ಮಗ ಚೆನ್ನಾಗಿ ಆಕ್ಟ್ ಮಾಡ್ತಿಲ್ಲ ಅಂತ ಗರಂ ಆದ ದಿನಾಕರ್ ತೂಗುದೀಪ; ಈ ವ್ಯಕ್ತಿಯ ಮಾತಿಗೆ ಓಕೆ ಅಂದುಬಿಟ್ಟರಂತೆ
ಮಗನನ್ನು ಲಾಂಚ್ ಮಾಡಿದ ದಿನಾಕರ್. ಆಕ್ಟಿಂಗ್ ಬರಲಿಲ್ಲ ಎಂದು ತಲೆ ಕೆಡಿಸಿಕೊಂಡು ಏನ್ ಮಾಡಿದ್ದರಂತೆ ಗೊತ್ತಾ

ದಿನಾಕರ್ ತೂಗುದೀಪ ನಿರ್ದೇಶನ ರಾಯಲ್ ಸಿನಿಮಾ ಇದೇ ಜನವರಿ 24ರಂದು ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ವಿರಾಟ್, ಸಂಜನಾ ಆನಂದ್ ಮತ್ತು ಛಾಯ ಸಿಂಗ್ ಅಭಿನಯಿಸಿದ್ದಾರೆ. ನಾಯಕ ಬಾಲ್ಯದ ಚಿತ್ರೀಕರಣವನ್ನು ದಿನಾಕರ್ ಪುತ್ರ ಸೂರ್ಯ ಮಾಡಿದ್ದಾನೆ. ಈಗಾಗಲೆ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತೂಗುದೀಪ ಮೊಮ್ಮಗ ಸೂರ್ಯನ ಆಕ್ಟಿ<ಗ್ ಮೆಚ್ಚುತ್ತಿರುವ ಜನರಿಗೆ ಶೂಟಿಂಗ್ ಸೆಟ್‌ನಲ್ಲಿ ಏನಾಯ್ತು ಎಂದು ಗೊತ್ತಿಲ್ಲ. ದಿನಾಕರ್ ಮಾತುಗಳು ಇಲ್ಲಿದೆ.
'ಮೊದಲ ದಿನವೇ ಛಾಯ ಸಿಂಗ್ ಮೇಡಂ ಜೊತೆ ಚಿತ್ರೀಕರಣ ಮಾಡಿದ್ದು. ಮೊದಲ ಭಾಗ ತುಂಬಾ ಚೆನ್ನಾಗಿ ಮಾಡಿದ ಆದರೆ ಎರಡನೇ ಭಾಗ ಮುಖ್ಯವಾದ ಸೀನ್ ಮಾಡಲು ಸೈಕಲ್ ಹೊಡೆಯಲು ಶುರು ಮಾಡಿಬಿಟ್ಟ. ಏನ್ ಮಾಡಿದರೂ ಸರಿಯಾಗಿ ಮಾಡಲಿಲ್ಲ ಅಂತ ಪ್ಯಾಕಪ್ ಮಾಡಿಬಿಟ್ಟೆ. ಅಂದು ಮೊಮ್ಮಗ ಮೊದಲ ಸಲ ಚಿತ್ರೀಕರಣ ಮಾಡುತ್ತಿದ್ದಾನೆ ನನ್ನ ತಾಯಿ ಮೀನಾ ತೂಗುದೀಪಾ, ಪತ್ನಿ ಮತ್ತು ಪುತ್ರಿ ಸೆಟ್‌ಗೆ ಆಗಮಿಸಿದ್ದರು. ಕಾರಿನಲ್ಲಿ ಮನೆಗೆ ಹೋಗುವಾಗ ಪಾಪ ಚಿಕ್ಕ ಹುಡುಗ ಕಣೋ ಏನೋ ತಪ್ಪು ಮಾಡಿದ್ದಾನೆ ಇನ್ನೊಂದು ಸಲ ಸಮಯ ಕೊಟ್ಟು ಮಾಡಿಸಿದು ಅಂದ್ರು. ಅಯ್ಯೋ ನೀನು ಸುಮ್ಮನೆ ಹೋಗಮ್ಮ ಅಂತ ನಾನು ಹೇಳಿದೆ. ಒಂದು ದಿನ ಶೂಟಿಂಗ್ ಮಾಡಿಲ್ಲ ಅಂದರೆ ನಿರ್ಮಾಪಕರಿಗೆ ಎಷ್ಟು ಕಷ್ಟವಾಗುತ್ತದೆ ಅಂತ ನನಗೆ ಗೊತ್ತಿದೆ' ಎಂದು ದಿನಾಕರ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಎಲಿಮಿನೇಟ್ ಅಂತ ಬೇಜಾರ್ ಮಾಡ್ಕೋಬೇಡ ದೋಸ್ತ, ಮನೆಯಲ್ಲಿ ಲಕ್ಷ್ಮಿ ಕಾಯ್ತಿದ್ದಾರೆ; ಧನರಾಜ್‌ಗೆ ಫ್ಯಾನ್ಸ್ ಧೈರ್ಯ
'ಆಗ ನನ್ನ ಮಗಳು ಕೂಡ ಅಪ್ಪ ಪಾಪ ಸೂರ್ಯನಿಗೆ ಒಂದೇ ಒಂದು ಚಾನ್ಸ್ ಕೊಡಿ ಅಂತಿದ್ದಾಳೆ. ನಾನು ಸಿನಿಮಾಗೋಸ್ಕರ ಏನ್ ಬೇಕಿದ್ದರೂ ಮಾಡುತ್ತೀನಿ ಎಂದು ನನ್ನ ಪತ್ನಿಗೆ ಗೊತ್ತು ಹೀಗಾಗಿ ಏನೂ ಹೇಳಿಲ್ಲ. ಮಾರನೇ ದಿನ ಬೆಳಗ್ಗೆ ನನ್ನ ಮಗನ ಪಾತ್ರಕ್ಕೆ ಯಾರನ್ನು ಕರೆಯುವುದು ಎಂದು ಯೋಚನೆ ಮಾಡುತ್ತಿದ್ದ ಸರಿಯಾದ ಸಮಯಕ್ಕೆ ಜಯಣ್ಣ ಕರೆ ಮಾಡಿದ್ದರು. ಸಾಮಾನ್ಯವಾಗಿ ಜಯಣ್ಣ ಅವರ ಫೋನ್ ಬೆಳಗ್ಗೆ 11 ಗಂಟೆಗೆ ಆನ್ ಆಗುತ್ತದೆ ಆದರೆ ಅಂದು ಬೆಳಗ್ಗೆ 9 ಗಂಟೆಗೆ ಕಾಲ್ ಮಾಡಿಬಿಟ್ಟಿದ್ದಾರೆ. 'ಅಪ್ಪಾಜಿ ಒಂದು ರಿಕ್ವೆಸ್ಟ್ ಇದೆ. ನೀನು ಏನೋ ಸೂರ್ಯನನ್ನು ರೀ-ಪ್ಲೇಸ್ ಮಾಡಿಸುತ್ತೀನಿ ಮತ್ತೊಬ್ಬರ ಬಳಿ ಅಕ್ಟ್ ಮಾಡಿಸುತ್ತೀನಿ ಅಂತಿದ್ಯಾ ಅಂತೆ ಆದರೆ ನನಗೆ ಸೆಂಟಿಮೆಂಟ್ ಇದೆ ಸ್ವಲ್ಪ ಸಮಯ ತೆಗೆದುಕೊಂಡರೂ ಪರ್ವಾಗಿಲ್ಲ ಅವನೇ ಆ ಪಾತ್ರ ಮಾಡಬೇಕು. ದಯವಿಟ್ಟು ಅವನಿಗೆ ತಯಾರಿ ಮಾಡಿಸಿ ಪಾತ್ರ ಮಾಡಿಬಿಡಿ ಎಂದು ಜಯಣ್ಣ ಹೇಳಿದ್ದರು' ಎಂದು ದಿನಾಕರ್ ಹೇಳಿದ್ದಾರೆ.
ಇದ್ದಕ್ಕಿದ್ದಂತೆ ಶೂಟಿಂಗ್ ಕ್ಯಾನ್ಸಲ್ ಆಯ್ತು ಅಂದ್ರೆ ಅತ್ತೆಗೆ ಅರ್ಥ ಮಾಡಿಸುವ ಅಗತ್ಯವಿಲ್ಲ: 'ಲಕ್ಷ್ಮಿನಿವಾಸ' ಚಂದನಾ
'ಟ್ರೈನಿಂಗ್ ಕೊಟ್ಟ ಮೇಲೆ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾನೆ. ಅಕ್ಷತಾ ಪಾಂಡವಪುರ ಅವರ ಬಳಿ ಒಂದು ತಿಂಗಳು ಟ್ರೈನಿಂಗ್ ಪಡೆದಿದ್ದಾರೆ. ಸೇರಿಸಿದ ದಿನವೇ ಸ್ಕ್ರಿಪ್ಟ್ ಕೊಡಿ ಸರ್ ಎಂದು ಆ ಪಾತ್ರಕ್ಕೆ ತಕ್ಕಂತೆ ತಯಾರಿ ಮಾಡಿದ್ದರು. ಮಗ ಯಾವಾಗ ಸರಿ ಮಾಡಲಿಲ್ಲ ಅಯ್ಯೋ ತೂಗುದೀಪ ಅವರ ಮೊಮ್ಮಗ, ದಿನಾಕರ್ ಮಗ, ದರ್ಶನ್ ತಮ್ಮನ ಮಗ ನಟಿಸಲಿಲ್ಲ ಅಂದ್ರೆ ಜನರು ನೆಪೋಟಿಸಂ ಅಂತಾರೆ ಅನ್ನೋ ಭಯ ಶುರುವಾಗಿತ್ತು' ಎಂದಿದ್ದಾರೆ ದಿನಾಕರ್.
1 ವರ್ಷ ಹಾಡಲು ಮಾತನಾಡಲು ಆಗುತ್ತಿರಲಿಲ್ಲ; ಗಾಯಕಿ ಅರ್ಚನಾ ಹಂಚಿಕೊಂಡ ಕಣ್ಣೀರಿನ ಕಥೆ