Asianet Suvarna News Asianet Suvarna News

ಇನ್ಮೇಲೆ ದಿಗಂತ್‌ನ ಕೇರ್ ಮಾಡ್ತೀನಿ; ಪತಿ ಆರೋಗ್ಯದ ಬಗ್ಗೆ ಐಂದ್ರಿತಾ ಮಾಹಿತಿ

ದಿಗಂತ್ ಪತ್ನಿ, ನಟಿ ಐಂದ್ರಿತಾ ರೇ ಮಾತನಾಡಿ ಪತಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಿಂದ ಮಾಧ್ಯಮದ ಜೊತೆ ಮಾತನಾಡಿದ ಐಂದ್ರಿತಾ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಪತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.  

aindrita ray talks about her husband Diganth health sgk
Author
Bengaluru, First Published Jun 22, 2022, 4:05 PM IST

ಸ್ಯಾಂಡಲ್‌ವುಡ್ ನಟ ದಿಗಂತ್ (Diganth) ಗೋವಾದಲ್ಲಿ (Goa) ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಪೆಟ್ಟು ಮಾಡಿಕೊಂಡು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ( ಜೂನ್ 20) ಮಧ್ಯಾಹ್ನ ಈ ಘಟನೆ ಸಂಭಿವಿಸಿತ್ತು. ತಕ್ಷಣ ಅವರನ್ನು ಗೋವಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.  ಆದರೆ ನಿನ್ನೆ  (ಜೂನ್ 21)  ಹೆಚ್ಚಿನ ಚಿಕಿತ್ಸೆಗಾಗಿ ದಿಗಂತ್ ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ದಿಗಂತ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಸುಮಾರು ಮೂರು ಗಂಟೆಗಳ ಕಾಲ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇಂದು ದಿಗಂತ್​​ರನ್ನು ಆಸ್ಪತ್ರೆಯ ವಾರ್ಡ್​​ಗೆ ಶಿಫ್ಟ್​ ಮಾಡಲಾಗಿದೆ. 

ಇದೀಗ ದಿಗಂತ್ ಪತ್ನಿ, ನಟಿ ಐಂದ್ರಿತಾ ರೇ ಮಾತನಾಡಿ ಪತಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಿಂದ ಮಾಧ್ಯಮದ ಜೊತೆ ಮಾತನಾಡಿದ ಐಂದ್ರಿತಾ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಪತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.  

'ದಿಗಂತ್ ಮತ್ತು ನಾನು ವೆಕೇಷನ್‌ಗೆ ಹೋಗಿದ್ದೆವು.  ರೆಸಾರ್ಟ್‌ಗೆ ಹೋಗಿದ್ದೆವು. ಸಮರ್ ಸಾಲ್ಟ್ ಸ್ವಲ್ಪ ರಾಂಗ್ ಆಗಿ ಪೆಟ್ಟಾಯಿತು. ಬಳಿಕ ಗೋವಾ ಮಣಿಪಾಲ್ ಆಸ್ಪತ್ರೆ ಗೆ ಹೋದೆವು. ಡ್ಯಾಮೇಜ್ ಜಾಸ್ತಿ ಅಗ್ಬೇಕಾಗಿತ್ತು ಅದ್ರೆ ಸದ್ಯ ಅಗಿಲ್ಲ. ಅದಕ್ಕೆ ಏರ್ ಲಿಪ್ಟ್ ಮಾಡಿದೆವು. ಗೋವಾ ಸರ್ಕಾರಕ್ಕೆ ಧನ್ಯವಾದಗಳು. ಈಗ ಸರ್ಜರಿ ಆಗಿದೆ ಚೇತರಿಕೆ ಕಾಣ್ತಿದ್ದಾರೆ. ಈಗಾಗಲೇ  ಡಾಕ್ಟರ್‌ಗೆ ಹೇಳಿದ್ದಾನೆ ನಾನು ಸಮ್ಮರ್ ಸಾಲ್ಟ್ ಗೆ ರೆಡಿ ಆಗಿದ್ದೀನಿ ಅಂತ' ಎಂದು ಐಂದ್ರಿತಾ ಪತಿ ಆರೋಗ್ಯದ ಬಗ್ಗೆ ಬಹಿರಂಗ ಪಡಿಸಿದರು. 

'ಗೋವಾದಲ್ಲಿ ಇದ್ದಾಗ ತುಂಬಾ ಟೆನ್ಷನ್ ಆಗಿದ್ದೆ. ಬೋನ್‌ಗೆ ಏಟಾಗಿದೆ. ಆಪರೇಷನ್ ಅದ್ಮೇಲೆ ನಗ್ತಿದ್ದಾನೆ ದಿಗಂತ್. ನಾನು ಇನ್ಮೇಲೆ ದಿಗಂತ್‌ನ ಟೇಕ್ ಕೇರ್ ಮಾಡ್ತೀನಿ.  ಡಿಸ್ಚಾರ್ಜ್ ಇವತ್ತು ಅಥವಾ ನಾಳೆ ಮಾಡ್ತೀವಿ. ಟೈಮ್ ಜಾಸ್ತಿ ಇರಲಿಲ್ಲ ಅದಕ್ಕೆ ಏರ್ ಲಿಫ್ಟ್ ಮಾಡಿದ್ವಿ' ಎಂದು ಐಂದ್ರಿತಾ ಭಾವುಕರಾಗಿ ಮಾತನಾಡಿದ್ದಾರೆ.

ಆಪರೇಷನ್ ಸಕ್ಸಸ್ ನಟ ದಿಗಂತ್ 'ಔಟ್ ಆಫ್ ಡೇಂಜರ್', ವಾರ್ಡ್​ಗೆ ಶಿಫ್ಟ್!

ವೈದ್ಯರ ಹೇಳಿಕೆ

'ದಿಗಂತ್ ಕುತ್ತಿಗೆಗೆ ಪ್ಯಾಕ್ಚರ್ ಆಗಿತ್ತು. ಅದನ್ನ ಆಪರೇಷನ್ ಮಾಡಿದ್ದೇವೆ. ನಿನ್ನೆಗಿಂತ ಇಂದು ಆಕ್ಟೀವ್ ಆಗಿದ್ದಾರೆ. ಅವ್ರೆ ಎದ್ದು ಟಾಯ್ಲೆಟ್ ಹೋಗ್ತಿದ್ದಾರೆ, ಊಟ ಮಾಡ್ತಿದ್ದಾರೆ. ಯಾವುದೇ ಸ್ಪೋರ್ಟ್ ನಲ್ಲಿ ಭಾಗಿಯಾಗಬಹುದು. ಇಂದು ಅಥವಾ ನಾಳೆ ಡಿಸ್ಚಾರ್ಜ್ ಮಾಡಲಾಗುತ್ತೆ' ಎಂದು ದಿಗಂತ್‌ಗೆ  ಚಿಕಿತ್ಸೆ ನೀಡಿದ ವೈದ್ಯರು ಡಾ. ವಿದ್ಯಾಧರ್ ಹೇಳಿದ್ದಾರೆ. 

ಗೋವಾ ಸಮುದ್ರ ತೀರದಲ್ಲಿ ಸಮ್ಮರ್ ಸಾಲ್ಟ್ ಹೊಡೆಯಲು ಹೋಗೆ ದಿಗಂತ್ ಆಯತಪ್ಪಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದರು. ದಿಗಂತ್ ದಂಪತಿ ಸದಾ ಟ್ರಿಪ್, ಸೈಕ್ಲಿಂಗ್ ಅಂತ ಓಡಾಡುತ್ತಿದ್ದರು. ಈ ಬಾರಿ ಗೋವಾ ವೀಕೆಂಡ್ ಟ್ರಿಪ್ ನಲ್ಲಿ ದುರಂತ ಮಾಡಿಕೊಂಡಿದ್ದಾರೆ. 

Actor Diganth Health Bulletin; ನಟ ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ

ದಿಗಂತ್ ಸಿನಿಮಾಗಳ ಬಗ್ಗೆ

ದಿಗಂತ್ ಸಿನಿಮಾ ವಿಚಾರಕ್ಕೆ ಬರುವುದಾರೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ದಿಗಂತ್ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (kshamisi nimma katheyalli hanavilla) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ದಿಗಂತ್ ಬಳಿ ಮಾರಿಗೋಲ್ಡ್ (Marigold), ಎಡಗೈ ಅಪಘಾತಕ್ಕೆ ಕಾರಣ, ಗಾಲಿಪಟ-2 (Galipata 2) ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.    

Follow Us:
Download App:
  • android
  • ios