ಕನ್ನಡದಲ್ಲಿ ಬೆಳೆದು ಹಿಂದಿಗೆ ಮಾರಿಕೊಂಡು ಈಗ 2.5 ಲಕ್ಷ ಕೇಳ್ತಾರೆ; ಸಂಜಿತ್‌ ಹೆಗ್ಡೆ ವಿರುದ್ಧ ಕೆ.ಮಂಜು ಗರಂ

ಕನ್ನಡ ಸಿನಿಮಾ ಹಾಡಲು ಯಾಕೆ ಅಸಡ್ಡೆ...ಸಂಭಾವನೆ ಕೇಳುವುದಕ್ಕೂ ಮಿತಿ ಇಲ್ಲವೇ? ಕೆ.ಮಂಜು ಹೇಳಿದ ಮಾತುಗಳನ್ನು ಒಪ್ಪಿಕೊಂಡ ಕನ್ನಡಿಗರು.

Sanjith hegde hegde demand heavy remuneration to sing kannada songs saya K manju

ನಟ ರಿಷಿ ಮತ್ತು ಪ್ರಿಯಾಂಕಾ ಕುಮಾರ್ ಜೋಡಿಯಾಗಿ ನಟಿಸಿರುವ ರುದ್ರ ಗರುಡ ಪುರಾಣ ಸಿನಿಮಾ ಇದೇ ಜನವರಿ 24ರಂದು ರಿಲೀಸ್ ಆಗುತ್ತಿದೆ. ಕೆಎಸ್‌ ನಂದೀಶ್ ಆಕ್ಷನ್ ಕಟ್ ಹೇಳಿದ್ದು ಕಥೆ ಮೇಲೆ ಕನ್ನಡಿಗರಿಗೆ ಕುತೂಹಲ ಹೆಚ್ಚಾಗಿದೆ. ಇತ್ತೀಚಿಗೆ ನಡೆದ ಸಿನಿಮಾ ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ.ಮಂಜು ಗಾಯಕರ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ಕನ್ನಡದಲ್ಲಿ ಬೆಳೆದ ಗಾಯಕರನ್ನು ಮತ್ತೆ ಕನ್ನಡಕ್ಕೆ ಕರೆ ತರಲು ಎಷ್ಟು ಕಷ್ಟ ಇದೆ ಎಂದು ಅರ್ಥ ಮಾಡಿಸಿದ್ದಾರೆ.

'ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲರೂ ಬೆಳೆದಾಗ ಬೇರೆ ಕಡೆ ಹೋಗುತ್ತಾರೆ. ಆದರೆ ಎಲ್ಲರೂ ಇಲ್ಲೇ ಇರಿ ಎಂದು ಹೇಳಲು ಇಷ್ಟ ಪಡುತ್ತೀನಿ. ಗಾಯಕ ಸಂಜಿತ್ ಹೆಗ್ಡೆರವರನ್ನು ಎಲ್ಲರೂ ಇಲ್ಲಿಂದ ಬೆಳೆಸಿದರು ಆದರೆ ಅವರು ಹಿಂದಿಗೆ ಮಾರಿಕೊಂಡು ಬಿಟ್ಟಿದ್ದಾರೆ. ಕನ್ನಡ ಸಿನಿಮಾ ಹಾಡು ಅಂದ್ರೆ 2.5 ಲಕ್ಷ ಕೇಳ್ತಾನೆ. ಇದೇ ಬಾಂಬೆಯವರು ಏನು ಮಾಡುತ್ತಾರೆ ಕೇಳಿ...ಸೋನು ನಿಗಮ್ ಮರಾಠಿ ಹಾಡು ಹೇಳಿದರೆ 40-50 ಸಾವಿರ ಕೊಡಲ್ಲ, ಜಾಸ್ತಿ ಕೇಳಿದ್ದರೆ ಅವರಲ್ಲಿ ಓಡಿಸಿಬಿಡುತ್ತಾರೆ. ಆದರೆ ನಮ್ಮಲ್ಲಿ ಹಾಗೆ ನಡೆಯುವುದಿಲ್ಲ. ಇವರು ಇಲ್ಲಿಂದ ಶುರು ಮಾಡುತ್ತಾರೆ ಜನರು ಇಷ್ಟ ಬಿದ್ದು ಬೆಳೆಸುತ್ತಾರೆ ಆದರೆ ಅವರು ಅದೇ ಎರಡು ವರೆ ಲಕ್ಷ ಕೇಳ್ತಾರೆ ಹಾಡು ಹಾಡುವುದಿಲ್ಲ. ನಮ್ಮಲ್ಲಿ ಬೆಳೆದು ಹೋದವರು ಬೇರೆ ಇರ ಇರುತ್ತಾರೆ. ನಿಮ್ಮನ್ನು ಜನರು ಇಲ್ಲಿ ಬೆಳೆಸಿ ಉಳಿಸಿರುತ್ತಾರೆ ಅವರಿಗೆ ಮಾಡಿ ಚಿತ್ರರಂಗಕ್ಕೆ ಮಾಡಿ. ಇಡೀ ಭಾರತೀಯ ಚಿತ್ರರಂಗ ತಿರುಗಿ ಕನ್ನಡ ಚಿತ್ರರಂಗವನ್ನು ನೋಡುವ ಮಟ್ಟಕ್ಕೆ ಬೆಳೆದಿದೆ' ಎಂದು ವೇದಿಕೆ ಮೇಲೆ ಮಾತನಾಡಿದ್ದಾರೆ ಮಂಜು.

ಫಾರಿನ್ ಬೆಕ್ಕು ಮುದ್ದು ಮಾಡುತ್ತಿರುವ ವಿಜಯಲಕ್ಷ್ಮಿ ದರ್ಶನ್: ಫೋಟೋ ವೈರಲ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 13ರ ಮೂಲಕ ಸಂಜಿತ್ ಹೆಗಡೆ ಬೆಳಕಿಗೆ ಬರುತ್ತಾರೆ. ಇದಾದ ಮೇಲೆ ಸರಿಗಮಪ ತಮಿಳು ಸೀನಿಯರ್ ಕಾರ್ಯಕ್ರಮದಲ್ಲೂ ಭಾಗಿಯಾಗಿ ಜನರನ್ನು ಗಳಿಸುತ್ತಾರೆ. ಇಲ್ಲಿಂದ ಸಿನಿಮಾಗಳಲ್ಲಿ ಹಾಡಲು ಅವಕಾಶಗಳನ್ನು ಪಡೆಯುತ್ತಾರೆ. ಸಾಲು ಸಾಲು ಕನ್ನಡ ಸಿನಿಮಾಗಳನ್ನು ಹಾಡುತ್ತಿದ್ದ ಸಂಜಿತ್ ಇದ್ದಕ್ಕಿದ್ಧಂತೆ ಪರಭಾಷೆಗಳಲ್ಲಿ ಹಾಡಲು ಶುರು ಮಾಡಿ ಕನ್ನವನೇ ಮರೆತುಬಿಟ್ಟಿದ್ದಾರಂತೆ. 2018ರಲ್ಲಿ ಮಿರ್ಚಿ ಮ್ಯೂಸಿಕ್ ಅವಾರ್ಡ್ ಬೆಸ್ಟ್‌ ಮೇಲ್ ವೋಕಲಿಸ್ಟ್‌ ಅವಾರ್ಡ್ ಪಡೆದಿದ್ದಾರೆ, 2019ರಲ್ಲಿ ಕನ್ನಡ ಇಂಟರ್‌ನ್ಯಾಷನಲ್ ಮ್ಯೂಸಿಕ್ ಅಕಾಡಮಿ ಅವಾರ್ಡ್‌ ಫಾರ್ ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಅವಾರ್ಡ್ ಪಡೆದಿದ್ದಾರೆ. ಎರಡು ಮೂರು ಸಲ ಸೈಮಾ ಅವಾರ್ಡ್‌ಗೆ ನಾಮಿನೇಟ್ ಆಗಿ ಮೂರನೇ ಸಲ, 2019ರಲ್ಲಿ ಶಾಕುಂತಲೇ ಸಿಕ್ಕಳು ಹಾಡಿಗೆ ಅವಾರ್ಡ್ ಪಡೆಯುತ್ತಾರೆ. ಇದಾದ ಮೇಲೆ ಸಿಕ್ಕಾಪಟ್ಟೆ ಹಾಡುಗಳನ್ನು ಸಂಪೋಸ್ ಮಾಡುತ್ತಾರೆ. 

ರಾಧಿಕಾ ನಾರಾಯಣ್ ಬೋಲ್ಡ್‌ ಫೋಟೋ ವೈರಲ್; ಹುಣ್ಣಿಮೆ ಚಂದಿರನೇ ಬರಬೇಕಿತ್ತಾ ಎಂದ ನೆಟ್ಟಿಗರು!

Latest Videos
Follow Us:
Download App:
  • android
  • ios