Asianet Suvarna News Asianet Suvarna News

2018ರ ಹಲ್ಲೆ ಪ್ರಕರಣಕ್ಕೆ ಮರು ಜೀವ; ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು

2018ರ ನಟ ದುನಿಯಾ ವಿಜಯ್ ಮತ್ತು ಪಾನಿಪುರಿ ಕಿಟ್ಟಿ ಗಲಾಟೆ  ಪ್ರಕರಣ ರೀ ಓಪನ್ ಆಗಿದೆ. ಪಾನಿಪುರಿ ಕಿಟ್ಟಿ ವಿರುದ್ಧ FIR ದಾಖಲಾಗಿದೆ. 

2018 assault case reopened; Duniya Vijay files complaint against panipuri kitty sgk
Author
First Published Dec 13, 2022, 2:40 PM IST

2018ರಲ್ಲಿ ನಡೆದ ನಟ ದುನಿಯಾ ವಿಜಯ್ ಮತ್ತು ಪಾನಿಪುರಿ ಕಿಟ್ಟಿ ಗಲಾಟೆ  ಪ್ರಕರಣ ರೀ ಓಪನ್ ಆಗಿದೆ. 
ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ವಿರುದ್ಧ ಇದೀಗ FIR ದಾಖಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಮೂಲಕ ಹಳೆ ಪ್ರಕರಣಕ್ಕೀಗ ಮತ್ತೊಮ್ಮೆ ಜೀವ ಬಂದಿದೆ. 

ಸೆಪ್ಟಂಬರ್ 23 2018ರಂದು ದುನಿಯಾ ವಿಜಯ್ ಮತ್ತು ಅವರ ಮಗ ಸಾಮ್ರಾಟ್ ಡಾ.ಬಿಆರ್ ಅಂಬೇಡ್ಕರ್ ಭನಕ್ಕೆ ಹೋಗಿದ್ದರು. ಬಾಡ್ ಬಿಲ್ಡಿಂಗ್ ಸ್ಪರ್ಧೆ ನಡೆಯುತ್ತಿತ್ತು. ದುನಿಯಾ ವಿಜಯ್ ಮುಖ್ಯ ಅತಿಥಿಯಾಗಿದ್ದರು. ವಿಜಯ್ ಸ್ಥಳಕ್ಕೆ ತೆರಲುತ್ತಿದ್ದಂತೆ ಮಾರುತಿ ಗೌಡ ನಿಂದನಾತ್ಮಕ ಮಾತುಗಳನ್ನು ಆಡಿದ್ದರು. ಇದರಿಂದ ಆಕ್ರೋಶಗೊಂಡ ವಿಜಯ್ ಕಡೆಯವರು ಮಾರುತಿ ಗೌಡನನ್ನು ಸುತ್ತುವರೆದರು. ಬಳಿಕ ವಿಜಯ್ ಗ್ಯಾಂಗ್ ಮಾರುತಿ ಗೌಡನನ್ನು ಕಾರಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದರು. ಕಾರಿನಲ್ಲಿ ಮಾರುತಿಗೆ ಹಿಗ್ಗಮುಗ್ಗ ಥಳಿಸಿದ್ದರು.

ತಕ್ಷಣ ಪಾನಿಪುರಿ ಕಿಟ್ಟಿ ಹೈಗ್ರೌಂಡ್ ಪೊಲೀಸ್ ಸ್ಟೇಷನ್‌ಗೆ ಹೋಗಿ ಮಾರುತಿ ಗೌಡನನ್ನು ಅಪಹರಿಸಿದ್ದಾರೆ ವಿಜಯ್ ಎಂದು ದೂರು ನೀಡಿದರು. ಬಳಿಕ ಪೊಲೀಸರ ಕರೆಯ ಮೇರೆಗೆ ವಿಜಯ್ ಮಾರುತಿ ಗೌಡನನ್ನು ವಾಪಸ್ ಕರೆತಂದಿದ್ದು ಬಿಟ್ಟಿದ್ದರು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ಗೌಡ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. 

ದುನಿಯಾ ವಿಜಯ್‌ ಅವರನ್ನು ರಚಿತಾ ರಾಮ್ ಏನಂತ ಕರೆಯೋದು? ಡಿಂಪಲ್ ಕ್ವೀನ್ ಹೇಳಿದಿಷ್ಟು

'ನನ್ನ ಮಗ ಸಾಮ್ರಾಟ್‌ಗೆ ಬೈದು ಬೆದರಿಕೆ ಹಾಕಿದ್ರು ಎಂದು‌ ವಿಜಯ್ ದೂರು ನೀಡಿದ್ದರು. ವಿಜಯ್ ವಿರುದ್ಧ ಕಿಟ್ಟಿ ಕಿಡ್ನ್ಯಾಪ್ ಮತ್ತು ಹಲ್ಲೆ ಮಾಡಿರುವ ಆರೋಪ ಮಾಡಿ ದೂರು ದಾಖಲಿಸಿದ್ದರು.  ಆದರೆ ಪಾನಿಪುರಿ ಕಿಟ್ಟಿಮೇಲಿನ ಪ್ರಕರಣ ರದ್ದು ಮಾಡಲಾಗಿತ್ತು. ಸಾಕ್ಷ್ಯ ಕೊರತೆ ಇಂದ ಪ್ರಕರಣ ಕ್ಲೋಸ್ ಆಗಿತ್ತು. ಆದರೀಗ ಹೈಕೋರ್ಟ್ ಸೂಚನೆ ಮೇರೆಗೆ ಮತ್ತೆ ಕೇಸ್ ಓಪನ್ ಆಗಿದ್ದು ಹೊಸ FIR ದಾಖಲಿಸಲು ಹೈಕೋರ್ಟ್ ಅನುಮತಿ ನೀಡಿದೆ. ಹಾಗಾಗಿ ಪಾನಿಪುರಿ ಕಿಟ್ಟಿ ಮತ್ತು ಮಾರುತಿಗೌಡ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಕ್ಕಳಿಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ದುನಿಯಾ ವಿಜಯ್ ನೀಡಿದ ದೂರಿನಡಿ ಮಾರುತಿ ಮತ್ತು ಕಿಟ್ಟಿ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಮತ್ತೊಮ್ಮೆ ಈ ಪ್ರಕರಣ  ತನಿಖೆ ನಡೆಯಬೇಕೆಂದು ಕೋರ್ಟ್ ಸೂಚಿಸಿದೆ. ಹಳೆಯ ಪ್ರಕರಣಕ್ಕೆ ಮರುಜೀವ ಬಂದಿದ್ದು ಇನ್ನೆಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡಬೇಕಿದೆ. 

 

Follow Us:
Download App:
  • android
  • ios