ ಪ್ರಪಂಚದಲ್ಲಿ ಟಾಪ್‌ನಲ್ಲಿ ಇರುವ ಯಶ್ ಆಗಷ್ಟೆ ತಮ್ಮ ಕನಸಿನ ಕಡೆ ಹೆಜ್ಜೆ ಇಡಲು ಆರಂಭಿಸಿದ್ದರು. ಆ ಸಮಯದಲ್ಲಿ ರಾಜೇಶ್ ಹಲವರಿಗೆ ಸಪೋರ್ಟ್ ಆಗಿ ನಟಿಸಿ ನಿಂತಿದ್ದಾರೆ. ಹೀಗಾಗಿ ಎಲ್ಲೇ ಯಶ್ ಮತ್ತು ಗಣೇಶ್ ಭೇಟಿ ಮಾಡಿದರೂ ಸ್ನೇಹಿತರ ರೀತಿಯಲ್ಲಿ ಮಾತನಾಡುತ್ತಾರೆ.
ದೇವರು ಪವಿತ್ರಾ ಗೌಡಗೆ ಸೌಂದರ್ಯ ಕೊಟ್ಟಿದ್ದಾನೆ...ನನ್ನ ಚಿನ್ನು ತಪ್ಪು ಮಾಡಿಲ್ಲ: ಮಾಜಿ