Asianet Suvarna News Asianet Suvarna News

ಊಟ ಮಾಡುವಾಗ ವಾಂತಿ ಮಾಡಿದ ಅದಿತಿ ಪ್ರಭುದೇವ; ವಿಡಿಯೋ ವೈರಲ್

ಹೊಸ ರುಚಿ ಪ್ರಯೋಗ ಮಾಡಲು ಹೋಗಿ ವಾಂತಿ ಮಾಡಿಕೊಂಡ ನಟಿ ಅದಿತಿ ಪ್ರಭುದೇವ. ಯೂಟ್ಯೂಬ್‌ ವಿಡಿಯೋ ಸಖತ್ ವೈರಲ್.... 
 

Aditi Prabhudeva tries Asian food and vomits share sushi recipe vcs
Author
First Published Jan 20, 2023, 5:38 PM IST

ಕನ್ನಡ ಚಿತ್ರರಂಗದ ಸುಂದರಿ, ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಸಿನಿಮಾ ಮತ್ತು ಯೂಟ್ಯೂಬ್‌ನಲ್ಲಿ ಹೆಚ್ಚಿಗೆ ತೊಡಗಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಸಹಿ ಮಾಡುತ್ತಿದ್ದಾರೆ ಜೊತೆಗೆ ವಿಭಿನ್ನವಾಗಿರುವ ಕಂಟೆಂಟ್‌ಗಳ ವಿಡಿಯೋ ಮಾಡುತ್ತಿದ್ದಾರೆ. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಸ್ಪೆಷಲ್ ಊಟ ಟ್ರೈ ಮಾಡಲು ಹೋಗಿ ವಾಂತಿ ಮಾಡಿಕೊಂಡಿದ್ದಾರೆ.

'ತುಂಬಾ ದಿನಗಳ ನಂತರ ನಾನು ಯಶು ಅವರು ಹೊರಗಡೆ ಹೋಗುವ ಪ್ಲ್ಯಾನ್ ಮಾಡಿದ್ದೀವಿ. ತುಂಬಾ ಸ್ಪೇಷಲ್ ಜಾಗಕ್ಕೆ ಹೋಗುತ್ತಿದ್ದೀವಿ ಏನು ಎಂಬುದು ಈ ವಿಡಿಯೋದಲ್ಲಿ ತೋರಿಸುವೆ' ಎಂದು ಹೇಳುವ ಮೂಲಕ ಅದಿತಿ ಪ್ರಭುದೇವ ವಿಡಿಯೋ ಆರಂಭಿಸಿದ್ದಾರೆ. 

ಅದಿತಿ ಪ್ರಭುದೇವ ಬೆಂಗಳೂರಿನಲ್ಲಿರುವ ಪ್ಯಾನ್ ಏಷ್ಯಾ ರೆಸ್ಟೋರೆಂಟ್‌ಗೆ ಪತಿ ಜೊತೆ ಭೇಟಿ ನೀಡಿದ್ದಾರೆ. ವರ್ಲ್ಡ್‌ ಟ್ರೇಡ್‌ ಸೆಂಟರ್‌ನ 31ನೇ ಮಹಡಿಯಲ್ಲಿರುವ ಹೋಟೆಲ್‌ ಇದಾಗಿದ್ದು. ಇಲ್ಲಿಂದ ಇಡೀ ಬೆಂಗಳೂರು ತುಂಬಾನೇ ಬ್ಯೂಟಿಫುಲ್ ಆಗಿ ಕಾಣಿಸುತ್ತದೆ. ಬೆಂಗಳೂರಿನಷ್ಟು ಪಾಸಿಟಿವ್ ಸಿಟಿ ಪ್ರಪಂಚದಲ್ಲಿ ಇಲ್ಲ. ಐ ಲವ್ ಯು ಬೆಂಗಳೂರು' ಎನ್ನುತ್ತ ಅಲ್ಲಿನ ಜಾಗವನ್ನು ವಿಡಿಯೋದಲ್ಲಿ ಕವರ್ ಮಾಡಿದ್ದಾರೆ. ಟೆಬಲ್‌ನಲ್ಲಿ ಕುಳಿತುಕೊಂಡು ಅದಿತಿ ಚಾಪ್‌ಸ್ಟಿಕ್‌ ಬಳಸುವುದು ಹೇಗೆಂದು ಹುಡುಕುತ್ತಿರುವ ಕ್ಷಣವನ್ನು ಪತಿ ಯಶಸ್‌ ಚಿತ್ರೀಕರಣ ಮಾಡಿದ್ದಾರೆ. 

Aditi Prabhudeva tries Asian food and vomits share sushi recipe vcs

'ನೂಡಲ್ಸ್‌ ಬಿಟ್ಟರೆ ನಾರ್ಥ್‌ ಇಂಡಿಯನ್‌ ಫುಡ್‌ ಅಂತ ಯಾವುದನ್ನೂ ಟ್ರೈ ಮಾಡಿಲ್ಲ. ಚಾಪ್‌ಸ್ಟಿಕ್‌ ನೋಡಿದ್ದರೆ ಕೋಲು ಕೋಲಣ್ಣ ಕೋಲೆ ಆಟ ನೆನಪಾಗುತ್ತದೆ. ಮೊದಲ ನಾನು ಫ್ರೂಟ್‌ ಜೂಸ್‌ ಕುಡಿದೆ ಆನಂತರ ಚುಂಗ್‌ಫಾ ಬಂದಿದೆ. ಸದರನ್‌ ಚೈನಾ ಆಹಾರಗಳ ರುಚಿ ನೋಡುತ್ತಿರುವೆ. ರುಚಿ ಒಂದು ಚೂರು ಚೆನ್ನಾಗಿರಲಿಲ್ಲ.' ಎಂದು ಹೇಳುತ್ತಿದ್ದಂತೆ ಅದಿತಿ ತಟ್ಟೆ ಮೇಲೆ ವಾಂತಿ ಮಾಡಿದ್ದಾರೆ. ಅಲ್ಲಿಗೆ ಸುಮ್ಮನಾಗದ ಅದಿತಿ ಚೈನಾದ ಫೇಮಸ್‌ sushi ರುಚಿ ನೋಡಿದ್ದಾರೆ.ಉಪ್ಪು ಉಳಿ ಖಾರ ಏನೂ ಇಲ್ಲದಿದ್ದರೂ ತುಂಬಾನೇ ಚೆನ್ನಾಗಿತ್ತು. ಇದನ್ನು ಮನೆಯಲ್ಲಿ ಪ್ರಯತ್ನ ಮಾಡಬೇಕು ಎಂದು ಸಾಮಾಗ್ರಿಗಳನ್ನು ಆರ್ಡರ್‌ ಮಾಡಿದೆ ಎಂದಿದ್ದಾರೆ. 

ಅದಿತಿ ಪ್ರಭುದೇವ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದ ಫೋಟೋಗಳು ವೈರಲ್

ಮನೆಯಲ್ಲಿ ಸರಳವಾಗಿ sushi ಮಾಡುವುದನ್ನು ತೋರಿಸಿದ್ದಾರೆ. ಸಂಜೆ ಸ್ನ್ಯಾಕ್ಸ್‌ ರೀತಿ ಸವಿದ ಯಶಸ್‌ ಸೂಪರ್ ಆಗಿದೆ ದಿನ ಮನೆಯಲ್ಲಿ ಈ ರೀತಿ ಮಾಡಿ ಎಂದು ಅದಿತಿ ಕಾಲೆಳೆದಿದ್ದಾರೆ. 

ಪತಿ ಬಗ್ಗೆ ಅದಿತಿ ಮಾತು: 

'ಇದು ಲವ್ ಮ್ಯಾರೇಜ್ ಅಲ್ಲ ತಪ್ಪು ಮಾಹಿತಿ ಕೊಡುತ್ತಿದ್ದೀರಾ ಇದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್. ಎಂಗೇಜ್ ಆಗಿ ಒಂದು ವರ್ಷ ಆಗಿದೆ ಈ ಒಂದು ವರ್ಷದಲ್ಲಿ ತುಂಬಾ ಅರ್ಥ ಮಾಡಿಕೊಂಡಿದ್ದೀವಿ . ಬಹುಷ ನಾನು ಲವ್ ಮಾಡಿದ್ದರೂ ಇಷ್ಟೊಳ್ಳೆ ಹುಡುಗ ಸಿಗುತ್ತಿರಲಿಲ್ಲ. ಅಪ್ಪ ಅಮ್ಮನೇ ಅರೇಂಜ್ಡ್‌ ಮ್ಯಾರೇಜ್‌ನಲ್ಲಿ ಇಷ್ಟೊಳ್ಳೆ ಹುಡುಗನನ್ನು ಕೊಟ್ಟಿದ್ದಾರೆ ಅದೇ ನನಗೆ ಖುಷಿ ವಿಚಾರ. ಇಷ್ಟು ದಿನ ಒಬ್ಬಂಟಿ, ಒಬ್ಬಳೆ ಹೋರಾಟ ಮಾಡಬೇಕಿತ್ತು ಈಗ ಜೋಡಿ ಆದ ಮೇಲೆ ಶಕ್ತಿ ಜಾಸ್ತಿಯಾಗಿದೆ. ನನ್ನ ಕನಸುಗಳಿಗೆ ಪ್ರೋತ್ಸಾಹ ನೀಡುವಂತ ಕುಟುಂಬ ಸಪೋರ್ಟ್ ಮಾಡ್ತಾರೆ. ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಕಮ್ ಬ್ಯಾಕ್ ಮಾಡುತ್ತೀನಿ. ಯಶಸ್ವಿ ಅವರ ಜೊತೆ ಡಬಲ್ ರೈಡಿಂಗ್ ಹೋಗಿಲ್ಲ ಬರೀ ಕಾರಿನಲ್ಲಿ ಸುತ್ತಾಡಿದ್ದೀವಿ ಬೈಕ್‌ನಲ್ಲಿ ಹೋಗುವ ಆಸೆ ಇದೆ ಹೋಗಬೇಕು' ಎಂದು ಅದಿತಿ ಹೇಳಿದ್ದಾರೆ. 

ಅದಿತಿ ಪ್ರಭುದೇವ ಮೆಹೆಂದಿ; ಅರಮನೆ ಮೈದಾನದಲ್ಲಿ ಕೆಂಪು-ಕೆಂಪು ಸೆಟ್...

ಈ ಹಿಂದೆ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಅದಿತಿ ಭಾಗಿಯಾಗಿದ್ದಾಗ  ದಾಂಪತ್ಯ ಜೀವನ ಹೇಗಿರುತ್ತೆ, ಏನೆಲ್ಲಾ ಫಾಲೋ ಮಾಡಬೇಕು ಯಾವುದಕ್ಕೆ ಹೆಚ್ಚು ಪ್ರಮುಖ್ಯತೆ ನೀಡಬೇಕು ಎಂದು ಚರ್ಚೆ ಮಾಡಿದ್ದಾರೆ. 'ನೋಡಿದವರು ಕಲಾವಿದ ಜೀವನದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅದತಿ ಅಂದ್ರೆ ಎಲ್ಲರೂ ಹೇಳುವುದು ಸದಾ ನಗುತ್ತಿರುತ್ತಾಳೆ ಖುಷಿಯಾಗಿರುತ್ತಾಳೆ ಅಂತ. ನಗು ಖುಷಿ ಇದ್ದೇ ಇದೆ ಆದರೆ ಅದರ ಹಿಂದೆ ಸಾಕಷ್ಟು ಶ್ರಮವಿದೆ. ನನ್ನ ಜೀವನ ಒಳ್ಳೆಯ ರೀತಿಯಲ್ಲಿ ಕಟ್ಟಿಕೊಳ್ಳಬೇಕು ಅನ್ನೋ ಆಸೆ ಇದೆ. ಇದುವರೆಗೂ ನಾನು ಒಂದು ಪಾರ್ಟಿಗೂ ಹೋಗಿಲ್ಲ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಒಳ್ಳೆ ರೀತಿ ಜೀವನಕ್ಕೆ ನಾನು ಈ ರೀತಿ ಬದುಕು ಕಟ್ಟಿಕೊಂಡಿರುವೆ. ದೇವರು ಅನ್ನೋ ಶಕ್ತಿ ನಂಬಿದಾಗ ಮೋಸ ಆಗೋಲ್ಲ ಅಂತಾರೆ. ಹೀಗಾಗಿ ಸ್ವಲ್ಪ ಎಮೋಷನ್ ಆದೆ. ಲವ್ ಕೂಡ ಮಾಡೋಕೆ ಆಗಿಲ್ಲ ನನ್ನ ಕರ್ಮಕ್ಕೆ. ಈ ರೀತಿ ಇರುವ ಹುಡುಗಿಗೆ ಹುಡುನ ನೋಡಿ ಫೀಲಿಂಗ್ ಬಂದಿರುವುದು ಇದೇ ಮೊದಲು' ಹೇಳಿದ್ದಾರೆ.

 

Follow Us:
Download App:
  • android
  • ios