ರಜಿನೀಕಾಂತ್‌ಗೆ ಟಕ್ಕರ್ ಕೊಟ್ಟ ನಟ, ದಿಢೀರ್ ಸಿನಿಮಾದಿಂದನೇ ದೂರ ಉಳಿದ್ರು; ಆದ್ರೂ 3300 ಕೋಟಿಯ ಮಾಲೀಕ
ಒಂದು ಕಾಲದಲ್ಲಿ ರಜನಿಕಾಂತ್‌ಗೆ ಟಕ್ಕರ್ ಕೊಟ್ಟ ನಟ ಸಿನಿಮಾರಂಗದಿಂದ ದೂರ ಸರಿದರೂ 3300 ಕೋಟಿ ರೂಪಾಯಿಗಳ ಸಾಮ್ರಾಜ್ಯದ ಮಾಲೀಕರಾಗಿದ್ದಾರೆ. ನಟನ ಸಿನಿ ಜೀವನ ಮತ್ತು ವ್ಯವಹಾರ ಜಗತ್ತಿನ ಯಶಸ್ಸಿನ ಕಥೆ ಇಲ್ಲಿದೆ.
ಬೆಂಗಳೂರು: ಕಲಾವಿದರು ಎಷ್ಟೇ ಸೂಪರ್ ಹಿಟ್ ಸಿನಿಮಾ ನೀಡಿದವರು ತೆರೆಯ ಹಿಂದೆ ಸರಿದ್ರೆ ಕೆಲ ವರ್ಷಗಳ ಬಳಿಕ ಜನರು ಮರೆಯುತ್ತಾರೆ. ಆ ಸಿನಿಮಾಗಳನ್ನು ನೋಡುವಾಗ ಈ ಕಲಾವಿದೆ ಎಲ್ಲಿ ಹೋದ್ರು ಎಂದು ಗೂಗಲ್ ಸರ್ಚ್ ಮಾಡುತ್ತಾರೆ. ಇಂದು ನಾವು ಹೇಳಹೊರಟಿರೋದು ಒಂದಾನೊಂದು ಕಾಲದಲ್ಲಿ ಸೂಪರ್ ಸ್ಟಾರ್ ರಜಿನೀಕಾಂತ್‌ಗೆ ಟಕ್ಕರ್ ಕೊಡುವ ನಟರಾಗಿದ್ದರು. ದಳಪತಿ ವಿಜಯ್, ಅಜಿತ್ ಮತ್ತು ವಿಕ್ರಂ ಅವರಿಗಿಂತಲೂ ಇವರು ದೊಡ್ಡ ನಟ. ಇನ್ನು ಪ್ಯಾನ್ ಇಂಡಿಯಾ ಎಂಬ ಕಲ್ಪನೆಯೂ ಹುಟ್ಟಿಕೊಂಡಿರಲಿಲ್ಲ. ಆಗಲೇ ಇಡೀ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅಷ್ಟು ದೊಡ್ಡಪ್ರಮಾಣದ ಸ್ಟಾರ್‌ಡಮ್ ಹೊಂದಿದ್ದರೂ, ದಿಢೀರ್ ಅಂತ ಸಿನಿಮಾದಿಂದ ದೂರವಾದರು.
ಇಂದು ನಾವು ಹೇಳುತ್ತಿರೋದು ತಮಿಳು ನಟ ಅರವಿಂದ್ ಸ್ವಾಮಿ. ತಮ್ಮ 20ನೇ ವಯಸ್ಸಿನಲ್ಲಿಯೇ ಮಣಿರತ್ನಂ ಅವರ 'ದಳಪತಿ' ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಹಾಭಾರತದ ಅರ್ಜುನ ಪಾತ್ರದಿಂದ ಸ್ಪೂರ್ತಿ ಪಡೆದ ರೋಲ್‌ನಲ್ಲಿ ನಟಿಸಿದ್ದ ಅರವಿಂದ್ ಸ್ವಾಮಿಯವರ ನಟನೆ ಎಲ್ಲರ ಗಮನವನ್ನು ಸೆಳೆದಿತ್ತು. ದೇಶದಾದ್ಯಂತ ಯಶಸ್ಸು ಕಂಡ ಮಣಿರತ್ನಂ ಅವರ ರೋಜಾ (1992) ಮತ್ತು ಬಾಂಬೆ (1995) ಸಿನಿಮಾದಲ್ಲಿ ಅರವಿಂದ್ ಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಈ ಎರಡು ಸಿನಿಮಾಗಳ ಮೂಲಕ ಭಾರತದ ಉತ್ತರ ಭಾಗದಲ್ಲಿಯೂ ಅರವಿಂದ್ ಸ್ವಾಮಿ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡರು. 1997ರಲ್ಲಿ 'ಮಿನಸಾರಾ ಕನವು' ಸಿನಿಮಾದ ನಟನೆ ನ್ಯಾಷನಲ್ ಅವಾರ್ಡ್ ಸಹ ತಮ್ಮದಾಗಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕಾಜೋಲ್ ಸಹ ನಟಿಸಿದ್ದರು. ಇದಾದ ಬಳಿಕ ಜೂಹಿ ಚಾವ್ಲಾಯೊಂದಿಗೆ 'ಸಾತ್ ರಂಗ್ ಕೇ ಸಪ್ನೆ' ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೂ ಪಾದಾರ್ಪಣೆ ಮಾಡಿದರು. ಈ ಸಮಯದಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟರಾದ ರಜಿನೀಕಾಂತ್ ಮತ್ತು ಕಮಲ್ ಹಾಸನ ಅವರಿಗೆ ನಡುಕ ಹುಟ್ಟಿಸಿದ್ದರು.
90ರ ದಶಕದ ನಂತರ ಅರವಿಂದ್ ಸ್ವಾಮಿ ನಟನೆಯ ಚಿತ್ರಗಳು ಬಾಕ್ಸ್ ಆಫಿಸ್‌ನಲ್ಲಿ ಸೋಲಲು ಆರಂಭಿಸಿದವು. ಸತತ ಸೋಲಿನಿಂದ ಅನುಪಮ್ ಖೇರ್ ನಿರ್ದೇಶನದ ಚಿತ್ರದಿಂದ ಅರವಿಂದ್ ಸ್ವಾಮಿ ಹೆಸರನ್ನು ಕೈ ಬಿಡಲಾಯ್ತು. ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಮತ್ತು ಅಮಿತಾಬ್ ಬಚ್ಚನ್ ಅವರನ್ನು ಕಾಸ್ಟ್ ಮಾಡಲಾಗಿತ್ತು. ಸಿನಿಮಾ ಸೋಲಿನಿಂದ ನೊಂದ ಅರವಿಂದ್ ಸ್ವಾಮಿ 2000ರ ನಂತರ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ. ಸಿನಿಮಾದಿಂದ ಅಂತರ ಕಾಯ್ದುಕೊಂಡ ಅರವಿಂದ್ ಸ್ವಾಮಿ, ತಂದೆಯ ವ್ಯಾಪಾರದತ್ತ ಮುಖ ಮಾಡಿದರು. ವಿ ಡಿ ಸ್ವಾಮಿ ಆಂಡ್ ಕಂಪನಿ, ಇಂಟರ್‌ಪ್ರೊ ಗ್ಲೋಬಲ್‌ನಲ್ಲಿಯೂ ಅರವಿಂದ್ ಸ್ವಾಮಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: 2 ಕಾರಣಕ್ಕೆ ದಳಪತಿ ವಿಜಯ್ ಕೊನೆ ಚಿತ್ರದಲ್ಲಿ ನಟಿಸಲ್ಲ ಎಂದ ಪ್ಯಾನ್ ಇಂಡಿಯಾ ಸ್ಟಾರ್
2005ರಲ್ಲಿ ಸಂಭವಿಸಿದ ಅಪಘಾತದಲ್ಲಿ ಅರವಿಂದ್ ಸ್ವಾಮಿ ಅವರ ಕಾಲು ಪಾರ್ಶ್ವವಾಯುಗೆ ತುತ್ತಾಗುತ್ತದೆ. ಇದರಿಂದ ಚಿತ್ರರಂಗದಿಂದ ಸಂಪೂರ್ಣವಾಗಿ 4-5 ವರ್ಷವೇ ದೂರ ಉಳಿದು, ಚಿಕಿತ್ಸೆ ಪಡೆದುಕೊಳ್ಳಲು ನಿರ್ಧರಿಸಿದರು. ಗುಣಮುಖರಾದ ಬಳಿಕ ಟ್ಯಾಲೆಂಟ್ ಮ್ಯಾಕ್ಸಿಮಸ್ (Talent Maximus) ಎಂಬ ಕಂಪನಿಯನ್ನು ಆರಂಭಿಸಿದರು. ಕಡಿಮೆ ಸಮಯದಲ್ಲಿಯೇ ಯಶಸ್ಸು ಸಹ ಸಿಕ್ಕಿತು. Multiple market tracking portals ವರದಿ ಪ್ರಕಾರ, 2022 ರಲ್ಲಿ, ಟ್ಯಾಲೆಂಟ್ ಮ್ಯಾಕ್ಸಿಮಸ್‌ನ ಆದಾಯವು $418 ಮಿಲಿಯನ್ (ರೂ. 3300 ಕೋಟಿ) ಆಗಿತ್ತು. ಅರವಿಂದ್ ಸ್ವಾಮಿ ಸಂಪೂರ್ಣವಾಗಿ ಟ್ಯಾಲೆಂಟ್ ಮ್ಯಾಕ್ಸಿಮಸ್‌ನಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು.
ಒಂದು ದಶಕದ ಬಳಿಕ ಅಂದ್ರೆ 2013ರಲ್ಲಿ ಮಣಿರತ್ನಂ ಅವರು 'ಕಾದಲ್' ಸಿನಿಮಾಗೆ ಅರವಿಂದ್ ಸ್ವಾಮಿಯನ್ನು ಮತ್ತೆ ಚಿತ್ರರಂಗಕ್ಕೆ ಕರೆದುಕೊಂಡು ಬಂದರು. ಇಲ್ಲಿಂದ ಸಿನಿಲೋಕದಲ್ಲಿ ಅರವಿಂದ್ ಸ್ವಾಮಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು. 2021ರಲ್ಲಿ ಬಿಡುಗಡೆಯಾದ ಕಂಗಣಾ ರಣಾವತ್ ನಟನೆಯ ತಲೈವಿ ಸಿನಿಮಾದಲ್ಲಿ ಎಂಜಿಆರ್ ಆಗಿ ನಟಿಸುವ ಮೂಲಕ ಬಾಲಿವುಡ್‌ಗೂ ಪ್ರವೇಶಿಸಿದರು. ಇದೀಗ ಅರವಿಂದ್ ಸ್ವಾಮಿಯವರ 'ಮೇಯಗನ್' ಸಿನಿಮಾ ಒಟಿಟಿಯಲ್ಲಿ ಭಾರೀ ಸಕ್ಸಸ್ ಕಂಡಿದೆ.
ಇದನ್ನೂ ಓದಿ: 19 ವರ್ಷದ ಹಿಂದೆ ರಿಲೀಸ್ ಆಗಿದ್ದ ಈ ಸಿನಿಮಾ ಅನುಭವಿಸಿದ್ದು 1200 ಕೋಟಿ ನಷ್ಟ; ದಿವಾಳಿಯಾಗಿ ಬೀದಿಗೆ ಬಂದ ನಿರ್ಮಾಪಕ