ಆತ ಬಡವ ನಾನು ಬಡವಿ: ಯುವ ಜೋಡಿಯ ಪ್ರೇಮ ಕತೆ ವೈರಲ್

  • ಪ್ರೀತಿಸಿ ಮದುವೆಯಾದ ಯುವ ಜೋಡಿಯ ಪ್ರೇಮ ಕತೆ ಹಾಗೂ ಅವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
     
Young couple love story goes viral in social medai akb

ಪ್ರೀತಿಸಿ ಮದುವೆಯಾದವರು ಈ ಜಗತ್ತಿನಲ್ಲಿ ಸಾವಿರಾರು ಜನ, ಭಗ್ನಪ್ರೇಮಿಗಳ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿದೆ. ಕೆಲವರ ಪ್ರೇಮಕತೆಗಳು ಜಗತ್ತಿನಲ್ಲಿಡಿ ಸುದ್ದಿಯಾದರೆ ಮತ್ತೆ ಕೆಲವರ ಪ್ರೇಮ ಪ್ರೀತಿಸುವವರಿಗೆ ಮಾತ್ರ ತಿಳಿದಿರುತ್ತದೆ. ಕೆಲವರ ಪ್ರೇಮ ಮದುವೆಯಲ್ಲಿ ಅಂತ್ಯ ಕಂಡರೆ ಮತ್ತೆ ಕೆಲವರ ಪ್ರೇಮ ಮಧ್ಯದಲ್ಲೇ ಮುರಿದು ಬೀಳುತ್ತದೆ. ನೀವು ಇದುವರೆಗೂ ಸೆಲೆಬ್ರಿಟಿಗಳ ಸಿನಿಮಾತಾರೆಯರ ರಾಜಕಾರಣಿಗಳ ಹೀಗೆ ಸಮಾಜಮುಖಿಯಾಗಿರುವವರ ಪ್ರೇಮಕತೆಗಳನ್ನು ಕೇಳಿರಬಹುದು ಆದರೆ ಈಗ ನಾವು ಹೇಳುತ್ತಿರುವುದು ಒರ್ವ ನಮ್ಮ ನಿಮ್ಮಂತ ಸಾಮಾನ್ಯ ಯುವ ಜೋಡಿಯ ಪ್ರೇಮಕತೆ. ಇವರ ಪ್ರೇಮಕತೆಯನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಅದೀಗ ವೈರಲ್ ಆಗಿದೆ. 

ಪ್ರೀತಿಸಿ ವಿವಾಹವಾದ ದೆಹಲಿಯ (new delhi)  ಅಫ್ಜಲ್ ಮತ್ತು ಸಬೀನಾ ಎಂಬ ಯುವ ಜೋಡಿಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ (social Media) ವೈರಲ್ ಆಗಿವೆ. ಇವು ದೆಹಲಿಯ ಸರಾಯ್ ಕಾಲೆ ಖಾನ್‌ನಲ್ಲಿರುವ (Sarai Kale Khan) ಟೀ ಸ್ಟಾಲ್‌ ಬಳಿ ತೆಗೆದ ಫೋಟೋಗಳು. ಈ ಫೋಟೋಗಳಲ್ಲಿ  ಹುಡುಗ ಕಪ್ಪು ಜೀನ್ಸ್ ಮತ್ತು ಕಂದು ಬಣ್ಣದ ಶರ್ಟ್ ಧರಿಸಿದ್ದು, ಹುಡುಗಿ ಸಲ್ವಾರ್ ಕಮೀಜ್ (salwar kameez) ಧರಿಸಿದ್ದಾಳೆ. ಇಬ್ಬರೂ ಒಂದೇ ಗ್ಲಾಸ್‌ನಲ್ಲಿ ಟೀ ಕುಡಿಯುತ್ತಾರೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾರೆ. 

 

21 ವರ್ಷದ ಅಫ್ಜಲ್ (Afzal) ಮತ್ತು 19 ವರ್ಷದ ಸಬೀನಾ (sabina) ಒಂದು ವರ್ಷದ ಹಿಂದೆ ಮದುವೆಯಾಗಿದ್ದೇವೆ ಎಂದು  ತಿಳಿಸಿದ್ದಾರೆ. ಅಫ್ಜಲ್ ದಿನಗೂಲಿ ಕಾರ್ಮಿಕನಾಗಿರುವುದರಿಂದ ಸಬೀನಾ ಪೋಷಕರಿಗೆ ಈ ವಿವಾಹದ ಬಗ್ಗೆ ಸಮ್ಮತಿ ಇರಲಿಲ್ಲ. ಆದಾಗ್ಯೂ, ಇದು ನಿಜವಾದ ಕಾರಣವಾಗಿರಲಿಲ್ಲ. ಅಫ್ಜಲ್ ಮತ್ತು ಸಬೀನಾ ಇಬ್ಬರೂ ಬಾಲ್ಯದಿಂದಲೇ ಪರಿಚಿತರಾಗಿರುವುದರಿಂದ ಪೋಷಕರು ಇವರ ಪ್ರೇಮವನ್ನು ವಿರೋಧಿಸಿದರು. ಆದರೆ, ಅವರ ಈ ಪ್ರೇಮವು 2019 ರ ಚಳಿಗಾಲದಲ್ಲಿ ಪ್ರಾರಂಭವಾಯಿತು. 

ಈ ರಾಶಿಯವರಿಗೆ ಕೆಲಸ ಮೊದಲು ಪ್ರೀತಿ-ಗೀತಿ ಎಲ್ಲಾ ಆಮೇಲೆ

ಪೋಷಕರ ವಿರೋಧದ ನಡುವೆಯೂ ಜೋಡಿ ಮದುವೆಯಾದರು ಹಾಗೂ ಅಫ್ಜಲ್ ಮತ್ತು ಸಬೀನಾ ತಮ್ಮ ಮದುವೆಯ ನಂತರ ಬಾಡಿಗೆ ಕೋಣೆಯಲ್ಲಿ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಿದರು. ಅಫ್ಜಲ್ ತನ್ನ ಕೆಲಸದ ನಂತರ ರಾತ್ರಿ  ಅಡುಗೆ ಮಾಡಲು ಪತ್ನಿಗೆ ಸಹಾಯ ಮಾಡುತ್ತಾನೆ. ಅಲ್ಲದೇ ಎಲ್ಲ ಜೋಡಿಯಂತೆ ನಾವು ಜಗಳ ಮಾಡುತ್ತೇವೆ ನನ್ನ ಗಂಭೀರವಾದ ಸಲಹೆಗಳನ್ನು ಆಕೆ ಕೇಳದೇ ಇದ್ದಾಗ ಜಗಳವಾಗುವುದು ಎಂದು ಆತ ಹೇಳುತ್ತಾನೆ. 

6 ತಿಂಗಳ ನಂತರ ಕುಣಿಗಲ್ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರ ಹಿಂದೆ ದುರಂತ ಪ್ರೇಮದ ಕಥೆ
 

ವೈವಾಹಿಕ ಜೀವನವು ನಮ್ಮಿಬ್ಬರನ್ನೂ ಕೆಲವು ರೀತಿಯಲ್ಲಿ ಬದಲಾಯಿಸಿದೆ. ನಾನು ಹೆಚ್ಚು ಜವಾಬ್ದಾರನಾಗಿದ್ದೇನೆ, ಹೆಚ್ಚು ಶ್ರಮಜೀವಿಯಾಗಿದ್ದೇನೆ ಎಂದು ಅಫ್ಜಲ್ ಹೇಳುತ್ತಾನೆ. ಪ್ರಸ್ತುತ ಅವರು ದಿನಕ್ಕೆ ಕೇವಲ 300 ರೂಪಾಯಿಗಳನ್ನು ಗಳಿಸುತ್ತಾರೆ ಮತ್ತು ಅದರಲ್ಲಿ ಒಂದು ಮನೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ವಿವರಿಸುತ್ತಾರೆ. ನಾನು ಇನ್ನೂ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಪೋಷಕರ ವಿರೋಧದ ನಡುವೆ ಈ ಜೋಡಿ ಸಾರ್ವಜನಿಕ ಉದ್ಯಾನವನದಲ್ಲಿ ವಿವಾಹವಾದರಂತೆ.

ಪ್ರೀತಿ ಪ್ರೇಮಕ್ಕೆ ವಿರೋಧ ಬರುವುದು ಸಾಮಾನ್ಯ. ಪೋಷಕರು ತಮ್ಮ ಪ್ರೀತಿ ನಿರಾಕರಿಸಿದರೆಂದು ಜೋಡಿಗಳು ಸಾವಿಗೆ ಶರಣಾದಂತಹ ಹಲವು ಘಟನೆಗಳನ್ನು ನಾವು ಇತ್ತೀಚೆಗೆ ಕೇಳಿದ್ದೇವೆ. ಸಾವು ಎಲ್ಲದಕ್ಕೂ ಪರಿಹಾರ ಅಗದು. ಆದ್ದರಿಂದ ಪ್ರೀತಿಸುವವರು ಪೋಷಕರ ಮನವೊಲಿಗೆ ಯತ್ನಿಸಬೇಕು. ಅದೂ ಸಾಧ್ಯವಾಗದಿದ್ದಲ್ಲಿ ಎಲ್ಲರನ್ನು ಎದುರಿಸಿ ಬದುಕುವ ಛಲ ಬೆಳೆಸಿಕೊಳ್ಳಬೇಕು.

 

Latest Videos
Follow Us:
Download App:
  • android
  • ios