Asianet Suvarna News Asianet Suvarna News

Avatara Purusha: ಎಲ್ಲಾ ಅಭಿಮಾನಿಗಳು ಎಲ್ಲರ ಸಿನಿಮಾ ನೋಡಬೇಕು: ಧ್ರುವ ಸರ್ಜಾ

ಶರಣ್‌ ನಟನೆಯ, ಸಿಂಪಲ್‌ ಸುನಿ ನಿರ್ದೇಶನದ, ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಅವತಾರ ಪುರುಷ’ ಮೇ 6ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಮತ್ತು ಪ್ರಿ-ರಿಲೀಸ್‌ ಈವೆಂಟ್‌ ನಡೆದಿದೆ.

All fans should watch everyones cinema says dhruva sarja in avatara purusha event gvd
Author
Bangalore, First Published May 4, 2022, 3:31 PM IST

ಶರಣ್‌ (Sharan) ನಟನೆಯ, ಸಿಂಪಲ್‌ ಸುನಿ (Simple Suni) ನಿರ್ದೇಶನದ, ಪುಷ್ಕರ್‌ ಮಲ್ಲಿಕಾರ್ಜುನಯ್ಯ (Pushkara Mallikarjunaiah) ನಿರ್ಮಾಣದ ‘ಅವತಾರ ಪುರುಷ’ (Avatara Purusha) ಮೇ 6ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ (Trailer) ಬಿಡುಗಡೆ ಮತ್ತು ಪ್ರಿ-ರಿಲೀಸ್‌ ಈವೆಂಟ್‌ ನಡೆದಿದೆ. ಟ್ರೇಲರ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾ (Dhruva Sarja), ‘ಎಲ್ಲಾ ಅಭಿಮಾನಿಗಳಲ್ಲಿ ವಿನಂತಿ, ಸಿನಿಮಾ ಬಿಡುಗಡೆ ವಿಷಯ ಬಂದಾಗ ಕನ್ನಡ ಸಿನಿಮಾ ಅಂತ ಮಾತ್ರ ನೋಡಬೇಕು. ಎಲ್ಲರ ಅಭಿಮಾನಿಗಳು ಎಲ್ಲರ ಸಿನಿಮಾ ನೋಡಬೇಕು’ ಎಂದರು.

ಧ್ರುವ ಸರ್ಜಾ ಪತ್ನಿ ಪ್ರೇರಣಾ (Prerana) ಶರಣ್‌ ಅವರ ಬಹುದೊಡ್ಡ ಅಭಿಮಾನಿ. ಮದುವೆಗೆ ಮೊದಲು ಇಬ್ಬರು ಕದ್ದು ಶರಣ್‌ ಸಿನಿಮಾ ನೋಡಲು ಹೋಗುತ್ತಿದ್ದ ಸಂಗತಿ ಧ್ರುವ ಹೇಳಿಕೊಂಡರು. ಸಿಂಪಲ್‌ ಸುನಿ ಈ ಚಿತ್ರವನ್ನು ಹಚ್ಚಿಕೊಂಡ ಬಗೆ ತಿಳಿಸಿದರು. ‘ನಾನು ನನ್ನ ಜೀವನದಲ್ಲಿ ಎರಡು ಸಿನಿಮಾಗಳಿಗೆ ಮಾತ್ರ ದೇವರೇ ಈ ಸಿನಿಮಾಗಳನ್ನು ಗೆಲ್ಲಿಸಲೇಬೇಕು ಎಂದು ಕೇಳಿಕೊಂಡಿದ್ದು. ಒಂದು ಉಳಿದವರು ಕಂಡಂತೆ, ಇನ್ನೊಂದು ಅವತಾರ ಪುರುಷ. ಪುಷ್ಕರ್‌ಗಾಗಿ ಈ ಸಿನಿಮಾ ಗೆಲ್ಲಬೇಕು. ಅವರಂತಹ ನಿರ್ಮಾಪಕರು ನಮಗೆ ಬೇಕು’ ಎಂದರು. ನಿರ್ಮಾಪಕ ಪುಷ್ಕರ್‌, ‘ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ, ಆಶೀರ್ವದಿಸಿ’ ಎಂದಷ್ಟೇ ಕೇಳಿಕೊಂಡರು.

Avatara Purusha: ಸಿಂಪಲ್ ಸುನಿ-ಶರಣ್ ಕಾಂಬಿನೇಷನ್‌ ಚಿತ್ರದ ರಿಲೀಸ್‌ಗೆ ಮುಹೂರ್ತ ಫಿಕ್ಸ್!

ನಾಯಕ ನಟ ಶರಣ್‌, ‘ನಾನು ನೂರಕ್ಕಿಂತ ಹೆಚ್ಚು ಸಿನಿಮಾ ಮಾಡಿದ್ದೇನೆ. ಈ ಸಿನಿಮಾದಲ್ಲಿ ಭವ್ಯಾ ಮತ್ತು ಸಾಯಿಕುಮಾರ್‌ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಸಾರ್ಥಕ ಭಾವ ಮೂಡಿಸಿದೆ. ಇದೊಂದು ನಿಷ್ಠೆಯಿಂದ ಮಾಡಿದ ಸಿನಿಮಾ’ ಎಂದರು. ಸಾಯಿಕುಮಾರ್‌ ತಾವು ಬಣ್ಣ ಹಚ್ಚಿ 50 ವರ್ಷ ಆದ ಖುಷಿಯನ್ನು ಹಂಚಿಕೊಂಡರು. ಭವ್ಯಾ ಅವರು ಸುನಿಯನ್ನು ಮೆಚ್ಚಿಕೊಂಡರು. ಆಶಿಕಾ ರಂಗನಾಥ್‌, ಮೋಹನ್‌, ಡಿಓಪಿ ವಿಲಿಯಂ ಡೇವಿಡ್‌, ಶ್ರೀನಗರ ಕಿಟ್ಟಿಇದ್ದರು. ಇದೇ ಸಂದರ್ಭದಲ್ಲಿ ಪುಷ್ಕರ್‌ ಅವರ ತಂದೆ ಮಲ್ಲಿಕಾರ್ಜುನಯ್ಯ ಅವರು ಅನುವಾದಿಸಿದ ಗೋಸ್ವಾಮಿ ತುಳಸಿದಾಸರ ‘ರಾಮಚರಿತ ಮಾನಸ’ದ ಕನ್ನಡ ಅನುವಾದ ಬಿಡುಗಡೆಯಾಯಿತು.

'ಅವತಾರ ಪುರುಷ' ಚಿತ್ರದ ಈಗಾಗಲೇ ಟೀಸರ್‌ (Teaser) ಹಾಗೂ ಟ್ರೇಲರ್‌ (Trailer) ಮೂಲಕ ಸಾಕಷ್ಟು ಗಮನ ಸೆಳೆದಿದೆ. ಮನರಂಜನೆಗೆ ಕೊರತೆ ಇಲ್ಲದಂತೆ ಇಡೀ ಸಿನಿಮಾ ರೂಪಿಸಿರುತ್ತಾರೆ ಎಂಬುದಕ್ಕೆ ಸಿಂಪಲ್‌ ಸುನಿ ಅವರ ಪಂಚಿಂಗ್‌ ಡೈಲಾಗ್‌ಗಳು ಕಾರಣ ಆಗಿರುತ್ತವೆ. ವಾಮಾಚಾರ, ಮಾಟ ಮಂತ್ರದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಶರಣ್‌ ಜೂನಿಯರ್‌ ಆರ್ಟಿಸ್ಟ್‌ ಪಾತ್ರದಲ್ಲಿ ಹತ್ತಕ್ಕೂ ಹೆಚ್ಚು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾಂತ್ರಿಕವಾಗಿ ತುಂಬ ಶ್ರೀಮಂತವಾಗಿ ಮೂಡಿಬಂದಿರುವ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್​ ಗಮನ ಸೆಳೆದಿತ್ತು. ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ತಿಳಿಸಲಾಗಿದೆ. 

Pushkar Mallikarjunaiah: ಹೀರೋ ಆದ್ರು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ

ಇದೊಂದು ಬ್ಲಾಕ್‌ ಮ್ಯಾಜಿಕ್‌ ಕತೆ. ಕಾಮಿಡಿ, ಬ್ಲಾಕ್‌ ಮ್ಯಾಜಿಕ್‌ ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇದು ವೆಬ್‌ ಸರಣಿಗೆ ಮಾಡಿಕೊಂಡಿದ್ದ ಕತೆಯಾಗಿದ್ದರಿಂದ ಅದನ್ನು ಸಿನಿಮಾ ಮಾಡಲು ಹೊರಟಾಗ ಒಂದೇ ಕಂತಿನಲ್ಲಿ ಹೇಳುವುದು ಕಷ್ಟ ಎನಿಸಿತು. ಹೀಗಾಗಿ ಆರಂಭದಲ್ಲೇ ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡುವ ಪ್ಲಾನ್‌ ಮಾಡಿಕೊಂಡು ಚಿತ್ರ ಆರಂಭಿಸಲಾಯಿತು ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಈ ಮೊದಲು ಹೇಳಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ'  ಚಿತ್ರ ಮೂಡಿ ಬಂದಿದೆ. 
 

Follow Us:
Download App:
  • android
  • ios