ಕನ್ನಡದ ಸೂಪರ್ ಹಿಟ್ ಸಿನಿಮಾದ ಈ ನಟಿ ಆಲಿಯಾ, ದೀಪಿಕಾಗಿಂತಲೂ ಶ್ರೀಮಂತೆ: 4 ಸಾವಿರ ಕೋಟಿಗೂ ಅಧಿಕ ಸಂಪತ್ತು
ಕನ್ನಡದ ಎವರ್‌ಗ್ರೀನ್ ಸಿನಿಮಾದಲ್ಲಿ ನಟಿಸಿದ್ದ ಈ ನಟಿ ಬಾಲಿವುಡ್‌ನಲ್ಲಿಯೂ ದೊಡ್ಡ ಹೆಸರು ಮಾಡಿದ್ದಾರೆ. 4,600 ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತಿನ ಒಡತಿಯಾಗಿರುವ ಅವರು, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆಗಿಂತ ಶ್ರೀಮಂತೆ.
ಬೆಂಗಳೂರು: ಚಿತ್ರರಂಗದಲ್ಲಿ ನಟಿಯರ ಕೆಲಸದ ಟೈಮ್ ಪಿರಿಯಡ್ ತುಂಬಾ ಕಡಿಮೆ ಎಂಬ ಮಾತುಗಳಿವೆ. ಅದರಲ್ಲೂ ಮದುವೆಯಾದ್ಮೇಲೆ ನಟಿಯರಿಗೆ ಆಫರ್‌ಗಳು ಕಡಿಮೆಯಾಗುತ್ತವೆ. ಅದರಲ್ಲೂ ತಾಯಿಯಾದ್ರಂತೂ ಸೈಡ್ ರೋಲ್‌ಗಳ ಆಫರ್‌ಗಳು ಹೆಚ್ಚಾಗಿ ಬರುತ್ತವೆ ಎಂಬುವುದು ಬಹುತೇಕ ಕಲಾವಿದೆಯರ ಮಾತು ಒಂದನೊಂದು ಕಾಲದಲ್ಲಿ ಇಡೀ ಚಿತ್ರರಂಗವನ್ನೇ ಆಳಿದ ಕೆಲ ನಟಿಯರು ಮದುವೆ ಬಳಿಕ ಬಣ್ಣದ ಲೋಕದಿಂದ ದೂರವಾಗುತ್ತಾರೆ. ಹಲವು ವರ್ಷಗಳ ನಂತರ ಕಮ್‌ಬ್ಯಾಕ್ ಮಾಡಿದ್ರೂ ಮತ್ತೆ ಅಂದಿನ ಯಶಸ್ಸು ಅಷ್ಟು ಸುಲಭವಾಗಿ ಸಿಗಲ್ಲ. ಇಂದು ನಾವು ನಿಮಗೆ ಕನ್ನಡದ ಮ್ಯೂಸಿಕಲ್ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ನಟಿ ಸಹ ಮದುವೆ ನಂತರ ಮರೆಯಾಗಿದ್ದರು. ಸುಮಾರು ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡಿದರೂ ನಟಿಸಿದ ಸಿನಿಮಾಗಳು ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಆದ್ರೂ ಇವರು ಸದ್ಯದ ಟಾಪ್ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್‌ಗಿಂತಲೂ ಶ್ರೀಮಂತೆ.
ಕನ್ನಡದ ಕನಸುಗಾರ, ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳು ಇಂದಿಗೂ ಎವರ್‌ಗ್ರೀನ್. 1987ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ನಟಿಯನ್ನು ಕಂಡು ವೀಕ್ಷಕರು ಫಿದಾ ಆಗಿದ್ದರು. ಈ ಸಿನಿಮಾದ ಯಶಸ್ಸಿನ ಕಾರಣಗಳಲ್ಲಿಯೂ ಈ ನಟಿಯೂ ಸೇರುತ್ತಾರೆ. ಅಷ್ಟು ಮಾತ್ರವಲ್ಲ ರಿಷಿ ಕಪೂರ್, ಶಾರೂಖ್ ಖಾನ್, ಸಂಜಯ್ ದತ್, ಅಮಿರ್ ಖಾನ್, ಸಲ್ಮಾನ್ ಖಾನ್, ಅನಿಲ್ ಕಪೂರ್ ಸೇರಿದಂತೆ ದೊಡ್ಡ ಸ್ಟಾರ್‌ಗಳ ಜೊತೆಯಲ್ಲಿಯೂ ಇವರು ಕೆಲಸ ಮಾಡಿದ್ದಾರೆ.
ನಾವು ಹೇಳುತ್ತಿರೋದು ನಿಂಬೆ ಹಣ್ಣಿನಂತಹ ಹುಡುಗಿ ನಟಿ ಜೂಹಿ ಚಾವ್ಲಾ ಬಗ್ಗೆ. ಕನ್ನಡದ ಸೂಪರ್ ಹಿಟ್ ಸಿನಿಮಾ ಪ್ರೇಮಲೋಕದಲ್ಲಿ ಜೂಹಿ ಚಾವ್ಲಾ ನಟಿಸಿದ್ದಾರೆ. 'ಖಯಾಮತ್ ಸೇ ಖಯಮಾತ್ ತಕ್' ಸಿನಿಮಾದಲ್ಲಿ ಅಮಿರ್ ಖಾನ್ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರವೇ ಸೂಪರ್ ಹಿಟ್ ಆಗಿದ್ದರಿಂದ ಜೂಹ್ಲಿ ಚಾವ್ಲಾ ಹಿಂದಿರುಗಿ ನೋಡಲೇ ಇಲ್ಲ. ಜೂಹಿ ಚಾವ್ಲಾ ನಟಿಸಿದ ಸಿನಿಮಾಗಳಲ್ಲಿ ಹಿಟ್ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾದವು.
ಹುರುನ್ ರಿಚ್ ಲಿಸ್ಟ್ ಪ್ರಕಾರ, ನಟಿ ಜೂಹ್ಲಿ ಚಾವ್ಲಾ 4,600 ಕೋಟಿ ರೂಪಾಯಿಯ ಒಡತಿ. ಇದು ನಟಿಯರಾದ ಐಶ್ವರ್ಯಾ ರೈ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್‌ಗಿಂತಲೂ ಅಧಿಕವಾಗಿದೆ. ಜೂಹಿ ಅವರ ಆದಾಯದ ಮೂಲ ಸಿನಿಮಾಗಳು. ಹಾಗೆಯೇ ವಿವಿಧಡೆ ಹಣ ಹೂಡಿಕೆ ಮಾಡಿರುವ ಜೂಹಿ ಚಾವ್ಲಾ, ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಶಾರೂಖ್ ಖಾನ್ ಜೊತೆ ಪಾಲುದಾರಿಕೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ: ರಜಿನೀಕಾಂತ್‌ಗೆ ಟಕ್ಕರ್ ಕೊಟ್ಟ ನಟ, ದಿಢೀರ್ ಸಿನಿಮಾದಿಂದನೇ ದೂರ ಉಳಿದ್ರು; ಆದ್ರೂ 3300 ಕೋಟಿಯ ಮಾಲೀಕ
ಇನ್ನು ಜೂಹಿ ಚಾವ್ಲಾ ಪತಿ ಜಯ್ ಮೆಹ್ತಾ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಶಾರೂಖ್-ಜಯ್ ಮೆಹ್ತಾ ಮಾಲೀಕತ್ವದ ರೆಡ್ ಚಿಲ್ಲೀಸ್ ಗ್ರೂಪ್‌ನ ಸಹ-ಸಂಸ್ಥಾಪಕಿಯೂ ಆಗಿದ್ದಾರೆ. ಜಯ್ ಮೆಹ್ತಾ ಕಂಪನಿ, ಸೌರಾಷ್ಟ್ರ ಸಿಮೆಂಟ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಯ ಷೇರುಗಳನ್ನು ಸಹ ಜೂಹಿ ಚಾವ್ಲಾ ಹೊಂದಿದ್ದಾರೆ.
ಕೇಶ್‌ಕಿಂಗ್ ಆಯುರ್ವೇದಿಕ್ ಆಯಿಲ್, ಪೆಪ್ಸಿ, ಕುರ್‌ಕುರ್ರೆ ಸೇರಿದಂತೆ ಹಲವು ಉತ್ಪನ್ನಗಳಿಗೆ ಜೂಹಿ ಚಾವ್ಲಾ ರಾಯಭಾರಿಯಾಗಿಯೂ ಹಣ ಗಳಿಸುತ್ತಾರೆ. ಇದೆಲ್ಲದರ ಜೊತೆಯಲ್ಲಿ ಫ್ಯಾಶನ್ ವೀಕ್‌ಗಳಲ್ಲಿಯೂ ಹೆಜ್ಜೆ ಹಾಕುತ್ತಾರೆ. ಇಂದಿಗೂ ಅಲ್ಲೊಂದು ಇಲ್ಲೊಂದು ಎಂಬಂತೆ ಸಿನಿಮಾಗಳಲ್ಲಿಯೂ ಜೂಹಿ ನಟಿಸುತ್ತಾರೆ.
ಇದನ್ನೂ ಓದಿ: 19 ವರ್ಷದ ಹಿಂದೆ ರಿಲೀಸ್ ಆಗಿದ್ದ ಈ ಸಿನಿಮಾ ಅನುಭವಿಸಿದ್ದು 1200 ಕೋಟಿ ನಷ್ಟ; ದಿವಾಳಿಯಾಗಿ ಬೀದಿಗೆ ಬಂದ ನಿರ್ಮಾಪಕ