ಅದಿತಿ ಸೌಂದರ್ಯದ ಗುಟ್ಟು ಮನೆಯಲ್ಲೇ ಮಾಡುವ ಫೇಸ್ ಪ್ಯಾಕ್, ಬಾಡಿ ಮಸಾಜ್! ನಟಿ ತಿಳಿಸಿರೋ ಟಿಪ್ಸ್ ಕೇಳಿ
ಸ್ಯಾಂಡಲ್ವುಡ್ ಬ್ಯೂಟಿ ಅದಿತಿ ಸೌಂದರ್ಯದ ಗುಟ್ಟು ಮನೆಯಲ್ಲೇ ಮಾಡುವ ಫೇಸ್ ಪ್ಯಾಕ್, ಬಾಡಿ ಮಸಾಜ್! ನಟಿ ತಿಳಿಸಿರೋ ಟಿಪ್ಸ್ ಕೇಳಿ.

ಇದೀಗ ಹವಾಮಾನದಲ್ಲಿ ಏರುಪೇರಾಗುತ್ತಿದೆ. ಇದೇ ಕಾರಣಕ್ಕೆ ಮುಖದಲ್ಲಿ ಒಡಕು, ತುಟಿಯಲ್ಲಿ ಬಿರುಕು ಎಲ್ಲವೂ ಸಹಜವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಗಂತೂ ಲೆಕ್ಕವೇ ಇಲ್ಲ. ಆಯುರ್ವೇದ, ನೈಸರ್ಗಿಕ... ಹಾಗೆ ಹೀಗೆ ಎಂದೆಲ್ಲಾ ಹೇಳಿ ಪ್ರಚಾರ ಮಾಡುವ ಹಲವಾರು ದೊಡ್ಡ ದೊಡ್ಡ ಕಂಪೆನಿಗಳು ಇವೆ. ಆದರೆ ಅಂಥ ಕ್ರೀಮ್ಗಳಲ್ಲಿ ಎಷ್ಟು ರಾಸಾಯನಿಕ ಇರುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ, ಆ ಪ್ರಾಡಕ್ಟ್ಗಳಿಗೆ ಬರುವ ಸ್ಟಾರ್ಗಳೇ ಅದರ ಬಳಕೆ ಮಾಡದೇ ಇರುವುದು! ಇತ್ತೀಚಿಗಷ್ಟೇ ಆಲಿಯಾ ಭಟ್ ಅವರ ನೆತ್ತಿಯ ಮೇಲೆ ಸಂಪೂರ್ಣ ಕೂದಲು ಉದುರಿರುವ ವಿಡಿಯೋ ವೈರಲ್ ಆಗಿಬಿಟ್ಟಿತ್ತು. ನಟಿ ಶ್ಯಾಂಪೂ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಕಾರಣ, ಅದು ಸಾಕಷ್ಟು ಟ್ರೋಲ್ ಆಗಿತ್ತು. ಇಂದು ಮಾರುಕಟ್ಟೆಯಲ್ಲಿ ಸಿಗುವ ಬ್ಯೂಟಿ ಪ್ರಾಡಕ್ಟ್ಗಳು, ಅವುಗಳನ್ನು ಹಚ್ಚಿ ಎಂದು ಕೋಟಿಗಟ್ಟಲೆ ದುಡ್ಡು ಪಡೆದು ಜನರನ್ನು ಮರಳು ಮಾಡುವ ನಟ-ನಟಿಯರು... ಇದು ನಡೆದೇ ಇದೆ.
ಇದೀಗ ನಟಿ ಅದಿತಿ ಪ್ರಭುದೇವ ಅವರು, ಮನೆಯಲ್ಲಿಯೇ ಮಾಡಿಕೊಳ್ಳಬಹುದಾದಂಥ ಫೇಸ್ ಪ್ಯಾಕ್, ಬಾಡಿ ಮಸಾಜ್ಗಳ ಕುರಿತು ಹೇಳಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅಮ್ಮನಾಗಿರುವ ಅದಿತಿ ಅವರು ಇಂದಿಗೂ ತಮ್ಮ ಬ್ಯೂಟಿಯನ್ನು ಮೆಂಟೇನ್ ಮಾಡಿದ್ದು, ಅದಕ್ಕೆ ಕಾರಣ ತಾವು ಮನೆಯಲ್ಲಿಯೇ ಮಾಡಿಕೊಳ್ಳುವ ಇಂಥ ಸೌಂದರ್ಯ ಸಾಧಕಗಳು ಎಂದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬೇರೆ ಬೇರೆ ಪ್ರಾಡಕ್ಟ್ಗಳಿಗೆ ರಾಯಭಾರಿಯಾಗಿ ವಿಡಿಯೋಗಳನ್ನು ಹಾಕಿದರೂ, ಮನೆಯಲ್ಲಿ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ.
ದೊಡ್ಡಪತ್ರೆಯಲ್ಲಿದೆ ನಟಿ ಅದಿತಿ ಪ್ರಭುದೇವ್ ಆರೋಗ್ಯದ ಗುಟ್ಟು: ಅಮ್ಮನಾದ ಮೇಲೆ ಮತ್ತಷ್ಟು ಹಾಟ್ ಹೇಗೆ?
ಫೇಸ್ ಪ್ಯಾಕ್, ಬಾಡಿ ಮಸಾಜ್ (Face Pack, Body Massage)
ಫೇಸ್ ಪ್ಯಾಕ್: ಚಂದನದ ಪೌಡರ್ ಒಂದು ಕಪ್ ತೆಗೆದುಕೊಂಡು ಅದಕ್ಕೆ ಹಸಿ ಹಾಲನ್ನು ಹಾಕಿ ಮಿಕ್ಸ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ಫೇಸ್ಗೆ ಚೆನ್ನಾಗಿ ಮಸಾಜ್ ಮಾಡಿಕೊಂಡರೆ ಟ್ಯಾನ್ ಆಗುವುದು, ಪಿಂಪಲ್ ಆಗುವುದನ್ನು ತಪ್ಪಿಸಬಹುದು. ಇನ್ನು ಬಾಡಿ ಮಸಾಜ್ಗೆ ಹೊರಗಡೆಯಿಂದಲೇ ಆಯಿಲ್ ತರಬಹುದು. ಆದರೆ ಮನೆಯಲ್ಲಿಯೇ ಸಿಂಪಲ್ ಆಗಿ ಎಣ್ಣೆ ತಯಾರಿಸಿಕೊಳ್ಳಬಹುದು. ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಆಲೀವ್ ಆಯಿಲ್, ಸ್ವಲ್ಪ ಅರಿಶಿಣ ಹಾಗೂ ಅರ್ಧ ಚಮಚ ನೀಮ್ ಪೌಡರ್ ಮಿಕ್ಸ್ ಮಾಡಬೇಕು. 5-10 ನಿಂಬೆಹಣ್ಣನ್ನು ಮಿಕ್ಸ್ ಮಾಡಿದರೆ ಬಾಡಿ ಮಸಾಜ್ಗೆ ಆಯಿಲ್ ರೆಡಿ. 10-15 ನಿಮಿಷ ಮಸಾಜ್ ಮಾಡಿಕೊಳ್ಳಿ. ಇದು ಸೂಪರ್ ಆಗಿ ವರ್ಕ್ ಆಗುತ್ತದೆ.
ಹೇರ್ ಆಯಿಲ್ (Hair Oil):
ಕೊಬ್ಬರಿ ಎಣ್ಣೆ ಕಾದ ಬಳಿಕ ಚಿಕ್ಕ ಪೀಸ್ ಲವಂಗ, ಚಕ್ಕೆ, ಮೆಂತೆ ಕಾಳು ಹಾಗೂ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿಕೊಳ್ಳಬೇಕು. ಸ್ಟೌವ್ ಆಫ್ ಮಾಡಬೇಕು. ದಾಸವಾಳ ಮತ್ತು ಮೆಂತ್ಯೆ ಪೌಡರ್ ಇದ್ದರೆ ಅದನ್ನು ಸ್ವಲ್ಪ ಹಾಕಬೇಕು. ಒಂದು ಚಮಚ ನೀಮ್ ಪೌಡರ್ ಹಾಕಬೇಕು. ಬೆಟ್ಟದ ನೆಲ್ಲಿಕಾಯಿ ಇದ್ದರೆ ಅದನ್ನು ಅರ್ಧ ಜಜ್ಜಿ ಹಾಕಿಕೊಳ್ಳಬೇಕು. ಚಿಕ್ಕ ತುಂಡು ಈರುಳ್ಳಿ ಹಾಕಬೇಕು. ಐದು ನಿಮಿಷ ಹಾಗೆ ಬಿಡಬೇಕು. ಅರ್ಧ ಗಂಟೆ ಬಿಟ್ಟು ಸೋಸಿದ ಮೇಲೆ ಅದನ್ನು ಬಳಸಬಹುದು. ಸಾಸಿವೆ ಎಣ್ಣೆ, ಹರಳೆಣ್ಣೆ ಹಾಕಬೇಕು. ರಾತ್ರಿಪೂರ್ತಿ ಅದನ್ನು ಇಟ್ಟು ತಲೆಸ್ನಾನಕ್ಕೂ ಮುನ್ನ ಒಂದು ಗಂಟೆ ಚೆನ್ನಾಗಿ ತಲೆಗೆ ಮಸಾಜ್ ಮಾಡಿಕೊಂಡು ನಂತರ ಸ್ನಾನ ಮಾಡಬೇಕು.
ಪೆಡಿಕ್ಯೂರ್, ಮೆನಿಕ್ಯೂರ್, ಸ್ಕ್ರಬ್ (scrub)
ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಸೋಡಾ, ಒಂದು ಚಮಚ ಉಪ್ಪು, ಅರ್ಧ ನಿಂಬೆಹಣ್ಣು, ಇಷ್ಟವಾದ ಶ್ಯಾಂಪೂ ಹಾಕಿ ನೊರೆ ಬರುವವರೆಗೆ ಕದಡಿ. ಗುಲಾಬಿ ದಳ ಇದ್ದರೆ ಹಾಕಿದರೆ ಹಿಮ್ಮಡಿ ಕ್ರ್ಯಾಕ್, ಟ್ಯಾನ್ ಕಲೆ ಎಲ್ಲವೂ ಹೋಗುತ್ತದೆ. ಇನ್ನು ಸುಲಭದಲ್ಲಿ ಸ್ಕ್ರಬ್ ತಯಾರಿಸಿಕೊಳ್ಳಬಹುದು. ಅದಕ್ಕೆ ಎರಡು ಚಮಚ ಮಸೂರ್ ದಾಲ್, ಒಂದು ಚಮಚ ಬೇಳೆ, ಒಂದು ಚಮಚ ಹೆಸರು ಕಾಳು, ಒಂದು ಚಮಚ ಕಡ್ಲೆ ಹಿಟ್ಟು, ಒಂದು ಚಮಚ ಅರಿಶಿಣ ಪುಡಿ ಹಾಕಿ ತರಿತರಿಯಾಗಿ ಮಿಕ್ಸಿಯಲ್ಲಿ ಮಾಡಬೇಕು. ನೀರು, ಮೊಸರು, ಎಣ್ಣೆ ಏನಾದರೂ ಒಂದು ಹಾಕಿಕೊಂಡು ಸ್ನಾನ ಮಾಡುವಾಗ ಐದು ನಿಮಿಷ ಮಸಾಜ್ ಮಾಡಿಕೊಂಡು ಸ್ನಾನ ಮಾಡಬಹುದು. ಸೋಪ್ ಬಳಸಬೇಡಿ.
ಬಿಟ್ಟುಹೋದವರು ಮರಳಿ ಬರಬೇಕೆ? ಇದನ್ನು 108 ಬಾರಿ ಹೇಳಿ ಮ್ಯಾಜಿಕ್ ನೋಡಿ: ಡಾ.ಸೌಜನ್ಯ ಟಿಪ್ಸ್

