'ಮತ್ತೆ ಮದುವೆ' ಫೇಲ್​: ಗನ್​ ಬೇಕೆಂದು ಪೊಲೀಸರಲ್ಲಿ ಕೋರಿಕೊಂಡ ನಟ ನರೇಶ್

ಮತ್ತೆ ಮದುವೆ ಸೋಲಿನ ಬೆನ್ನಲ್ಲೇ ನಟ ನರೇಶ್​ ಜೀವ ಬೆದರಿಕೆ ಇರುವುದಾಗಿ ಹೇಳಿ ಗನ್​ಗೆ ಅರ್ಜಿ ಸಲ್ಲಿಸಿದ್ದಾರೆ. ಏನಿದು ವಿಷಯ? 
 

Actor Naresh has applied for  gun saying  a threat to his life suc

ಕಳೆದೊಂದು ವರ್ಷದಿಂದ ತೆಲುಗಿನ ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಸಕತ್​ ಸುದ್ದಿಯಲ್ಲಿದ್ದಾರೆ. ಇವರು ಮತ್ತೆ ಮದುವೆ ಚಿತ್ರದ ಮೂಲಕ ಹಲ್​ಚಲ್​ ಸೃಷ್ಟಿಸಿದ್ದರು.  ​ ಮೊನ್ನೆಯಷ್ಟೇ ಈ ಸಿನಿಮಾ ಪ್ರೈಮ್ ನಲ್ಲಿ ರಿಲೀಸ್ ಆಗಿತ್ತು. ಇದೀಗ ದಿಢೀರ್ ಅಂತ ಅದು ಮಿಸ್ಸಿಂಗ್​ ಆಗಿದೆ. ಇದಕ್ಕೆ ಕಾರಣ ನರೇಶ್ ಪತ್ನಿ ರಮ್ಯಾ ರಘುಪತಿ ಎನ್ನುವ ವಿಷಯ ಎಲ್ಲರಿಗೂ ತಿಳಿದದ್ದೇ. ತಮ್ಮನ್ನೇ  ಗುರಿಯಾಗಿರಿಸಿಕೊಂಡು ಮತ್ತೆ ಮದುವೆ ಸಿನಿಮಾ ತಯಾರು ಮಾಡಿದ್ದಾರೆ ಎಂದು  ರಮ್ಯಾ ರಘುಪತಿ (Ramya Raghupathi) ಕೋರ್ಟ್​ಗೆ ಅರ್ಜಿ ಸಲ್ಲಿಸಿ,   ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದರು. ಆದರೆ ಅಲ್ಲಿ ಅರ್ಜಿ ಮಾನ್ಯ ಆಗಿರಲಿಲ್ಲ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದಂತೆಯೇ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು ರಮ್ಯಾ. ಅವರ ಮನವಿ ಮೇರೆಗೆ  ಓಟಿಟಿಯಲ್ಲಿ ಮತ್ತೆ ಮದುವೆ ಸಿನಿಮಾವನ್ನು ತೆಗೆದುಹಾಕಲಾಗಿದೆ. ಈ ಮೂಲಕ ನರೇಶ್ ಅವರಿಗೆ ಹಿನ್ನೆಡೆಯಾಗಿದೆ.   ಇನ್ನು ನರೇಶ್ ತಮ್ಮದೇ ಜೀವನದ ಘಟನೆಗಳನ್ನು ಸೇರಿಸಿ 'ಮಳ್ಳಿ ಪೆಳ್ಳಿ' (ಮತ್ತೆ ಮದುವೆ) ಸಿನಿಮಾ ಮಾಡಿದ್ದರು. ಬಾಕ್ಸ್​ ಆಫೀಸ್​ನಲ್ಲಿ  ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದಿತ್ತು. ಆದರೆ  ರಮ್ಯಾ ರಘುಪತಿಯಿಂದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ.

ಈ ನಡುವೆಯೇ, ಅವರು ತಮಗೆ ಗನ್​ ಅವಶ್ಯಕತೆ ಇರುವುದಾಗಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದ್ದು, ರಕ್ಷಣೆಗಾಗಿ ಪರವಾನಗಿ ಹೊಂದಿರುವ ರಿವಾಲ್ವರ್‌ಗೆ ಅನುಮತಿ ನೀಡುವಂತೆ ಜಿಲ್ಲಾ ಎಸ್ಪಿ ಮಾಧವರೆಡ್ಡಿ ಅವರನ್ನು ಕೋರಿದ್ದಾರೆ.  ನಿನ್ನೆ ಪುಟ್ಟಪರ್ತಿಯಲ್ಲಿ ಎಸ್​ಪಿ ಅವರನ್ನು ಭೇಟಿಯಾಗಿರೋ ನರೇಶ್​  ಅವರು ಈ ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇವರಿಗೆ ಜೀವ ಬೆದರಿಕೆ ಇರುವುದು ಮಾವೋವಾದಿಗಳಿಂದ ಎಂದು ಹೇಳಿದ್ದಾರೆ. ಮಾವೋವಾದಿಗಳಿಂದ ಜೀವ ಬೆದರಿಕೆ ಇರುವ ಕಾರಣ 2008ರಲ್ಲಿ ಪರವಾನಗಿ ಪಡೆದ ರಿವಾಲ್ವರ್ ತೆಗೆದುಕೊಂಡು ಹೋಗಿದ್ದೆ. ಈಗ ಹಿಂದೂಪುರಂನಲ್ಲಿ ವಾಸವಿದ್ದೇನೆ. ಈ ಹಿಂದೆ ಅನುಮತಿ ನೀಡದ ಕಾರಣ ಪರವಾನಗಿ ಪಡೆದ ರಿವಾಲ್ವರ್ ಅನ್ನು ತನ್ನ ಬಳಿ ಇಟ್ಟುಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.  ನಕ್ಸಲ್ಸ್‌ ಹಿಟ್‌ ಲಿಸ್ಟ್‌ನಲ್ಲಿ ಇರುವುದರಿಂದ ತಮಗೆ 2008ರಲ್ಲಿ ಗನ್‌ ಲೈಸೆನ್ಸು ನೀಡಲಾಗಿತ್ತು. ಪ್ರಸ್ತುತ ಈಗ ಕೂಡ ಜೀವಹಾನಿ ಇರುವುರಿಂದ ಲೈಸೆನ್ಸ್ ಪರವಾನಗಿ ನವೀಕರಣವಾಗಬೇಕಿದೆ ಎಂದಿದ್ದಾರೆ. 

 Matte Maduve Review: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು

 ಪವಿತ್ರಾ ಜೊತೆ ಲಿವ್ ಇನ್‌ರಿಲೇಷನ್‌ಶಿಪ್ ತಮ್ಮ ದಾಂಪತ್ಯದಲ್ಲಿ ಪವಿತ್ರಾ ಲೋಕೇಶ್ ಹುಳಿ ಹಿಂಡಿದ್ದಾರೆ ಎಂದು ಕಳೆದ ವರ್ಷ ನರೇಶ್ 3ನೇ ಪತ್ನಿ ಆರೋಪಿಸಿದ್ದರು. ಈ ಸಂಬಂಧ ಮೂರು ಜನ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ಮೊದಲಿಗೆ ನಾವಿಬ್ಬರು ಸ್ನೇಹಿತರು, ಅವರ ದಾಂಪತ್ಯಕ್ಕೂ ನನಗೂ ಸಂಬಂಧ ಇಲ್ಲ ಎಂದು ಪವಿತ್ರಾ ಹೇಳಿದ್ದರು. ಆದರೆ ಇತ್ತೀಚೆಗೆ 'ಮಳ್ಳಿ ಪೆಳ್ಳಿ' ಸಿನಿಮಾ ಪ್ರಮೋಷನ್ ವೇಳೆ ಇಬ್ಬರು ಲಿವ್ ಇನ್‌ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ನರೇಶ್- ಪವಿತ್ರಾ ಒಪ್ಪಿಕೊಂಡಿದ್ದರು. 

ಅದೇ ಇನ್ನೊಂದೆಡೆ, ನಟ ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಅವರಿಂದ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ರಮ್ಯಾ ಮಗನ ಭವಿಷ್ಯದ ದೃಷ್ಟಿಯಿಂದ ನಾನು ಡಿವೋರ್ಸ್ ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರದಲ್ಲಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡಿದ್ದರು.  ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂದು ನರೇಶ್​ ಪ್ರತ್ಯಾರೋಪ ಮಾಡಿದ್ದರು. 

ಮತ್ತೆ ಮದುವೆ: ಆನ್‌ಲೈನ್‌ನಲ್ಲಿ ಪವಿತ್ರಾ ಲೋಕೇಶ್- ನರೇಶ್ ಜೋಡಿಯ ವಿಡಿಯೋ
 

Latest Videos
Follow Us:
Download App:
  • android
  • ios