50 ವರ್ಷದ ವ್ಯಕ್ತಿ ಮದುವೆಯಾದ 25ರ ಯುವತಿ, ನಾನೇನ್ ಪಾಪ ಮಾಡ್ದೆ ಕೇಳ್ತಿದ್ದಾಳೆ!

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲವೇ ಇಲ್ಲ. ಆದ್ರೆ 40 ವರ್ಷ ದಾಟಿದ ವ್ಯಕ್ತಿಯನ್ನು 25ರ ಹುಡುಗಿ ಮದುವೆಯಾಗ್ತಾಳೆಂದ್ರೆ ಜನರು ನೋಡುವ ದೃಷ್ಟಿ ಬದಲಾಗುತ್ತದೆ. ನಮ್ಮ ಸಮಾಜದಲ್ಲಿ ಇದನ್ನು ಅಪರಾಧ ಎನ್ನುವಂತೆ ನೋಡ್ತಾರೆ. ಮದುವೆ, ಪ್ರೀತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಎಲ್ಲರಿಗೂ ಹಕ್ಕಿದೆ ಎನ್ನುವುದನ್ನು ಮರೆಯುತ್ತಾರೆ.
 

25 year old woman falls love with 50 year old man asking for help

ಸಮಾಜ ನಮ್ಮ ಮೇಲೆ ಪ್ರತಿ ಕ್ಷಣ ಕಣ್ಣಿಟ್ಟಿರುತ್ತದೆ. ನಾವು ಏನೇ ಮಾಡಿದ್ರೂ ಅದ್ರಲ್ಲಿ ಸರಿ, ತಪ್ಪುಗಳನ್ನು ಹುಡುಕುವವರ ಸಂಖ್ಯೆ ಸಾಕಷ್ಟಿದೆ. ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ಸಮಾಜ ಮೂರನೇ ಕಣ್ಣಿಟ್ಟಿರುತ್ತದೆ. ಹೆಣ್ಮಕ್ಕಳು ಯಾರ ಜೊತೆ ಮಾತನಾಡ್ತಾರೆ, ಯಾರ ಜೊತೆ ಓಡಾಡ್ತಾರೆ, ಯಾವ ಡ್ರೆಸ್ ಧರಿಸ್ತಾರೆ, ಎಲ್ಲಿಲ್ಲಿ ತಿರುಗಾಡ್ತಾರೆ ಎಲ್ಲ ವಿಷ್ಯದ ಬಗ್ಗೆ ಸಮಾಜಕ್ಕ ವಿಶೇಷ ಆಸಕ್ತಿಯಿರುತ್ತದೆ. ಹೆಣ್ಮಕ್ಕಳು ಏನು ಮಾಡಿದ್ರೂ ಕೊಂಕು ಮಾತನಾಡುವವರ ಸಂಖ್ಯೆ ಇದ್ದೇ ಇರುತ್ತದೆ. ಸಮಾಜದ ಭಯಕ್ಕೆ ಬಹುತೇಕರು ತಮ್ಮಿಷ್ಟದ ಕೆಲಸವನ್ನು ಮಾಡೋದಲ್ಲ. ಸಮಾಜದ ಬಾಯಿಗೆ ಬೀಳಬಾರದು ಎನ್ನುವ ಕಾರಣಕ್ಕೆ ತಮಗೆ ಬೇಕಂತೆ ಬದುಕುವುದಿಲ್ಲ. ಮುಚ್ಚು, ಮರೆಯಲ್ಲಿಯೇ ಜೀವನ ಕಳೆಯಲು ಮುಂದಾಗ್ತಾರೆ. ಆದ್ರೆ ಮತ್ತೆ ಕೆಲವರು ಸಮಾಜಕ್ಕೆ ಕೇರ್ ಮಾಡೋದಿಲ್ಲ. ನನ್ನ ಸುಖ ಮುಖ್ಯ, ನನ್ನ ಜೀವನ, ನನ್ನ ಆಯ್ಕೆ ಎನ್ನುವ ದೃಢ ನಿರ್ಧಾರವನ್ನು ಹೊಂದಿರುತ್ತಾರೆ. ಈ ಮಹಿಳೆ ಕೂಡ ದೃಢ ನಿರ್ಧಾರ ತೆಗೆದುಕೊಂಡು ಈಗ ಪ್ರೀತಿಯಲ್ಲಿ ಯಶಸ್ಸು ಕಂಡಿದ್ದಾಳೆ. ಆದ್ರೆ ಸಮಾಜದ ಮಾತು ಅನೇಕ ಬಾರಿ ನೋವುಂಟು ಮಾಡುತ್ತದೆ ಎನ್ನುತ್ತಾಳೆ ಮಹಿಳೆ.

ಆಕೆ ವಯಸ್ಸು 25 ವರ್ಷವಂತೆ. ಉತ್ತಮ ಶಿಕ್ಷಣ (Education) ಪಡೆದ ಯುವತಿ ಕೆಲಸ (Work) ಮಾಡ್ತಿದ್ದಳಂತೆ. ಕಚೇರಿಯಲ್ಲಿ ಆಕೆಗೆ ಒಬ್ಬ ವ್ಯಕ್ತಿಯ ಭೇಟಿಯಾಯ್ತಂತೆ. ವ್ಯಕ್ತಿಯನ್ನು ನೋಡ್ತಿದ್ದಂತೆ ಆಕೆ ಮನಸ್ಸಿನಲ್ಲಿ ಪ್ರೀತಿ ಚಿಗುರಿತ್ತಂತೆ. ಆತನ ವಯಸ್ಸು (age) ತನಗಿಂದ ಎರಡು ಪಟ್ಟು ಹೆಚ್ಚು ಎನ್ನುತ್ತಾಳೆ ಮಹಿಳೆ. 50 ವರ್ಷದ ಕ್ಲೈಂಟ್ ಜೊತೆ ನನಗೆ ಪ್ರೀತಿ (Love) ಚಿಗುರಿತ್ತು ಎನ್ನುತ್ತಾಳೆ ಆಕೆ. 

ಇದು ಸಂಬಂಧಕ್ಕೆ ಮದ್ದು, ಮುದ್ದಾಡುವಿಕೆಯ ಅಚ್ಚರಿ ಏನು ಗೊತ್ತಾ?

ಕ್ಲೈಂಟ್ ಆಗಿದ್ದ ಕಾರಣ ಆತ ಆಗಾಗ ಕಚೇರಿ (Office) ಗೆ ಬರ್ತಿದ್ದನಂತೆ. ಒಂದೆರಡು ಭೇಟಿ ನಂತ್ರ ಇಬ್ಬರೂ ಫೋನ್ ನಲ್ಲಿ ಮಾತನಾಡಲು ಶುರು ಮಾಡಿದ್ದರಂತೆ. ಒಂದೆರಡು ಬಾರಿ ಡಿನ್ನರ್ ಗೆ ಕೂಡ ಹೋಗಿದ್ದರಂತೆ. ಆತನಿಗೆ ಮದುವೆಯಾಗಿದೆಯಾ ಎಂದು ಮಹಿಳೆ ಚೆಕ್ ಮಾಡಿದ್ದಳಂತೆ. ಆದ್ರೆ ಕೈನಲ್ಲಿ ಉಂಗುರವಿಲ್ಲದ ಕಾರಣ ಆತನಿನ್ನೂ ಮದುವೆಯಾಗಿಲ್ಲವೆಂದು ಭಾವಿಸಿದ್ದಳಂತೆ. 

ಹಿರಿಯ ವಯಸ್ಸಿನ ವ್ಯಕ್ತಿ ಮೇಲೆ ಪ್ರೀತಿ ಹುಟ್ಟಿರುವುದನ್ನು ಆಕೆ ಸ್ನೇಹಿತ (Friend) ರಿಗೆ ಹೇಳಿದ್ದಳಂತೆ. ಸ್ನೇಹಿತರು ಸಂಬಂಧ ಮುಂದುವರೆಸುವಂತೆ ಹೇಳಿದ್ದರಂತೆ. ಎರಡು ಭೇಟಿ ನಂತ್ರ ಆತ ಪ್ರಪೋಸ್ ಮಾಡಿದ್ದನಂತೆ. ರೋಗಿ ಬಯಸಿದ್ದೂ ಹಾಲು – ಅನ್ನ, ವೈದ್ಯ ಹೇಳಿದ್ದೂ ಹಾಲು – ಅನ್ನ ಎನ್ನುವಂತೆ ಆಕೆ ಖುಷಿಯಲ್ಲಿ ಕುಣಿದಿದ್ದಳಂತೆ. ಪ್ರಪೋಸಲ್ ಗೆ ಒಪ್ಪಿದ್ದಳಂತೆ. 

ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ರೂ ಇಬ್ಬರ ಮಧ್ಯೆ ಇರುವ ಬಾಂಡಿಂಗ್ ನೋಡಿ ಪಾಲಕರು ಒಪ್ಪಿದ್ದರಂತೆ. ಆದ್ರೆ ಸಂಬಂಧಿಕರು ಈಗ್ಲೂ ವಿರೋಧ ಮಾಡ್ತಾರಂತೆ. ಆತ ವಿಚ್ಛೇದಿತನಂತೆ. ಪತ್ನಿ ಮೋಸ ಮಾಡಿ ದೂರ ಮಾಡಿದ್ದಳಂತೆ. ಈ ನೋವು ಮರೆತು ಜೀವನದ ಹೊಸ ಆರಂಭಕ್ಕೆ ಆತ ಸಿದ್ಧನಾಗಿದ್ದನಂತೆ. 

ಮಕ್ಕಳ ಜೊತೆ ಮಾತನಾಡುವಾಗ ಪದ ಬಳಕೆ ಬಗ್ಗೆ ಎಚ್ಚರಿಕೆಯಿರಲಿ

ಆದ್ರೆ ಇವರ ಪ್ರೀತಿ ಗಾಢವಾಗ್ತಿದ್ದಂತೆ ಗಾಸಿಪ್ ಜಾತಿಯಾಯ್ತಂತೆ. ಕಚೇರಿಯಲ್ಲಿ ಎಲ್ಲರೂ ಗುಸು ಗುಸು, ಪಿಸು ಪಿಸು ಶುರು ಮಾಡಿದ್ದರಂತೆ.  ಸ್ನೇಹಿತರಿಂದಲೇ ವಿರೋಧ ಕೇಳಿ ಬಂದಿತ್ತಂತೆ. ಹಣವಿದೆ, ಶ್ರೀಮಂತ ವ್ಯಕ್ತಿ ಎನ್ನುವ ಕಾರಣಕ್ಕೆ 50 ವರ್ಷ ವಯಸ್ಸಿನ ವ್ಯಕ್ತಿ ಜೊತೆ ಮದುವೆಯಾಗ್ತಿದ್ದಾಳೆಂದು ಮಾತನಾಡ್ತಿದ್ದರಂತೆ. ಮನೆಯವರು ಜೊತೆಯಲ್ಲಿ ನಿಂತಿದ್ದ ಕಾರಣ ನಾನು ಆತನನ್ನು ಮದುವೆಯಾದೆ ಎನ್ನುತ್ತಾಳೆ ಮಹಿಳೆ.ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಹಾಗೆಯೇ ಹಣಕ್ಕಾಗಿ ಮದುವೆಯಾದವಳು ನಾನಲ್ಲ. ನನಗೆ ಪ್ರೀತಿ ಮುಖ್ಯವಾಗಿತ್ತು. ಅಂದು ಮಾಡಿದ ಕೆಲಸಕ್ಕೆ ನನಗೆ ಈಗ್ಲೂ ಹೆಮ್ಮೆಯಿದೆ. ಆತನನ್ನು ಮದುವೆಯಾಗಲು ನಾನು ಅದೃಷ್ಟ ಮಾಡಿದ್ದೆ ಎನ್ನುತ್ತಾಳೆ ಮಹಿಳೆ (Woman). 

Latest Videos
Follow Us:
Download App:
  • android
  • ios