ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲಸ ಖಾಲಿ ಇದೆ, ಪಿಜಿ ಖಾಲಿ ಇದೆ, ಮನೆ ಖಾಲಿ ಇದೆ ಅನ್ನೋ ಜಾಹೀರಾತನ್ನು ಹಾಕೋದನ್ನು ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬ ಭೂಪ ಸುಂದರ ಹುಡುಗಿ ರೂಮ್‌ಮೇಟ್‌ ಆಗಿ ಬೇಕಾಗಿದ್ದಾಳೆ ಅನ್ನೋ ಜಾಹೀರಾತನ್ನು ನೀಡಿದ್ದಾನೆ. ಈ ಆಡ್ ನೋಡಿ ನೆಟ್ಟಿಗರೇ ದಂಗಾಗಿದ್ದಾರೆ. 

ಅಮೇರಿಕಾ: ಕೆಲಸ ಖಾಲಿ ಇದೆ, ಕೆಲಸಕ್ಕೆ ಬೇಕು ಎಂದು ಟಿವಿ, ಪೇಪರ್ ಇತ್ಯಾದಿ ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದನ್ನು ನೋಡಿದ್ದೀರಿ. ಮನೆಗೆಲಸಕ್ಕೆ ಜನ ಬೇಕು ಎಂದು ಜಾಹೀರಾತು ನೀಡುವುದೂ ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ ತನ್ನೊಂದಿಗೆ ಫ್ಲಾಟ್ ನಲ್ಲಿ ವಾಸಿಸಲು ಲೇಡಿ ರೂಮ್ ಮೇಟ್ ಗಳು ಬೇಕು ಎಂದು ಫೇಸ್ ಬುಕ್ ನಲ್ಲಿ ಜಾಹೀರಾತು ನೀಡಿದ್ದಾನೆ. ಅಷ್ಟೇ ಅಲ್ಲ ರೂಮ್‌ಮೇಟ್ ಆಗಿ ಬರೋದಕ್ಕೆ ಕೆಲ ಷರತ್ತುಗಳನ್ನೂ ಹಾಕಿದ್ದಾನೆ. ಅವನ ರೂಮ್ ಮೇಟ್ ಆಗಿ ಬರುವ ಲೇಡಿ ನೋಡೋಕೆ ಸುಂದರಿ ಆಗಿರಬೇಕಂತೆ ವಯಸ್ಸು 18ರಿಂದ 25ರೊಳಗಿರಬೇಕಂತೆ. ಅಂದಹಾಗೆ, ಅವರ ವಯಸ್ಸು 25 ಅಲ್ಲ, ಆದರೆ 45. ಈತನ ಫೇಸ್ ಬುಕ್ ಜಾಹೀರಾತು ವೈರಲ್ ಆಗಿದ್ದು, ನೆಟ್ಟಿಗರು ಕೂಡ ಕಮೆಂಟ್ ಮಾಡುತ್ತಿದ್ದಾರೆ.

ರೂಮ್‌ಮೇಟ್‌ ಯಾವಾಗ್ಲೂ ತಮಗೆ ಎಲ್ಲಾ ರೀತಿಯಲ್ಲೂ ಹೊಂದಿಕೆಯಾಗಬೇಕೆಂದು ಎಲ್ಲರೂ ಬಯಸುತ್ತಾರೆ. ಅವರಲ್ಲಿ ಅಡ್ಜಸ್‌ಮೆಂಟ್ ಸ್ವಭಾವ (Behaviour) ಇರಬೇಕು, ಮನೆಗೆಲಸದಲ್ಲಿ ಕೈ ಜೋಡಿಸಬೇಕು ಎಂದೆಲ್ಲಾ ಅಂದುಕೊಳ್ಳುತ್ತಾರೆ. ಆದರೆ ಈತನಿಗೆ ಮಾತ್ರ ಸುಂದರಾಂಗಿ ರೂಮ್‌ಮೇಟ್ ಬೇಕಂತೆ. ಅದು ಕೂಡಾ ಇಪ್ಪತ್ತೈದು ವರ್ಷ ವಯಸ್ಸಿನ (Age) ಒಳಗಿನವರು. ಮತ್ತೇನೆಲ್ಲಾ ಕಂಡೀಷನ್ಸ್ ಹಾಕಿದ್ದಾನೆ ತಿಳ್ಕೊಳ್ಳಿ.

Inter Caste Marraige: ಅಂತರ್ಜಾತಿ ವಿವಾಹವಾಗ್ಬೇಕಾ? ಮೊದ್ಲು ಪಾಲಕರ ಮನವೊಲಿಸಿ

ಲೇಡಿ ರೂಮ್‌ಮೇಟ್‌ಗಳು ಬೇಕಾಗಿದ್ದಾರೆ
ಅಮೆರಿಕದ ಡೆಟ್ರಾಯಿಟ್ ನಲ್ಲಿ ವ್ಯಕ್ತಿಯೊಬ್ಬರು ಫೇಸ್ ಬುಕ್ ನಲ್ಲಿ ಹಾಕಿರುವ ಜಾಹೀರಾತು (Advertisement) ಇದೀಗ ವೈರಲ್ ಆಗುತ್ತಿದೆ. ಅವರು ಸಿಂಗಲ್ ಬೆಡ್ ರೂಮ್ ಫ್ಲಾಟ್ ನಲ್ಲಿ ವಾಸವಾಗಿದ್ದಾರೆ. ಅವರಿಗೆ ರೂಮ್‌ಮೇಟ್ ಬೇಕಾಗಿದ್ದಾರೆ. ಆದ್ರೆ ಪುರುಷರು (Men) ರೂಮ್‌ಮೇಟ್‌ ಆಗಿ ಬೇಡ್ವಂತೆ, ಬರೀ ಹುಡುಗಿಯರು (Girls) ರೂಮ್‌ಮೇಟ್ ಆಗಿ ಬಂದ್ರೆ ಸಾಕು ಅಂತಿದ್ದಾರೆ. .

ಏನೆಲ್ಲಾ ಕಂಡೀಷನ್ಸ್‌
ರೂಮ್‌ ಮೇಟ್ ಆಗಿ ಬರುವ ಹುಡುಗಿ ನಿರ್ಧಿಷ್ಟವಾಗಿ ಕೆಲ ಗುಣಗಳನ್ನು ಹೊಂದಿರಬೇ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರತ್ಯೇಕವಾಗಿ ತಿಳಿಸಲಾಗಿದೆ. ಹುಡುಗಿ ಅನೇಕ ಗುಣಗಳನ್ನು ಹೊಂದಿರಬೇಕು. ಅದೇನೆಂದರೆ, ಮನೆಯನ್ನು ಅಡುಗೆ (Cooking) ಮಾಡುವುದು ಮತ್ತು ಸ್ವಚ್ಛಗೊಳಿಸುವುದು ಹೇಗೆ ಎಂದು ಅವಳು ತಿಳಿದಿರಬೇಕು. ರೂಮ್‌ಮೇಟ್ ಆಗಿ ಬರುವವರು ಸಿಗರೇಟ್ ಸೇದಬಾರದು, ಕುಡಿಯಬಾರದು, ನಾಯಿ ಸಾಕಬಾರದು ಮತ್ತು ಹುಡುಗಿಯರು ಗೆಳೆಯರು ಯಾರೂ ಮನೆಗೆ ಬರಬಾರದು ಎಂಬ ಕಂಡೀಷನ್ ಹಾಕಲಾಗಿದೆ

50 ವರ್ಷದ ವ್ಯಕ್ತಿ ಮದುವೆಯಾದ 25ರ ಯುವತಿ, ನಾನೇನ್ ಪಾಪ ಮಾಡ್ದೆ ಕೇಳ್ತಿದ್ದಾಳೆ!

ಹುಡುಗಿ ಇಷ್ಟಪಟ್ಟರೆ ಮಾತ್ರ ಬೆಡ್‌ರೂಮ್‌ನಲ್ಲಿ ಬಂದು ಮಲಗಬಹುದು
ಸಿಂಗಲ್ ಬೆಡ್ ರೂಂ ಫ್ಲಾಟ್ ನಲ್ಲಿ ವಾಸವಾಗಿರುವುದರಿಂದ ಹುಡುಗಿ ರೂಮ್ ಮೇಟ್ ಫ್ಲಾಟ್ ನ ಹಾಲ್ ನ ಸೋಫಾ ಮೇಲೆ ಮಲಗಬೇಕು. ಅವಳು ಹಾಯಾಗಿರಲು ಬಯಸಿದರೆ ಅವನ ಮಲಗುವ ಕೋಣೆಗೆ ಬಂದು ಮಲಗಲು ಅವಳಿಗೆ ಅವಕಾಶವಿದೆ. ಫೇಸ್ ಬುಕ್ ನಲ್ಲಿ ಭೂಪ ಹಾಕಿರುವ ಈ ವಿಚಿತ್ರ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈಗ ಅವರಿಗೆ ಲೇಡಿ ರೂಂಮೇಟ್ ಸಿಕ್ಕಿದ್ದಾರೋ ಇಲ್ಲವೋ ಗೊತ್ತಿಲ್ಲ.