ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ರಚನೆಯ ನಂತರ, ನಟಿ ಅಶ್ವಿನಿ ತನಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. 16ನೇ ವಯಸ್ಸಿನಲ್ಲಿ ಸಿನಿಮಾ ಅವಕಾಶದ ನೆಪದಲ್ಲಿ ಜನಪ್ರಿಯ ನಿರ್ದೇಶಕರೊಬ್ಬರು ತಮ್ಮ ಚೆನ್ನೈನ ಮನೆಯಲ್ಲೇ ಅನುಚಿತವಾಗಿ ವರ್ತಿಸಿದರು ಎಂದು ಅವರು ಹೇಳಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಅಶ್ವಿನಿ, ಆ ನಿರ್ದೇಶಕರನ್ನು ಕ್ಷಮಿಸಿದ್ದು, ಘಟನೆಯಿಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ.
ಮಲಯಾಳಂ ಚಿತ್ರಂಗದಲ್ಲಿ ಹೇಮಾ ಸಮಿತಿ ರಚನೆ ಆದಮೇಲೆ ಅದೆಷ್ಟೋ ಕರಾಳ ಸತ್ಯಗಳು ಹೊರ ಬರುತ್ತಿದೆ. ಪರಿಶುದ್ಧ ಇಂಡಸ್ಟ್ರಿ ಎಂದು ಪರಿಗಣಿಸಿದ್ದ ಜನರಿಗೆ ಇದನ್ನು ಕೇಳಿ ಶಾಕ್ ಆಗಿದೆ. 16ನೇ ವಯಸ್ಸಿಗೆ ಸಿನಿಮಾ ಜರ್ನಿ ಆರಂಭಿಸಿದ ನಟಿ ಅಶ್ವಿನಿಗೆ ಆಫರ್ ಕೊಡುವುದಾಗಿ ಕರೆದ ಸ್ಟಾರ್ ನಿರ್ದೇಶಕ. ವರ್ಷಗಳು ಕಳೆದ ಮೇಲೆ ಸತ್ಯ ಬಿಚ್ಚಟ್ಟ ನಟಿ....
'ನಾನು ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಕಳೆದ ವರ್ಷ ನಾನು ಟಿವಿ ಶೋನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೆ. ನಾನು ಇದನ್ನು ಕಾಸ್ಟಿಂಗ್ ಕೌಚ್ ಅಂತ ಕರೆಯುವುದಿಲ್ಲ. ಆದರೆ ನಾನು ದೊಡ್ಡ ಟ್ರಾಪ್‌ನಲ್ಲಿ ಸಿಲುಕಿಕೊಂಡಿದ್ದೆ. ನಾನು ಆ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ನಾನು ಯಾರಿಗೂ ನೋವು ಕೊಡುವುದಕ್ಕೆ ಇಷ್ಟ ಪಡುವುದಿಲ್ಲ ನಾನು ಆತನನ್ನು ಕ್ಷಮಿಸಿದ್ದೇನೆ. ಆ ಘಟನೆಯಿಂದ ಹೊರ ಬಂದಿದ್ದೇನೆ ಅವರು ಜನಪ್ರಿಯ ನಿರ್ದೇಶಕರು. ಸಿನಿಮಾಗೆ ಸಂಬಂಧಪಟ್ಟಂತೆ ಚರ್ಚೆ ಮಾಡುವುದಕ್ಕೆ ಅವರು ಆಫೀಸ್‌ಗೆ ಬರುವಂತೆ ಹೇಳಿದರು. ಯಾವಾಗಲೂ ನನ್ನ ತಾಯಿ ನನ್ನ ಜೊತೆಗೆ ಬರುತ್ತಿದ್ದರು ಆದರೆ ಅಂದು ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ಸಹಾಯಕಿಯನನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದೆ' ಎಂದು ತಮಿಳು ಯೂಟ್ಯೂಬ್ ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದಾರೆ.
ಯಾಕೆ ನಟಿಯರನೇ ಟಾರ್ಗೆಟ್ ಮಾಡುತ್ತೀರಾ? ಅವರು ಮನಸ್ಥಿತಿ ಬಗ್ಗೆ ಯೋಚನೆ ಮಾಡಿದೀರಾ: ನಟಿ ರಮ್ಯಾ ಗರಂ
'ಆ ನಿರ್ದೇಶಕನ ಆಫೀಸ್ ಇದ್ದಿದ್ದು ಚೆನ್ನೈನಲ್ಲಿ ಇರುವ ಅವರ ಮನೆ ಬಳಿಯೇ. ಹೀಗಾಗಿ ಆಫೀಸ್‌ಗೆ ಹೋಗಿದ್ದೆ. 'ಮೇಲಿನ ಮಹಡಿಗೆ ಹೋಗುತ್ತಿದ್ದಂತೆ ಬೆಡ್ ರೂಮ್‌ನಿಂದ ಒಳಗೆ ಬಾ ಅನ್ನೋ ಧ್ವನಿ ಕೇಳಿಸಿತ್ತು. ನಾನು ಯಾವುದೇ ಅಳುಕಿಲ್ಲ ರೂಮ್ ಒಳಗೆ ಹೋಗಿದೆ ಏಕೆಂಧರೆ ಆ ಹಿಂದೆ ಮಲಯಾಳಂ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ. ನನಗೆ ಅವರು ಗೊತ್ತಿದ್ದರಿಂದ ನಾನು ಹೆಚ್ಚಾಗಿ ಏನೂ ಯೋಚನೆ ಮಾಡುವುದಕ್ಕೆ ಹೋಗಲಿಲ್ಲ. ಆಗ ನನಗೆ ಅಷ್ಟೋಂದು ಯೋಚನೆ ಮಾಡುವ ಪ್ರಬದ್ಧತೆ ಇರಲಿಲ್ಲ' ಎಂದು ಅಶ್ವಿನಿ ಹೇಳಿದ್ದಾರೆ.
ಒಂದು ಸಮಯದಲ್ಲಿ ಅಪ್ಪ ನಾನು ಮಾತು ಶುರು ಮಾಡುತ್ತಿದ್ದೇ ಜಗಳದಿಂದ: ಹಿತಾ ಸಿಹಿಕಹಿ ಚಂದ್ರು
'ಬೆಡ್ ರೂಮ್‌ಗೆ ಹೋಗುತ್ತಿದ್ದಂತೆ ಆ ನಿರ್ದೇಶಕ ಅನುಚಿತವಾಗಿ ವರ್ತಿಸುವುದಕ್ಕೆ ಶುರು ಮಾಡಿದೆ. ಖುಷಿಯಿಂದ ಮೇಲಿನ ಮಹಡಿಗೆ ಹೋಗಿದ್ದ ಹುಡುಗಿ ಅದೇ ಖುಷಿಯಿಂದ ಹಿಂತಿರುಗಲಿಲ್ಲ. ನನಗೆ ಅಲ್ಲಿ ಏನಾಯ್ತು ಎಂಬುದು ನಂಬುವುದಕ್ಕೂ ಆಗುತ್ತಿರಲಿಲ್ಲ. ತಕ್ಷಣವೇ ಅಲ್ಲಿಂದ ಮನೆಗೆ ಹೊರಟು ಬಂದೆ ಆದರೆ ನನ್ನ ಅಮ್ಮನಿಗೂ ಏನೋ ಆಗಿದೆ ಅನ್ನೋ ಗೊತ್ತಿತ್ತು' ಎಂದಿದ್ದಾರೆ ಅಶ್ವಿನಿ.
ದುಡ್ಡು ಉಳಿಸೋಕೆ ಹೆಂಡತಿ ನಾನು ಒಂದೇ ಬಟ್ಟೆ ಹಾಕೋದು, ಸೀರೆ ಸೆಲ್ವಾರ್ ಬಿಟ್ಟು: ನಿರಂಜನ್ ದೇಶಪಾಂಡೆ
