ನನ್ನ ಲೈಫ್ ಕಂಟ್ರೋಲ್ ಮಾಡುವ ಹಕ್ಕು ಆ ವ್ಯಕ್ತಿಗೆ ಕೊಟ್ಟಿದ್ದೆ; ಡಿಪ್ರೆಶನ್‌ಗೆ ಜಾರಿದ ನಟಿ ಅಮೃತಾ ಅಯ್ಯಂಗಾರ್
ಇಂಡಸ್ಟ್ರಿಗೆ ಕಾಲಿಡುವ ಮುನ್ನ ಎದುರಿಸಿದ ಅವಮಾನಗಳಿಂದ ಡಿಪ್ರೆಶನ್‌ಗೆ ಜಾರಿದ್ದರು ಅಮೃತಾ. ಈಗಲೂ ತಾಯಿ ಬಸ್‌ನಲ್ಲಿ ಓಡಾಡುತ್ತಾರಂತೆ.
ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಜೋ ಉರ್ಫ್ ಅಮೃತಾ ಅಯ್ಯಂಗಾರ್ ಯಶಸ್ವಿ ನಟಿಯಾಗಿ ಮಿಂಚುತ್ತಿದ್ದಾರೆ. ಇದ್ದಾದ ಮೇಲೆ ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾರ್ಜುನಾ, ಬಡವ ರಾಸ್ಕಲ್, ಲವ್ ಮಾಕ್ಟೇಲ್ 2 ಸೇರಿದಂತೆ ಸೂಪರ್ ಹಿಟ್ ಬಿಗ್ ಬಜೆಟ್ ಸಿನಿಮಾಗಳಲ್ಲಿ ಅಮೃತಾ ನಟಿಸಿದ್ದಾರೆ. ಈ ಜರ್ನಿಯಲ್ಲಿ ಎದುರಾದ ಡಿಪ್ರೆಶನ್‌ನಿಂದ ಹೇಗೆ ಹೊರ ಬಂದರು ಎಂದು ಹಂಚಿಕೊಂಡಿದ್ದಾರೆ.
'ನಾನು ಇಂಡಸ್ಟ್ರಿಗೆ ಕಾಲಿಡುವ ಮುನ್ನ ತುಂಬಾ ಜನ ನನ್ನನ್ನು ಕಳೆಗೆ ಹಾಕುವ ಪ್ರಯತ್ನ ಮಾಡಿದ್ದಾರೆ. ನಾನು ಜೀವನದಲ್ಲಿ ಏನೂ ಮಾಡುವುದಿಲ್ಲ ಅನ್ನೋ ಹಾಗೆ ವೈಯಕ್ತಿಕ ಜೀವನದಲ್ಲಿ ಕೆಳಗೆ ಹಾಕಿದ್ದರು. ನೀನು ಏನು ಸುಂದರವಾಗಿದ್ಯಾ ಅಂದುಕೊಂಡಿದ್ಯಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದಕ್ಕೆ ಅಂತ ಅಂದಿದ್ದಾರೆ. ನನ್ನ ಕಂಫರ್ಟ್ ಝೋನ್‌ನಿಂದ ಹೊರ ಬಂದು ನಾನು ಸಿನಿಮಾ ಮಾಡಬೇಕಿತ್ತು ಹೀಗಾಗಿ ನಾನು ರಿಸ್ಕ್ ತೆಗೆದುಕೊಳ್ಳಬೇಕಿತ್ತು. ಆರಂಭದಲ್ಲಿ ಜನರು ನನ್ನನ್ನು ತೆಗೆದುಕೊಳ್ಳುತ್ತಿದ್ದ ರೀತಿಗೆ ಮಾನಸಿಕವಾಗಿ ಕುಗ್ಗುತ್ತಿದೆ. ಆ ಸಮಯಲ್ಲಿ ನಾನು ಧೈರ್ಯ ತೆಗೆದುಕೊಂಡು ಬದಲಾದೆ. ನಾನು ಪ್ರೀತಿ ಕೊಟ್ಟರೆ ಸಂಪೂರ್ಣವಾಗಿ ಪ್ರೀತಿ ಕೊಡುತ್ತೀನಿ. ನನಗೆ ಒಬ್ಬರು ಇಷ್ಟ ಆಗಿಲ್ಲ ಅಥವಾ ಅವರ ಜೊತೆ ಕನೆಕ್ಟ್ ಆಗಿಲ್ಲ ಅಂದ್ರೆ ಮಾತನಾಡಲು ಹೋಗುವುದಿಲ್ಲ. ಸ್ನೇಹಿತರಿಗೆನೇ ನಾನು ತುಂಬಾ ಮಾಡುತ್ತಿದ್ದೆ' ಎಂದು ರ್ಯಾಪಿಡ್ ರಶ್ಮೆ ಯುಟ್ಯೂಬ್ ಚಾನೆಲ್‌ನಲ್ಲಿ ಅಮೃತಾ ಅಯ್ಯಂಗಾರ್ ಮಾತನಾಡಿದ್ದಾರೆ.
ಶಿವಣ್ಣನಿಗೆ 5 ಗಂಟೆಯಲ್ಲಿ 6 ಆಪರೇಷನ್ 190 ಸ್ಟಿಚ್ ಹಾಕಿದ್ದಾರೆ: ಮಧು ಬಂಗಾರಪ್ಪ ಹೇಳಿಕೆ ವೈರಲ್
'ನನ್ನ ಜೀವನವನ್ನು ಕಂಟ್ರೋಲ್ ಮಾಡುವ ಅಧಿಕಾರವನ್ನು ಒಬ್ಬ ವ್ಯಕ್ತಿಗೆ ಕೊಟ್ಟುಬಿಟ್ಟಿದ್ದೀನಿ ಅನಿಸಿತ್ತು. ಆಗ ಅನಿಸಲು ಶುರುವಾಗಿದ್ದು ಏನೆಂದರೆ ನನ್ನನ್ನು ಬೆಳೆಸಲು ಅಮ್ಮ ತುಂಬಾ ಕಷ್ಟ ಪಟ್ಟಿದ್ದಾಳೆ. ಮತ್ತೊಂದು ಮದುವೆ ಮಾಡಿಕೊಳ್ಳಬಹುದಿತ್ತು ಆದರೆ ನನ್ನ ಬಗ್ಗೆ ಯೋಚನೆ ಮಾಡಿ ನನ್ನ ಕಡೆ ಗಮನ ಕೊಟ್ಟರು. ಇವತ್ತಿನವರೆಗೂ ಆಟೋಗೆ ದುಡ್ಡು ಖರ್ಚು ಮಾಡುವುದಿಲ್ಲ ಅಮ್ಮ, ಬಸ್ ತೆಗೆದುಕೊಂಡು ಓಡಾಡುತ್ತಾರೆ. ಇವತ್ತಿನವರೆಗೂ ದುಡ್ಡು ಸೇವಿಂಗ್ ಮಾಡಿಕೊಂಡು ಬದುಕುತ್ತಿದ್ದಾರೆ. ಅಯ್ಯೋ ನನ್ನ ಮಗಳು ಹೀರೋಯಿನ್ ನನಗೆ ಕಾರು ಬೇಕು ಎನ್ನುವುದಿಲ್ಲ ಈಗಲೂ ಬಸ್‌ನಲ್ಲಿ ಓಡಾಡುತ್ತಾರೆ. ನನ್ನ ಕಷ್ಟಗಳನ್ನು ಟೀಚರ್‌ಗಳ ಜೊತೆ ಹಂಚಿಕೊಳ್ಳುತ್ತಿದೆ ಆಗ ಅವರು ಒಂದು ಮಾತು ಹೇಳಿದ್ದರು, ನೀನು ಮುಂದಿನ ಜರ್ನಿ ನೋಡಬೇಡ ಹಿಂದಿನ ಜರ್ನಿ ನೋಡಿ. ಆಗ ನಿನ್ನನ್ನು ಕೆಳಗೆ ಹಾಕಿದವರು ಕುಗ್ಗಿಸಿದವರು ನಿನ್ನ ಜೊತೆ ನಿಂತಿಲ್ಲ ಎಂದರು. ಆ ಮಾತಿನಲ್ಲಿ ಅರ್ಥ ಸಿಕ್ತು. ಮನಸ್ಸು ಕಲ್ಲಾಗಿದೆ ಹೀಗಾಗಿ ಯಾರೇ ಸ್ನೇಹ ಬಿಟ್ಟರು ನಾನು ಕೇರ್ ಮಾಡುವುದಿಲ್ಲ' ಎಂದು ಅಮೃತಾ ಹೇಳಿದ್ದಾರೆ.
ಕನ್ನಡದಲ್ಲಿ ಬೆಳೆದು ಹಿಂದಿಗೆ ಮಾರಿಕೊಂಡು ಈಗ 2.5 ಲಕ್ಷ ಕೇಳ್ತಾರೆ; ಸಂಜಿತ್ ಹೆಗ್ಡೆ ವಿರುದ್ಧ ಕೆ.ಮಂಜು ಗರಂ