ಅಕ್ಕನನ್ನು ವಾಟ್ಸ್‌ಆಪ್‌ನಲ್ಲಿ ಬ್ಲಾಕ್ ಮಾಡಿದ ತಮ್ಮ, ಸೋದರಿಯ ಬ್ರಿಲಿಯಂಟ್ ಐಡಿಯಾ ಈಗ 'ವಿಶ್ವದಾಖಲೆ'!
ಅಕ್ಕನ ಕಿರಿಕಿರಿ ತಾಳಲಾರದೆ ತಮ್ಮನೊಬ್ಬ ವಾಟ್ಸ್‌ಆಪ್‌ನಲ್ಲಿ ಅಕ್ಕನನ್ನು ಬ್ಲಾಕ್ ಮಾಡಿದ್ದ. ಇದಕ್ಕಾಗಿ ಅಕ್ಕನ ಬ್ರಿಲಿಯಂಟ್ ಐಡಿಯಾ ಈಗ ಹೆಚ್ಚೂ ಕಡಿಮೆ ವಿಶ್ವದಾಖಲೆ ಆಗುವ ಹಂತದಲ್ಲಿದೆ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಈ ಘಟನೆಯೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ತಿರುವನಂತಪುರ (ಫೆ.25): ಅಕ್ಕ-ತಂಗಿ, ಅಣ್ಣ-ತಂಗಿ, ಅಕ್ಕ-ತಮ್ಮ ಇವರ ನಡುವಿನ ಜಗಳವೆಲ್ಲಾ ಕಾಮನ್. ಆದರೆ, ಕೇರಳದಲ್ಲಿ ವ್ಯಕ್ತಿಯೊಬ್ಬ ತನ್ನ ಅಕ್ಕನ ಮೇಲೆ ಕೋಪಗೊಂಡು ವಾಟ್ಸ್ಆಪ್‌ನಲ್ಲಿ ಬ್ಲಾಕ್ ಮಾಡಿದ್ದ. ಈ ವಿಷಯ ತಿಳಿದ ಬಳಿಕ ಅಕ್ಕ ತನ್ನ 21 ವರ್ಷದ ತಮ್ಮನ ಮನವೊಲಿಸಲು ಮಾಡಿದ ಪ್ರಯತ್ನವೀಗ ಕೇರಳದಲ್ಲಿ ಚರ್ಚೆಯ ವಿಚಾರವಾಗಿದೆ. ಈ ಘಟನೆ ನಡೆದಿದ್ದು ಕೇರಳದ ಇಡುಕ್ಕಿಯಲ್ಲಿ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕೃಷ್ಣಪ್ರಿಯಾ ಅವರು ತಮ್ಮ ಸಹೋದರ ಬಳಿ ಕ್ಷಮೆ ಕೇಳಲು ಅಂದಾಜು 434 ಮೀಟರ್ ಉದ್ದದ ಪತ್ರ ಬರೆದಿದ್ದಾರೆ. ಹೌದು.. ನೀವು ಓದ್ತಾ ಇರೋದು ನಿಜ. ಬಿಲ್ಲಿಂಗ್ ರೋಲ್‌ನಲ್ಲಿ ಬರೋಬ್ಬರಿ 434 ಮೀಟರ್ ಉದ್ದದ ಪತ್ರವನ್ನು ಬರೆದಿದ್ದು, ಇಡೀ ಪತ್ರ ಬರೆಯಲು 12 ಗಂಟೆ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಒಟ್ಟಾರೆ ಅವರ ಈ ಪತ್ರ 5 ಕೆಜಿ ತೂಕ ಹೊಂದಿದೆ. ಇದೀಗ ಈ ಪತ್ರ ವಿಶ್ವದಾಖಲೆಯ ಸನಿಹದಲ್ಲಿದೆ ಎಂದು ಹೇಳಲಾಗಿದೆ. ಕೃಷ್ಣಪ್ರಿಯಾ ಪ್ರಕಾರ, ಕಳೆದ ವರ್ಷ ಅಂತರರಾಷ್ಟ್ರೀಯ ಸಹೋದರರ ದಿನದಂದು ತನ್ನ ತಮ್ಮ ಕೃಷ್ಣಪ್ರಸಾದ್‌ಗೆ ಶುಭ ಹಾರೈಸುವುದನ್ನು ಮರೆತಿದ್ದಳು. ಇದರಿಂದ ಕೋಪಗೊಂಡ ತಮ್ಮ ಆಕೆಯನ್ನು ವಾಟ್ಸ್‌ಆಪ್‌ನಲ್ಲಿ ಬ್ಲಾಕ್ ಮಾಡಿದ್ದ. ಬಳಿಕ ತಮ್ಮ ತಮ್ಮನಿಗೆ ದೀರ್ಘ ಹಾಗೂ ಬೃಹತ್ ಪತ್ರ ಬರೆಯುವ ಮೂಲಕ ಕ್ಷಮೆ ಕೇಳಿದ್ದರಂತೆ. ಈಗ ಯುನಿವರ್ಸಲ್ ರೆಕಾರ್ಡ್ ಫೋರಂ ಪ್ರಕಾರ, ಕೃಷ್ಣಪ್ರಿಯಾ ಅವರು ಬರೆದಿರುವುದು ವಿಶ್ವದಲ್ಲಿಯೇ ಅತ್ಯಂತ ಉದ್ದದ ಪತ್ರ ಎನ್ನಲಾಗಿದೆ.
ತಮ್ಮನ ಸಂದೇಶಕ್ಕೆ ಪ್ರತಿಕ್ರಿಯೆ ನೀಡದ ಅಕ್ಕ: ಕೃಷ್ಣಪ್ರಸಾದ್ ತನ್ನ ಅಕ್ಕನಿಗೆ ಹಲವು ಸಂದೇಶಗಳನ್ನು ಕಳುಹಿಸಿದ್ದ. ಆದರೆ, ಅಕ್ಕ ಕೆಲಸದ ನಡುವೆ ಅದರತ್ತ ಗಮನ ನೀಡಿರಲಿಲ್ಲ. ಇದರ ನಡುವೆ ಆತನಿಗೆ ಉಳಿದವರು ಸಹೋದರರ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಉಳಿದವರೆಲ್ಲಾ ತನಗೆ ಶುಭಾಶಯಗಳನ್ನು ಕೋರಿದ್ದಾರೆ ಎನ್ನುವ ಸ್ಕ್ರೀನ್‌ಶಾಟ್ ಕೂಡ ಕಳುಹಿಸಿದ್ದ. ಆದರೆ, ಅಕ್ಕ ಇದಾವುದಕ್ಕೂ ಉತ್ತರಿಸದೇ, ಸಹೋದರ ದಿನಾಚರಣೆಯ ಶುಭವನ್ನೂ ಕೋರದೇ ಇದ್ದಾಗ ವಾಟ್ಸ್‌ಆಪ್‌ನಲ್ಲಿ ಆಕೆಯನ್ನು ಬ್ಲಾಕ್ ಮಾಡಿದ್ದ.
ನಾನು ಆತನಿಗೆ ವಿಶ್ ಮಾಡೋದು ಮರೆತಿದ್ದೆ. ಸಾಮಾನ್ಯವಾಗಿ ಸಹೋದರನ ದಿನದಂದು ಅವನಿಗೆ ಕರೆ ಮಾಡಿ ಮಾತನಾಡುತ್ತಿದ್ದೆ. ಇಲ್ಲದೇ ಇದ್ದರೆ ಮೆಸೇಜ್ ಆದರೂ ಕಳಿಸುತ್ತಿದ್ದೆ. ಆದರೆ, ಕಳೆದ ವರ್ಷ ನನ್ನ ನಿಬಿಡ ಕೆಲಸದ ನಡುವೆ ಇದು ಸಾಧ್ಯವಾಗಿರಲಿಲ್ಲ. ಅತ ನನಗೆ ಉಳಿದವರೆಲ್ಲಾ ವಿಶ್ ಮಾಡಿದ್ದಾರೆ ಎಂದು ತಿಳಿಸಿದ ಸ್ಕ್ರೀನ್ ಶಾಟ್‌ಅನ್ನೂ ಕಳಿಸಿದ್ದ. ನನ್ನ ಮತ್ತು ಅವನ ಸಂಬಂಧ ಹೇಗಿದೆ ಎಂದರೆ ತಾಯಿ-ಮಗನ ರೀತಿ ಇದೆ. ಇಷ್ಟೆಲ್ಲಾ ಆದ ಬಳಿಕ ಆತನ ನನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದ. ವಾಟ್ಸ್‌ಆಪ್‌ನಲ್ಲೂ ಬ್ಲಾಕ್ ಮಾಡಿದ್ದ ಎಂದು ಕೃಷ್ಣಪ್ರಿಯಾ ತಿಳಿಸಿದ್ದಾರೆ.
ಗುದದ್ವಾರದ ಸಂಭೋಗದ ಬಲವಂತ: ಅಪರಾಧವೆಂದ ಕೋಲ್ಕತ ಹೈಕೋರ್ಟ್
ರೋಲ್‌ಪೇಪರ್‌ನಲ್ಲಿ ಬರೆದ ಪತ್ರ: ತಮ್ಮನೊಂದಿಗೆ ಮಾತನಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅರಿವಾಗಿತ್ತು. ಕಳೆದ ವರ್ಷದ ಮೇ 25 ರಂದು ಆತನಿಗೆ ನಾನು ಪತ್ರ ಬರೆಯಲು ಆರಂಭಿಸಿದೆ. ಮೊದಲ ಎ4 ಸೈಜ್‌ನ ಪೇಪರ್‌ನಲ್ಲಿ ಬರೆಯಲು ಆರಂಭಿಸಿದೆ. ಆದರೆ, ನನ್ನ ಭಾವನೆಗಳನ್ನು ತಿಳಿಸಲು ಈ ಹಾಳೆ ಕಡಿಮೆಯಾಗುತ್ತದೆ ಎಂದು ನನಗೆ ಅನಿಸಿತು. ಬೇರೆ ಯಾವುದೇ ಪೇಪರ್ ನನ್ನ ಬಳಿ ಇದ್ದಿರಲಿಲ್ಲ. ಅದಕ್ಕಾಗಿ ನಾನಿ ಬಿಲ್ಲಿಂಗ್ ರೋಲ್‌ನಲ್ಲಿ ಬರೆಯಲು ಆರಂಭಿಸಿದೆ. ಅದಕ್ಕಾಗಿ 15 ಬಿಲ್ಲಿಂಗ್ ರೋಲ್‌ಗಳನ್ನು ತಂದು ಅದರಲ್ಲಿ ನನ್ನೆಲ್ಲಾ ಭಾವನೆಗಳನ್ನು ಬರೆದೆ. ಇದು ಬರೆದು ಮುಗಿಸುವ ಹೊತ್ತಿಗೆ 12 ಗಂಟೆ ಬೇಕಾಯಿತು ಎಂದಿದ್ದಾರೆ.
ಉದ್ಯೋಗ vs. ಕುಟುಂಬ ... ಐಪಿಎಸ್ ಅಧಿಕಾರಿ ಡಿ. ರೂಪಾ ಹಳೇ ವೀಡಿಯೋ ಈಗ ವೈರಲ್
ಅತ್ಯಂತ ದೀರ್ಘ ಪತ್ರ: ಬರೆದ ಪತ್ರವನ್ನು ಪ್ಯಾಕ್ ಮಾಡುವುದೇ ಸವಾಲಿನ ಕೆಲಸವಾಗಿತ್ತು. ಪ್ರತಿ ರೋಲ್ ಅಂದಾಜು 30 ಮೀಟರ್ ಉದ್ದವಿದ್ದವು. ಇಂಥ ಸಮಯದಲ್ಲಿ ಎಲ್ಲವನ್ನೂ ಸೇರಿಸಿ ಒಂದೇ ಬಾಕ್ಸ್‌ನಲ್ಲಿ ಹಾಕಿ ಪ್ಯಾಕ್ ಮಾಡಿದೆ. ಪೋಸ್ಟ್ ಆಫೀಸ್ ಕೂಡ ಈ ಬಾಕ್ಸ್‌ಅನ್ನು ತೆಗೆದುಕೊಂಡಿತು. ಒಟ್ಟು 5.27 ಕೆಜಿ ಪ್ಯಾಕ್ ಇದಾಗಿತ್ತು. ಅಲ್ಲಿ ಕೂಡ ಯಾವುದೇ ಸಮಸ್ಯೆ ಆಗಲಿಲ್ಲ. ಎರಡು ದಿನಗಳ ಬಳಿಕ ತಮ್ಮ ಈ ಬಾಕ್ಸ್‌ಅನ್ನು ಸ್ವೀಕರಿಸಿದ. ಬಹುಶಃ ಬರ್ತ್‌ಡೇ ಗಿಫ್ಟ್ ಇರಬಹುದು ಎಂದು ಆತ ಭಾವಿಸಿದ್ದ. ಕೃಷ್ಣಪ್ರಸಾದ್ ಇದ್ದನ್ನು ನೋಡಿ, ಗಿನ್ನೆಸ್ ವಿಶ್ವದದಾಖಲೆಗೂ ನೋಂದಣಿ ಮಾಡಿದ್ದಾನೆ. ಅದರ ಫಲಿತಾಂಶ ಇನ್ನಷ್ಟೇ ಬರಬೇಕಿದೆ ಎಂದಿದ್ದಾರೆ. ಪ್ರತಿ ವರ್ಷದ ಮೇ 24 ಅನ್ನು ಸಹೋದರರ ದಿನ ಎಂದು ಆಚರಿಸಲಾಗುತ್ತದೆ.