ಇಂಜಿನಿಯರಿಂಗ್ ಪದವೀಧರೆಯಾದ ಸಂಜನಾ ಭರತನಾಟ್ಯ ಕಲಾವಿದೆಯೂ ಹೌದು. ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲೂ ನಟಿಸಿದ್ದಾರೆ. ಸದ್ಯಕ್ಕೆ ನಟಿ ಸಂಜನಾ ಆನಂದ್ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದ್ಯಕ್ಕೆ ನಟಿ ಸಂಜನಾ ಆನಂದ್ ಈ ಸೀಕ್ರೆಟ್ ಹೊರಬಂದಿದ್ದು ಸಖತ್ ವೈರಲ್ ಆಗಿದೆ.

ಸಂಜನಾ ಆನಂದ್ ಪ್ರೊಟೀನ್ ಪೌಡರ್ ತಗೋತಾರಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ಸಂಜನಾ ಆನಂದ್ (Sanjana Anand) ಸಂದರ್ಶನವೊಂದು ವೈರಲ್ ಆಗಿದೆ. ಅದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಸಂಜನಾ 'ನನಗೆ ಯಾವುದೇ ಪಾತ್ರಕ್ಕೆ ಈಗಿರೋದಕ್ಕಿಂತ ಹೆಚ್ಚು ಸ್ಲಿಮ್ ಆಗೋದಕ್ಕೆ ಅಥವಾ ಹೆಚ್ಚು ಫ್ಯಾಟೋ ಆಗೋದಕ್ಕೆ ಯಾವುದೇ ಸಿನಿಮಾದ ನಿರ್ದೇಶಕರು ಹೇಳಿಲ್ಲ. ಸೋ, ನನಗೆ ಪಾತ್ರಕ್ಕೆ ತಕ್ಕಂತೆ ದೇಹವನ್ನು ಬದಲಾಯಿಸುವ ಅಗತ್ಯ ನನಗೆ ಇಲ್ಲಿಯವರೆಗೂ ಎದುರಾಗಿಲ್ಲ. ಆದರೆ, ನಾನು ಮೊದಲೆಲ್ಲಾ ವೇ-ಪ್ರೊಟೀನ್ ತಗೊಂಡು ಅದು ಸೆಟ್ ಆಗದೇ, ಬಳಿಕ ನ್ಯಾಚುರಲ್ ಪ್ರೊಟೀನ್‌ಗೆ ಶಿಫ್ಟ್ ಆಗಿದೀನಿ.

ನನ್ ಡಯಟ್ ಅಭ್ಯಾಸ

ನಾನು ನನ್ನ ಟ್ರೈನರ್ ಹೇಳಿದ್ದನ್ನು ಪಾಲಿಸಿ ನನ್ ಡಯಟ್ ಅಭ್ಯಾಸ ಮಾಡ್ಕೊಂಡಿದೀನಿ, ಅದು ನನ್ನ ದೇಹಕ್ಕೆ ಒಗ್ಗುತ್ತೆ, ಆದ್ರೆ ಬೇರೆಯವರ ಬಾಡಿ ನೇಚರ್ ಬೇರೇನೇ ಇರುತ್ತೆ.. ಸೋ, ಪ್ರತಿಯೊಬ್ರೂ ಕೂಡ ಅವರವರ ಡಯಟ್‌ ಪ್ಲಾನ್‌ ಅನ್ನು ಅವರವರೇ ತಮ್ಮತಮ್ಮ ಟ್ರೈನರ್ ಮೂಲಕ ಫಿಕ್ಸ್ ಮಾಡ್ಕೋಬೇಕು. ಕಾರಣ, ಪ್ರತಿಯೊಬ್ಬರ ದೇಹ ಬೇರೆಬೇರೆ ತರಹವೇ ವರ್ಕ್ ಆಗುತ್ತೆ..

ನಾನು ಯಾರಿಗೂ ಯಾವದೇ ಡಯಟ್ ಅಥವಾ ಪ್ರೊಟೀನ್ ಪೌಡರ್ ರೆಕಮಂಡ್ ಮಾಡೋದಿಲ್ಲ. ಕಾರಣ, ಅವರವರ ದೇಹದ ನೇಚರ್ ಅವರವರಿಗೇ ಗೊತ್ತಿರುತ್ತೆ, ಗೊತ್ತಾಗಬೇಕು. ಆದರೆ, ನಾನು ಮಾತ್ರ ನನ್ನ ಡಯಟ್ ಹಾಗೂ ವರ್ಕ್‌ಟ್‌ ತಪ್ಪದೇ ರೆಗ್ಯೂಲರ್ ಆಗಿ ಪಾಲಿಸ್ತೀನಿ' ಎಂದಿದ್ದಾರೆ ಸಂಜನಾ ಆನಂದ್.

ಕನ್ನಡ ಸಿನಿಮಾರಂಗದಲ್ಲಿ ಆಕ್ಟೀವ್

ಅಂದಹಾಗೆ, ನಟಿ ಸಂಜನಾ ಆನಂದ್ ಇತ್ತೀಚೆಗೆ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಆಕ್ಟೀವ್ ಆಗಿರೋ ನಟಿ. ಚಂದನ್ ಶೆಟ್ಟಿಯವರ 'ಸೂತ್ರಧಾರಿ' ಸಿನಿಮಾಗೆ ಇದೇ ಸಂಜನಾ ಆನಂದ್ ನಾಯಕಿ. ಜೊತೆಗೆ, ಚಂದನ್ ಶೆಟ್ಟಿ ಆಲ್ಬಂ ಸಾಂಗ್‌ನಲ್ಲಿ ಕೂಡ ಸಂಜನಾ ಅವರ ಜೋಡಿಯಾಗಿ ಡ್ಯೂಯೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಮಿಸ್ಟ್ರಿ ಆಫ್ ಕರಿಯಪ್ಪ (2019): ನಾಯಕಿಯಾಗಿ ಮೊದಲ ಸಿನಿಮಾ.

ಸಲಗ (2021): ದುನಿಯಾ ವಿಜಯ್ ನಿರ್ದೇಶನದ ಚಿತ್ರ.

ಶೋಕಿವಾಲ (2022): ಅಜಯ್ ರಾವ್ ಜೊತೆ ನಟಿಸಿದ ಚಿತ್ರ.

ಕುಷ್ಕ (2021):

ವಿಂಡೋ ಸೀಟ್

ಕ್ಷತ್ರಿಯ

ಎಕ್ಕ (2025): ಯುವ ರಾಜ್‌ಕುಮಾರ್ ಜೊತೆ.

ರಾಯಲ್ (2025): ವಿರಾಟ್ ಜೊತೆ.

ಹಯಗ್ರೀವ: (ಮುಂದೆ ತೆರೆಗೆ ಬರಲಿರುವ ಸಿನಿಮಾ)

ಸೂತ್ರಧಾರಿ: (ಚಂದನ್ ಶೆಟ್ಟಿ ಜೊತೆ ನಟನೆ)

ಇಂಜಿನಿಯರಿಂಗ್ ಪದವೀಧರೆಯಾದ ಸಂಜನಾ ಭರತನಾಟ್ಯ ಕಲಾವಿದೆಯೂ ಹೌದು. ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲೂ ನಟಿಸಿದ್ದಾರೆ. ಸದ್ಯಕ್ಕೆ ನಟಿ ಸಂಜನಾ ಆನಂದ್ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ.