ನಟಿ ಅದಿತಿ ಪ್ರಭುದೇವ ಹತ್ತು ತಿಂಗಳ ಮಗಳ ತಾಯಿ. ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ತೂಕ ಇಳಿಕೆ ಬಗ್ಗೆ ಪಾಪರಾಜಿಗಳ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗುವಿನ ಆರೈಕೆ ಮತ್ತು ಕೆಲಸದ ಬಗ್ಗೆ ಅಭಿಮಾನಿಗಳ ವಿಮರ್ಶೆಗೆ ಉತ್ತರಿಸಿದ್ದಾರೆ. ಉದ್ಯಮಿ ಯಶಸ್ ಅವರನ್ನು ವಿವಾಹವಾಗುವ ಮುನ್ನ ತಮ್ಮ ಕಲ್ಪನೆ ಬೇರೆಯೇ ಇತ್ತೆಂದು ಬಹಿರಂಗಪಡಿಸಿದ್ದಾರೆ.
‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’, ಅಲೆಕ್ಸಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಸ್ಯಾಂಡಲ್‌ವುಡ್ ಬೆಡಗಿ ಅದಿತಿ ಪ್ರಭುದೇವ ಈಗ ಹತ್ತು ತಿಂಗಳ ಮಗಳ ಅಮ್ಮ ಆಗಿದ್ದಾರೆ. ಕಳೆದ ಏಪ್ರಿಲ್ 4ರಂದು ಇವರಿಗೆ ಮಗಳು ಹುಟ್ಟಿದ್ದು ಅದರ ನೇಸರ ಎಂದು ಹೆಸರು ಇಟ್ಟಿದ್ದಾರೆ. ಅದಿತಿ ಅವರು, ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಮಗು ಎರಡೂವರೆ ತಿಂಗಳು ಇರುವಾಗಲೇ ಜೀ ಕನ್ನಡದ ರಾಜಾ ರಾಣಿ ಷೋನಲ್ಲಿ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದಾರೆ, ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ನಟಿ ಆ್ಯಕ್ಟೀವ್ ಆಗಿದ್ದಾರೆ.
ಮಗು ಆದ ಮೇಲೆ ಸಾಮಾನ್ಯವಾಗಿ ಹೆಣ್ಣುಮಕ್ಕಳು ದಪ್ಪ ಆಗುತ್ತಾರೆ. ಅದೇ ರೀತಿ ಅದಿತಿ ಕೂಡ ಆಗಿದ್ದರು. ಕೊನೆಗೆ ವರ್ಕ್ಔಟ್ ಎಲ್ಲಾ ಮಾಡಿ ಈಗ ತೆಳ್ಳಗಾಗಿದ್ದಾರೆ. ಇವರನ್ನು ನೋಡಿದ ಪಾಪರಾಜಿಗಳು ತೆಳ್ಳಗಾಗಿದ್ದೀರಾ ಎಂದಿದ್ದಾರೆ. ಅದಕ್ಕೇ ಬೇಸರ ವ್ಯಕ್ತಪಡಿಸಿದ ಅದಿತಿ, ತೆಳ್ಳಗಾದ್ರೆ ತೆಳ್ಳಗಾದ್ರಿ ಅಂತೀರಾ, ದಪ್ಪಗಾದ್ರೆ ದಪ್ಪ ಅಂತೀರಾ, ಅಮ್ಮ ಆದ್ಮೇಲೆ ದಪ್ಪ ಆಗ್ತಾರೆ ಅನ್ನೋ ಸೆನ್ಸೂ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ, ನಟಿಯರು ಹೇಗೆ ಕಾಣಿಸಬೇಕು ಎನ್ನುವುದು ಅವರ ಪ್ರಶ್ನೆ. ಅಷ್ಟಕ್ಕೂ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ತಮ್ಮದೇ ಆದ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಇಂಗಿತ. ಆದರೆ ಅದು ಕೆಲವೊಮ್ಮೆ ನಟ-ನಟಿಯರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದೀಗ ಅದಿತಿ ಅವರ ಮುಖದಲ್ಲಿಯೂ ಆ ಕಿರಿಕಿರಿಯನ್ನು ನೋಡಬಹುದಾಗಿದೆ.
ಅದಿತಿ ಸೌಂದರ್ಯದ ಗುಟ್ಟು ಮನೆಯಲ್ಲೇ ಮಾಡುವ ಫೇಸ್ ಪ್ಯಾಕ್, ಬಾಡಿ ಮಸಾಜ್! ನಟಿ ತಿಳಿಸಿರೋ ಟಿಪ್ಸ್ ಕೇಳಿ
ಮಗುವಿಗೆ 2-3 ತಿಂಗಳು ಇರುವಾಗ ನಟಿ ರಿಯಾಲಿಟಿ ಷೋನಲ್ಲಿ ಅವರು ಪಾಲ್ಗೊಂಡಿದ್ದಾಗ, ಚಿಕ್ಕಮಗುವನ್ನು ಬಿಟ್ಟು ಬಂದು ಕೆಲಸ ಮಾಡುವ ಅವಶ್ಯಕತೆ ಏನಿತ್ತು ಎನ್ನುವುದು ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಉತ್ತರಿಸಿದ್ದ ನಟಿ, ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದರು. ಇದರ ಹೊರತಾಗಿಯೂ ಅಭಿಮಾನಿಗಳಿಗೆ ಯಾಕೋ ಸಮಾಧಾನ ಆಗುತ್ತಿಲ್ಲ. ಅಮ್ಮನ ಕೆಲಸ ಎಂದರೆ ಎರಡು ಗಂಟೆಗೊಮ್ಮೆ ಎದೆಹಾಲು ಕುಡಿಸುವುದು ಮಾತ್ರವಲ್ಲ. ಅಮ್ಮನಾಗಿ ಜವಾಬ್ದಾರಿ ಹೆಚ್ಚಿದೆ. ಮಗುವಿನ ಜೊತೆ ಅಮ್ಮ ಆದವಳು ಇರಬೇಕೇ ವಿನಾ, ಅಜ್ಜಿಯಾದವಳು ಅಲ್ಲ ಎಂದೆಲ್ಲಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಅದಿತಿ ಅವರು, ರ್ಯಾಪಿಡ್ ರಶ್ಮಿ ನಡೆಸಿಕೊಡುವ ಷೋನಲ್ಲಿ ಕಾಣಿಸಿಕೊಂಡಿದ್ದು, ಬದುಕಿನ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ಉದ್ಯಮಿ ಯಶಸ್ ಜೊತೆಗಿನ ಮದುವೆಯ ರೋಚಕ ಘಟನೆಯನ್ನು ಅವರು ಹಂಚಿಕೊಂಡಿದ್ದರು. ಕೈಯಲ್ಲಿ ನಾಲ್ಕೈದು ಚಿತ್ರಗಳು ಇದ್ದ ಟೈಮ್ ಅದು. ಮದುವೆ-ಗಿದುವೆ ಅಂತೆಲ್ಲಾ ಯೋಚನೇನೆ ಮಾಡಿರಲಿಲ್ಲ. ಆದರೆ ಯಶಸ್ ಮನೆಯವರ ಕಡೆಯಿಂದ ಹುಡುಗಿ ನೋಡಬೇಕು ಎಂದು ಬಂದರು. ನಮ್ಮ ಮನೆಯಲ್ಲಿಯೂ ಓಕೆ ನೋಡು ಎಂದರು. ನಾನು ಕೂಡ ಓಕೆ ಎಂದೆ. ಅಲ್ಲಿಯವರೆಗೂ ನನ್ನ ಹುಡುಗನ ಕಲ್ಪನೆ ಬೇರೆಯದ್ದೇ ರೀತಿ ಇತ್ತು. ಉದ್ಯಮಿ ಎಲ್ಲಾ ನನಗೆ ಇಷ್ಟ ಇರಲಿಲ್ಲ. 9-6 ಜಾಬ್ ಆಗಿರಬೇಕು ಎಂದು ಏನೇನೋ ಕಲ್ಪನೆ ಇತ್ತು. ಯಶಸ್ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ ಓಕೆ ಎಂದು ಒಪ್ಪಿಕೊಂಡೆ ಎಂದು ಹೆಣ್ಣು ನೋಡುವ ಶಾಸ್ತ್ರದ ಕುರಿತು ಮಾತನಾಡಿದ್ದರು. ಕನ್ನಡ ಫಿಲ್ಮಾಲಾಜಿ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ದೊಡ್ಡಪತ್ರೆಯಲ್ಲಿದೆ ನಟಿ ಅದಿತಿ ಪ್ರಭುದೇವ್ ಆರೋಗ್ಯದ ಗುಟ್ಟು: ಅಮ್ಮನಾದ ಮೇಲೆ ಮತ್ತಷ್ಟು ಹಾಟ್ ಹೇಗೆ?
