ನಟಿ ಹಿತಾ ಚಂದ್ರಶೇಖರ್, ಸಿಹಿ ಕಹಿ ಚಂದ್ರು ಅವರ ಪುತ್ರಿ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ, ತಂದೆಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಚಿಕ್ಕಂದಿನಿಂದಲೂ ಮುಕ್ತವಾಗಿ ಮಾತನಾಡುತ್ತಿದ್ದೆವು, ತಪ್ಪು ಮಾಡಿದಾಗ ತಿದ್ದುತ್ತಿದ್ದರು. ಈಗಲೂ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ತಂದೆ ಎಲ್ಲರೊಂದಿಗೆ ಪ್ರೀತಿಯಿಂದ ಇದ್ದು, ಅತಿಥಿಗಳಿಗೆ ಊಟ ಬಡಿಸುತ್ತಾರೆ ಎಂದು ಹಿತಾ ಹೇಳಿದ್ದಾರೆ.

ಕಾಲ್ ಕೆಜಿ ಪ್ರೀತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಹಿತಾ ಚಂದ್ರಶೇಖರ್. ಖ್ಯಾತ ನಟ ಸಿಹಿ ಕಹಿ ಚಂದ್ರು ಮತ್ತು ಗೀತಾ ಅವರ ಮುದ್ದಿನ ಜೇಷ್ಠ ಪುತ್ರಿ. ಸಾಲು ಸಾಲು ಸಿನಿಮಾಗಳು ಮತ್ತು ಜಾಹೀರಾತುಗಳಲ್ಲಿ ಮಿಂಚಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡುತ್ತಿದ್ದಾರೆ. ಸಿಹಿ ಕಹಿ ಚಂದ್ರು ಕೂಡ ಪ್ರತಿಯೊಬ್ಬರನ್ನು ಮಗಳೇ ಮಗನೇ ಎಂದು ಮಾತನಾಡಿಸುತ್ತಾರೆ. ಹೀಗಾಗಿ ರಿಯಲ್ ಮಗಳ ಜೊತೆ ಸಂಬಂಧ ಹೇಗಿದೆ ಎಂದು ಹಂಚಿಕೊಂಡಿದ್ದಾರೆ.

'ತಂದೆ ಮತ್ತು ನಾನು ಒಂದೊಂದು ಫೇಸ್‌ಗಳನ್ನು ಎದುರಿಸಿದ್ದೀವಿ. ಒಂದು ಸಮಯದಲ್ಲಿ ತುಂಬಾ ಜಗಳ ಮಾಡುತ್ತಿದ್ವಿ ಹೇಗೆ ಅಂದ್ರೆ ಒಂದೇ ಜಾಗದಲ್ಲಿ ಇಬ್ರು ಇದ್ವಿ ಅಂದ್ರೆ ಜಗಳನೇ ಮೊದಲು ಶುರುವಾಗುತ್ತಿತ್ತು. ದಿನ ಕಳೆಯುತ್ತಿದ್ದಂತೆ ನಮ್ಮಿಬ್ಬರ ನಡುವೆ ಸ್ವೀಟ್‌ ಫ್ರೆಂಡ್‌ಶಿಪ್‌ ಶುರುವಾಗಿದೆ. ಚಿಕ್ಕ ವಯಸ್ಸಿನಿಂದ ನನ್ನ ತಂದೆ ತಾಯಿ ಜೊತೆ ಓಪನ್ ರೀತಿಯಲ್ಲಿ ಮಾತುಕತೆ ಮಾಡುತ್ತಿದ್ದೆ. ಸ್ಕೂಲ್‌ನಲ್ಲಿ ಟೆಸ್ಟ್‌ ಫೇಲ್ ಆಗಿದ್ರೂ ಹೇಳುತ್ತಿದ್ದೆ, ಕಾಲೇಜ್‌ನಲ್ಲಿದ್ದಾಗ ಬಾಯ್‌ಫ್ರೆಂಡ್ ವಿಚಾರ....ಯಾವುದರ ಬಗ್ಗೆನೂ ಅವರೊಟ್ಟಿಗೆ ಮಾತನಾಡಲು ನನಗೆ ಭಯ ಇರುತ್ತಿರಲಿಲ್ಲ. ಅಯ್ಯೋ ಏನ್ ಅಂತಾರೆ ಬೈದ್ರೆ ಏನ್ ಮಾಡೋದು ಅಂತ ಭಯ ಇರುತ್ತಿರಲಿಲ್ಲ. ನಾನು ತಪ್ಪು ಮಾಡಿದಾಗ ಬೈದು ತಿದ್ದುತ್ತಿದ್ದರು ಆದರೆ ಇವಳಿಗೆ ಏನೇ ಆದರೂ ಬಂದು ಮೊದಲು ಹೇಳುವುದೇ ನಮಗೆ ಅನ್ನೋದು ಅವರಿಗೆ ಅರ್ಥ ಆಗಿತ್ತು' ಎಂದು ಹಿತಾ ಚಂದ್ರಶೇಖರ್ ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ದುಡ್ಡು ಉಳಿಸೋಕೆ ಹೆಂಡತಿ ನಾನು ಒಂದೇ ಬಟ್ಟೆ ಹಾಕೋದು, ಸೀರೆ ಸೆಲ್ವಾರ್ ಬಿಟ್ಟು: ನಿರಂಜನ್ ದೇಶಪಾಂಡೆ

'ಇವತ್ತಿಗೂ ಹಲವಾರು ವಿಚಾರಗಳ ಬಗ್ಗೆ ತಂದೆ ಜೊತೆ ಮಾತನಾಡುತ್ತೀವಿ. ಅಪ್ಪ ಈಗ ಏನೇ ಮಾತನಾಡಿದರೂ ಕೂಡ ತಂಗಿ ಮತ್ತು ನಾನು ಎಂಜಾಯ್ ಮಾಡುತ್ತೀವಿ. ಅಪ್ಪ ತುಂಬಾ ಸ್ಪೋರ್ಟಿವ್ ವ್ಯಕ್ತಿ ಏನೇ ಆದರೂ ಸಂತೋಷದಿಂದ ಸ್ವೀಕರಿಸುತ್ತಾರೆ. ಪ್ರತಿಯೊಬ್ಬರ ಜೊತೆ ಒಂದೇ ರೀತಿ ಇರುತ್ತಾರೆ. ಮನೆಗೆ ಯಾರಾದರೂ ಬಂದ್ರೆ ಅವರಿಗೆ ಮೊದಲು ಅಡುಗೆ ಮಾಡಿ ಕಳುಹಿಸುತ್ತಾರೆ. ಇದುವರೆಗೂ ಬಂದವರು ಖಾಲಿ ಹೊಟ್ಟೆಯಲ್ಲಿ ಹೊರಗಡೆ ಹೋಗಿಲ್ಲ ಏನೂ ಬೇಡ ಅಂದ್ರೂ ಕೂಡ ಕಾಫಿ ಆದ್ರೂ ಕೊಟ್ಟು ಕಳುಹಿಸುತ್ತಾರೆ. ಈ ಗುಣಗಳನ್ನು ನನ್ನಲ್ಲೂ ಅಳವಡಿಸಿದ್ದಾರೆ. ವಾರದಲ್ಲಿ ಎರಡು ಸಲ ನಾವು ಒಟ್ಟಿಗೆ ಊಟ ಮಾಡುತ್ತೀವಿ ಆಗ ಊಟ ಶುರುವಾಗುವುದೇ ಅವರ ಕೈ ತುತ್ತಿನಿಂದ' ಎಂದು ಹಿತಾ ಚಂದ್ರಶೇಖರ್ ಹೇಳಿದ್ದಾರೆ. 

ಚೈತ್ರಾ ವಾಸುದೇವ್ 2ನೇ ಮದುವೆ ಮಾಡಿಕೊಂಡ ಸ್ಥಳದಲ್ಲೇ ಮಾಜಿ ಪತಿಯ 2ನೇ ಮದುವೆ; ತಲೆ ಕೆಡಿಸಿಕೊಂಡ ನೆಟ್ಟಿಗರು

YouTube video player