ಧುರಂಧರ್ 2 ಕರ್ನಾಟಕದಲ್ಲಿ ಕೂಡ ಕಮಾಲ್ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡೋದಂತೂ ಖಂಡಿತ. ಸದ್ಯದಲ್ಲೇ ಈ ಚಿತ್ರವು ಜಗತ್ತಿನಾದ್ಯಂತ 2000 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆಯೋದು ಖಂಡಿತ ಎಂಬ ಮಾತು ಎಲ್ಲರಿಂದಲೂ ಬರುತ್ತಿದೆ.
ಕರ್ನಾಟಕದಲ್ಲಿ ʻಧುರಂಧರ್ 2ʼ ಕಲೆಕ್ಷನ್ ಹೊಸ ದಾಖಲೆ! ಏಳೇ ದಿನದಲ್ಲಿ ಹಳೆಯ ದಾಖಲೆಗಳು ಧೂಳೀಪಟ!
Dhurandhar 2: ಆದಿತ್ಯ ಧರ್ ನಿರ್ದೇಶನ, ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಕರ್ನಾಟಕದಲ್ಲಿ ಕೇವಲ 7 ದಿನಗಳಲ್ಲಿ 73 ಕೋಟಿ ರೂಪಾಯಿ ಗಳಿಸಿ ಹೊಸ ಇತಿಹಾಸ ಬರೆದಿದೆ. ಬೆಂಗಳೂರಿನಲ್ಲಿ ಬಹಳಷ್ಟು ಶೋಗಳು ಮತ್ತು ಆರಂಭಿಕ ದಿನಗಳ ದುಬಾರಿ ಟಿಕೆಟ್ ದರ ಈ ಬೃಹತ್ ಗಳಿಕೆಗೆ ಕಾರಣವಾಗಿದೆ ಎನ್ನಬಹುದು.
ರಾಜ್ಯದಲ್ಲಿ 70 ಕೋಟಿ ರೂ. ದಾಟಿದ ʻಧುರಂಧರ್ 2ʼ ಕಲೆಕ್ಷನ್: ಪರಭಾಷಾ ಚಿತ್ರಗಳ ದಾಖಲೆಗಳು ಧೂಳೀಪಟ!
Dhurandhar 2: ಆದಿತ್ಯ ಧರ್ ನಿರ್ದೇಶನ, ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಕರ್ನಾಟಕದಲ್ಲಿ ಕೇವಲ ಏಳು ದಿನಗಳಲ್ಲಿ 73 ಕೋಟಿ ರೂಪಾಯಿ ಗಳಿಸಿ ಹೊಸ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಬಹಳಷ್ಟು ಶೋಗಳು ಮತ್ತು ಆರಂಭಿಕ ದಿನಗಳ ದುಬಾರಿ ಟಿಕೆಟ್ ದರ ಈ ಬೃಹತ್ ಗಳಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಗತ್ತಿನ ತುಂಬಾ ʻಧುರಂಧರ್ 2ʼ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಮಳೆ ಸುರಿಸುತ್ತ, ಹೊಸ ದಾಖಲೆ ಬರೆಯುತ್ತಿರುವುದು ಸದ್ಯದ ವಿಷಯ. ವಿಶ್ವಾದ್ಯಂತ ಈ ಚಿತ್ರವು ಆಗಲೇ 1000 ಕೋಟಿ ರೂ. ಗಡಿಗೆ ಬಂದು ನಿಂತಿದೆ. ಇನ್ನು, ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಆಂಧ್ರಪ್ರದೇಶ ಹಾಗೂ ಕರ್ನಾಟಕದಿಂದ ದೊಡ್ಡಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ, ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಗಳಿಕೆ ಆಗಿದೆ. ಹೌದು, ʻಧುರಂಧರ್ 2ʼ ಸಿನಿಮಾವು ನಮ್ಮ ರಾಜ್ಯದಲ್ಲಿ ಬರೀ 7 ದಿನಕ್ಕೆ 70+ ಕೋಟಿ ರೂ. ಗಳಿಕೆ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.
70 ಕೋಟಿ ರೂ. ದಾಟಿದ ʻಧುರಂಧರ್ 2ʼ ಕಲೆಕ್ಷನ್
ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್ ನಟನೆಯ ʻಧುರಂಧರ್ 2ʼ ಚಿತ್ರಕ್ಕೆ ಕರ್ನಾಟಕದಲ್ಲಿ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಬರೀ ಏಳೇ ದಿನಕ್ಕೆ ಪರಭಾಷಾ ಚಿತ್ರವೊಂದು ಬರೋಬ್ಬರಿ 73 ಕೋಟಿ ರೂ.ಗಳನ್ನು ಬಾಚಿಕೊಂಡಿದ್ದು, ಇದುವರೆರಗಿನ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ದಾಖಲೆಯಾಗಿದೆ. ಈವರಗೂ ಪರಭಾಷೆಯ ಯಾವ ಸಿನಿಮಾವು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡಮಟ್ಟದ ಗಳಿಕೆ ಮಾಡಿರಲಿಲ್ಲ. ಅಂದಹಾಗೆ, ಏಳನೇ ದಿನ ಕರ್ನಾಟಕದಲ್ಲಿ ಈ ಚಿತ್ರವು 5.74 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇಷ್ಟೊಂದು ದೊಡ್ಡಮಟ್ಟದ ಗಳಿಕೆ ಆಗಿರೋದು ಹೇಗೆ?
ಮೊದಲನೆಯದಾಗಿ, ಬೆಂಗಳೂರಿನಲ್ಲಿ ಧುರಂಧರ್ 2 ಸಿನಿಮಾಕ್ಕೆ ಬಹಳಷ್ಟು ಶೋಳನ್ನು ನೀಡಲಾಗಿದೆ. ಆರಂಭದ ಕೆಲ ದಿನಗಳು ಟಿಕೆಟ್ ದರವಂತೂ ಭಾರೀ ದುಬಾರಿ ಆಗಿತ್ತು. ಇದು ಗಳಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಧುರಂಧರ್ ಚಿತ್ರವನ್ನು ಮೆಚ್ಚಿಕೊಂಡ ಸ್ಟಾರ್ ನಟನಟಿಯರು:
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ʻಧುರಂಧರ್ 2ʼ ಚಿತ್ರವನ್ನು ಕೊಂಡಾಡಿದ್ದಾರೆ. ಕಾಂತಾರ ಸಂಗೀತ ನಿರ್ದಶಕ ಅಜನೀಶ್ ಲೋಕನಾಥ್ ಸಹ ಈ ಚಿತ್ರವನ್ನು ಮೆಚ್ಚಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ಅನೇಕ ತಾರೆಯರು ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಧನ್ಯವಾದ ಹೇಳಿದ ಧುರಂಧರ್ 2 ಡೈರೆಕ್ಟರ್ ಆದಿತ್ಯ ಧರ್
ರಿಷಭ್ ಶೆಟ್ಟಿ ಹಾಗೂ ಶಿವಣ್ಣ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಆದಿತ್ಯ ಧರ್, "ರಿಷಬ್ ಶೆಟ್ಟಿಯವರಿಗೆ ಸಹೋದರ ಎಂದು ಹೇಳಿ ಪ್ರತಿ ಧನ್ಯವಾದ ಹೇಳಿದ್ದಾರೆ. ಜೊತೆಗೆ, ಶಿವಣ್ಣ ಅವರಿಗೆ 'ಸರ್.. ನಿಮ್ಮಂತಹವರಿಂದ ಇಂತಹ ಮಾತುಗಳು ಬಂದಿರುವುದು ನಮಗೆ ನಿಜಕ್ಕೂ ಬಹಳ ಅರ್ಥಪೂರ್ಣವಾಗಿದೆ. ನಿಮ್ಮ ಈ ಬೆಂಬಲವು ಪ್ರಾಮಾಣಿಕತೆಯಿಂದ ಮತ್ತು ದೃಢ ವಿಶ್ವಾಸದೊಂದಿಗೆ ನಮಗೆ ಕಥೆಗಳನ್ನು ಹೇಳಲು ಹೆಚ್ಚಿನ ಸ್ಫೂರ್ತಿ ನೀಡುತ್ತದೆ. ನೀವು ತೋರಿದ ಪ್ರೀತಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಬಾಲಿವುಡ್ ಸಿನಿಮಾ ಧುರಂಧರ್ 2 ಕರ್ನಾಟಕದಲ್ಲಿ ಕೂಡ ಕಮಾಲ್ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡೋದಂತೂ ಖಂಡಿತ. ಸದ್ಯದಲ್ಲೇ ಈ ಚಿತ್ರವು ಜಗತ್ತಿನಾದ್ಯಂತ 2000 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆಯೋದು ಖಂಡಿತ ಎಂಬ ಮಾತು ಎಲ್ಲರಿಂದಲೂ ಬರುತ್ತಿದೆ.


