Asianet Suvarna News

ಶ್ರೀಮನ್ನಾರಾಯಣನ ಲೆಕ್ಕ ಚುಕ್ತಾ ಮಾಡಿದ ರಕ್ಷಿತ್ ಶೆಟ್ಟಿ!

ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ 20 ಕೋಟಿ ರುಪಾಯಿ ಕೊಟ್ಟು ನೆರವಿಗೆ ನಿಂತ ಕತೆ ಚಿತ್ರರಂಗದಲ್ಲಿ ಒಂದು ಅಲಿಖಿತ ಸಂಪ್ರದಾಯ ಇದೆ. ಒಬ್ಬ ಸ್ಟಾರ್ ನಟ, ತನ್ನ ಚಿತ್ರ ಸೋತರೆ, ಆ ಚಿತ್ರದ ನಿರ್ಮಾಪಕರಿಗೆ ಮತ್ತೊಂದು ಕಾಲ್‌ಶೀಟ್ ಕೊಡುತ್ತಾನೆ.
 

Actor Rakshit shetty and producer Pushkar mallikarjun about Avane Srimannarayana film vcs
Author
Bangalore, First Published Jul 9, 2021, 2:22 PM IST
  • Facebook
  • Twitter
  • Whatsapp

 ಸೋತ ಚಿತ್ರದಲ್ಲಿ ಕಳೆದುಕೊಂಡದ್ದನ್ನು, ನಿರ್ಮಾಪಕ ಮತ್ತೊಂದು ಚಿತ್ರದಲ್ಲಿ ದುಡಿದುಕೊಳ್ಳಬಹುದು. ಮತ್ತೊಂದು ಚಿತ್ರ ಮಾಡುವ ಹೊತ್ತಿಗೆ ನಿರ್ಮಾಪಕ ಮತ್ತೂ ಎಚ್ಚರದಿಂದ ಕತೆ, ನಿರ್ದೇಶಕರನ್ನು ಆಯ್ಕೆ ಮಾಡಿ, ಚಿತ್ರ ಗೆಲ್ಲುವಂತೆ ನೋಡಿಕೊಳ್ಳಬೇಕಾಗುತ್ತದೆ. ಕನ್ನಡದ ಮೇರು ನಟರೆಲ್ಲ ಒಬ್ಬರೇ ನಿರ್ಮಾಪಕರಿಗೆ ಒಂದರ ಹಿಂದೊಂದರಂತೆ ಮೂರು ಸಿನಿಮಾ ಮಾಡಿ ಅವರ ಹಿತ ಕಾಪಾಡಿದ ಉದಾಹರಣೆಯೂ ಇದೆ.

ಆದರೆ, ಸಿನಿಮಾ ನಷ್ಟವಾಯಿತೆಂದು, ನಿರ್ಮಾಪಕರಿಗೆ ದುಡ್ಡು ಮರಳಿಸಿದ ಪ್ರಸಂಗಗಳೂ ನಡೆಯುತ್ತವೆಯೇ? ಅಂಥದ್ದೊಂದು ಉದಾಹರಣೆಯನ್ನು ರಿಷಬ್ ಶೆಟ್ಟಿ ತೆರೆದಿಟ್ಟಿದ್ದಾರೆ. ಲಾಕ್‌ಡೌನ್ ಮುಗೀತು, ಹೊಸ ಪರ್ವ ಶುರುವಾಯಿತು ಅಂತ ಹೇಳುತ್ತಾ ಲೈವ್ ಮಾತುಕತೆ ಆರಂಭಿಸಿದ ರಿಷಬ್ ಅನೇಕ ಕುತೂಹಲಕರ ಸಂಗತಿಗಳನ್ನು ಬಿಚ್ಚಿಟ್ಟರು. ಅವುಗಳಲ್ಲಿ ಮುಖ್ಯವಾದದ್ದು ಇವು:

ರಕ್ಷಿಟ್ ಶೆಟ್ಟಿ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್! 

1. ಅವನೇ ಶ್ರೀಮನ್ನಾರಾಯಣ ಚಿತ್ರದ ನಷ್ಟಕ್ಕೆ ಚಿತ್ರದ ಬಜೆಟ್ ಕಾರಣವಲ್ಲ. ಚಿತ್ರ ನಿರ್ಮಾಣಕ್ಕೆ ತಂದ ಸಾಲದ ಮೇಲಿನ ಬಡ್ಡಿ ಕಾರಣ. ಬಜೆಟ್ ಮುಂದಿಟ್ಟುಕೊಂಡು ನೋಡಿದರೆ ನಿರ್ಮಾಪಕರಿಗೆ ತಾನು ಹೂಡಿದ ಹಣವನ್ನು ಅದು ವಾಪಸ್ ತಂದುಕೊಟ್ಟಿದೆ. ಆದರೆ ಸಾಲದ ಮೇಲಿನ ಬಡ್ಡಿಯೂ ಚಿತ್ರದ ಬಜೆಟ್ಟಿನಷ್ಟೇ ಆಗಿದ್ದರಿಂದ ತೊಂದರೆಯಾಗಿದೆ.

2. ಅವನೇ ಶ್ರೀಮನ್ನಾರಾಯಣ ಚಿತ್ರದ ತಂತ್ರಜ್ಞರಿಗೆ ಬಾಕಿಯಿದ್ದ ಸಂಭಾವನೆಯನ್ನು ರಕ್ಷಿತ್ ಅವರೇ ಪಾವತಿ ಮಾಡಿದ್ದಾರೆ.

3. ಪುಷ್ಕರ್ ಅವರ ಕೈಲಿ ನಾಲ್ಕಾರು ಚಿತ್ರಗಳಿರುವುದರಿಂದ, ‘777 ಚಾರ್ಲಿ’ ಮತ್ತು ‘ಸಪ್ತಸಾಗರದಾಚೆ’ ಎಲ್ಲೋ ಚಿತ್ರದಲ್ಲಿದ್ದ ಪುಷ್ಕರ್ ಅವರ ಹೂಡಿಕೆಯನ್ನು ಕೂಡ ಅವರಿಗೆ ಮರಳಿಸಿದ್ದಾರೆ.

4. ಈ ಎಲ್ಲಾ ಮೊತ್ತ ಸೇರಿ ಸುಮಾರು 20 ಕೋಟಿ ರುಪಾಯಿಗಳನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ರಕ್ಷಿತ್ ಶೆಟ್ಟಿ ಮರಳಿಸಿದ್ದಾರೆ.

5. ರಕ್ಷಿತ್ ಶೆಟ್ಟಿಯಿಂದ ನಿರ್ಮಾಪಕರಿಗೆ ಯಾವುದೇ ನಷ್ಟವಾಗಿಲ್ಲ.

6. ಕೋವಿಡ್ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ತನ್ನ ಚಿತ್ರತಂಡದ ಪ್ರತಿಯೊಬ್ಬರಿಗೂ ಐದು ಸಾವಿರ ರುಪಾಯಿ ಕೊಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ.

ರಕ್ಷಿತ್ ಶೆಟ್ಟಿಗೆ ಶಂಕರ್ ನಾಗ್ ಅಂದ್ರೆ ಮೈ ಜುಮ್ ಅನ್ನೋದ್ಯಾಕೆ! 

7. ಕಿರಿಕ್ ಪಾರ್ಟಿ ರಿಮೇಕ್ ಹಕ್ಕು ಮಾರಾಟದಿಂದ ಬಂದ ದುಡ್ಡಿನಿಂದ ರಕ್ಷಿತ್ ಶೆಟ್ಟಿ, ಬರಹಗಾರರ ಬಳಗ ಕಟ್ಟಿದ್ದಾರೆ. ಅವರಿಗೆ ಪ್ರತಿ ತಿಂಗಳೂ ಸಂಬಳ ಬರಹಗಾರರ ಟೀಮ್ ಸತತವಾಗಿ ಕೆಲಸದಲ್ಲಿ ತೊಡಗುವಂತೆ ಮಾಡಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ಕನ್ನಡಕ್ಕೆ ಹೊಸಬಗೆಯ ಚಿತ್ರಗಳನ್ನು ಕೊಡುತ್ತಾ ಬಂದಿರುವವರು. ಕನ್ನಡ ಚಿತ್ರಗಳನ್ನು ಮತ್ತೊಂದು ಎತ್ತರಕ್ಕೆ ಒಯ್ಯಲು ಶ್ರಮಿಸುತ್ತಿರುವ ಪ್ಯಾಷನೇಟ್ ನಿರ್ಮಾಪಕ. ಅದಕ್ಕೆ ಅವರು ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದೂ ಸಾಕ್ಷಿ.

ಅಂಥ ಸದಭಿರುಚಿ ಹಾಗೂ ಚಿತ್ರಪ್ರೇಮಿ ನಿರ್ಮಾಪಕರಿಗೆ ನಷ್ಟವಾದಾಗ ಅವರಿಗೆ ಹಣ ಮರಳಿಸುವ ಮೂಲಕ ಅವರ ನೆರವಿಗೆ ಬಂದದ್ದು ಕೂಡ ಅಪರೂಪದ ಉದಾಹರಣೆ. ರಿಷಬ್ ಶೆಟ್ಟಿ ಇದನ್ನು ಹೇಳುವ ಮೂಲಕ ಚಿತ್ರರಂಗದಲ್ಲಿ ಒಗ್ಗಟ್ಟಿದ್ದರೆ ಎಂಥಾ ತೊಂದರೆಯನ್ನೂ ಎದುರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

'ಹ್ಯಾಂಡ್ಸ್‌ ಅಪ್' ಎಂದು ಅಪ್ಪನ ಜೊತೆ ಕೈ ಎತ್ತಿದ ಜೂನಿಯರ್ ರಿಷಬ್ ಶೆಟ್ಟಿ! 

ನಾವೆಲ್ಲ ಚೆನ್ನಾಗಿದ್ದೇವೆ: ಪುಷ್ಕರ್ ಮಲ್ಲಿಕಾರ್ಜುನಯ್ಯ

ನನಗೆ ರಕ್ಷಿತ್ ಶೆಟ್ಟಿ 20 ಕೋಟಿ ಹಣ ಮರಳಿಸಿದ್ದಾರೆ, ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನನಗೆ ಯಾವುದೇ ನಷ್ಟ ಆಗಿಲ್ಲ ಎಂದು ಕೇಳಿ ಬರುತ್ತಿರುವ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಯಾಕೆಂದರೆ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಏನಾಯಿತು, ನಷ್ಟ ಆಯಿತಾ, ಇಲ್ಲವೇ ಎಂಬುದನ್ನು ನಾನು ಈಗ ಮಾತನಾಡಿಕೊಂಡು ಕೂರಲ್ಲ. ನಷ್ಟ ಆಗಿದೆಯೋ ಇಲ್ಲವೋ ಅದು ಬೇರೆ ವಿಚಾರ. ಆದರೆ, ನಾವೆಲ್ಲ ಚೆನ್ನಾಗಿಯೇ ಇದ್ದೇವೆ. ಮುಂದೆ ಕೂಡ ಚಿತ್ರರಂಗದಲ್ಲೇ ಇರುತ್ತೇವೆ. ಹೀಗಾಗಿ ಬೇರೆ ಹೇಳಿಕೆಗಳ ಬಗ್ಗೆ ನಾನು ಏನೂ ಮಾತನಾಡಲ್ಲ. ಶೂಟಿಂಗ್ ಮುಗಿಸಿರುವ ನನ್ನ ನಿರ್ಮಾಣದ ಅವತಾರ ಪುರುಷ, ಟೆನ್ ಹಾಗೂ ಮಲಯಾಳಂ ಚಿತ್ರದ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. -ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ಮಾಪಕ

Follow Us:
Download App:
  • android
  • ios