MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರೆಬಲ್ ಸ್ಟಾರ್ ಅಂಬರೀಷ್ 74ನೇ ಹುಟ್ಟುಹಬ್ಬ.. ಅಂಬಿಯನ್ನು ನೆನೆದು ಸುಮಲತಾ ಭಾವುಕ ಪೋಸ್ಟ್

ರೆಬಲ್ ಸ್ಟಾರ್ ಅಂಬರೀಷ್ 74ನೇ ಹುಟ್ಟುಹಬ್ಬ.. ಅಂಬಿಯನ್ನು ನೆನೆದು ಸುಮಲತಾ ಭಾವುಕ ಪೋಸ್ಟ್

Ambareesh 74th Birthday: ರೆಬೆಲ್ ಸ್ಟಾರ್ ಅಂಬರೀಷ್ ಅವರ 74ನೇ ವರ್ಷದ ಜನ್ಮದಿನದ ಅಂಗವಾಗಿ, ಪತ್ನಿ ಹಾಗೂ ನಟಿ ಸುಮಲತಾ ಅಂಬರೀಷ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಗಲಿರುವ ಪತಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. 

2 Min read
Author : Pavna Das
Published : May 29 2026, 03:30 PM IST
Share this Photo Gallery
  • FB
  • TW
  • Linkdin
  • Whatsapp
16
ರೆಬೆಲ್ ಸ್ಟಾರ್ ಅಂಬರೀಷ್ 74ನೇ ಹುಟ್ಟುಹಬ್ಬ
Image Credit : Instagram

ರೆಬೆಲ್ ಸ್ಟಾರ್ ಅಂಬರೀಷ್ 74ನೇ ಹುಟ್ಟುಹಬ್ಬ

ಕನ್ನಡಿಗರ ಮನೆ ಮನದಲ್ಲಿ ಸದಾ ಜೀವಂತವಾಗಿರುವ ರೆಬೆಲ್ ಸ್ಟಾರ್ ಅಂಬರೀಷ್ ಅವರ 74ನೇ ಹುಟ್ಟುಹಬ್ಬ ಇಂದು. ಮಲವಳ್ಳಿ ಹುಚ್ಚೆಗೌಡ ಅಮರ್ ನಾಥ್ ಆಗಿ ಮಂಡ್ಯ ಜಿಲ್ಲೆಯಲ್ಲಿ ಮೇ 29, 1952ರಲ್ಲಿ ಜನಿಸಿದರು. ಸಿನಿಮಾ ಮೂಲಕ ಅಂಬರೀಷ್ ಆಗಿ ವಿಲನ್, ನಾಯಕರಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಂಬರೀಷ್ ಲೈಫ್ ಜರ್ನಿ
Image Credit : Instagram

ಅಂಬರೀಷ್ ಲೈಫ್ ಜರ್ನಿ

ಸಿನಿಮಾಗಳಲ್ಲಿ ಮಿಂಚಿದ ಅಂಬರೀಷ್, ಸಿನಿಮಾ ನಟಿಯಾಗಿರುವ ಸುಮಲತಾರನ್ನು 1991ರಲ್ಲಿ ಪ್ರೀತಿಸಿ ಮದುವೆಯಾದರು. ಇವರಿಗೆ ಅಭಿಷೇಕ್ ಎನ್ನುವ ಮಗ ಕೂಡ ಇದ್ದಾರೆ. ಸಿನಿಮಾದೊಂದಿಗೆ ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡು, ಮಂಡ್ಯ ಜನತೆಗಾಗಿ ಸೇವೆ ಸಲ್ಲಿಸಿದ್ದರು ಅಂಬರೀಷ್. 2014ರಲ್ಲಿ ಉಸಿರಾಟದ ತೊಂದರೆಯಿಂದಾಗಿ ದಿಢೀರ್ ಆಗಿ ಸಾವನ್ನಪ್ಪುವ ಮೂಲಕ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದರು ಅಂಬಿ.

Related Articles

Related image1
Abhishek Ambareesh: ಕೊಡಗಿನಲ್ಲಿ ಅವಿವಾ ಬಿದ್ದಪ್ಪ; ಮಗ ರಾಣಾ ಅಮರ್ ಫೋಟೋ ರಿವೀಲ್‌ ಮಾಡಿದ ಅಭಿಷೇಕ್‌ ಅಂಬರೀಶ್‌ ಪತ್ನಿ
Related image2
PHOTOS: ಮೊಮ್ಮಗ ರಾಣಾ ಅಮರ್‌ ಜೊತೆ 62ನೇ ಜನ್ಮದಿನ ಆಚರಿಸಿಕೊಂಡ Sumalatha Ambareesh
36
ಅಂಬಿ ಹುಟ್ಟುಹಬ್ಬದ ದಿನ ಸುಮಲತಾ ಭಾವುಕ ಪೋಸ್ಟ್
Image Credit : Instagram

ಅಂಬಿ ಹುಟ್ಟುಹಬ್ಬದ ದಿನ ಸುಮಲತಾ ಭಾವುಕ ಪೋಸ್ಟ್

ಅಂಬರೀಷ್ ಹುಟ್ಟುಹಬ್ಬದ ಅಂಗವಾಗಿ ಪತ್ನಿ ಸುಮಲತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಷ್ ಅವರ ಫೋಟೊ ಹೊಂದಿರುವ ಪೋಸ್ಟರ್ ಶೇರ್ ಮಾಡಿ, ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇಲ್ಲಿದೆ ಸುಮಲತಾ ಅವರು ಬರೆದ ಸಾಲುಗಳು.

46
ಸದಾ ನಿಮ್ಮ ನೆನಪಲ್ಲಿ, ಎಂದೆಂದಿಗೂ ನಮ್ಮ ಹೃದಯದಲ್ಲಿ
Image Credit : Asianet News

ಸದಾ ನಿಮ್ಮ ನೆನಪಲ್ಲಿ, ಎಂದೆಂದಿಗೂ ನಮ್ಮ ಹೃದಯದಲ್ಲಿ

ಇಂದು ಅವರ 74ನೇ ಜನ್ಮದಿನ. ಅಭಿಮಾನಿಗಳು ಪ್ರೀತಿಯಿಂದ ಕೊಂಡಾಡುವ "ರೆಬಲ್‌ ಸ್ಟಾರ್‌", ತನ್ನ ಬಳಿ ಸಹಾಯ ಕೇಳಿ ಬಂದವರನ್ನು ಎಂದಿಗೂ ಬರಿಗೈಯ್ಯಲ್ಲಿ ಕಳುಹಿಸದ "ಕಲಿಯುಗದ ಕರ್ಣ"... ಈ ಎರಡೂ ಅಂಕಿತಗಳಿಗೆ ಪ್ರತಿರೂಪವಾಗಿದ್ದ ಅಂಬರೀಶ್ ಅವರ ಬದುಕೇ ಒಂದು ಹಬ್ಬವಾಗಿತ್ತು. ಅವರಲ್ಲಿದ್ದ ಆ ಕರುಣೆ, ಔದಾರ್ಯ, ಸದಾ ಹಸನ್ಮುಖಿ ವ್ಯಕ್ತಿತ್ವ ಮತ್ತು ಜನರ ಮೇಲಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು. ಅವರ ಮನಸ್ಸು ಸಮುದ್ರದಷ್ಟೇ ವಿಶಾಲವಾಗಿತ್ತು.

56
ಕಲಿಯುಗದ ಕರ್ಣ ರೆಬಲ್ ಸ್ಟಾರ್
Image Credit : aviva bidappa instagram

ಕಲಿಯುಗದ ಕರ್ಣ ರೆಬಲ್ ಸ್ಟಾರ್

ಕಣ್ಣೆದುರು ಬಂದ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ದೊಡ್ಡ ಗುಣ ಅವರದ್ದಾಗಿತ್ತು. ಅವರ ಒಡನಾಟ ಸಿಕ್ಕಿದ್ದೇ ನಮ್ಮ ಪುಣ್ಯ ಅಂತ ಅದೆಷ್ಟೋ ಜನ ಇವತ್ತಿಗೂ ಹೆಮ್ಮೆಯಿಂದ ಹೇಳುತ್ತಾರೆ. ಇವತ್ತು ಈ ನಮ್ಮ ಕುಟುಂಬ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ಅವರ ನೆರಳಲ್ಲಿ ಬೆಳೆದು, ಅವರೊಂದಿಗಿನ ಆಪ್ತ ಕ್ಷಣಗಳನ್ನು ಆನಂದಿಸಿದ ಅದೆಷ್ಟೋ ಆತ್ಮೀಯ ಸ್ನೇಹಿತರು ಇಂದಿಗೂ ಅವರನ್ನ ಸ್ಮರಿಸಿ, ಭಾವುಕರಾಗುತ್ತಾರೆ.

66
ನಮ್ಮೆಲ್ಲರ ಮನಸ್ಸಿನಲ್ಲಿ ನೀವು ಅಮರ
Image Credit : our own

ನಮ್ಮೆಲ್ಲರ ಮನಸ್ಸಿನಲ್ಲಿ ನೀವು ಅಮರ

ಅವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ನೀವು ಸದಾ ಅಮರ... ಅನು ದಿನವೂ, ಅನುಕ್ಷಣವೂ ನಮ್ಮ ಕುಟುಂಬದ ಉಸಿರಾಗಿರುವ ನೀವೆಂದಿಗೂ ನಮ್ಮ ಹೆಮ್ಮೆಯ "ರೆಬೆಲ್ ಸ್ಟಾರ್”.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಂಬರೀಶ್
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ರವಿಚಂದ್ರನ್​ ಮೇಲೆ ರೇ*ಪ್​ ಆರೋಪ: 34 ವರ್ಷಗಳ ಬಳಿಕ 'ಹಳ್ಳಿಮೇಷ್ಟ್ರು' ಬೆಡಗಿ ಬಿಂದಿಯಾ ಹೇಳಿದ್ದೇನು
Recommended image2
Viral Song: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಕಮಾಲ್, 'ಪಿಂಜರ' ಸಾಂಗ್ ರಂಗು, ಇಡೀ ದೇಶಕ್ಕೇ ಕನ್ನಡಿಗನ ಗುಂಗು!
Recommended image3
ನಿರ್ದೇಶಕರಾಗಿ ಮೊದಲ ಸಿನಿಮಾ ಮೂಲಕವೇ ಗೆದ್ದ ಕನ್ನಡದ ಸ್ಟಾರ್ ನಟರಿವರು
Related Stories
Recommended image1
Abhishek Ambareesh: ಕೊಡಗಿನಲ್ಲಿ ಅವಿವಾ ಬಿದ್ದಪ್ಪ; ಮಗ ರಾಣಾ ಅಮರ್ ಫೋಟೋ ರಿವೀಲ್‌ ಮಾಡಿದ ಅಭಿಷೇಕ್‌ ಅಂಬರೀಶ್‌ ಪತ್ನಿ
Recommended image2
PHOTOS: ಮೊಮ್ಮಗ ರಾಣಾ ಅಮರ್‌ ಜೊತೆ 62ನೇ ಜನ್ಮದಿನ ಆಚರಿಸಿಕೊಂಡ Sumalatha Ambareesh
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved