ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕಪುಟ್ಟ ಕಾರಣಗಳಿಗೂ ದಾಂಪತ್ಯ ಮುರಿದು ಬೀಳುತ್ತಿದೆ. ನಟಿ ಮಾಳವಿಕಾ ಅವಿನಾಶ್, ತಮ್ಮ ಸಮಕಾಲೀನ ನಟಿಯರಲ್ಲಿ ತಾವೊಬ್ಬರೇ 25ವರ್ಷಗಳ ದಾಂಪತ್ಯ ಜೀವನ ನಡೆಸಿರುವುದಾಗಿ ಹೇಳಿದ್ದಾರೆ. ಮದುವೆಯ ಬಾಳಿನಲ್ಲಿ ಹೊಂದಾಣಿಕೆ ಮುಖ್ಯ ಎಂದಿದ್ದಾರೆ.

ಇಂದು ಡಿವೋರ್ಸ್​ ಎನ್ನುವುದು ಸಿಕ್ಕಾಪಟ್ಟೆ ಸಹಜ ಆಗಿಬಿಟ್ಟಿದೆ. ಚಿಕ್ಕಪುಟ್ಟ ವಿಷಯಕ್ಕೂ ಗಂಡ-ಹೆಂಡಿರ ನಡುವೆ ಮನಸ್ತಾಪ ಆಗುತ್ತಿದ್ದು, ಅದು ವಿಚ್ಛೇದನದವರೆಗೂ ಹೋಗುತ್ತಿದೆ. ಒಂದೆರಡು ದಶಕದಿಂದ ಡಿವೋರ್ಸ್​ ಪ್ರಮಾಣ ವಿಪರೀತ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯಾಗಿ ನಿಂತಿರೋದು ಕೌಟುಂಬಿಕ ಕೋರ್ಟ್​ಗಳ ಪ್ರಮಾಣದಲ್ಲಿ ದಿಢೀರ್​ ಏರಿಕೆ ಆಗುತ್ತಿರುವುದು. ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಹಿಂದೆಲ್ಲಾ ಪತಿಯೇ ಪರದೈವ, ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ, ಮದುವೆಯಾಗಿ ಅಮ್ಮನ ಮನೆಯ ಹೊಸಿಲಿನಿಂದ ಹೋದಾಕೆ, ವಾಪಸ್​ ಅಮ್ಮನ ಮನೆಯ ಹೊಸಿಲು ತುಳಿಯುವುದು ಹೆಣವಾದ ಬಳಿಕವಷ್ಟೇ, ಅಲ್ಲಿಯವರೆಗೂ ಆಕೆ ಗಂಡನ ಮನೆಯಲ್ಲಿ ಏನೇ ಬಂದರೂ ಸಹಿಸಿಕೊಂಡು ಹೋಗಬೇಕು ಎನ್ನುವ ಮಾತೆಲ್ಲಾ ಇತ್ತು. ಇಂದಿಗೂ ಕೆಲವು ಕಡೆಗಳಲ್ಲಿ ಹೆಣ್ಣುಮಕ್ಕಳಿಗೆ ಈ ಮಾತುಗಳನ್ನು ಹೇಳುತ್ತಲೇ ಬರುತ್ತಿರುವುದು ಕೂಡ ಅಷ್ಟೇ ಸತ್ಯ.

ಆದರೆ, ದೌರ್ಜನ್ಯ ಸಹಿಸಿಕೊಳ್ಳುವುದು ದೂರದ ಮಾತು, ಇಂದು ಎಷ್ಟೋ ಪ್ರಕರಣಗಳಲ್ಲಿ ಡಿವೋರ್ಸ್​ಗೆ ಕಾರಣ ಕೇಳಿದರೆ ನಗು ಬರುವಂಥ ಕಾರಣಗಳೂ ಇರುತ್ತವೆ. ಚಿಕ್ಕಪುಟ್ಟ ವಿಷಯಕ್ಕೆ ಗಂಡ-ಹೆಂಡತಿಯರ ನಡುವೆ ವೈಮನಸ್ಸು ಶುರು ಆಗುವುದು ಇದೆ. ಇಬ್ಬರ ನಡುವೆ ಇಗೋ ಹೆಚ್ಚು ಇಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಎಲ್ಲದಕ್ಕೂ ವಿಚ್ಛೇದನವೇ ಮದ್ದು ಎನ್ನುವ ಮನಸ್ಥಿತಿಯೂ ಶುರುವಾಗಿದೆ. ಕೆಲವು ಡಿವೋರ್ಸ್​ ಪ್ರಕರಣಗಳ ಹಿಂದಿನ ಕಾರಣಗಳು ಭಯಾನಕ ಆಗಿರುವುದು ಇರುವುದು ನಿಜವಾಗಿದ್ದರೂ, ಚಿಕ್ಕ-ಪುಟ್ಟ ಸಮಸ್ಯೆ ಬಂದಾಗ ಅದನ್ನು ಪರಿಹರಿಸುವವರು ಇಲ್ಲದೇ ಇರುವುದು ಕೂಡ ಈ ಮನಸ್ಥಿತಿಗೆ ಕಾರಣವಾಗುತ್ತಿದೆ. ಹತ್ತಾರು ವರ್ಷಗಳು ಲವರ್​ ಆಗಿದ್ದ ಸಂದರ್ಭದಲ್ಲಿ ಖುಷಿಯಿಂದ ಇರುವ ಜೋಡಿಗಳು ಮದುವೆಯಾದ ಕೆಲವೇ ತಿಂಗಳೋ ಅಥವಾ ವರ್ಷದಲ್ಲಿಯೇ ಬೇರೆ ಬೇರೆಯಾಗಿರುವ ಉದಾಹರಣೆಗಳೂ ಇವೆ. 

ನಿಮಗೆಲ್ಲಾ ರೋಲ್​ ಇಲ್ಲ ಅಂತ ಕೆಜಿಎಫ್​​ ನಿರ್ದೇಶಕ ಮಾಳವಿಕಾಗೆ ವಾಪಸ್​ ಕಳಿಸೇ ಬಿಡೋದಾ? ಗರಂ ಆಗಿದ್ದ ನಟಿ

ಈಗ ಇವೆಲ್ಲವುಗಳ ಬಗ್ಗೆ ಮಾತನಾಡಿದ್ದಾರೆ ನಟಿ ಮಾಳವಿಕಾ ಅವಿನಾಶ್​. ಬದುಕು ಜಟಕಾಬಂಡಿ ಕಾರ್ಯಕ್ರಮದಲ್ಲಿ ಅವರು ಹಲವು ಕೌಟುಂಬಿಕ ಸಮಸ್ಯೆಗಳನ್ನು ಸರಿಮಾಡಿದ್ದು ಇದೆ. ಅದರ ಬಗ್ಗೆ ಕಿರಿಕ್​ ಕೀರ್ತಿ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡುವ ವೇಳೆ, ಡಿವೋರ್ಸ್​ ಬಗ್ಗೆ ಉಲ್ಲೇಖಿಸಿದ್ದಾರೆ. ಹೇಗೆ ಇಂದಿನವರ ಮನಸ್ಥಿತಿಗಳು ವರ್ಕ್​ ಆಗುತ್ತಿವೆ ಎಂಬ ಬಗ್ಗೆ ಹೇಳಿದ್ದಾರೆ. ನನ್ನ ಸಮಕಾಲೀನ ನಟಿಯರ ವಿಷಯದಲ್ಲಿ ಹೇಳುವುದಾದರೆ, ಬಹುಶಃ 25 ವರ್ಷಗಳಿಂದ ಒಬ್ಬನೇ ಗಂಡನ ಜೊತೆ ಇರುವವಳು ನಾನೊಬ್ಬಳೇ ಎನ್ನಿಸುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಲವಾರು ತೆರನಾಗಿ ಕಮೆಂಟ್​ಗಳು ಬರುತ್ತಿವೆ. ಮಾಳವಿಕಾ ಅವರ ಸಮಕಾಲೀನ ನಟಿಯರ ಹೆಸರುಗಳನ್ನು ಉಲ್ಲೇಖಿಸಿ, ಅವರ ವಿಷಯವಾಗಿಯೇ ಮಾಳವಿಕಾ ಹಾಗೆ ಹೇಳಿರಬಹುದು ಎನ್ನಲಾಗುತ್ತಿದೆ. ಆದರೆ ಈ ವಿಡಿಯೋದಲ್ಲಿ ಮಾಳವಿಕಾ ಅವರು, ಹೇಗೆ ಮದುವೆಗಳು ಮುರಿದು ಬೀಳುತ್ತಿವೆ ಎಂಬ ಬಗ್ಗೆ ಹೇಳುವಾಗ ತಮ್ಮ ವಿಷಯವನ್ನು ಪ್ರಸ್ತಾಪಿಸಿದ್ದಾರಷ್ಟೇ. 

ಇದೇ ವೇಳೆ, ತಮ್ಮ ಮತ್ತು ಅವಿನಾಶ್​ ಭೇಟಿ ಹೇಗೆ ಆಗಿದ್ದು, ಮದುವೆ ಹೇಗೆ ನಡೆದಿದ್ದು ಎಂಬ ಬಗ್ಗೆ ಕುತೂಹಲಕಾರಿಯಾಗಿ ನಟಿ ವಿವರಿಸಿದ್ದಾರೆ. ತಮ್ಮದು ಲವ್​ ಆ್ಯಟ್​ ಫಸ್ಟ್​ ಸೈಟು, ಸೆಕೆಂಡ್​ ಸೈಟು ಅಂತೇನೂ ಇಲ್ಲ. ಮನೆಯಲ್ಲಿ ನೋಡಿ ಮಾಡಿದ ಮದುವೆ ಎನ್ನುತ್ತಲೇ ದಾಂಪತ್ಯ ಜೀವನ ಚೆನ್ನಾಗಿ ಇರಬೇಕು ಎಂದರೆ, ಪತಿ-ಪತ್ನಿ ಇಬ್ಬರೂ ಹೇಗೆ ಇರಬೇಕು ಎನ್ನುವ ಬಗ್ಗೆಯೂ ನಟಿ ತಿಳಿಸಿದ್ದಾರೆ. ಅದರ ಸಂಪೂರ್ಣ ಸಂದರ್ಶನ ಈ ಕೆಳಗಿನ ಲಿಂಕ್​ನಲ್ಲಿದೆ. 

ಕೆಜಿಎಫ್​-3 ಬಿಗ್​ ಅಪ್​ಡೇಟ್​! ಯಶ್​ ಫ್ಯಾನ್ಸ್​ ಕುಣಿದು ಕುಪ್ಪಳಿಸೋ ಸುದ್ದಿ ಕೊಟ್ಟ ಮಾಳವಿಕಾ ಅವಿನಾಶ್​

YouTube video player