Asianet Suvarna News Asianet Suvarna News

ವಿಜಯ್​ ರಾಘವೇಂದ್ರ ಹೊಸ ಚಿತ್ರ 'ಓ ಮನಸ್ಸೆ'

'ಓ ಮನಸ್ಸೆ' ಚಿತ್ರವು ಪ್ರೀತಿ, ಪ್ರೇಮ, ಕೊಲೆ, ತನಿಖೆಯ ಕ್ರೈಂ ಥ್ರಿಲ್ಲರ್ ಕತೆ ಚಿತ್ರ ಒಳಗೊಂಡಿದ್ದು, ಮತ್ತೊಮ್ಮೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ.

kannada actor vijay raghavendra starrer new movie o manasse
Author
Bangalore, First Published Oct 24, 2021, 12:23 PM IST

ಸ್ಯಾಂಡಲ್​ವುಡ್​ನ (Sandalwood) ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತಿಚೆಗಷ್ಟೇ 'ಗ್ರೇ ಗೇಮ್ಸ್‌' (Grey Games)  ಚಿತ್ರದ ಮುಹೂರ್ತ ನೆರವೇರಿಸಿದ್ದರು. ಇದೀಗ ವಿಜಯ್ ರಾಘವೇಂದ್ರ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮ ನಿನ್ನಯಷ್ಟೇ ನಡೆದಿದೆ. ಈ ಬಗ್ಗೆ 'ಇನ್ನೊಂದು ಹೊಸ ಹೆಜ್ಜೆಯತ್ತ ಸಾಗುವ ಕ್ಷಣ. ಹರಸಿ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದರು.
 



ವಿಜಯ್ ರಾಘವೇಂದ್ರ  'ಓ ಮನಸ್ಸೆ' (O Manasse) ಎಂಬ ಹೊಸಚಿತ್ರವನ್ನು ಒಪ್ಪಿಕೊಂಡಿದ್ದು, ಅನ್ನಪೂಣೇಶ್ವರಿ ನಗರದ ವೆಂಕಟೇಶ್ವರ ದೇವಾಯಲಯದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಬಿಕೆ ಶಿವರಾಂ, ಉಮೇಶ್ ಬಣಕಾರ್ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ಚಿತ್ರವು ಶ್ರೀ ಫ್ರೆಂಡ್ಸ್ ಮೂವಿ ಮೇಕರ್ಸ್ ಬ್ಯಾನರ್​ ಅಡಿ ಬೈರೇಗೌಡ, ಧನಂಜಯ್, ವೆಂಕಟೇಶ್, ಯುವರಾಜ್, ರಾಮಚಂದ್ರು ಅವರು ಸಿನಿಮಾ ನಿರ್ಮಿಸುತ್ತಿದ್ದಾರೆ. ರಮೇಶ್​ ಹಂಡ್ರಂಗಿ ಅವರು ಕಥೆ ಬರೆದಿದ್ದು, ಡಿಜಿ. ಉಮೇಶ್ (DG.Umesh) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 

ಸೈಬರ್ ಕ್ರೈಂ ಕುರಿತು ವಿಜಯ ರಾಘವೇಂದ್ರ ಹೊಸ ಸಿನಿಮಾ ಗ್ರೇ ಗೇಮ್ಸ್‌

'ಓ ಮನಸ್ಸೆ' ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಅವರಿಗೆ ಸಂಚಿತಾ ಪಡುಕೋಣೆ (Sanchita Padukone) ನಾಯಕಿಯಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ಧರ್ಮ ಕೀರ್ತಿರಾಜ್ (Dharma Keerthiraj) ನಟಿಸುತ್ತಿದ್ದು, ಜೊತೆಗೆ ಸಾಧುಕೋಕಿಲ, ಶೋಭರಾಜ್, ಕಾಮಿಡಿ ಕಿಲಾಡಿ ಗೋವಿಂದೇ ಗೌಡ ಅವರ ತಾರಾಬಳಗವಿದೆ. ಆರ್ ಸೀನು (ಜೋಗಿ) ಅವರ ಕ್ಯಾಮೆರಾ ಕೈಚಳಕ ಸೇರಿದಂತೆ ಜೆಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಇನ್ನು ವಿಜಯ್ ರಾಘವೇಂದ್ರ 'ಸೀತಾರಾಮ್‌ ಬಿನೋಯ್‌' (Seetharam Benoy) ಚಿತ್ರದ ನಂತರ ಈ ಚಿತ್ರದಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗೂ ಪ್ರೀತಿ, ಪ್ರೇಮ, ಕೊಲೆ, ತನಿಖೆಯ ಕ್ರೈಂ ಥ್ರಿಲ್ಲರ್ ಕತೆ ಚಿತ್ರ ಒಳಗೊಂಡಿದ್ದು, ಎರಡು ಹಂತದಲ್ಲಿ ಬೆಂಗಳೂರು ಹಾಗೂ ಕೊಡಗಿನಲ್ಲಿ 'ಓ ಮನಸ್ಸೆ' ಚಿತ್ರೀಕರಣ ನಡೆಯಲಿದೆ.

ಇನ್ನು ವಿಜಯ್ ರಾಘವೇಂದ್ರ ಸೈಬರ್‌ ಕ್ರೈಮ್‌ (Cyber Crime) ಕಥಾಹಂದರ ಹೊಂದಿರುವ 'ಗ್ರೇ ಗೇಮ್ಸ್‌' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಸಹೋದರ  ಶ್ರೀಮುರಳಿ (Srii Murali) ಅವರು ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದರು. ಈ ಹಿಂದೆ 'ಆಯನ' ಚಿತ್ರ ನಿರ್ದೇಶಿಸಿದ್ದ ಗಂಗಾಧರ್‌ ಸಾಲಿಮಠ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಭಾವನಾ (Bhavana) ಚಿತ್ರದ ನಾಯಕಿ. 

ನನ್ನ ಸಿನಿ ಬದುಕಿನಲ್ಲಿ ರಿಲೀಸ್‌ ವೇಳೆಗೆ ದುಡ್ಡು ಮಾಡಿದ ಮೊದಲ ಚಿತ್ರ

ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ   ಸೈಕಾಲಜಿಸ್ಟ್‌ (Psychologist) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೈಬರ್‌ ಜಗತ್ತು ನಮ್ಮನ್ನಾಳುವ ಕಾಲವಿದು. ಯುವಕರು ಅದಕ್ಕೆ ಬಲಿಬಿದ್ದಾಗ ಅವರು ಮಾತ್ರವಲ್ಲ, ಪೋಷಕರು, ಇಡೀ ಕುಟುಂಬ, ಸಮಾಜ ಅದರ ಪರಿಣಾಮ ಎದುರಿಸುತ್ತದೆ. ಅದನ್ನು ಈ ಸಿನಿಮಾದಲ್ಲಿ ಹೇಳಲಿದ್ದೇವೆ ಎಂದು ವಿಜಯ್ ರಾಘವೇಂದ್ರ ತಿಳಿಸಿದರು. ಹಾಗೂ ಚಿತ್ರದ ನಾಯಕಿ ಭಾವನಾ, 'ಸೈಬರ್‌ ಕ್ರೈಮ್‌ ಇನ್‌ವೆಸ್ಟಿಗೇಶನ್‌ ಮಾಡುವ ಟಫ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊನೆಯದಾಗಿ 'ಸೀತಾರಾಮ್‌ ಬಿನೋಯ್‌' ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದರು. 

Follow Us:
Download App:
  • android
  • ios