ಕನ್ನಡ ನಟಿ ರಮ್ಯಾ ಟ್ರೋಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿಯರನ್ನು ಗುರಿಯಾಗಿಸಿ ಟ್ರೋಲ್ ಮಾಡುವುದು ಸರಿಯಲ್ಲ ಎಂದಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಟ್ರೋಲ್‍ಗಳನ್ನು ಸಹಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ, ಇದು ನಟಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ. ಟ್ರೋಲಿಂಗ್ ನಿಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಟ್ರೋಲಿಗರ ವಿರುದ್ಧ ಗರಂ ಆಗಿದ್ದಾರೆ. ಪದೇ ಪದೇ ನಾಯಕಿಯರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿರುವುದು ಸರಿ ಅಲ್ಲ ಎಂದಿದ್ದಾರೆ. ಇಷ್ಟು ದಿನ ರಶ್ಮಿಕಾ ಮಂದಣ್ಣ ಪರ ಯಾರೂ ಮಾತನಾಡದೆ ಸುಮ್ಮನಿದ್ದರು ಆದರೆ ಈಗ ರಮ್ಯಾ ಎಂಟ್ರಿ ಕೊಟ್ಟ ಮೇಲೆ ಹೌದು ಹೌದು ಅಂತಿದ್ದಾರೆ.
'ಮುಖ್ಯವಾಗಿ ಸಿನಿಮಾ ನಟಿಯರನ್ನು ಹೆಚ್ಚು ಟಾರ್ಗೆಟ್ ಮಾಡಲಾಗುತ್ತಿದೆ. ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಾರೆ. ಕನ್ನಡ ಬರಲ್ಲ,ಫಿಲ್ಮ್‌ಫೆಸ್ಟ್‌ಗೆ ಬರಲ್ಲ ಅಂತೆಲ್ಲಾ ಟ್ರೋಲ್ ಮಾಡ್ತಾಎ. ಇದೆಲ್ಲವನ್ನೂ ನಿಲ್ಲಿಸಬೇಕು. ಅದು ಎಲ್ಲರಿಗೂ ಹರ್ಟ್ ಆಗುತ್ತದೆ ಅದು ಯಾರಿಗೂ ಒಳ್ಳೆಯದಲ್ಲ. ಹಾಗಾಗಿ ಟ್ರೋಲಿಂಗ್ ವ್ಯವಹಾರವನ್ನು ಮೊದಲು ಸಿಲ್ಲಿಸಿ. ಅದನ್ನು ನಾವು ಮಾಡಬಾರದು. ರಶ್ಮಿಕಾ ಮಂದಣ್ಣ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ನಾನು ನೋಡಿದ್ದೇನೆ ತೀರಾ ಕೆಟ್ಟದಾಗಿ ಇರುತ್ತದೆ. ಅದವರನ್ನು ಟ್ರೋಲ್ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಆ ರೀತಿ ಮಾಡಿದರೆ ಒಬ್ರಿಗೂ ಒಳ್ಳೆದಾಗಲ್ಲ. ಆದರಲ್ಲೂ ನೀವು ಮಹಿಳೆಯರನ್ನೇ ಯಾಕೆ ಟ್ರೋಲ್ ಮಾಡುತ್ತೀರಾ ಜಾಸ್ತಿ ಅಂದ್ರೆ ಅವರು ಈಸೀ ಟಾರ್ಗೆಟ್ ಅಂತ. ಅವರು ಏನು ಹೇಳಲ್ಲ ಏಣು ಮಾತನಾಡಲ್ಲ ಅಂತ ಅವರ ಬಗ್ಗೆ ಜಾಸ್ತಿ ಕಾಂಟ್ರವರ್ಸಿ ಮಾಡುತ್ತೀರಾ' ಎಂದು ನಟಿ ರಮ್ಯಾ ಮಾತನಾಡಿದ್ದಾರೆ.
ಈಗ ಸಿನಿಮಾದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಹಿಂದೆ ಎಷ್ಟು ಹಿಟ್ಸ್ ಕೊಟ್ಟಿದ್ರು ಗೊತ್ತಾ?
'ಆ ಟ್ರೋಲ್‌ಗಳನ್ನು ಸಹಿಸಿಕೊಳ್ಳುವುದಕ್ಕೆ ಎಲ್ಲರಿಗೂ ಶಕ್ತಿ, ಧೈರ್ಯ ಇರಬೇಕಲ್ವಾ? ಹೀಗೆ ಟ್ರೋಲ್‌ಗೆ ಒಳಗಾದ ನಟಿಯರು ಮಾನಸಿಕ ಆರೋಗ್ಯದ ಬಗ್ಗೆ ಏನಾದರೂ ಕಲ್ಪನೆ ಇದ್ಯಾ? ನೀವೇನೋ ಕುತ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತೀರಿ. ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೆ? ಅವರ ಮನಸ್ಥಿತಿ ಬಗ್ಗೆ ಯೋಚನೆ ಮಾಡಿದ್ದೀರಾ?ಇದು ಖಂಡಿತಾ ಆಗಬಾರದು' ಎಂದು ರಮ್ಯಾ ಹೇಳಿದ್ದಾರೆ.
ನಟ ಕಾಶಿನಾಥ್‌ಗೆ ಕ್ಯಾನ್ಸರ್ ಇತ್ತು ಅಂತ ಪತ್ನಿಗೂ ಹೇಳದೆ ಮುಚ್ಚಿಟ್ಟ ಪುತ್ರ; ಸತ್ಯ ಕೇಳಿ ಶಾಕ್ ಆದ ಫ್ಯಾನ್ಸ್
