90ರ ದಶಕದವರೆಗೂ 36 ಅಥವಾ 52 ಸಿನಿಮಾ ಅನ್ನೋದು ವರ್ಷದಲ್ಲಿ ತೆರೆ ಕಾಣುವ ಸಿನಿಮಾಗಳ ಸಂಖ್ಯೆ ಆಗಿತ್ತು. ಆ ಹೊತ್ತಿಗೆ ಅದೇ ಹೆಚ್ಚು. ಆಗ ವರ್ಷದಲ್ಲಿ ಬಂದು ಹೋಗುತ್ತಿದ್ದ ಸಿನಿಮಾ ಸಂಖ್ಯೆ ಇವತ್ತು ಬರೀ ಒಂದು ತಿಂಗಳಲ್ಲಿ ತೆರೆ ಕಾಣುತ್ತಿವೆ ಎನ್ನುವುದು ಸೋಜಿಗ. ಹೀಗೆಲ್ಲಾ ಆಗುವುದರಿಂದ ಚಿತ್ರರಂಗಕ್ಕೆ ನಷ್ಟವೇ ಹೊರತು ಲಾಭವಂತೂ ಕಾಣುತ್ತಿಲ್ಲ. ಅದಕ್ಕೆ ಪರಿಹಾರ ಸಿಗುವ ಸಾಧ್ಯತೆಯೂ ಸದ್ಯಕ್ಕಂತೂ ಗೋಚರಿಸುತ್ತಿಲ್ಲ.

ಅತಿವೃಷ್ಟಿಯಿಂದ ಆಗುತ್ತಿರುವ ಸಮಸ್ಯೆಗಳು

ಥಿಯೇಟರ್‌ ಸಮಸ್ಯೆ. ಮತ್ತೊಂದು ಸಿನಿಮಾಗೆ ಜಾಗ ಬಿಟ್ಟುಕೊಡಬೇಕಾದ ಅನಿವಾರ್ಯತೆಯಲ್ಲಿ ಸಿನಿಮಾ ಚೆನ್ನಾಗಿದ್ದರೂ ಮುಂದಿನ ವಾರಕ್ಕೆ ಉಳಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ. ಹೀಗಾಗಿ ನಮ್ಮವರ ಮಧ್ಯೆಯೇ ಅಘೋಷಿತ ಸ್ಪರ್ಧೆ ಏರ್ಪಟ್ಟಿದೆ ಮತ್ತು ಹಲವು ಸಿನಿಮಾಗಳು ತಮ್ಮ ಜಾಗವನ್ನು ಬಿಟ್ಟುಕೊಡಬೇಕಾಗಿ ಬಂದಿದೆ. ಪ್ರೇಕ್ಷಕರಿಗೂ ಒಂದರಹಿಂದೊಂದು ಸಿನಿಮಾ ನೋಡಲಾಗುವುದಿಲ್ಲ. ಹೀಗೆ ಗೊಂದಲದಲ್ಲೇ ಸಿನಿಮಾಗಳು ಸೋಲುತ್ತಿವೆ.

ಇಷ್ಟರಲ್ಲಿ ಮೆಚ್ಚುಗೆ ಗಳಿಸಿದ್ದು

- ದಿಯಾ

ಚಿತ್ರ ವಿಮರ್ಶೆ : ದಿಯಾ

- ಲವ್‌ ಮಾಕ್‌ಟೇಲ್‌

ಚಿತ್ರ ವಿಮರ್ಶೆ: ಲವ್ ಮಾಕ್ಟೇಲ್

- ಪಾಪ್‌ಕಾರ್ನ್‌ ಮಂಕಿ ಟೈಗರ್‌

ಚಿತ್ರ ವಿಮರ್ಶೆ: ಪಾಪ್‌ಕಾರ್ನ್‌ ಮಂಕಿ ಟೈಗರ್

- ಮಾಯಾಬಜಾರ್‌

ಚಿತ್ರ ವಿಮರ್ಶೆ: ಮಾಯಾಬಜಾರ್‌

ಜನವರಿ

ಮೊದಲ ವಾರ - 2

ಎರಡನೇ ವಾರ- 5

ಮೂರನೇ ವಾರ-6

ನಾಲ್ಕನೇ ವಾರ -7

ಫೆಬ್ರವರಿ

ಮೊದಲನೇ ವಾರ- 9

ಎರಡನೇ ವಾರ- 11

ಮೂರನೇ ವಾರ -6

ನಾಲ್ಕನೇ ವಾರ- 9

129 ಕೋಟಿಗೂ ಅಧಿಕ ಬಜೆಟ್‌

ಎರಡು ತಿಂಗಳಲ್ಲಿ ತೆರೆ ಕಂಡ ಸಿನಿಮಾಗಳ ನಿರ್ಮಾಣದ ಬಜೆಟ್‌ 129 ಕೋಟಿ ಅಧಿಕ. ಪ್ರತಿ ಸಿನಿಮಾಕ್ಕೂ ಸರಾಸರಿ 1.5 ಕೋಟಿ ರೂ ಖರ್ಚಾಗಿದೆ. ಇದರಲ್ಲಿ ವಾಪಾಸ್‌ ಬಂದ ಹಣ ಎಷ್ಟುಅಂತ ಲೆಕ್ಕ ಹಾಕುತ್ತಾ ಹೋದರೆ ಚಿತ್ರೋದ್ಯಮದ ಮಂದಿ ಬೆಚ್ಚಿ ಬೀಳುವುದು ಗ್ಯಾರಂಟಿ. ಯಾಕಂದ್ರೆ ಅಷ್ಟುಸಿನಿಮಾದಿಂದ ಆದ ಕಲೆಕ್ಷನ್‌ ಅರ್ಧದಷ್ಟೂಇಲ್ಲ. ಬಹುತೇಕ ಸಿನಿಮಾ ನಿರ್ಮಾಪಕರಿಗೆ ಹಾಕಿದ ಬಂಡವಾಳವೂ ವಾಪಸ್‌ ಬಂದಿಲ್ಲ. ಕೆಲವರದಂತೂ ಬಂಡವಾಳದ ಕತೆ ಹೊಳೆಯಲ್ಲಿ ತೇಲಿಬಿಟ್ಟಂತಾಗಿದೆ. ಸಿನಿಮಾ ನಿರ್ಮಾಣದ ದೃಷ್ಟಿಯಲ್ಲಿ ಚಿತ್ರೋದ್ಯಮ ಬೆಳೆಯುತ್ತಿದೆ. ಬಂಡವಾಳ ಹರಿದುಬರುತ್ತಿದೆ. ಸಾಕಷ್ಟುಜನರಿಗೆ ಕೆಲಸ ಸಿಗುತ್ತಿದೆ ಎನ್ನುವುದು ಆಶಾದಾಯಕ ಬೆಳವಣಿಗೆಯಾದರೂ, ಬಂಡವಾಳ ಹಾಕಿದವರಿಗೆ ಹಣ ವಾಪಾಸ್‌ ಬರುತ್ತಿಲ್ಲ ಎನ್ನುವುದು ಒಳ್ಳೆಯ ಬೆಳವಣಿಗೆ ಅಲ್ಲ.

#Newsin100Seconds I ಕ್ಷಣದ ಪ್ರಮುಖ ಸುದ್ದಿಗಳು

"