- Home
- Entertainment
- TV Talk
- ಎಲಿಮಿನೇಟ್ ಅಂತ ಬೇಜಾರ್ ಮಾಡ್ಕೋಬೇಡ ದೋಸ್ತ, ಮನೆಯಲ್ಲಿ ಲಕ್ಷ್ಮಿ ಕಾಯ್ತಿದ್ದಾರೆ; ಧನರಾಜ್‌ಗೆ ಫ್ಯಾನ್ಸ್ ಧೈರ್ಯ
ಎಲಿಮಿನೇಟ್ ಅಂತ ಬೇಜಾರ್ ಮಾಡ್ಕೋಬೇಡ ದೋಸ್ತ, ಮನೆಯಲ್ಲಿ ಲಕ್ಷ್ಮಿ ಕಾಯ್ತಿದ್ದಾರೆ; ಧನರಾಜ್‌ಗೆ ಫ್ಯಾನ್ಸ್ ಧೈರ್ಯ
ಧನರಾಜ್ ಎಲಿಮಿನೇಟ್ ಆಗಿದ್ದಕ್ಕೆ ಬೇಸರ ವ್ಯಕ್ತ ಪಡಿಸುತ್ತಿರುವ ಅಭಿಮಾನಿಗಳು. ಸಾಮಾಜಿಕ ಜಾಲತಾಣದಲ್ಲಿ ಸಿಕ್ತು ದೊಡ್ಡ ಮಟ್ಟದಲ್ಲಿ ಬೆಂಬಲ.

ಇಡೀ ಕುಟುಂಬದ ಜೊತೆ ಕಾಮಿಡಿ ವಿಡಿಯೋಗಳನ್ನು ಮಾಡಿಕೊಂಡು ಮನೋರಂಜನೆ ನೀಡುತ್ತಾ 'ಗಿಚ್ಚಿ ಗಿಲಿಗಿಲಿ' ಕಾರ್ಯಕ್ರಮದಲ್ಲಿ ಅವಕಾಶ ಗಿಟ್ಟಿಸಿಕೊಂಡ ಪುತ್ತೂರು ಕಿಂಗ್ ಧನರಾಜ್ ಆಚಾರ್ಯ.
ಧನರಾಜ್ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ಕೊಟ್ಟಿದ್ದು ಬಿಗ್ ಬಾಸ್ ಸೀಸನ್ 11. ಆರಂಭದಲ್ಲಿ ಭಯ ಭಯದಿಂದ ಆಟ ಶುರು ಮಾಡಿದ ಧನರಾಜ್ ಒಂದು ವಾರ ಕ್ಯಾಪ್ಟನ್ ಆದರು ಮತ್ತೊಂದು ವಾರ ಉತ್ತಮ ಪಡೆರು.
ಧನರಾಜ್ ಮತ್ತು ಹನುಮಂತು ಸ್ನೇಹ ಕನ್ನಡಿಗರ ಮನಸ್ಸು ಗೆದ್ದಿತ್ತು. ಆದರೆ ಫಿಲಾನೆ ವಾರ ಮುಟ್ಟದೆ ಧನರಾಜ್ ಎಲಿಮಿನೇಟ್ ಆಗಿ ಹೊರ ಬಂದಿರುವುದು ನಿಜಕ್ಕೂ ಶಾಕಿಂಗ್ ವಿಚಾರವೇ. ಹೀಗಾಗಿ ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ.
ಹೌದು! ಧನರಾಜ್ ನೀನು ಎಲಿಮಿನೇಟ್ ಆಗಿದ್ದು ಪರ್ವಾಗಿಲ್ಲ ಆದರೆ ನೀವು ನಮ್ಮ ಮನಸ್ಸು ಗೆದ್ದಿದ್ದೀರಿ ಮನೆಯಲ್ಲಿ ಪುಟ್ಟ ಲಕ್ಷ್ಮಿ ಕಾಯುತ್ತಿದ್ದಾಳೆ ಧೈರ್ಯವಾಗಿ ಬನ್ನಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಮಾರು ಎರಡು ಮೂರು ಗಂಟೆಗಳ ಕಾಲ ಧನರಾಜ್‌ರನ್ನು ಟ್ರೆಂಡಿಂಗ್‌ನಲ್ಲಿ ಇಟ್ಟಿದ್ದರು. ಧನರಾಜ್ ಫ್ಯಾನ್ಸ್ ಧನರಾಜ್ ಎಂಬ ಹ್ಯಾಷ್‌ಟ್ಯಾಕ್ ಟ್ರೆಂಡ್ ಮಾಡಿದ್ದರು.
ಧನರಾಜ್ ಮತ್ತು ಪತ್ನಿ ಪ್ರಜ್ಞಾ ಮಗಳು ಹುಟ್ಟಿದ ಸಂಭ್ರಮದಲ್ಲಿದ್ದರು. ಮಗು ಹುಟ್ಟಿದ ಗಳೆಗೆಯಲ್ಲಿ ಧನರಾಜ್‌ಗೆ ಬಿಗ್ ಬಾಸ್ ಆಫರ್ ಕರೆ ಬಂದಿದೆ. ಮಗಳು ತಂದುಕೊಟ್ಟ ಅದೃಷ್ಟ ಎಂದು ಪದೇ ಪದೇ ಹೇಳುತ್ತಿರುತ್ತಾರೆ.