Small Screen
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಪಮಾ ಗೌಡ ಇದೀಗ ಹೊಸದಾಗಿ ಗೆಟ್ ರೆಡಿ ವಿತ್ ಮಿ ವಿಡಿಯೋಗಳನ್ನು ಕ್ರಿಯೇಟ್ ಮಾಡಲು ಶುರು ಮಾಡಿದ್ದಾರೆ. ಪ್ರತಿಯೊಂದು ಲುಕ್ ಸಖತ್ ವೈರಲ್ ಆಗುತ್ತಿದೆ.
ಇತ್ತೀಚಿಗೆ ಕ್ರಿಯೇಟ್ ಮಾಡಿದ ಲುಕ್‌ನಲ್ಲಿ ಅನುಪಮಾ ಗೌಡ ದೊಗಳೆ ದೊಗಳೆ ಗ್ರೀನ್ ಬಣ್ಣದ ಶರ್ಟ್ ಮೇಲೆ ಕಪ್ಪು ಬಣ್ಣ ಡ್ರೇಪ್ ಆನ್ ಸ್ಕರ್ಟ್ ಧರಿಸಿದ್ದಾರೆ. ಈ ದೊಗಳೆ ಶರ್ಟ್ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದೆ.
ಅನುಪಮಾ ಗೌಡ ಯಾವುದೇ GRWM ಲುಕ್ ಅಪ್ಲೋಡ್ ಮಾಡಿದಾಗ ತಾವು ಧರಿಸಿರುವ ಉಡುಪುಗಳ ಲಿಂಕ್ ಅಥವಾ ಬ್ರ್ಯಾಂಡ್ ಹೆಸರುಗಳನ್ನು ಹಂಚಿಕೊಳ್ಳುತ್ತಾರೆ. ಸಣ್ಣ ಪುಟ್ಟ ಮಾಹಿತಿನೂ ರಿವೀಲ್ ಮಾಡ್ತಾರೆ.
ಅನುಪಮಾ ಧರಿಸಿರುವ ದೊಗಳೆ ಶರ್ಟ್ ಎಚ್ ಆಂಡ್ ಎಮ್ ಬ್ರ್ಯಾಂಡ್‌ಗೆ ಸೇರಿದ್ದು, ಕಪ್ಪು ಬಣ್ಣದ ಸ್ಕರ್ಟ್ ಮಿಂತ್ರಾದ ಆಪ್‌ನಲ್ಲಿ ಖರೀದಿ ಮಾಡಿದ್ದಂತೆ. ಧರಿಸಿರುವ ಹೀಲ್ಸ್ ಕೂಡ ಮಿಂತ್ರಾದಲ್ಲಿ ಖರೀದಿಸಿರುವುದು.
ಅನುಪಮಾ ಯಾವುದೇ ಲುಕ್ ಆಯ್ಕೆ ಮಾಡಿಕೊಂಡರು ಸಿಂಪಲ್ ಲುಕ್ ಇಷ್ಟ ಪಡುತ್ತಾರೆ.ಈ ಲುಕ್‌ನಲ್ಲಿ ಕ್ಯಾಸಿಯೋ ವಾಚ್ ಧರಿಸಿದ್ದಾರೆ ಹಾಗೂ ಗೋಲ್ಡ್ ಬಣ್ಣದ ಒಂದೆರಡು ಆರ್ಟಿಫಿಶಿಯಲ್ ಆಭರಣ ಧರಿಸಿದ್ದಾರೆ.
ಅನುಪಮಾ ಗೌಡ ಈ ಸದಾ ಸಿಂಪಲ್ ಲುಕ್ ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಧರಿಸುವುದು ಸಖತ್ ದುಬಾರಿ ಬ್ರ್ಯಾಂಡ್ ವಸ್ತ್ರಗಳು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮಜಾ ಭಾರತ ಹಾಸ್ಯ ಕಾರ್ಯಕ್ರಮದ ನಂತರ ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ ಸೀರಿಸ್ ಹಾಗೂ ಅವಾರ್ಡ್ ಕಾರ್ಯಕ್ರಮಗಳನ್ನು ಅನುಒಮಾ ನಿರೂಪಣೆ ಮಾಡಿದ್ದಾರೆ. ನಟಿಗಿಂತ ಆಂಕರ್ ಆಗಿ ಜನಪ್ರಿಯತೆ ಗಳಿಸಿದ್ದಾರೆ.