ಚಿತ್ರ ವಿಮರ್ಶೆ: ಲವ್ ಮಾಕ್ಟೇಲ್
ಮೂರು ಪ್ರೇಮ ಕತೆಗಳು. ಅದರಲ್ಲೊಂದು ಸಂಸಾರ, ಮತ್ತೊಂದು ಬ್ರೇಕಪ್, ಇನ್ನೊಂದು ವನ್ ಸೈಡ್ ಲವ್ವು. ಇದರ ಜತೆಗೆ ಕೊನೆಯಲ್ಲೊಂದು ಟ್ರ್ಯಾಜಿಡಿ. ಇವಿಷ್ಟುಅಂಶಗಳನ್ನು ಇಟ್ಟುಕೊಂಡು ಡಾರ್ಲಿಂಗ್ ಕೃಷ್ಣ ನಟನೆ, ನಿರ್ಮಾಣ, ನಿರ್ದೇಶನ ಕೂಡ ಮಾಡಿರುವ ಸಿನಿಮಾ ‘ಲವ್ ಮಾಕ್ಟೇಲ್’.
ಆರ್ ಕೇಶವಮೂರ್ತಿ
ಆರಂಭದಲ್ಲಿ ಈ ಲವ್ವು ಕಾಕ್‌ಟೈಲ್ ಆಗಿ, ಕೊನೆಯಲ್ಲಿ ದುರಂತ ಅಂತ್ಯ ಕಾಣುವ ಹೊತ್ತಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಹೈಸ್ಕೂಲ್, ಕಾಲೇಜು, ಉದ್ಯೋಗ ಈ ಮೂರು ಹಂತಗಳಲ್ಲಿ ಹುಟ್ಟಿಕೊಳ್ಳುವ ಪ್ರೀತಿಯಲ್ಲಿ ಯಾವುದು ಶಾಶ್ವತ, ಯಾವ ಪ್ರೀತಿ ನಮ್ಮೊಂದಿಗೆ ಇರುತ್ತದೆ ಎಂಬುದನ್ನು ಹೇಳುವ ಹಲವು ಚಿತ್ರಗಳು ಈಗಾಗಲೇ ಬಂದಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಈ ‘ಲವ್ ಮಾಕ್ಟೇಲ್’. ಹಾಗೆ ತಮ್ಮ ಪ್ರೇಮ ಪುಟಗಳನ್ನು ಮತ್ತೊಬ್ಬರಿಗೆ ಹೇಳುತ್ತ ಹೋಗುವ ನಿರೂಪಣಾ ಶೈಲಿ ಕೂಡ ಹೊಸದಲ್ಲ. ಕೃಷ್ಣ ನಿರ್ದೇಶಕರಾಗಿದ್ದಾರೆ, ಚಿತ್ರದ ನಾಯಕಿಯರ ಪೈಕಿ ಮಿಲನಾ ನಾಗರಾಜ್ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ ಎಂಬುದು ಇಲ್ಲಿ ಹೊಸದು!
ದುರಂತದಲ್ಲೇ ಅಂತ್ಯ ಕಾಣುವ ಪ್ರೇಮ ಪಾನೀಯ ಶುರುವಾಗುವುದು ಶಾಲಾ ದಿನಗಳಿಂದಲೇ. ಹೈಸ್ಕೂಲ್‌ನಲ್ಲಿ ಇದ್ದಾಗ ತನ್ನ ಸಹ ಪಾಠಿಯನ್ನು ನೋಡಿ ಪ್ರೀತಿಸುವ ಆದಿ, ಕಾಲೇಜಿಗೆ ಬರುವ ಹೊತ್ತಿಗೆ ಮತ್ತೊಬ್ಬಳ ಪ್ರೇಮಕ್ಕೆ ಸಿಲುಕುತ್ತಾನೆ. ಆಕೆ, ಅಗರ್ಭ ಶ್ರೀಮಂತೆ. ಇವರಿಬ್ಬರ ಪ್ರೀತಿಗೆ ಆ ಶ್ರೀಮಂತವೇ ಅಡ್ಡಿಯಾಗುತ್ತಿದೆ ಎನ್ನುವ ಹೊತ್ತಿಗೆ ಆದಿ ಮೈಸೂರಿನಿಂದ ಬೆಂಗಳೂರಿಗೆ ಬಂದಿರುತ್ತಾನೆ. ಇಲ್ಲೊಂದು ಉದ್ಯೋಗ ಮಾಡಿಕೊಳ್ಳುತ್ತ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಸಾಹಸ ಮಾಡುತ್ತಾನೆ. ಕಾಲೇಜಿನಲ್ಲಿ ಕೈ ಹಿಡಿದವಳು ನಡು ದಾರಿಯಲ್ಲಿ ಬಿಟ್ಟು ಹೋಗುತ್ತಾಳೆ. ಚಿಂತೆಗೀಡಾದವನಿಗೆ ಬೆಂಗಳೂರಿನಲ್ಲಿ ಮತ್ತೊಂದು ಹುಡುಗಿ ಸಿಗುತ್ತಾಳೆ. ಹಿಂದಿನವಳ ನೆನಪಿನಿಂದ ಹೊರ ಬರುವ ಮೊದಲೇ ಈಕೆಯ ಬೆರಳಿಗೆ ರಿಂಗು ತೊಡಿಸಿ, ಮದುವೆ ಮಾಡಿಕೊಳ್ಳುವ ಆಸೆ ವ್ಯಕ್ತಪಡಿಸುತ್ತಾನೆ. ಈ ನಡುವೆ ಕಾಲೇಜಿನಲ್ಲಿ ಬಿಟ್ಟು ಹೋದ ಹುಡುಗಿ ಮರಳಿ ಬರುತ್ತಾಳೆ. ಹಾಗಾದರೆ ಆದಿಯ ಪ್ರೇಮದ ಮುಂದಿನ ಹಾದಿ ಯಾವುದು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
ಚಿತ್ರ ವಿಮರ್ಶೆ: ನಾನು ಮತ್ತು ಗುಂಡ
ಮುಂದೆ ತಾನು ಇಷ್ಟಪಟ್ಟಹುಡುಗಿಯನ್ನು ಮದುವೆ ಆಗುತ್ತಾನೆ. ಆಕೆ ಕ್ಯಾನ್ಸರ್‌ನಿಂದ ಸಾವು ಕಾಣುತ್ತಾಳೆ. ತನ್ನ ಈ ಎಲ್ಲ ಕತೆಯನ್ನು ನೆನಪುಗಳ ಡೈರಿಯಂತೆ ಮತ್ತೊಬ್ಬ ಹುಡುಗಿ ಮುಂದೆ ಆದಿ ಹೇಳುತ್ತಾ ಹೋಗುತ್ತಾನೆ. ಅಲ್ಲಲ್ಲಿ ನಗಿಸುವ ಸಂಭಾಷಣೆಗಳು, ಬೇಡ ಎಂದರೂ ಸಾಧ್ಯವಾದಷ್ಟುಹಿಗ್ಗಿಸಿರುವ ಚಿತ್ರಕತೆ, ರಘು ದೀಕ್ಷಿತ್ ಸಂಗೀತ ಮತ್ತು ಹಾಡುಗಳು ನಾಯಕನ ಈ ಪ್ರಯಾಣವನ್ನು ಆವರಿಸಿಕೊಳ್ಳುತ್ತವೆ. ರಘು ದೀಕ್ಷಿತ್ ಸಂಗೀತ, ಶ್ರೀ ಕ್ರೇಜಿ ಮೈಂಡ್ಸ್ ಕ್ಯಾಮೆರಾ ಕಣ್ಣು ಚಿತ್ರದ ಬೆನ್ನೆಲುಬು ಎನ್ನಬಹುದು. ಚಿಕ್ಕ ಕತೆಯನ್ನು ಸಾಧ್ಯವಾದಷ್ಟುಎಳೆದಿರುವುದೇ ಇಲ್ಲಿನ ಮೈನಸ್. ಜತೆಗೆ ಚಿತ್ರದ ಮೂರು ವಿಭಾಗಗಳಲ್ಲು ನಿಭಾಯಿಸಿರುವ ಒತ್ತಡ ಹಾಗೂ ಭಾರ ಆದಿ ಪಾತ್ರದಾರಿ ಕೃಷ್ಣ ಅವರಲ್ಲಿ ಕಾಣುತ್ತದೆ. ಉಳಿದಂತೆ ಚಿತ್ರಕ್ಕೆ ಬಳಸಿರುವ ಸಂಭಾಷಣೆಗಳು ಚೆನ್ನಾಗಿವೆ. ಮಿಲನ ನಾಗರಾಜ್‌ರನ್ನು ತೆರೆ ಮೇಲೆ ನೋಡುವುದೇ ಚಂದ.
ಚಿತ್ರ ವಿಮರ್ಶೆ: ಕಾಣದಂತೆ ಮಾಯವಾದನು ...