Prabhu Mundkur: ಮನೆ ಓನರ್ಗಾಗಿ ಲಿವ್ ಇನ್ನಲ್ಲಿ ಇರಬೇಕಾಯ್ತು! ಮದ್ವೆಯಾಗದೇ ಒಟ್ಟಿಗಿದ್ದ 'ಮರ್ಫಿ' ನಟನ ರೋಚಕ ಕಥೆ ಕೇಳಿ...
ನಟ ಪ್ರಭು ಮುಂಡ್ಕೂರ್ ಅವರು ಮನೆಯ ಮಾಲೀಕರಗಾಗಿ ಹೇಗೆ ಲಿವ್ ಇನ್ನಲ್ಲಿ ಇರಬೇಕಾಯಿತು ಎನ್ನುವ ವಿಷಯವನ್ನು ತಿಳಿಸಿದ್ದಾರೆ.

2016 ರಲ್ಲಿ ಕುಲವಧು ಸೀರಿಯಲ್ ಸೇರಿದಂತೆ ಉರ್ವಿ ಚಿತ್ರದಿಂದ ಹಿಡಿದು ಮರ್ಫಿ, ಛೂ ಮಂತರ್, ಮರ್ಯಾದೆ ಪ್ರಶ್ನೆ ಸೇರಿದಂತೆ ಹಲವು ಚಿತ್ರಗಳನ್ನು ನೀಡಿದ್ದಾರೆ ನಟ ಪ್ರಭು ಮುಂಡ್ಕೂರ್. ಉರ್ವಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟ, ಕಳೆದ ಅಕ್ಟೋಬರ್ನಲ್ಲಿ ಬಿಡುಗಡೆಯಾದ ಉರ್ಫಿ ಚಿತ್ರದ ಮೂಲಕ ಸಾಕಷ್ಟು ಹೆಸರು ಗಳಿಸಿದ್ದಾರೆ. ಇದೀಗ ಅವರು ತಮ್ಮ ಲವ್ ಸ್ಟೋರಿ, ಮದುವೆಯ ಬಗ್ಗೆ ಮಾತನಾಡಿದ್ದಾರೆ. ಕೀರ್ತಿ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ನ ಜೊತೆ ಮಾತನಾಡಿರುವ ನಟ, ಕವಿತಾ (ಪತ್ನಿ) ಜೊತೆಗಿನ ಸಂಬಂಧ, ಕಾಲೇಜು ದಿನಗಳಿಂದಲೇ ಲವ್ ಸ್ಟೋರಿ, ಕೊನೆಗೆ ಹೇಗೆ ಮನೆಯ ಸಲುವಾಗಿ ಇಬ್ಬರೂ ಒಟ್ಟಿಗೇ ಲಿವ್ ಇನ್ನಲ್ಲಿ ಇರಬೇಕಾಯಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಕವಿತಾ ಮತ್ತು ನನ್ನದು ಕಾಲೇಜು ದಿನಗಳಿಂದಲೇ ಲವ್ ಶುರುವಾಗಿತ್ತು. ನಿಮ್ಮ ಮಗಳನ್ನೇ ಮದುವೆ ಆಗೋದು ಅಂತ ಕವಿತಾ ಅವರಮ್ಮಂಗೆ ಕಾಲೇಜಲ್ಲಿದ್ದಾಗಲೇ ಹೇಳಿದ್ದೆ. ಆದರೆ, ನನ್ನ ಕಾಲ ಮೇಲೆ ನಿಲ್ಲಬೇಕಿತ್ತು. ಅದಕ್ಕಾಗಿ ಪ್ರೀತಿ-ಪ್ರೇಮದ ವಿಷಯದಲ್ಲಿ ಆಗ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ಮದುವೆಯಾದರೆ ಮಾತ್ರ ಬಾಡಿಗೆ ಮನೆ ಸಿಗುತ್ತದೆ ಎನ್ನುವುದು ಗೊತ್ತಾಯಿತು. ಆರಂಭದಲ್ಲಿ ಅಣ್ಣನ ಮನೆಯಲ್ಲಿ ಇದ್ದೆ. ನಂತರ ಬೇರೆ ಮನೆ ಮಾಡಬೇಕಾಯಿತು. ಆದರೆ ಬ್ಯಾಚುಲರ್ಸ್ಗೆ ಮನೆ ಕೊಡುವುದಿಲ್ಲ ಎಂದು ತಿಳಿಯಿತು ಎನ್ನುತ್ತಲೇ ತಮ್ಮ ಮದುವೆಯ ಪ್ರಸಂಗವನ್ನು ಪ್ರಭು ಅವರು ವಿವರಿಸಿದ್ದಾರೆ.
ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಮನೆ ನೋಡಿದೆ. ಸಿಂಗಲ್ ಬೆಡ್ರೂಮ್ ಮನೆ ಅದು. ಆದರೆ ಮದುವೆಯಾದವರಿಗೆ ಮಾತ್ರ ಕೊಡುವುದು ಎಂದಿದ್ದರು. ನನ್ನ ಮದುವೆಯಾಗಿದೆ ಎಂದು ಸುಳ್ಳು ಹೇಳಿಬಿಟ್ಟಿದ್ದೆ. ಕೊನೆಗೆ ಕವಿತಾಳನ್ನು ಕರೆದುಕೊಂಡು ಬಂದೆ. ಅವಳ ಮನೆಯವರಿಗೂ ನನ್ನ ವಿಷಯ ಗೊತ್ತಿತ್ತು. ಅವಳನ್ನೇ ಮದುವೆಯಾಗುವುದು ಎಂದು ಮೊದಲೇ ಹೇಳಿದ್ದರಿಂದ ಅವರೂ ಒಪ್ಪಿದ್ದರು. ಆದರೆ ಆಗ ಮದುವೆಯಾಗುವಷ್ಟು ಹಣ ನಮ್ಮಲ್ಲಿ ಇರಲಿಲ್ಲ. ಆಗಿನ್ನೂ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಳ್ಳುತ್ತಿದ್ದೆ. ಆದ್ದರಿಂದ ಇಬ್ಬರೂ ಲಿವ್ ಇನ್ನಲ್ಲಿ ಇದ್ವಿ. ಆದರೆ ಓನರ್ ಕಣ್ಣಿಗೆ ಮಾತ್ರ ದಂಪತಿ ಥರ ಇದ್ವಿ ಎಂದಿದ್ದಾರೆ ಪ್ರಭು. ಆದರೆ, ಈ ಸಂಬಂಧ ಚೆನ್ನಾಗಿರುವುದಿಲ್ಲ ಎನ್ನಿಸಿ, ಮೊದಲಿಗೆ ಕೋರ್ಟ್ ಮ್ಯಾರೇಜ್ ಆದ್ವಿ. ಕೊನೆಗೆ ಹಣ ಸಂಪಾದನೆ ಮಾಡಿ ಎರಡು ವರ್ಷಗಳ ಬಳಿಕ ಶಾಸ್ತ್ರೋಕ್ತವಾಗಿ ಮದುವೆಯಾದೆವು. ಹೀಗೆ ನಮ್ಮ ಪ್ರೇಮ ಪ್ರಸಂಗ ನಡೆಯಿತು ಎಂದು ನಟ ಹೇಳಿದ್ದಾರೆ. ಈಗ ಅವರು ಮೂವರು ಮಕ್ಕಳ ತಂದೆ.
ಧರ್ಮಗುರು ಜೊತೆ ಮದ್ವೆಗಾಗಿ ಪಾಕ್ನಲ್ಲಿ ರಾಖಿ: ವಿಮಾನದಲ್ಲಿ ಮಾಡಿದ್ದು ಎಲ್ಲಿ ಹೋಗತ್ತೆ ಎಂದು ಪ್ರಶ್ನಿಸಿದ ನಟಿ!
ಬಾಲಿವುಡ್ಗೆ ಹಾರುವ ಆಸೆಯನ್ನು ಪ್ರಭು ಅವರು ಈ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಖ್ಯಾತ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಜ್ ಕುಮಾರ್ ಹಿರಾನಿ ಅವರ ಚಿತ್ರಗಳಲ್ಲಿ ನಟಿಸುವ ಆಸೆ ಎಂದಿದ್ದರು. ಈ ಇಬ್ಬರೂ ನಿರ್ದೇಶಕರ ಚಿತ್ರಗಳು ನನಗೆ ಬಹಳ ಇಷ್ಟವಾಗುತ್ತದೆ. ಈ ಇಬ್ಬರೂ ನಿರ್ದೇಶಕರ ಚಿತ್ರಗಳಲ್ಲಿಯೇ ನನ್ನ ಬಾಲಿವುಡ್ ಪಯಣ ಆರಂಭವಾಗಬಹುದು ಎಂದು ಕನಸು ಕಾಣುತ್ತಿದ್ದಾರೆ. .ಯಾವುದೇ ಭಾಷೆ ಅಥವಾ ಪ್ರದೇಶದ ಗಡಿ ಇಲ್ಲ. ಓರ್ವ ಕಲಾವಿದನಾಗಿ ಎಲ್ಲ ಭಾಷೆಗಳಲ್ಲೂ ಕೆಲಸ ಮಾಡಲು ನಾನು ಇಷ್ಟ ಪಡುತ್ತೇನೆ. ಪ್ರಮುಖವಾಗಿ ಹಿಂದಿ ಟಿವಿಲೋಕ ಮತ್ತು ಬಾಲಿವುಡ್ ನನ್ನ ಕನಸು ಎಂದಿದ್ದಾರೆ.
ಇನ್ನು ಅವರ ಮಫ್ತಿ ಚಿತ್ರ ಸಾಕಷ್ಟು ಮನ್ನಣೆ ಗಳಿಸಿತು. ಇದರಲ್ಲಿ ಇವರದ್ದು ಕಾಲೇಜು ವಿದ್ಯಾರ್ಥಿ ಡೇವಿಡ್ ಪಾತ್ರ. 1996 ರಲ್ಲಿ ವಾಸಿಸುವ ಜನನಿಯೊಂದಿಗೆ ಈ ರೇಡಿಯೊ ಮೂಲಕ ಮಾತನಾಡಬಹುದು ಎಂದು ಕಂಡುಕೊಳ್ಳುತ್ತಾನೆ. ಅವರ ಬಂಧವು ಬಲಗೊಳ್ಳುತ್ತಿದ್ದಂತೆ, ಅವರು ಭೇಟಿಯಾಗಲು ಪ್ರಯತ್ನಿಸುತ್ತಾರೆ, ಆದರೆ ಕಾಲಾನಂತರದಲ್ಲಿ ಅವರ ಪ್ರತ್ಯೇಕತೆಯ ಬಗ್ಗೆ ಸತ್ಯವನ್ನು ಬಹಿರಂಗಪಡಿಸುತ್ತಾರೆ. ಪ್ರೀತಿ, ಸಮಯ ಮತ್ತು ತ್ಯಾಗದ ಪದರಗಳ ನಿರೂಪಣೆಯನ್ನು ಸೃಷ್ಟಿಸುವ ಮೂಲಕ ಜನನಿಗೆ ತನ್ನದೇ ಆದ ಪ್ರಣಯ ಸಂದಿಗ್ಧತೆಯನ್ನು ನಿವಾರಿಸಲು ಸಹಾಯ ಮಾಡುವ ಡೇವಿಡ್ ಪ್ರಯತ್ನವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಡಿವೋರ್ಸ್ ಬಗ್ಗೆ ಮಾಳವಿಕಾ ಅವಿನಾಶ್ ಓಪನ್ ಮಾತು: 25 ವರ್ಷಗಳ ದಾಂಪತ್ಯ ಜೀವನದ ಬಗ್ಗೆ ನಟಿ ಹೇಳಿದ್ದೇನು?