ತನ್ನಿಂದ ದೈವಕ್ಕೆ ಅಪಮಾನವಾಯ್ತೇನೋ ಅನ್ನೋ ನೋವು ರಿಷಬ್ಗೂ ಕಾಡ್ತಾ ಇರುವಂತೆ ಇದೆ. ತನ್ನ ಬಗ್ಗೆ ಬರ್ತಿರೋ ಟೀಕೆ ಟಿಪ್ಪಣಿಗಳು ನೋವು ತಂದಂತೆ ಕಾಣ್ತಾ ಇದೆ. ಸೋ ದೈವ ಕಣ್ಣೀರು ಸುರಿಸಬೇಡ ಅಂತ ಅಭಯ ನೀಡಿದೆ. ಅಲ್ಲಿಗೆ ರಿಷಬ್ಗೆ ದೈವಬಲ ಸಿಕ್ಕಂತೆ ಆಗಿದೆ.
ಪಂಜುರ್ಲಿ ದೈವದ ಅಭಯ
ಕಾಂತಾರ (Kantara 1) ಯಶಸ್ಸಿನಿಂದ ರಿಷಬ್ ಶೆಟ್ಟಿಗೆ (Rishab Shetty) ಅದೆಷ್ಟು ಪ್ರಶಂಸೆ, ಪ್ರಶಸ್ತಿ ಸಿಕ್ಕವೋ ಅಷ್ಟೇ ವಿರೋಧ ಕೂಡ ವ್ಯಕ್ತವಾಯ್ತು. ಇತ್ತೀಚಿಗೆ ರಣ್ವೀರ್ ಸಿಂಗ್ ಗೋವಾ ಫಿಲ್ಮ್ ಫೆಸ್ಟ್ ವೇದಿಕೆ ಮೇಲೆ ದೈವದ ಅನುಕರಣೆ ಮಾಡಿ ವಿವಾದ ಎಬ್ಬಿಸಿದ್ರು. ಆಗಲೂ ರಿಷಬ್ರನ್ನ ಟೀಕೆ ಮಾಡಲಾಗಿತ್ತು. ಇದೀಗ ಇದೆಲ್ಲಕ್ಕೂ ಉತ್ತರ ಅನ್ನುವಂತೆ ದೈವ ರಿಷಬ್ಗೆ ಸಂದೇಶವೊಂದನ್ನ ಕೊಟ್ಟಿದೆ.
ಟೀಕೆ, ಟಿಪ್ಪಣಿಗಳಿಂದ ಬೇಸರಗೊಂಡ್ರಾ ರಿಷಬ್..? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ..?
ಯೆಸ್ ಕಾಂತಾರ ಮತ್ತು ಕಾಂತಾರ ಚಾಪ್ಟರ್-1 ತೆರೆಗೆ ಬಂದ ಮೇಲೆ ಕರಾವಳಿ ದೈವ ಆಚರಣೆಗಳ ಬಗ್ಗೆ ಜಗತ್ತಿಗೆ ಗೊತ್ತಾಗಿದೆ. ಕನ್ನಡ ಸಿನಿಮಾವೊಂದು ವರ್ಲ್ಡ್ ವೈಡ್ ಯಶಸ್ಸು ಕಂಡಿದೆ. ಕಾಂತಾರ ಚಾಪ್ಟರ್-1 ಅಂತೂ ವಿಶ್ವದಾದ್ಯಂತ 900 ಕೋಟಿ ಗಳಿಕೆ ಮಾಡಿದೆ.
ಈ ಯಶಸ್ಸು ಒಂದು ಕಡೆಯಾದ್ರೆ ಇನ್ನೊಂದು ಕಡೆಗೆ ರಿಷಬ್ಗೆ ಸಿಕ್ಕಾಪಟ್ಟೆ ಟೀಕೆ ಟಿಪ್ಪಣಿಗಳು ಕೂಡ ಬಂದಿರೋದು ಸುಳ್ಳಲ್ಲ. ಕಾಂತಾರನಲ್ಲಿ ದೈವ ಆವಾಹನೆ ತೋರಿಸಿದ್ದು ಸರಿಯಲ್ಲ ಅಂತ ದೈವನರ್ತಕರು ಟೀಕೆ ಮಾಡಿದ್ರು. ಇನ್ನೂ ಈ ಸಿನಿಮಾ ಬಂದ ಮೇಲೆ ಅನೇಕರು ದೈವಗಳ ಅನುಕರಣೆ ಮಾಡಿ ದೈವಕ್ಕೆ ಅಪಚಾರ ಮಾಡೋದು ಕೂಡ ಹೆಚ್ಚಾಗಿದೆ. ಇತ್ತೀಚಿಗೆ ನಟ ರಣ್ವೀರ್ ಸಿಂಗ್ ಗೋವಾ ಫಿಲ್ಮ್ ಫೆಸ್ಟ್ ವೇದಿಕೆ ಮೇಲೆ ದೈವದ ಅನುಕರಣೆ ಮಾಡಿದ್ರು.
ರಿಷಬ್ ಎದುರೇ ರಣ್ವೀರ್ ಸಿಂಗ್ ವಿಕ್ಷಿಪ್ತವಾಗಿ ಅನುಕರಣೆ ಮಾಡಿದ್ರು. ಅದನ್ನ ತಡೆಯಲೂ ಆಗದೇ ಬಿಡೋದಕ್ಕೂ ಆಗದೇ ರಿಷಬ್ ಶೆಟ್ಟಿ ಪರದಾಡಿದ್ರು. ರಣ್ವೀರ್ ವಿಚಾರಕ್ಕೆ ರಿಷಬ್ ಕೂಡ ಸಿಕ್ಕಾಪಟ್ಟೆ ಟೀಕೆ ಎದುರಿಸಿದ್ರು.
ದೈವಕ್ಕೆ ಹರಕೆ ಸಲ್ಲಿಸಿದ ಕಾಂತಾರ ಸಿನಿಮಾ ತಂಡ; ರಿಷಬ್ ಶೆಟ್ಟಿಗೆ ಸಂತೈಸಿ ಅಭಯ ನೀಡಿದ ದೈವ..!
ಹೌದು ಕಾಂತಾರ ಚಾಪ್ಟರ್-1 ಸಕ್ಸಸ್ ಬಳಿಕ ಚಿತ್ರತಂಡದಿಂದ ವಾರಾಹಿ ಪಂಜುರ್ಲಿ ದೈವಕ್ಕೆ ಮಂಗಳೂರಿನಲ್ಲಿ ಹರಕೆಯ ನೇಮೋತ್ಸವ ಸಲ್ಲಿಸಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಟ-ನಿರ್ದೇಶಕ ರಿಷಬ್ ಇದ್ರಲ್ಲಿ ಭಾಗಿಯಾಗಿದ್ರು.
ಕಾಂತಾರ ಸಿನಿಮಾ ನಿರ್ಮಾಣಕ್ಕೂ ಮೊದಲು ಸಿನಿಮಾ ಯಶಸ್ವಿಗಾಗಿ ರಿಷಬ್ ಶೆಟ್ಟಿ ಪ್ರಾರ್ಥನೆ ಮಾಡಿ ಹರಕೆ ಹೊತ್ತಿದ್ರು. ಅದರಂತೆ ದೈವದ ಆಶೀರ್ವಾದದಿಂದ ಸಿನಿಮಾ ಯಶಸ್ಸು ಕಂಡಿದೆ. ಹೀಗಾಗಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಸಲ್ಲಿಸಲಾಗಿದೆ. ಈ ವೇಳೆ ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನು ಇದ್ದೇನೆ ಅಂತ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಅಭಯ ನೀಡಿದೆ.
ತನ್ನಿಂದ ದೈವಕ್ಕೆ ಅಪಮಾನವಾಯ್ತೇನೋ ಅನ್ನೋ ನೋವು ರಿಷಬ್ಗೂ ಕಾಡ್ತಾ ಇರುವಂತೆ ಇದೆ. ತನ್ನ ಬಗ್ಗೆ ಬರ್ತಿರೋ ಟೀಕೆ ಟಿಪ್ಪಣಿಗಳು ನೋವು ತಂದಂತೆ ಕಾಣ್ತಾ ಇದೆ. ಸೋ ದೈವ ಕಣ್ಣೀರು ಸುರಿಸಬೇಡ ಅಂತ ಅಭಯ ನೀಡಿದೆ. ಅಲ್ಲಿಗೆ ರಿಷಬ್ಗೆ ದೈವಬಲ ಸಿಕ್ಕಂತೆ ಆಗಿದೆ.


