ನಿರೂಪಕ ನಿರಂಜನ್ ಮತ್ತು ಯಶಸ್ವಿನಿ ಯೂನಿಸೆಕ್ಸ್ ಬಟ್ಟೆಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಬಜೆಟ್ ಕಡಿತಗೊಳಿಸಲು, ಪರಸ್ಪರರ ಬಟ್ಟೆಗಳನ್ನು ಹಂಚಿಕೊಳ್ಳುತ್ತಾರೆ. ಗಿಚ್ಚಿ ಗಿಲಿಗಿಲಿ ಶೋ ಮೂಲಕ ಯಶಸ್ವಿನಿ ಕಿರುತೆರೆಗೆ ಬಂದರು. ಫೇಸ್‌ಬುಕ್ ಸ್ನೇಹದಿಂದ ಪ್ರೇಮವಾಗಿ, ಮನೆಯವರ ವಿರೋಧದ ನಡುವೆಯೂ ಮದುವೆಯಾದರು. ನಿರಂಜನ್, ಯಶಸ್ವಿನಿಗಾಗಿ ಕಾಯುತ್ತಿದ್ದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ, ಆರ್‌ಜೆ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಸಖತ್ ಡಿಫರೆಂಟ್‌ ಬಟ್ಟೆಗಳನ್ನು ಹಾಕುತ್ತಾರೆ. ಅಷ್ಟೇ ಅಲ್ಲ ಒಮ್ಮೆ ನಿರಂಜನ್ ಹಾಕಿದ್ದ ಬಟ್ಟೆಯನ್ನು ಮತ್ತೊಮ್ಮೆ ಅವರ ಹೆಂಡತಿ ಯಶಸ್ವಿನಿ ಅದೇ ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಏನಿದು ಮ್ಯಾಚಿಂಗ್ ಬಟ್ಟೆ ತೆಗೆದುಕೊಳ್ಳುತ್ತಾರಾ ಇಲ್ವಾ ಒಬ್ರು ಒಂದೇ ಹಾಕುತ್ತಾರಾ ಅನ್ನೋ ಅನುಮಾನ ಶುರುವಾಗುತ್ತದೆ. ಹೀಗಾಗಿ ಈ ಕ್ರಿಯೇಟಿವ್ ಔಟ್‌ಫಿಟ್‌ಗಳ ಬಗ್ಗೆ ನಿರಂಜನ್ ಹೇಳಿದ ಮಾತುಗಳನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. 

'ನಾವು ಹೆಚ್ಚಾಗಿ ಯೂನಿಸೆಕ್ಸ್‌ ಬಟ್ಟೆಗಳನ್ನು ಖರೀದಿಸುವುದು. ನಾನು ಧರಿಸುವ ಲೂಸ್ ಪ್ಯಾಂಟ್‌ನ ನನ್ನ ಹೆಂಡತಿ ಕೂಡ ಹಾಕಿಕೊಳ್ಳುತ್ತಾಳೆ. ನನ್ನ ಟೀ-ಶರ್ಟ್‌ಗಳು ಆಕೆಗೆ ಸ್ವಲ್ಪ ಲೂಸ್‌ ಆಗಿರುತ್ತದೆ ಎಂದು ಜಿಮ್‌ ಅಥವಾ ವರ್ಕೌಟ್ ಸಮಯದಲ್ಲಿ ಧರಿಸುತ್ತಾಳೆ. ನಾನು ಧರಿಸುವ ಶಾಲ್ ಕೂಡ ಅವಳದ್ದು. ಅವಳದು ನಂದು ಅಂತ ಏನೂ ಇಲ್ಲ ಏಕೆಂದರೆ ಏನೇ ಖರಿದಿಸಿದ್ದರೂ ನನಗೆ ಅವಳಿಗೆ ಅಂತ ಸೇರಿಸಿ ತೆಗೆದುಕೊಳ್ಳುತ್ತೀವಿ. ಬೀನಿ ಟೋಪಿ ನಾನು ಹಾಕಿಕೊಳ್ಳುತ್ತೀನಿ ಅವಳು ಹಾಕಿಕೊಳ್ಳುತ್ತಾಳೆ, ಕನ್ನಡಕವನ್ನು ಅವಳು ಹಾಕಿಕೊಳ್ಳುತ್ತಾಳೆ ನಾನು ಹಾಕಿಕೊಳ್ಳುತ್ತೀನಿ. ಬಜೆಟ್‌ ಕಟ್ ಮಾಡಬೇಕು ಎಂದು ಈ ನಿರ್ಧಾರ ತೆಗೆದುಕೊಂಡಿದ್ದು. ಚೂಡಿಧಾರ ಸೀರೆಯನ್ನು ಬಿಟ್ಟು ಬೇರೆ ಎಲ್ಲಾ ಬಳಸುತ್ತೀವಿ. ಅಂಗಡಿಗಳಿಗೆ ಹೋದರೆ ನಾವು ಯೂನಿಸೆಕ್ಸ್‌ ಮಾತ್ರ ಖರೀದಿ ಮಾಡುವುದು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನಿರಂಜನ್ ಮಾತನಾಡಿದ್ದಾರೆ. 

ಬುಡುಬುಡುಕೆ ವೇಷ ಧರಿಸಿದ ಚಾರು; ಹೆಣ್ಣುಮಕ್ಕಳು ಈ ವೇಷ ಹಾಕ್ಬೋದಾ ಅಂತ ಕೇಳೋರೆ ಜಾಸ್ತಿ!

ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಯಶಸ್ವಿನಿ ಕಿರುತೆರೆಗೆ ಕಾಲಿಟ್ಟರು. ಫೇಸ್‌ಬುಕ್‌ ಫ್ರೆಂಡ್ಸ್‌ ಆಗಿದ್ದ ಇವರಿಬ್ಬರೂ ಒಮ್ಮೆ ಭೇಟಿ ಮಾಡುತ್ತಾರೆ ಆನಂತರ ಪದೇ ಪದೇ ಭೇಟಿ ಮಾಡಿ ಒಳ್ಳೆ ಸ್ನೇಹ ಬೆಳೆಯುತ್ತದೆ. ಇಬ್ಬರೂ ಈ ಹಿಂದೆ ಒಂದು ರಿಲೇಷನ್‌ಶಿಪ್‌ನಲ್ಲಿ ಇದ್ದರು, ಇವರಿಬ್ಬರೂ ಕೂಡ ಅವರವರೊಟ್ಟಿಗೆ ಬ್ರೇಕಪ್ ಮಾಡಿಕೊಳ್ಳುವ ಸೇಜ್‌ನಲ್ಲಿದ್ದರು. ಅದಾದ ಮೇಲೆ ಇವರು ಪ್ರೀತಿಸಲು ಶುರು ಮಾಡಿದ್ದರು. ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಲವ್ ಮಾಡಿ ಮದುವೆಯಾದರು. ಯಶಸ್ವಿನಿ ಮನೆಯಲ್ಲಿ ಈ ಪ್ರೀತಿಗೆ ಮದುವೆಗೆ ಒಪ್ಪಿಗೆ ಇಲ್ಲದ ಕಾರಣ ಸಿಕ್ಕಾಪಟ್ಟ ಕಷ್ಟ ಪಟ್ಟಿದ್ದಾರೆ. ಯಶಸ್ವಿನಿಯನ್ನು ನೋಡಲೇ ಬೇಕು ಎಂದು ಶೂಟಿಂಗ್ ಮುಗಿಸಿಕೊಂಡು ಮಧ್ಯಾರಾತ್ರಿ ಆದರೂ ಕಾರಿನಲ್ಲಿ ಮಲಗಿಕೊಂಡು ನಿರಂಜನ್ ಕಾಯುತ್ತಿದ್ದರಂತೆ. 

ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ಮ್ಯಾಜಿಕ್ ಶೋ; ಉಡುಪಿಯಲ್ಲಿ ಅಪಹಾಸ್ಯ ಮಾಡಿದ್ದು ಎಷ್ಟು ಸರಿ?