ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹನಿಟ್ರ್ಯಾಪ್‌ಗೆ ಬಲಿ ಎಂದ ಚರಿತ್, ಆರೋಪಗಳನ್ನು ನಿರಾಕರಿಸಿದ್ದಾರೆ. ಸಂತ್ರಸ್ತೆಗೆ ಹಣಕೊಟ್ಟಿದ್ದಾಗಿ, ಮಾಜಿ ಪತ್ನಿ ಮತ್ತು ಇತರರ ಷಡ್ಯಂತ್ರ ಇದೆ ಎಂದಿದ್ದಾರೆ. ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಸುಮಾರು 10 ವರ್ಷಗಳಿಂದ ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ಚರಿತ್ ಬಾಳಪ್ಪ ವಿರುದ್ಧ ಕೆಲವು ದಿನಗಳ ಹಿಂದೆ ಆರೋಪಗಳು ಕೇಳಿ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಮತ್ತು ವಿಡಿಯೋಗಳು ವೈರಲ್ ಆಗುತ್ತದೆ. ಇಲ್ಲಿದೆ ನಾನಾ ಆಂಗಲ್‌ಗಳನ್ನು ನೀಡಿ ಚರಿತ್ ಊರು ಬಿಟ್ಟು ಓಡಿ ಹೋಗಿದ್ದಾನೆ ಎನ್ನಲಾಗಿತ್ತು. ಹೀಗಾಗಿ ಸಂಪೂರ್ಣ ವಿವರಗಳ ಜೊತೆ ಚರಿತ್ ಸ್ಪಷ್ಟನೆ ನೀಡಿದ್ದಾರೆ.
'ಇತ್ತೀಚಿನ ದಿನಗಳಲ್ಲಿ ಹನಿಟ್ರಾಪ್ ಮಾಡುವುದು, ಮೀಟ್ ಆಂಡ್ ಗ್ರೀಟ್ ಅಂತ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುವುದು, ರಾಜಕಾರಣಿಗಳನ್ನು ಟಾರ್ಗೆಟ್ ಮಾಡುವುದು ಹೆಚ್ಚಾಗಿದೆ. ನಾನು ಎಲ್ಲೂ ಓಡೋಗಿಲ್ಲ. ನಾನು ಕ್ವಾರಂಟೈನ್ ಆಗಿದ್ದೆ. ಈ ಘಟನೆ ನಡೆದ ಮೇಲೆ ಕೆಲವು ದಿನಗಳ ಕಾಲ ಪೋಷಕರ ಜೊತೆಗಿದ್ದೆ ಈಗ ಬೆಂಗಳೂರಿಗೆ ಬಂದಿರುವುದು. ನನ್ನ ಮೇಲೆ ಹಾಕಿರುವ ಆರೋಪ ಲೈಂಗಿಕ ಕಿರುಕುಳ. ಆ ಹುಡುಗಿ ನನ್ನನ್ನು ಎಲ್ಲಿ ಭೇಟಿ ಮಾಡಿದ್ದಾಳೆ? ರೋಡ್‌ನಲ್ಲಿ ಕಿರುಕುಳ ಕೊಟ್ಟಿದ್ದೀನಾ? ಕಾರಲ್ಲಾ? ಅವರ ಮನೆಯಲ್ಲಿ ನನ್ನ ಮನೆಯಲ್ಲಿ...ಎಲ್ಲಿ ಆಗಿದೆ? ನಿನ್ನೆ ಮೊನ್ನೆ ಇಂಡಸ್ಟ್ರಿಗೆ ಬಂದಿರುವವನು ನಾನಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚರಿತ್ ಮಾತನಾಡಿದ್ದಾರೆ.
ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್ ಆಗೇಬಿಡ್ತು
'ಸುಮಾರು 10 ವರ್ಷಗಳಿಂದ ಇಂಡಸ್ಟ್ರಿಗೆ ಕಲಾ ಸೇವೆ ಮಾಡುತ್ತಿದ್ದೀನಿ. ಮೂರು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದೀನಿ ಮಲಯಾಳಂ, ತಲುಗು ಮತ್ತು ಕನ್ನಡ. ಈ ಜರ್ನಿಲ್ಲಿ ಎಷ್ಟೋ ಫೇಮೆಲ್ ಆರ್ಟಿಸ್ಟ್‌ಗಳ ಜೊತೆ ನಟಿಸಿದ್ದೀನಿ, ನೂರಾರು ಕಿರ ಆರ್ಟಿಸ್ಟ್‌ಗಳ ಜೊತೆ ಕೆಲಸ ಮಾಡಿದ್ದೀನಿ. ಆದರೆ ಈ ಸಂತ್ರಸ್ತೆ ಯಾವಾಗ ನನ್ನ ಜೊತೆ ಕೆಲಸ ಮಾಡಿದ್ದಾ? ತೆಲುಗು ಸೀರಿಯಲ್‌ನಲ್ಲಿ ವಿಲನ್ ಸೈಡ್ ಆಕ್ಟಿಂಗ್ ಮಾಡುವವರು, ಶೂಟಿಂಗ್ ಸಮಯದಲ್ಲಿ ನಮಗೆ ಒಂದೇ ಬಿಲ್ಡಿಂಗ್‌ನಲ್ಲಿ ಬೇರೆ ಬೇರೆ ರೂಮ್ ಕೊಟ್ಟಿದ್ದರು. ಬಡ ಕುಟುಂಬದಿಂದ ಬಂದಿರುವ ಹುಡುಗಿ ಎಂದು ಕಷ್ಟ ಹೇಳಿಕೊಂಡಾಗ ಪಾಪ ಅನಿಸುತ್ತದೆ. ಸ್ವಲ್ಪ ದಿನಗಳ ನಂತರ ನನ್ನ ಮೇಲೆ ಪ್ರೀತಿ ಹುಟ್ಟುತ್ತದೆ ನನ್ನನ್ನು ಬಿಟ್ಟಿರಲು ಆಗಲ್ಲ ಎನ್ನುತ್ತಾರೆ. ಹೀಗಾಗಿ ಸಮಯ ಕಳೆದರೆ ಗೊತ್ತಾಗುತ್ತದೆ ಎಂದು ಸ್ನೇಹಿತರಾಗಿರುತ್ತೀನಿ. ಆಗ ಅವರ ವ್ಯಕ್ತಿತ್ವದಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಸಂತ್ರಸ್ತೆ ತಂದೆ ಜೊತೆ ವಿಡಿಯೋ ಕಾಲ್ ಮಾಡಿಸಿದ್ದರು. ಇದರ ನಡುವೆ ತಂಗಿ ಮದುವೆ ತಯಾರಿ ಶುರುವಾಗುತ್ತದೆ ಆಗ ಹಣ ಸಹಾಯ ಕೇಳುತ್ತಾರೆ ಆಗ ನಾನು 1 ಲಕ್ಷ ಹಣ ಕೊಟ್ಟಿದ್ದೀನಿ. ನೀವು ಗೂಗಲ್ ಪೇ ಯಾಕೆ ಮಾಡಿದ್ದು ಎಂದು ಕೇಳುತ್ತಾರೆ. ಕೆಲವು ದಿನಗಳ ನಂತರ ನಾನು ಹಣ ವಾಪಸ್ ಕೇಳುತ್ತೀನಿ ಆಗ ವರ್ತನೆ ಬದಲಾಗುತ್ತದೆ. ಆಡಿಯೋ ರೆಕಾರ್ಡಿಂಗ್‌ನ ವಕೀಲರಿಗೆ ಕೊಟ್ಟಿದ್ದೀನಿ. ಎರಡು installmentನಲ್ಲಿ ಹಣ ವಾಪಸ್ ಕೊಡುತ್ತಾರೆ' ಎಂದು ಚರಿತ್ ಹೇಳಿದ್ದಾರೆ.
ಮಗ ಚೆನ್ನಾಗಿ ಆಕ್ಟ್ ಮಾಡ್ತಿಲ್ಲ ಅಂತ ಗರಂ ಆದ ದಿನಾಕರ್ ತೂಗುದೀಪ; ಈ ವ್ಯಕ್ತಿಯ ಮಾತಿಗೆ ಓಕೆ ಅಂದುಬಿಟ್ಟರಂತೆ
'ಸುಮಾರು 3 ಗಂಟೆ ಸಮಯದಲ್ಲಿ ನನ್ನ ತಂದೆಗೆ ಕರೆ ಮಾಡುತ್ತಾರೆ...ಏನ್ ನಿಮ್ಮ ಮಗನಿಗೆ ಕುಡಿಸಿದ್ದೀರಾ ನಮ್ಮ ಜೊತೆ ಜಗಳ ಮಾಡುತ್ತಿದ್ದಾರೆ. ಅದೇ ಸಮಯಕ್ಕೆ ನನಗೂ ಬೆದರಿಕೆ ಕರೆ ಮಾಡುತ್ತಾಳೆ. ಹುಡುಗಿಗೆ ಸಪೋರ್ಟ್ ಮಾಡಿದ ಹುಡುಗನನ್ನು ಹುಡುಕಿದ ಮೇಲೆ ಅವರ ಫ್ಯಾಮಿಲಿ ಕ್ಷಮೆ ಕೇಳುತ್ತಾರೆ ಹೀಗಾಗಿ ಅಲ್ಲಿಗೆ ಬಿಡುತ್ತೀವಿ. ಈ ಘಟನೆಯಲ್ಲಿ ನನ್ನ ಮಾಜಿ ಹೆಂಡತಿ ಕೈವಾಡ ಕೂಡ ಇದೆ. ಇದು ಖಂಡಿತಾ ಪ್ಲ್ಯಾನ್ ಮಾಡಿ ಮಾಡುತ್ತಿರುವ ಸ್ಕಾಮ್. ನಾನು ತುಳು ಭಾಷೆಯಲ್ಲಿ ಮಾತನಾಡಿರುವ ಆಡಿಯೋ ಸ್ಪಷ್ಟವಾಗಿರುವ ಕಾರಣ ದೊಡ್ಡ ಜಗಳ ಮಾಡುತ್ತಾರೆ. ನನ್ನ ಮಾಜಿ ಹೆಂಡತಿಗೆ ಮತ್ತೊಬ್ಬ ಹುಡುಗನ ಜೊತೆ ಸ್ನೇಹ ಇರುತ್ತದೆ, ನಾನು ಏನೂ ಮಾಡುತ್ತಿಲ್ಲ ಎಂದು ಹೆಂಡತಿ ಒಪ್ಪಿಕೊಳ್ಳುತ್ತಾರೆ. ವೈರಲ್ ಆಗುತ್ತಿರುವ ವಿಡಿಯೋಗೂ ಈಗ ನಡೆಯುತ್ತಿರುವ ಘಟನೆಯನ್ನು ಲಿಂಕ್ ಮಾಡುತ್ತಾರೆ' ಎಂದಿದ್ದಾರೆ ಚರಿತ್.
ಎಲಿಮಿನೇಟ್ ಅಂತ ಬೇಜಾರ್ ಮಾಡ್ಕೋಬೇಡ ದೋಸ್ತ, ಮನೆಯಲ್ಲಿ ಲಕ್ಷ್ಮಿ ಕಾಯ್ತಿದ್ದಾರೆ; ಧನರಾಜ್‌ಗೆ ಫ್ಯಾನ್ಸ್ ಧೈರ್ಯ
