ಬೆಂಗಳೂರಿನ ಗೋಪಾಲನ್ ಮಾಲ್, ಈಟಿಎ ಮಾಲ್, ಮೈಸೂರು ಡಿಆರ್‌ಸಿ, ಮಂಗಳೂರಿನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಜಿ ಎಸ್‌ ಸಿನಿಮಾಸ್‌ ಮೂಲಕ ದಯಾನಂದ್‌ ಎಂಬುವವರು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. 

ಎಐ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವ ವಿಶ್ವದ ಮೊದಲ ಚಿತ್ರ ಎಂದು ಕರೆದುಕೊಂಡಿರುವ ‘ಲವ್‌ ಯು’ ಇಂದು (ಮೇ.16) ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಗೋಪಾಲನ್ ಮಾಲ್, ಈಟಿಎ ಮಾಲ್, ಮೈಸೂರು ಡಿಆರ್‌ಸಿ, ಮಂಗಳೂರಿನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಜಿ ಎಸ್‌ ಸಿನಿಮಾಸ್‌ ಮೂಲಕ ದಯಾನಂದ್‌ ಎಂಬುವವರು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ಎಐ ಕ್ರಿಯೇಟರ್‌ ಆಗಿರುವ ನೂತನ್‌ ಅವರು ಹೇಳಿರುವ ಮಾತುಗಳು ಇಲ್ಲಿವೆ.

- ಈ ಚಿತ್ರದ ಪೂರ್ತಿ ಎಐ ವರ್ಕ್‌ ನನ್ನದೇ. 95 ನಿಮಿಷದ ಚಿತ್ರದಲ್ಲಿ 15 ಪಾತ್ರಗಳು ಬರುತ್ತವೆ. ಎಲ್ಲಾ ಪಾತ್ರಗಳನ್ನೂ ಎಐ ಮೂಲಕವೇ ಕ್ರಿಯೇಟ್‌ ಮಾಡಲಾಗಿದೆ.

- ಚಿತ್ರದ ನಾಯಕನ ಹೆಸರು ನೂತನ್‌ ಹಾಗೂ ನಾಯಕಿ ಹೆಸರು ಅಶ್ವಿನಿ. ಚಿತ್ರದ ನಿರ್ಮಾಪಕರು ನರಸಿಂಹಮೂರ್ತಿ. ಒಟ್ಟು ಚಿತ್ರಕ್ಕೆ 10 ಲಕ್ಷ ಮಾತ್ರ ವೆಚ್ಚ ಮಾಡಲಾಗಿದೆ. ಆರು ತಿಂಗಳು ಆ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ.

ಈ ಸಿನಿಮಾಗೆ ನಟರೂ ಬೇಡ.. ತಂತ್ರಜ್ಞರೂ ಬೇಡ: ಇದು ಕನ್ನಡ ಚಿತ್ರರಂಗಕ್ಕೆ ಹಿರಿಮೆ!

- ವಿಶ್ವದ ಮೊದಲ ಎಐ ಸಿನಿಮಾ ಇದು. ಇದೊಂದು ಪ್ರಯೋಗ ಅಷ್ಟೇ. ಪರಿಪೂರ್ಣ ಸಿನಿಮಾ ಅಲ್ಲ. ತಪ್ಪುಗಳು ಇರಬಹುದು.

- ಮೊದಲು ಕತೆ, ಚಿತ್ರಕಥೆ, ಶಾಟ್ ಡಿವಿಜನ್‌ ಮಾಡಿಕೊಳ್ಳುತ್ತೇವೆ. ಆ ನಂತರ ಕತೆಯಲ್ಲಿ ಬರುವ ಪಾತ್ರಗಳನ್ನು ಹೋಲುವ ಇಮೇಜ್‌ಗಳನ್ನು ಕ್ರಿಯೇಟ್‌ ಮಾಡಿಕೊಳ್ಳಬೇಕು. ಎಲ್ಲಾ ಪಾತ್ರಧಾರಿಗಳ ಇಮೇಜ್‌ಗಳನ್ನು ಕ್ರಿಯೇಟ್‌ ಮಾಡಿಕೊಂಡ ಮೇಲೆ ಅವುಗಳನ್ನು ವಿಡಿಯೋ ರೂಪಕ್ಕೆ ತಂದ ಮೇಲೆ ಲಿಪ್‌ ಸಿಂಕ್‌ ಮಾಡಬೇಕು. ನಂತರ ಡಬ್ಬಿಂಗ್‌, ಡಿಐ, ಸಂಗೀತ ಹೀಗೆ ಒಂದೊಂದೇ ಕೆಲಸಗಳನ್ನು ಮಾಡುತ್ತಾ ಹೋಗಬೇಕು.

- ಎಡಿಟಿಂಗ್, ಡಿಐ, ಡಬ್ಬಿಂಗ್ ಸೇರಿದಂತೆ ಇಡೀ ಚಿತ್ರದ ತಾಂತ್ರಿಕ ಕೆಲಸಗಳಿಗೆ ಎಐನ ಬೇರೆ ಬೇರೆ ಟೂಲ್ ಗಳನ್ನೇ ಬಳಸಿಕೊಂಡಿದ್ದೇವೆ.