ಧರ್ಮಗುರು ಜೊತೆ ಮದ್ವೆಗಾಗಿ ಪಾಕ್ನಲ್ಲಿ ರಾಖಿ: ವಿಮಾನದಲ್ಲಿ ಮಾಡಿದ್ದು ಎಲ್ಲಿ ಹೋಗತ್ತೆ ಎಂದು ಪ್ರಶ್ನಿಸಿದ ನಟಿ!
ಧರ್ಮಗುರುವಿನ ಜೊತೆ ನಟಿ ರಾಖಿ ಸಾವಂತ್ ಮದುವೆಯಾಗುವುದಾಗಿ ಹೇಳಲಾಗುತ್ತಿದ್ದು, ವಿಮಾನದಲ್ಲಿ ಆಕೆ ಪಾಕಿಸ್ತಾನಕ್ಕೆ ಹೊರಟಿರುವ ವಿಡಿಯೋ ವೈರಲ್ ಆಗಿದೆ.

ಡ್ರಾಮಾ ಕ್ವೀನ್ ರಾಖಿ ಸಾವಂತ್ಗೆ ಅದೆಷ್ಟು ಮದುವೆ, ಸಂಬಂಧಗಳು ಆಗಿ ಹೋಗಿದ್ವೋ ಲೆಕ್ಕವಿಲ್ಲ. ಸದಾ ಮದುವೆ, ವಿಚ್ಛೇದನ ಎನ್ನುತ್ತಾ ಡ್ರಾಮಾ ಮಾಡುತ್ತಲೇ ಈಕೆ ಕಾಲ ಕಳೆಯುವುದು ಇದೆ. ವಯಸ್ಸು 46 ಆದರೂ ಇಂದಿಗೂ ಈಕೆ ಹುಡುಗಾಟಿಕೆ ಬಿಟ್ಟಿಲ್ಲ. ಇದೀಗ ಪಾಕಿಸ್ತಾನದ ಧರ್ಮಗುರು ಅಬ್ದುಲ್ ಕ್ವಾವಿ ಪ್ರಪೋಸ್ ಮಾಡಿರುವ ಬಗ್ಗೆ ಕೆಲ ದಿನಗಳ ಹಿಂದೆ ನಟಿ ಹೇಳಿದ್ದರು. ದೋಡಿ ಖಾನ್ ಮೊದಲು ಮದುವೆಯಾಗುವುದಾಗಿ ಹೇಳಿದ್ದರು. ಈಗ ಧರ್ಮಗುರು ಮದುವೆಗೆ ಒಪ್ಪಿಕೊಂಡಿದ್ದಾರೆ. ನಾನು 7-8 ಕೋಟಿ ಸಾಲ ಮಾಡಿದ್ದೇನೆ. ಯಾವುದೇ ಷರತ್ತುಗಳಿಲ್ಲದೆ ಈ ಸಾಲವನ್ನು ತೀರಿಸಿದರೆ ಮದುವೆಗೆ ಸಿದ್ಧ ಎಂದು ಹೇಳಿರುವುದಾಗಿ ನಟಿ ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.
ಇದಾಗಲೇ ನಟಿ ಪಾಕಿಸ್ತಾನಕ್ಕೆ ಹೊರಟಿರುವುದಾಗಿ ಹೇಳಿದ್ದು, ವಧುವಿನಂತೆ ಶೃಂಗಾರ ಮಾಡಿಕೊಂಡು ವಿಮಾನದಲ್ಲಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು, ಗಗನಸಖಿಯ ಜೊತೆ ಮಾತನಾಡುವುದನ್ನು ನೋಡಬಹುದು. ಇದು ಪೂರ್ವಯೋಜಿತವಾಗಿರುವುದು ಸುಲಭದಲ್ಲಿ ತಿಳಿಯುತ್ತದೆ. ಆದರೆ ನೋಡುಗರನ್ನು ಮೂರ್ಖರನ್ನಾಗಿ ಮಾಡುತ್ತಿರುವ ರಾಖಿ, ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಂತೆ ನಟಿಸಿದ್ದಾರೆ. ಗಗನಸಖಿಯ ಜೊತೆಗಿನ ಇವರ ಸಂಭಾಷಣೆಯ ವಿಡಿಯೋಗಳು ವೈರಲ್ ಆಗುತ್ತಿವೆ.
ಇದರಲ್ಲಿ ರಾಖಿ, ಈ ವಿಮಾನ ಪಾಕಿಸ್ತಾನಕ್ಕೆ ಹೋಗುತ್ತದೆಯೇ ಕೇಳಿದ್ದಾರೆ. ಇದು ಲಂಡನ್ಗೆ ಹೋಗುತ್ತದೆ. ಅಲ್ಲಿಂದ ನೀವು ಬೇರೆ ವಿಮಾನ ಪಡೆದುಕೊಳ್ಳಬಹುದು ಎಂದು ಗಗನಸಖಿ ಹೇಳಿದ್ದಾಳೆ. ಆಗ ರಾಖಿ ಹಾಗಿದ್ದರೆ ಈ ಬೆಲ್ಟ್ ಹಾಕಿ ಎಂದಿದ್ದಾರೆ. ಗಗನಸಖಿ ಸೀಟ್ ಬೆಲ್ಟ್ ಹಾಕುತ್ತಿದ್ದಂತೆಯೇ, ರಾಖಿ 1-2 ಬಂದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಆಗ ಗಗನಸಖಿ ಮುಂದೆ ಕೈತೋರಿಸಿ ಅಲ್ಲಿ ವ್ಯವಸ್ಥೆ ಇದೆ. ಈ ಸೀಟ್ ಬೆಲ್ಟ್ ಬಿಚ್ಚಿಕೊಂಡು ಹೋಗಬಹುದು ಎಂದಿದ್ದಾಳೆ. ಆಗ ರಾಖಿ, ಛೇ ವಿಮಾನದ ಒಳಗೆನೇ ಎಲ್ಲಾ ಮಾಡೋದಾ? ಹಾಗಿದ್ದರೆ ಮಾಡಿದ ಮೇಲೆ ಅದು ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಗಗನಸಖಿ, ಅದಕ್ಕೆ ವ್ಯವಸ್ಥೆ ಇದೆ. ಅದನ್ನು ಸಂಗ್ರಹಿಸಿ ಆಮೇಲೆ ಚೆಲ್ಲಲಾಗುತ್ತದೆ ಎಂದಿದ್ದಾಳೆ. ಆಗ ರಾಖಿ ಛೇ ಹೀಗೆಲ್ಲಾ ಆಗತ್ತಾ ಎಂದು ಪ್ರಶ್ನಿಸಿದ್ದಾರೆ.
ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!
ನಾನು ಮದುಮಗಳು, ಪಾಕಿಸ್ತಾನಕ್ಕೆ ಹೊರಟಿದ್ದೇನೆ. ಹೇಗೆ ಕಾಣಿಸುತ್ತೇನೆ ಎಂದಾಗ ಗಗನಸಖಿ ತುಂಬಾ ಚೆನ್ನಾಗಿ ಕಾಣಿಸುತ್ತೀರಿ ಎಂದಿದ್ದಾಳೆ. ಅದಕ್ಕೆ ರಾಖಿಗೆ ಖುಷಿಯಾಗಿದೆ. ಒಟ್ಟಿನಲ್ಲಿ ಈ ವಿಡಿಯೋಗೆ ಸಹಸ್ರಾರು ಸಂಖ್ಯೆಯಲ್ಲಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ನಟಿಯ ಹುಚ್ಚಾಟವನ್ನು ಬೈದುಕೊಳ್ಳುತ್ತಲೇ ನೆಟ್ಟಿಗರು ಇದರ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ, ಪಾಕಿಸ್ತಾನಿ ಮುಫ್ತಿ ಅಬ್ದುಲ್ ಕ್ವಾವಿ ಅವರು ರಾಖಿ ಸಾವಂತ್ ಅವರಿಗೆ ಮದುವೆಗೆ 3 ದಿನಗಳ ಗಡುವು ನೀಡಿದ್ದಾರೆ. ತಮ್ಮ ಮದುವೆ ಎರಡೂ ದೇಶಗಳಿಗೆ ಶಾಂತಿಯನ್ನು ತರಬಹುದು ಎಂದಿದ್ದರು. ಮೊದಲು ಇವರ ಮದುವೆಯಾಗುವುದಾಗಿ ಹೇಳಲಾಗಿತ್ತು, ಕೊನೆಗೆ ಅದು ಆಗುವುದಿಲ್ಲ ಎನ್ನಲಾಗಿತ್ತು. ಒಟ್ಟಿನಲ್ಲಿ ಹೈಡ್ರಾಮಾ ನಡೆಯುತ್ತಿದೆ. ಅಂದಹಅಗೆ, ಅಬ್ದುಲ್ ಅವರಿಗೆ 58 ವರ್ಷ ವಯಸ್ಸು. ಅವರಿಗೆ ಮದುವೆಯಾಗಿ ಮೊಮ್ಮಕ್ಕಳೂ ಇದ್ದಾರೆ. . "ಮನುಷ್ಯ ಮತ್ತು ಕುದುರೆ ಎಂದಿಗೂ ವಯಸ್ಸಾಗುವುದಿಲ್ಲ" ಎಂದು ರಾಖಿ ಈ ಹಿಂದೆ ಹೇಳಿದ್ದರು. ಇದಾಗಲೇ ನಟಿ ಪಾಕಿಸ್ತಾನಕ್ಕೆ ಹೋಗಿಯಾಗಿದೆ ಎನ್ನುವ ಸುದ್ದಿಯೂ ಇದೆ.
ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!