ಸ್ಯಾಂಡಲ್​ವುಡ್​ನ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ನಟನೆಯ 51ನೇ ಚಿತ್ರ ‘ಸಾವಿತ್ರಿ’ ಆಡಿಯೋ ಬಿಡುಗಡೆ ಆಗಿದೆ. ಎಸ್‌ ದಿನೇಶ್‌ ನಿರ್ದೇಶನದ, ಪ್ರಶಾಂತ್‌ ಕುಮಾರ್‌ ಹೀಲಲಿಗೆ ನಿರ್ಮಿಸಿರುವ ಸಿನಿಮಾ ಇದು.

ಸ್ಯಾಂಡಲ್​ವುಡ್​ನ (Sandalwood) ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ನಟನೆಯ 51ನೇ ಚಿತ್ರ ‘ಸಾವಿತ್ರಿ’ (Savitri) ಆಡಿಯೋ ಬಿಡುಗಡೆ ಆಗಿದೆ. ಎಸ್‌ ದಿನೇಶ್‌ (S Dinesh) ನಿರ್ದೇಶನದ, ಪ್ರಶಾಂತ್‌ ಕುಮಾರ್‌ ಹೀಲಲಿಗೆ ನಿರ್ಮಿಸಿರುವ ಸಿನಿಮಾ ಇದು. ಈ ಸಂದರ್ಭದಲ್ಲಿ ವಿಜಯ್‌ ರಾಘವೇಂದ್ರ, ‘ಮತ್ತೊಂದು ಒಳ್ಳೆಯ ಕತೆಯ ಮೂಲಕ ನಾನು ನಿಮ್ಮ ಮುಂದೆ ಬರುತ್ತಿದ್ದೇನೆ. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ರೂಪಿಸಿರುವ ಸಿನಿಮಾ ಇದು. ನಮ್ಮ ಈ ಚಿತ್ರಕ್ಕೆ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಇರಲಿ’ ಎಂದು ಕೇಳಿಕೊಂಡರು.

'ಸಾವಿತ್ರಿ' ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ವಿಜಯ ರಾಘವೇಂದ್ರ ಅವರ ಐವತ್ತೊಂದನೇ ಚಿತ್ರ. ಆದರೆ ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ಈಗಲೂ ಹೊಸತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ ರಾಘವೇಂದ್ರ ಹಾಗೂ ತಾರಾ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನಮ್ಮ ಹೆಮ್ಮೆ. ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರ ತಾರಾಬಳಗ ನಮ್ಮ ಚಿತ್ರದಲ್ಲಿದೆ. ಹೃದಯ ಶಿವ ಬರೆದು, ಮೊದಲ ಬಾರಿಗೆ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿದೆ. 

ಅಪ್ಪು ಮಾಮ ಏನೇ ಹೇಳಿಕೊಟ್ಟರೂ ನನಗೆ ಮ್ಯಾಚ್ ಮಾಡಲು ಆಗುತ್ತಿರಲಿಲ್ಲ: Vijay Raghavendra

ಛಾಯಾಗ್ರಾಹಕ ನಾಗಾರ್ಜುನ ಸೇರಿದಂತೆ ಎಲ್ಲಾ ತಂತ್ರಜ್ಞರ ಕೆಲಸ ಅದ್ಭುತವಾಗಿದೆ ಎಂದು ನಿರ್ದೇಶಕ ಎಸ್ ದಿನೇಶ್ ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಮಾಹಿತಿ ನೀಡಿದರು. ನಾನು ದಿನೇಶ್ ಅವರ ಮೊದಲ ಚಿತ್ರ 'ಉಯ್ಯಾಲೆ'ಗೆ ಸಂಭಾಷಣೆ ಬರೆದಿದೆ. ಹಾಡು ಬರೆಯುತ್ತಿದ್ದ ನನಗೆ ಸಂಭಾಷಣೆ ಬರೆಯಲು ಮೊದಲು ಅವಾಕಾಶ ನೀಡಿದ್ದೆ ಇವರು. ಈಗ 'ಸಾವಿತ್ರಿ' ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಹೊಸಪಯಣ ಆರಂಭಿಸಿದ್ದೀನಿ. ಈವರೆಗೂ ಎಂಟನೂರಕ್ಕೂ ಅಧಿಕ ಹಾಡುಗಳನ್ನು ಬರೆದಿದ್ದೇನೆ. ಆದರೆ ಸಂಗೀತ ನೀಡಿರುವುದು ಇದೇ ಮೊದಲ ಬಾರಿ. ನಾಲ್ಕು ಹಾಡುಗಳು ಚೆನ್ನಾಗಿದೆ ಎಂದು ಹೃದಯಶಿವ ಹೇಳಿದರು. 

ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಉತ್ತಮವಾಗೂ ಮೂಡಿಬಂದಿದೆ. ಸರ್ಕಾರ ನೂರರಷ್ಟು ಅನುಮತಿ ನೀಡಿದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ. ಇಲ್ಲವಾದಲ್ಲಿ ಓಟಿಟಿ ಮೂಲಕ ಪ್ರದರ್ಶಿಸುತ್ತೇವೆ ಎಂದರು ನಿರ್ಮಾಪಕ ಪ್ರಶಾಂತ್ ಕುಮಾರ್. ಚಿತ್ರದಲ್ಲಿ ನಟಿಸಿರುವ ಊರ್ವಶಿ ರಾಯ್, ನೈಲಾ ಪ್ರಮೋದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ನಾಗಾರ್ಜುನ ಕ್ಯಾಮೆರಾ ಹಿಡಿದಿದ್ದಾರೆ.

ವಿಜಯ್​ ರಾಘವೇಂದ್ರ ಹೊಸ ಚಿತ್ರ 'ಓ ಮನಸ್ಸೆ'

ಇನ್ನು ವಿಜಯ್ ರಾಘವೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, 'ಓ ಮನಸ್ಸೆ' (O Manasse) ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಫ್ರೆಂಡ್ಸ್ ಮೂವಿ ಮೇಕರ್ಸ್ ಬ್ಯಾನರ್​ ಅಡಿ ಬೈರೇಗೌಡ, ಧನಂಜಯ್, ವೆಂಕಟೇಶ್, ಯುವರಾಜ್, ರಾಮಚಂದ್ರು ಅವರು ಸಿನಿಮಾ ನಿರ್ಮಿಸುತ್ತಿದ್ದಾರೆ. ರಮೇಶ್​ ಹಂಡ್ರಂಗಿ ಅವರು ಕಥೆ ಬರೆದಿದ್ದು, ಡಿಜಿ. ಉಮೇಶ್ (DG.Umesh) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಓ ಮನಸ್ಸೆ' ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಅವರಿಗೆ ಸಂಚಿತಾ ಪಡುಕೋಣೆ (Sanchita Padukone) ನಾಯಕಿಯಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ಧರ್ಮ ಕೀರ್ತಿರಾಜ್ (Dharma Keerthiraj) ನಟಿಸುತ್ತಿದ್ದು, ಜೊತೆಗೆ ಸಾಧುಕೋಕಿಲ, ಶೋಭರಾಜ್, ಕಾಮಿಡಿ ಕಿಲಾಡಿ ಗೋವಿಂದೇ ಗೌಡ ಅವರ ತಾರಾಬಳಗವಿದೆ.