ಚಿತ್ರಕತೆ ಬರೆಯುವವರಿಗೆ ರಾಜ್‌ ಬಿ ಶೆಟ್ಟಿ ಅವರಿಂದ 7 ಪಾಠಗಳು

ಸಿನಿಮಾಕ್ಕೆ ಚಿತ್ರಕಥೆ ಬರೆಯಬೇಕು ಅನ್ನೋದು ಹಲವರ ಕನಸು. ಸಿನಿಮಾಕ್ಕೆ ಬರೆಯುವಾಗಿನ ಕೆಲವೊಂದು ಸೂಕ್ಷ್ಮ ಸಿನಿಮಾ ಮಾಡಿಯೇ ತಿಳಿಯಬೇಕಷ್ಟೇ. ಅವನ್ನಿಲ್ಲಿ ರಾಜ್‌ ಬಿ ಶೆಟ್ಟಿ ತಿಳಿಸಿದ್ದಾರೆ.

Actor Director Raj B shetty shares 7 simple lesson to film story writer vcs

ರಾಜ್‌ ಬಿ. ಶೆಟ್ಟಿ

1. ಓದಬೇಕು. ಓದುವುದರಿಂದ ನಾವು ಕತೆ ಕಟ್ಟುವ ಬಗೆಯನ್ನು ನಮಗೆ ಗೊತ್ತೇ ಆಗದಂತೆ ಬದಲು ಮಾಡುವಂತಹ ಸಾಧ್ಯತೆ ಇದೆ. ನಾವು ಯಾವ ಬಗೆಯ ಸಿನಿಮಾ ಮಾಡಬೇಕು ಅನ್ನುವುದು ನಮಗೆ ಗೊತ್ತಿಲ್ಲದೆ ಕಲಿಸಿಕೊಡುವಂತಹ ಅವಕಾಶ ಓದಿನಲ್ಲಿ ಇದೆ. ನನಗೆ ಕುವೆಂಪು, ತೇಜಸ್ವಿ, ಕಾರಂತರನ್ನು ಓದಿದಾಗ ಗಾಢವಾಗಿ ಅನ್ನಿಸಿದ್ದು ಏನೆಂದರೆ ನಿಮ್ಮ ಬದುಕನ್ನು, ನೀವು ಅನುಭವಿಸಿದ್ದನ್ನು ಬರೆದರೆ ಅದು ಜಾಸ್ತಿ ಅರ್ಥಪೂರ್ಣವಾಗಿರುತ್ತದೆ.

2. ನಟನೆಯ ಬಗ್ಗೆ ಗೊತ್ತಿರಲೇಬೇಕು. ಸಾಮಾನ್ಯವಾಗಿ ಬರೆಯುವವರು ನಟನೆ ಗೊತ್ತಿರಬೇಕು ಅಂತ ಅಂದುಕೊಂಡಿರುವುದಿಲ್ಲ. ಯಾಕೆ ಗೊತ್ತಿರಬೇಕು ಎಂದರೆ ನಟನೆಯ ಬಗ್ಗೆ ಗೊತ್ತಿದ್ದರೆ ಸಂಭಾಷಣೆಯನ್ನು ಯಾವ ರೀತಿಯಲ್ಲಿ ಹೇಳುತ್ತಾರೆ, ಯಾವ ರೀತಿ ಸಂಭಾಷಣೆಯಲ್ಲಿ ಹೇಳಿ ನಟನೆಯಲ್ಲಿ ಅದನ್ನು ಪೂರ್ಣಗೊಳಿಸಬಹುದು ಎಂಬುದು ತಿಳಿಯುತ್ತದೆ. ಸಿನಿಮಾದಲ್ಲಿ ಎಲ್ಲವನ್ನೂ ಹೇಳಬೇಕು ಅಂತಲೇ ಇಲ್ಲ. ತೋರಿಸಬಹುದು. ಮುಖದಿಂದ, ಭಾವದಿಂದ, ಭಂಗಿಯಿಂದ ಹೇಗೆ ಬೇಕಾದರೂ ತೋರಿಸಬಹುದು. ನಟನೆ ಮಾಡುವುದು ಗೊತ್ತಿಲ್ಲದಿದ್ದರೂ ನಟನೆ ನೋಡಿ ಅನುಭವಿಸುವುದು ತಿಳಿದಿದ್ದರೆ, ನಟನೆಯ ವಿವಿಧ ಮಜಲುಗಳು ಗೊತ್ತಿದ್ದರೆ ಬರವಣಿಗೆಗೆ ನೆರವಾಗುತ್ತದೆ. ಅದರ ಜೊತೆ ಸಿನಿಮಾಗೆ ಬಳಕೆಯಾಗುವ ಟೂಲ್ಸ್‌ ಅಂದ್ರೆ ಎಡಿಟಿಂಗ್‌, ಸಂಗೀತ, ಛಾಯಾಗ್ರಾಹಣ ಇವೆಲ್ಲದರ ಬಗ್ಗೆ ಸ್ವಲ್ಪವಾದರೂ ಅರಿವಿದ್ದರೆ ಆಗ ಬರವಣಿಗೆ ಹೆಚ್ಚು ಶಕ್ತವಾಗಿರುತ್ತದೆ.

ರೂಪಾಂತರ ಚಿತ್ರದ ಮೂಲಕ ಬೆಂಗಳೂರು ರೌಡಿಸಂಗೆ Raj B Shetty ಎಂಟ್ರಿ!

3. ಸಂಭಾಷಣೆ ಅಥವಾ ಡಿಸ್ಕಿ್ರಪ್ಷನ್‌ನ ಪ್ರತಿಯೊಂದು ಸಾಲು ಮೂರು ಕೆಲಸಗಳನ್ನು ಮಾಡಬೇಕು. ಮೊದಲನೆಯದಾಗಿ ಕತೆಯ ಮಾಹಿತಿಯನ್ನು ಆ ಸಾಲಿಗಿಂತ ಹಿಂದೆ ಪ್ರೇಕ್ಷಕರಿಗೆ ಎಷ್ಟುಗೊತ್ತಿತ್ತೋ ಅದಕ್ಕಿಂತ ಸ್ವಲ್ಪ ಜಾಸ್ತಿ ತಿಳಿಸಬೇಕು. ಎರಡನೆಯದು ಪಾತ್ರಗಳ ಮನಸ್ಥಿತಿ, ವರ್ತನೆಯ ಬಗ್ಗೆ ಇಲ್ಲಿಯತನಕ ಏನು ಗೊತ್ತಿರಲಿಲ್ಲವೋ ಅದು ಈ ಸಾಲಿನಿಂದ ಪ್ರೇಕ್ಷಕನಿಗೆ ತಿಳಿಯಬೇಕು. ಮೂರನೆಯದು ಪಾತ್ರಗಳಿರುವ ಆ ಪ್ರಪಂಚದ ಬಗ್ಗೆ ಒಂದು ಹೆಜ್ಜೆಯಾದರೂ ಹೆಚ್ಚು ತೋರಿಸಬೇಕು. ಈ ಮೂರು ಕೆಲಸಗಳನ್ನು ಮಾಡದೇ ಇದ್ದರೆ ಆ ಸಾಲು ಇರಬಾರದು. ಈ ಅಂಶಗಳನ್ನು ಪ್ರತಿಯೊಬ್ಬ ಚಿತ್ರಕತೆಗಾರ ಪಾಲಿಸಬೇಕು.

4. ಸಂಕ್ಷಿಪ್ತವಾಗಿರುವುದು ಮುಖ್ಯ. ಸಂಭಾಷಣೆಯನ್ನು ಬರೆಯುವಾಗ ಗಮನವಿಟ್ಟುಕೊಳ್ಳಬೇಕಾದ ವಿಚಾರ ಎಂದರೆ ಸಂಭಾಷಣೆ ಮಾತುಕತೆ ರೂಪದಲ್ಲಿ ಇರಬೇಕು. ಭಾಷಣ ರೂಪದಲ್ಲಿ ಇರಬಾರದು. ಸಂಭಾಷಣೆ ಮೂರು ಸಾಲನ್ನು ದಾಟುತ್ತಿದೆ ಎಂದಾದರೆ ಅದು ಸಿನಿಮಾಗಿಂತ ಹೆಚ್ಚಾಗಿ ರೇಡಿಯೋ ನಾಟಕ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಪುನೀತ್ ಮನೆಗೆ ಹೋಗಬೇಕಾದವ್ರು ತಪ್ಪಿ ರಾಘಣ್ಣನ ಮನೆಗೆ ಹೋದ್ವಿ, ಆಮೇಲೇನಾಯ್ತು ?

5. ಸಂಭಾಷಣೆ ಎಷ್ಟುಮುಖ್ಯವೋ ಮೌನ ಅದಕ್ಕಿಂತ ಹೆಚ್ಚು ಮುಖ್ಯ ಅನ್ನುವುದು ಅರ್ಥ ಮಾಡಿಕೊಂಡಿರಬೇಕು. ಎಲ್ಲಿ ಮೌನ ಇರುತ್ತದೆ ಆಗ ಸಂಭಾಷಣೆ ಬಂದಾಗ ಅಥವಾ ಆಗ ಬರುವ ಹಿನ್ನೆಲೆ ಸಂಗೀತಕ್ಕೆ ಅಥವಾ ಸಂಗೀತಕ್ಕೆ ಒಂದು ಅರ್ಥ ಇರುತ್ತದೆ. ಎಲ್ಲಿ ಶಬ್ದವೇ ಇರುತ್ತದೆ ಅಲ್ಲಿ ಯಾವುದೇ ಶಬ್ದಕ್ಕೂ ಪ್ರಾಮುಖ್ಯತೆ ಇರುವುದಿಲ್ಲ. ಹಾಗಾಗಿ ಬರವಣಿಗೆಯಲ್ಲಿ ಸಂಭಾಷಣೆಯನ್ನು ಹಿನ್ನೆಲೆ ಸಂಗೀತವನ್ನು ಸಂಗೀತವನ್ನು ಎಷ್ಟುಅಳವಡಿಸುತ್ತಾನೋ ಮೌನಕ್ಕೂ ಕೂಡ ಅಷ್ಟೇ ಮಹತ್ವವನ್ನು ಕೊಡಬೇಕು. ಮೌನದಲ್ಲೇ ಕಣ್ಣುಗಳು ಮಾತನಾಡುವುದು. ಕಣ್ಣುಗಳು ಮಾತನಾಡಿದಾಗಲೇ ಭಾವನೆಗಳು ವ್ಯಕ್ತವಾಗುವುದು. ಕೊನೆಗೆ ನೀವು ಏನೇ ಮಾಡಿದರೂ ಸಿನಿಮಾ ಅನ್ನುವುದು ಭಾವನೆಗಳ ಬೊಕ್ಕೆ.

6. ಯಾವ ವಿಷಯವನ್ನು ತೆರೆಯ ಮೇಲೆ ತೋರಿಸಲು ಸಾಧ್ಯವಿಲ್ಲವೋ ಅದನ್ನು ಹಾಳೆಯ ಮೇಲೆ ಬರೆಯಬಾರದು. ಉದಾಹರಣೆಗೆ ಕ್ರಿಯಾವಿಶೇಷಣಗಳು ಅಂತ ಕರೆಯುತ್ತೇವೆ. ಜೋರಾದ ಮಳೆ ಬಂದಿತ್ತು ಅನ್ನುವುದನ್ನು ತೆರೆಯ ಮೇಲೆ ತೋರಿಸಬಹುದು. ದಪ್ಪ ಮಳೆ ಹನಿಗಳನ್ನು ತೋರಿಸಿದರೆ ಜೋರಾದ ಮಳೆ ಎಂದುಕೊಳ್ಳಬಹುದು. ಹಿಂದೆಂದೂ ಕಾಣದಂತಹ, ಆ ಊರೇ ಕಾಣದಂತಹ ಮಳೆ ಬಂದಿತ್ತು ಎಂದರೆ ಅದನ್ನು ತೋರಿಸಲಾಗದು. ಮಾತಲ್ಲಿ ಹೇಳಬಹುದಷ್ಟೇ. ಅವನು ಹೇಗೆ ಅತ್ತ ಎಂದರೆ ಪ್ರಪಂಚವೇ ಅವನನ್ನು ತೊರೆದಂತೆ ಅಳುತ್ತಿದ್ದ ಎಂದು ಬರೆದರೆ ಅವನು ಅಳುವಾಗ ಪ್ರಪಂಚ ತೊರೆಯುವುದನ್ನು ನಾವು ತೆರೆ ಮೇಲೆ ತೋರಿಸಲಾಗುವುದಿಲ್ಲ. ಸಿನಿಮಾದಲ್ಲಿ, ತೆರೆ ಮೇಲೆ ಬರಹಗಾರ ಅಥವಾ ನಿರ್ದೇಶಕ ಒಂದು ಸಮಯದಲ್ಲಿ ಒಂದು ವಿಷಯವನ್ನು ಮಾತ್ರ ತೋರಿಸಲು ಸಾಧ್ಯ. ಇನ್ನೊಂದು ವಿಷಯ ಬಂದರೂ ಅದಕ್ಕೆ ಇನ್ನೊಂದು ಶಾಟ್‌ ಹಾಕಬೇಕಾಗುತ್ತದೆ. ಕೆಲವು ಸಲ ಕ್ರಿಯಾ ವಿಶೇಷಣಗಳನ್ನು ಬಳಸಿಕೊಂಡು ಸ್ಕಿ್ರಪ್‌್ಟಬರೆದಾಗ ಸ್ಕಿ್ರಪ್‌್ಟಬಹಳ ಇಂಟರೆಸ್ಟಿಂಗ್‌ ಅನ್ನಿಸಬಹುದು. ಯಾಕೆಂದರೆ ಯಾವುದನ್ನೆಲ್ಲಾ ತೋರಿಸಲು ಸಾಧ್ಯವಿಲ್ಲವೋ ಅದನ್ನು ಬರೆದಿರುತ್ತೇವೆ. ಆದರೆ ಅದು ಸಿನಿಮಾ ಆಗಿ ಬಂದಾಗ ನೀರಸವಾಗಿರುತ್ತದೆ. ಹಾಗಾಗಿ ಬರೆಯುವಾಗ ತುಂಬಾ ಸರಳವಾದ ಪದಗಳನ್ನು ಬಳಸಿ ನೀವು ಸ್ಕಿ್ರಪ್‌್ಟಪೂರ್ತಿ ಮಾಡಬೇಕು. ಅವನು ಕಾಲಿಟ್ಟತಕ್ಷಣ ಭೂಮಿಯೇ ನಡುಗಿತು ಅನ್ನುವುದನ್ನು ಸ್ವಲ್ಪಮಟ್ಟಿಗೆ ತೋರಿಸಬಹುದು. ಆದರೆ ಅವನು ಕಾಲಿಟ್ಟತಕ್ಷಣ ಭೂಮಿ ಇಲ್ಲಿಯ ತನಕ ನಡುಗದೇ ಇರುವ ಹಾಗೆ ನಡುಗಿತು ಎನ್ನುವುದನ್ನು ತೋರಿಸಲು ಸಾಧ್ಯವಿಲ್ಲ. ಸರಳವಾದ ಪದಗಳಲ್ಲಿ ಬರೆದಾಗ ಸಿನಿಮಾ ಹೇಗಿದೆಯೋ ಹಾಗೇ ಕಾಣಿಸುವ ಸಾಧ್ಯತೆ ಹೆಚ್ಚು. ಆಗ ಸತ್ವ ಇದ್ದರೆ ಮಾತ್ರ ಸ್ಕಿ್ರಪ್‌್ಟಚೆನ್ನಾಗಿರುತ್ತದೆ.

7. ಪ್ರಪಂಚದ ಸರ್ವಶ್ರೇಷ್ಠ ಸಿನಿಮಾಗಳನ್ನು ನೋಡುವುದು ಮತ್ತು ಅದರ ಸ್ಕಿ್ರಪ್‌್ಟಗಳನ್ನು ಪದೇ ಪದೇ ಓದುವುದು. ಇದು ತುಂಬಾ ಮುಖ್ಯವಾದ ಎಕ್ಸರ್‌ಸೈಸ್‌. ಸಿನಿಮಾ ಬರೆಯುವುದು ಹೇಗೆ ಮತ್ತು ಬರೆದ ಸಿನಿಮಾಗೂ ತೆರೆ ಮೇಲೆ ತಂದ ಸಿನಿಮಾಗೂ ಏನೇನು ಬದಲಾವಣೆಗಳಿವೆ, ಆ ಬದಲಾವಣೆಗಳು ಸಿನಿಮಾದಲ್ಲಿ ಹೇಗೆ ಪರಿಣಾಮ ಬೀರಿತು ಎಂಬುದು ತಿಳಿಯುತ್ತದೆ. ಉದಾಹರಣೆಗೆ ಒಂದು ಸ್ಕಿ್ರಪ್‌್ಟಓದುತ್ತಿದ್ದಾಗ ನಾನಾಗಿದ್ದರೆ ಹೀಗೆ ಮಾಡುತ್ತಿದ್ದೆ, ಈ ನಿರ್ದೇಶಕ ಹಾಗೆ ಮಾಡಿದ್ದಾನೆ, ಅವನು ಯಾಕೆ ಹಾಗೆ ಮಾಡಿರಬಹುದು ಎಂಬ ಪ್ರಶ್ನೆಗಳೆಲ್ಲಾ ಬರುತ್ತದೆ. ನಾನು ಹೇಗೆ ಮಾಡಬಹುದು ಅನ್ನುವುದು ತಲೆಯಲ್ಲಿ ಓಡುವುದಕ್ಕೆ ಶುರುವಾಗುತ್ತದೆ. ಇವೆಲ್ಲಾ ಕಾರಣದಿಂದ ಅವರು ಯಾಕೆ ಗ್ರೇಟ್‌ ಅನ್ನುವುದನ್ನು ಮಂಥನ ಮಾಡಿಕೊಂಡು ಗೊತ್ತಿಲ್ಲದೇ ಅರ್ಥಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

Latest Videos
Follow Us:
Download App:
  • android
  • ios