ಅದಿತಿ ಪ್ರಭುದೇವ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದ ಫೋಟೋಗಳು ವೈರಲ್
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಅದಿತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಅದಿತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಿತಿ ಪ್ರಿಯತಮ ಯಶಸ್ವಿ ಜೊತೆ ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ಹಳದಿ ಶಾಸ್ತ್ರದ ಸಂಭ್ರಮ ಶುರುವಾಗಿದ್ದು ಫೋಟೋಗಳು ವೈರಲ್ ಆಗಿವೆ.
ಅದಿತಿ ಮತ್ತು ಯಶಸ್ವಿ ಮದುವೆ ನವೆಂಬರ್ 27ರಂದು ನಡೆಯುತ್ತಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈಗಾಗಲೇ ಮದುವೆಗೆ ಸಕಲ ಸಿದ್ಧತೆ ನಡೆದಿದ್ದು ಇನ್ನೊಂದು ದಿನ ಮಾತ್ರ ಬಾಕಿ ಇದೆ.
ಅದಿತಿ ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ಜೋರಾಗಿತ್ತು. ಅರಿಣಿಶ ಶಾಸ್ತ್ರದ ಫೋಟೋಗಳನ್ನು ಅದಿತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅದಿತಿ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಅದಿತಿ ಮದುವೆ ಬಗ್ಗೆ ಬಹಿರಂಗ ಪಡಿಸಿದ್ದರು. ಕಿರುತೆರೆ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಅದಿತಿ ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ದೈರ್ಯಂ ಸಿನಿಮಾ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಿದರು.
ಬಜಾರ್ ಸಿನಿಮಾ ಅದಿತಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಬಳಿಕ ಅನೇಕ ಸಿನಿಮಾಗಳಲ್ಲಿ ಮಿಂಚಿದರು. ಸ್ಯಾನೆ ಟಾಪ್ ಆಗಿರುವ ಸ್ಯಾಂಡಲ್ ವುಡ್ ನಟಿ, ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಸದ್ಯ ಅದಿತಿ ಬಳಿ ಸಾಲು ಸಾಲು ಸಿನಿಮಾಗಳಿವೆ. ಅದಿತಿ ಸದ್ಯ ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅದಿತಿ ಸೇರಿ ಮೂವರು ನಾಯಕಿಯರು ನಟಿಸಿದ್ದಾರೆ.
ಜಮಾಲಿಗುಡ್ಡ, ತೋತಾಪುರಿ-2, ದಿಲ್ ಮಾರ್, 5ಡಿ, ಅಂದೊಂದಿತ್ತು ಕಾಲ, ಮಾಫಿಯಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅದಿತಿ ಬ್ಯುಸಿಯಾಗಿದ್ದಾರೆ. ಮದುವೆಯ ಬಳಿಕವೂ ಅದಿತಿ ಸಿನಿಮಾರಂಗದಲ್ಲಿ ಸಕ್ರೀಯರಾಗಿರಲಿದ್ದು ಮತ್ತಷ್ಟು ಉತ್ತಮ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.