ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರ ಈಗಾಗಲೇ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ 'ಊರ್ವಶಿ' ಚಿತ್ರಮಂದಿರದಲ್ಲಿ ಪ್ರೀಮಿಯರ್ ಶೋ ನಡೆದಿದ್ದು ಕನ್ನಡ ಚಿತ್ರರಂಗದ ಹೆಸರಾಂತ ಗಣ್ಯರು ಭಾಗಿಯಾಗಿದ್ದರು. ಬಾಲಿವುಡ್ ರೇಂಜ್‌ಗೆ ಚಿತ್ರಮಂದಿರವನ್ನು ಅಲಂಕರಿಸಲಾಗಿತ್ತು. 

ನಾನೀಗ ಪೂರ್ಣ ಪ್ರಮಾಣದ ಕನ್ನಡತಿ: ಶಾನ್ವಿ

ಇನ್ನು ರಿಲೀಸ್‌ಗೂ ಮುನ್ನ ಚಿತ್ರದ 'ಹ್ಯಾಂಡ್ಸ್‌ ಅಪ್‌' ಹಾಡಿಗೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಟಿಕ್‌ಟಾಕ್ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.  ಈಗ ಅದೇ ಹಾಡಿಗೆ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ತನ್ನ 9 ತಿಂಗಳು ಪುತ್ರ ರಣ್ವಿತ್‌ ಕೈ ಹಿಡಿದು ಮಾಡಿಸಿರುವ ವಿಡಿಯೋವನ್ನು ರಿಷಬ್ ಶೇರ್ ಮಾಡಿಕೊಂಡಿದ್ದಾರೆ.

 

ಈಗ ರಣ್ವಿತ್ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು 'ರಣ್ವಿತ್ ಹಾಲಿವುಡ್‌ ಡೆಬ್ಯೂಗೆ ಕಾಯುತ್ತಿರುವೆ' ಎಂದು ಬರೆದುಕೊಂಡಿದ್ದಾರೆ.