Asianet Suvarna News Asianet Suvarna News

ಅಪ್ಪು ಮಾಮ ಏನೇ ಹೇಳಿಕೊಟ್ಟರೂ ನನಗೆ ಮ್ಯಾಚ್ ಮಾಡಲು ಆಗುತ್ತಿರಲಿಲ್ಲ: Vijay Raghavendra

ಡ್ಯಾನ್ಸ್‌ ಅಂದ್ರೆ ಅಪ್ಪು ಮಾಮಾ ಅಂತ ಹೇಳುವ ವಿಜಯ್ ರಾಘವೇಂದ್ರ ದುಬೈನಲ್ಲಿ ನಡೆದ ಘಟನೆ ಮತ್ತು ರಿಯಾಲಿಟಿ ಶೋ ಬಗ್ಗೆ ಮಾತನಾಡಿದ್ದಾರೆ. 

Kannada Vijay Raghavendra recalls Dubai Awards show incident with Puneeth Rajkumar vcs
Author
Bangalore, First Published Jan 18, 2022, 11:25 AM IST

ಕನ್ನಡ ಸಿನಿ ರಸಿಕರ ಪ್ರೀತಿಯ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಇದೀಗ ಕನ್ನಡ ಕಿರುತೆರೆಯ ಡ್ಯಾನ್ಸಿಂಗ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ. ಡ್ಯಾನ್ಸ್‌ ಕಾರ್ಯಕ್ರಮವಿರಲಿ ಅಥವಾ ಕಾಮಿಡಿ ಶೋ ಇರಲಿ ವಿಜಯ್ ಅಲ್ಲಿ ಇರಲೇಬೇಕು ಎನ್ನುತ್ತಾರೆ ವೀಕ್ಷಕರು. ಬೆಳ್ಳಿತೆರೆ ಮತ್ತು ಕಿರುತೆರೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ವಿಜಯ್‌ ತಮಗೆ ಡ್ಯಾನ್ಸ್‌ ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ. 

'ನಾನು ಬಾಲ್ಯದಿಂದಲೂ ಸಂಗೀತ ಮತ್ತು ನೃತ್ಯ ಜೊತೆಗೆ ಬೆಳೆದಿರುವುದು. ನಾನು ಖಂಡಿತ ಪ್ರತಿ ಕ್ಷಣವೂ ಪುನೀತ್ ರಾಜ್‌ಕುಮಾರ್ ಮಾಮ ಅವರನ್ನು ನೆನಪಿಸಿಕೊಳ್ಳಲು ಇಷ್ಟ ಪಡುತ್ತೀನಿ. ಅವರು ನನ್ನ  ಕಸಿನ್. ಈ ವೆಸ್ಟ್ರನ್ ಮ್ಯೂಸಿಕ್ ಮತ್ತು ಬ್ರೇಕ್ ಡ್ಯಾನ್ಸ್‌ಗೆ ನನ್ನನ್ನು ಪರಿಚಯಿಸಿಕೊಟ್ಟಿದ್ದೇ ಇವರು. ಆವಾಗಿನಿಂದಲೂ ಸಂಗೀತ ಕೇಳಿದರೆ, ನೃತ್ಯ ನೋಡಿದರೆ ನನ್ನ ದೇಹ ಹಾಗೆ ಸ್ವಿಂಗ್ ಮಾಡಲು ಶುರು ಮಾಡುತ್ತದೆ. ನನ್ನ ಜರ್ನಿಯಲ್ಲಿ ಡ್ಯಾನ್ಸ್‌ ದೊಡ್ಡ ಪಾಲು ಪಡೆದುಕೊಳ್ಳುತ್ತದೆ,' ಎಂದು ವಿಜಯ್ ರಾಘವೇಂದ್ರ ಇ-ಟೈಮ್ಸ್‌ ಟಿವಿ ಜೊತೆ ಮಾತನಾಡಿದ್ದಾರೆ. 

ಅಪ್ಪು ಜೊತೆ ಒಂದೇ ವೇದಿಕೆ:
'ಸ್ಪರ್ಧಿಗಳು ಪುನೀತ್ ರಾಜ್‌ಕುಮಾರ್ ಅವರ ಹಾಡಿಗೆ ಡ್ಯಾನ್ಸ್ ಮಾಡುವಾಗ ನಾನು ಅವರನ್ನು ನೆನಪಿಸಿಕೊಳ್ಳುವೆ. ಯಾವುದೇ ಎನರ್ಜಿಟಿಕ್ ಡ್ಯಾನ್ಸ್ ನೋಡಿದರೂ ನನಗೆ ಮೊದಲು ಅವರೇ ನೆನಪಾಗುವುದು. ನಾನು ಅವರ ಹಾಡಿಗೆ ಹಲವಾರು ವೇದಿಕೆಗಳಲ್ಲಿ ಡ್ಯಾನ್ಸ್ ಮಾಡಿರುವೆ. ಅವರ ಜೊತೆ ಒಂದೇ ವೇದಿಕೆ ಮೇಲೆ ನಾನು ಡ್ಯಾನ್ಸ್ ಮಾಡಿರುವುದಕ್ಕೆ ತುಂಬಾನೇ ಸಂತೋಷವಿದೆ,' ಎಂದು ಹೇಳುತ್ತಾ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆಯೊಂದರ ಬಗ್ಗೆ ವಿವರಿಸಿದ್ದಾರೆ.

Kannada Vijay Raghavendra recalls Dubai Awards show incident with Puneeth Rajkumar vcs

'ಈ ಒಂದು ಘಟನೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ದುಬೈನಲ್ಲಿ ನಾನು ಒಂದು ಅವಾರ್ಡ್ ಶೋ ನಿರೂಪಣೆ ಮಾಡಿದೆ. ಅಪ್ಪು ಮಾಮ ಅವರು ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್‌ ಹಾಡಿನ signature ಸ್ಟೆಪ್‌ ಕಲಿಯಬೇಕು ಎಂಬ ಆಸೆ ನನಗೆ. ಅಪ್ಪು ಮಾಮ ವೇದಿಕೆ ಮೇಲೆ ಬಂದಾಗ ಆ ಸಮಯವನ್ನು ನಾನು seized ಮಾಡಿಕೊಂಡು ಅವರಿಗೆ ಮನವಿ ಮಾಡಿಕೊಂಡೆ. ನನಗೆ ಆ ಸ್ಟೆಪ್ ಹೇಳಿಕೊಡಲು ಕೇಳಿಕೊಂಡೆ. ಅವರು ತುಂಬಾ ಹಂಬಲ್‌ ಆಗಿ ತಕ್ಷಣವೇ ಹೇಳಿಕೊಟ್ಟರು. ಅವರು ವಿಭಿನ್ನ ಸ್ಟೆಪ್‌ಗಳನ್ನು ಮಾಡುವುದನ್ನು ನೋಡೋಕೆ ನನಗೆ ಖುಷಿ. ಅವರು ಏನೇ ಹೇಳಿಕೊಟ್ಟರೂ ಅವರ ಎನರ್ಜಿ ಮ್ಯಾಚ್ ಮಾಡಿ ಮಾಡಲು ಆಗುವುದಿಲ್ಲ ನನಗೆ. ನೋಡಲು ಸುಲಭ ಅನಿಸುತ್ತದೆ. ಮಾಡುವಾಗ ಸ್ವಲ್ಪ ಕಷ್ಟ ಇರುತ್ತದೆ. ನಾನು ಸುಮ್ಮನೆ ನಿಂತು ಅವರ ಡ್ಯಾನ್ಸ್ ನೋಡುತ್ತಿದ್ದೆ,' ಎಂದು ವಿಜಯ್ ಹೇಳಿದ್ದಾರೆ. 

2021ರಲ್ಲಿ ಇದ್ದಕ್ಕಿದ್ದಂತೆ ಸಣ್ಣ ಆಗಲು ನನ್ನ ತಾಯಿ, ಹೆಂಡ್ತಿ ಕಾರಣ: Akul Balaji

'ಅಪ್ಪು ಮಾಮ ಜೊತೆ ಕಳೆದ ಪ್ರತಿಯೊಂದೂ ಕ್ಷಣವನ್ನು ಜೀವನ ಪೂರ್ತಿ ನೆನಪಿಸಿಕೊಳ್ಳುವೆ. ಬಾಲ್ಯದಿಂದಲೂ ಅವರನ್ನು ನೋಡಿಕೊಂಡು ಬೆಳೆದಿರುವುದಕ್ಕೆ ನಾನು ಪುಣ್ಯ ಮಾಡಿದ್ದೆ. ನಮ್ಮ ಜೊತೆ ಫಿಸಿಕಲಿ ಅವರು ಇಲ್ಲ, ಆದರೆ  remembering ಎಂದು ಬಳಸಲು ನನಗೆ ಇಷ್ಟವಿಲ್ಲ. ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ. ಅವರ ನಮ್ಮ ಜೊತೆ ಸದಾ ಇರುತ್ತಾರೆ,' ಎಂದಿದ್ದಾರೆ ವಿಜಯ್.

ರಿಯಾಲಿಟಿ ಶೋ:
'ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಭಾಗಿಯಾಗುವುದಕ್ಕೆ ನಾನು excite ಆಗಿರುವೆ. ಈ ಶೋನಲ್ಲಿ ಡ್ಯಾನ್ಸರ್‌ಗಳು ಮತ್ತು ಸೆಲೆಬ್ರಿಟಿಗಳು ಇರಲಿದ್ದಾರೆ. ತೀರ್ಪುಗಾರನಾಗಿ ಸ್ಪರ್ಧಿಗಳನ್ನು ಸರಿ ದಾರಿಗೆ ಗೈಡ್ ಮಾಡುವುದು ನನ್ನ ಕೆಲಸ. ಅವರು ಅದ್ಭುತವಾಗಿ ಡ್ಯಾನ್ಸ್‌ ಮಾಡಲು ಸದಾ ಸ್ಪೂರ್ತಿ ಮತ್ತು ಹುಮ್ಮಸ್ಸು ತುಂಬಬೇಕು. ನಾನು ಯಾರನ್ನೂ ಸ್ಪರ್ಧಿಗಳ ರೀತಿ ನೋಡುವುದಿಲ್ಲ, ನನ್ನನ್ನು ತೀರ್ಪುಗಾರ ಎಂದು ಕೂಡ ನಾನು ಕರೆದುಕೊಳ್ಳುವುದಿಲ್ಲ. ನನಗಿಂತ ಅವರೆ ಬೆಸ್ಟ್‌ ಡ್ಯಾನ್ಸರ್ಸ್,' ಎಂದಿದ್ದಾರೆ ವಿಜಯ್.

Follow Us:
Download App:
  • android
  • ios