Matte Maduve Review: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು
ನರೇಶ್, ಪವಿತ್ರಾ ಲೋಕೇಶ್, ಜಯಸುಧಾ, ಶರತ್ ಬಾಬು ನಟಿಸಿರುವ ಮತ್ತೆ ಮದುವೆ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
ಕೆಲವು ದಿನಗಳ ಹಿಂದೆ ‘ಮತ್ತೆ ಮದುವೆ’ ಸಿನಿಮಾದ ಪ್ರೆಸ್‌ಮೀಟ್ ಬೆಂಗಳೂರಿನಲ್ಲಿ ನಡೆದಿತ್ತು. ‘ಈ ಸಿನಿಮಾ ನಿಮ್ಮ ವೈಯುಕ್ತಿಕ ಬದುಕಿನ ಘಟನೆಗಳನ್ನು ನಿಮ್ಮ ಆ್ಯಂಗಲ್‌ನಿಂದ ಹೇಳುವ, ಈ ಬಗ್ಗೆ ಈಗಾಗಲೇ ಮೂಡಿರುವ ಅಭಿಪ್ರಾಯವನ್ನು ಬದಲಿಸುವ ಪ್ರಯತ್ನವಾ?’ ಎಂಬ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಉತ್ತರಿಸಿದ ನರೇಶ್, ‘ಅದನ್ನು ಯೂಟ್ಯೂಬ್ ವೀಡಿಯೋ ಮಾಡಿ ಹೇಳಬಹುದಲ್ವಾ? ಅದಕ್ಕೋಸ್ಕರ ಹತ್ತು ಹದಿನೈದು ಕೋಟಿ ರು. ಖರ್ಚು ಮಾಡಿ ಸಿನಿಮಾ ಮಾಡಬೇಕಾ?’ ಎಂದುಬಿಟ್ಟರು. ಆದರೆ ‘ಮತ್ತೆ ಮದುವೆ’ ಸಿನಿಮಾ ನೋಡಿದ ಮೇಲೆ ಆ ಅನುಮಾನ ಸುಳ್ಳಲ್ಲ ಅಂತ ಗೊತ್ತಾಗುತ್ತದೆ.
ತಾರಾಗಣ : ನರೇಶ್, ಪವಿತ್ರಾ ಲೋಕೇಶ್, ಜಯಸುಧಾ, ಶರತ್ ಬಾಬು
ನಿರ್ದೇಶನ: ಎಂ ಎಸ್ ರಾಜು
ನರೇಶ್ ಮತ್ತು ಪವಿತ್ರಾ ಬದುಕಿನ ಘಟನೆಗಳನ್ನೇ ಅವರ ದೃಷ್ಟಿಕೋನದಲ್ಲಿ ಹೇಳುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಹೀಗಾಗಿ ಈ ಚಿತ್ರವನ್ನು ಅನ್‌ಅಫೀಷಿಯಲ್ ಬಯೋಪಿಕ್ ಅನ್ನಬಹುದೇನೋ. ಇದರಲ್ಲಿ ಬರುವ ಹೆಚ್ಚಿನ ವಿಚಾರಗಳು ತಿಳಿದಿರುವುದೇ ಆದ ಕಾರಣ ಕನೆಕ್ಟ್ ಆಗುತ್ತದೆ. ನರೇಶ್, ಪವಿತ್ರಾ, ಜಯಸುಧಾ ನಟನೆ ಬಹಳ ಆಪ್ತವಾಗಿದೆ. ನರೇಶ್ ಮತ್ತು ಪವಿತ್ರಾ ನಿಜ ಬದುಕಿನ ಪಾತ್ರಗಳನ್ನೇ ಹೋಲುವ ಕಲಾವಿದರು ರೀಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ದನಿ, ಮ್ಯಾನರಿಸಂನಲ್ಲೂ ಸಾಮ್ಯತೆ ಇರೋದು ವಿಶೇಷ.
ವೈಯುಕ್ತಿಕ ಬದುಕಿನಲ್ಲಿ ನೆಮ್ಮದಿ ಇಲ್ಲದ ಜನಪ್ರಿಯ ನಟ ನರೇಶ್‌ಗೆ ಶೂಟಿಂಗ್‌ನಲ್ಲಿ ಸಿಗೋ ನಟಿ ಪಾರ್ವತಿ. ಆಕೆಯ ಮೇಲೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತದೆ. ಸಿನಿಮಾ ಪ್ರೀತಿ, ಹಾಡುಗಳ ವ್ಯಾಮೋಹದ ಜೊತೆಗೆ ನೋವು, ಅಶಾಂತಿಯಿಂದ ಕೂಡಿರುವ ವೈಯುಕ್ತಿಕ ಬದುಕು ಇಬ್ಬರನ್ನೂ ಹತ್ತಿರವಾಗಿಸುತ್ತದೆ. ಆದರೆ ಯಾವಾಗ ಈ ಜೋಡಿ ಬದುಕು ಹಂಚಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೋ ಆಗ ಸಮಸ್ಯೆಗಳ ಸರಮಾಲೆ ಶುರು. ಆ ಸಮಸ್ಯೆಗಳೇನು, ಈ ಜೋಡಿಯ ಬಗ್ಗೆ ಹಬ್ಬಿರುವ ವದಂತಿಗಳು ಎಷ್ಟರಮಟ್ಟಿಗೆ ನಿಜ? ವಾಸ್ತವದಲ್ಲಿ ನಡೆದದ್ದೇನು.. ಮೊದಲಾದ ಪ್ರಶ್ನೆಗಳಿಗೆ ಉತ್ತರ ಸಿನಿಮಾದಲ್ಲಿದೆ. ವೈಯುಕ್ತಿಕ ಬದುಕಿನಲ್ಲಿ ಮೂಗು ತೂರಿಸುವ, ಟಿಆರ್‌ಪಿಯ ರೇಸಿಗೆ ಬಿದ್ದು ಕೀಳು ಕೆಲಸಕ್ಕಿಳಿಯುವ ಮೀಡಿಯಾ ಮನಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನವೂ ಇಲ್ಲಿ ನಡೆದಿದೆ.
Yada Yadahi Review: ದ್ರೋಹದ ಕತೆಯ ಕೊನೆಗೆ ಸುದೀರ್ಘ ನಿಟ್ಟುಸಿರು
ಒಂದು ದೃಶ್ಯದಲ್ಲಿ ನರೇಶ್ ಸಹ ಕಲಾವಿದೆ ಪಾರ್ವತಿಯನ್ನು ಮನೆಗೆ ಕರೆತರುತ್ತಾನೆ. ಅಲ್ಲಿ ಗಿನ್ನೆಸ್ ದಾಖಲೆ ಮಾಡಿರುವ ನಿರ್ದೇಶಕಿಯಾದ ತನ್ನ ತಾಯಿಯನ್ನು ಆಕೆಗೆ ಪರಿಚಯಿಸುತ್ತಾನೆ. ಪಾರ್ವತಿ ಹಿಂದಿರುಗುವ ಹೊತ್ತಿಗೆ, ಪದ್ಧತಿಯಂತೆ ಕುಂಕುಮ ಕೊಡುವ ತಾಯಿ, ‘ಶೂಟಿಂಗ್ ಇದೆಯಲ್ಲಾ, ಸಣ್ಣ ಬೊಟ್ಟಿಡುತ್ತೇನೆ. ಸೆಟ್‌ಗೆ ಹೋದ ಮೇಲೆ ಕೂದಲು ಸರಿ ಮಾಡ್ಕೋ..’ ಅನ್ನುತ್ತಾಳೆ. ಆ ಮಾತು ಪ್ರೊಫೆಶನಲ್ ನಿರ್ದೇಶಕಿಯ ಸೂಕ್ಷ್ಮ ವರ್ತನೆಗೆ ಸಾಕ್ಷಿಯಂತಿದೆ.
Daredevil Musthafa Review: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್ ಕಥನ
ಕತೆ ಕನೆಕ್ಟ್ ಆಗುವ ಕಾರಣ ಸ್ಕ್ರೀನ್ ಪ್ಲೇ ಡಲ್ ಆದರೂ ಸಿನಿಮಾ ಮನರಂಜನೆಯಲ್ಲಿ ಹಿಂದೆ ಬೀಳೋದಿಲ್ಲ. ವಾಸುಕಿ ವೈಭವ್ ಕಂಠದಲ್ಲಿ ಮೂಡಿಬಂದಿರುವ ಹಾಡು ಸೊಗಸಾಗಿದೆ. ಬಾಲ್ ರೆಡ್ಡಿ ಛಾಯಾಗ್ರಹಣ ನವಿರಾದ ಲವ್ ಸ್ಟೋರಿಯನ್ನು ಚೆಂದಕೆ ನರೇಟ್ ಮಾಡುತ್ತದೆ. ನರೇಶ್ ಪವಿತ್ರಾ ಜೋಡಿ ವೈಯುಕ್ತಿಕ ಬದುಕನ್ನು ತಿಳಿಯಲು ಇಚ್ಛಿಸುವವರು ಈ ಸಿನಿಮಾ ನೋಡಬಹುದು.