ಹಾಯ್ ಜನರೇ, ಬನ್ನಿ ಬನ್ನಿ ಜನರೇ ಎಂದು ಹೇಳುತ್ತ ರೀಲ್ಸ್ ಮೂಲಕ ಫೇಮಸ್ ಆಗಿರೋ ಕಿಪ್ಪಿ ಕೀರ್ತಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಕಿಪ್ಪಿ ಕೀರ್ತಿ ಅವರು ಬ್ರೇಕಪ್ ಮಾಡಿಕೊಂಡಿರುವ ವಿಚಾರವನ್ನೇ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಅವರು ಕಾರಣವನ್ನು ಕೂಡ ಹೇಳಿದ್ದಾರೆ. ಕಿಪ್ಪಿ ಕೀರ್ತಿ ಅವರು ಮುತ್ತು ಎನ್ನುವವರನ್ನು ಪ್ರೀತಿಸುತ್ತಿದ್ದರಂತೆ.
ಕಿಪ್ಪಿ ಕೀರ್ತಿ ಪೋಸ್ಟ್ ಏನು?
“ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ಪ*** ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ . ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ” ಎಂದು ಕಿಪ್ಪಿ ಕೀರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೊನೆಗೂ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದ ಕಿಪಿ ಕೀರ್ತಿ; ಫ್ಯಾಮಿಲಿ ಸಪೋರ್ಟ್ ಇಲ್ಲ ಎಂದು ಬೇಸರ
ವೀಕ್ಷಕರು ಏನು ಹೇಳಿದ್ದಾರೆ?
- ಯಾಕೆ ಕಿಪ್ಪಿ ಇದೆಲ್ಲಾ? ಓದು ಚೆನ್ನಾಗಿ, ಕೆಲಸ ಮಾಡು, ದುಡ್ಡು ಮಾಡು, ಜಗತ್ತಿನಲ್ಲಿ ದುಡ್ಡೇ ದೊಡ್ಡಪ್ಪ... ಮತ್ತೆ ನಿನ್ನ ಇಟ್ಕೊಂಡು ಕೆಲಸಕ್ಕೆ ಬಾರದೇ ಯೂಟ್ಯೂಬ್ ಚಾನೆಲ್ ಅವರು ನಿನ್ನಿಂದ ದುಡ್ಡು ಮಾಡಿಕೊಂಡು ಅವರು ಜಾಲಿಯಾಗಿ ಇರುತ್ತಾರೆ, ಇದೆಲ್ಲಾ ಬಿಟ್ಟು ದುಡ್ಡು ಮಾಡಿ, ನಿನ್ನ ತಾಯಿಗೆ ಚೆನ್ನಾಗಿ ನೋಡಿಕೋ.
- ಹೋಗ್ಲಿ ಬಿಡು, ಕಿಪಿ ಖುಷಿಯಾಗಿ ಇರು, ನಿನ್ ಪ್ರೀತಿ ನಿಂಗೆ ಸಿಗುತ್ತೆ
- ದಯವಿಟ್ಟು ಈ ತಪ್ಪು ಯಾರು ಮಾಡಬೇಡಿ ಪ್ಲೀಸ್. ಪ್ರೀತಿ ಹೆಸರು ಹೇಳಿಕೊಂಡು ಇನ್ನೊಬ್ಬರ ಲೈಫ್ ಅಲ್ಲಿ ಆಟ ಆಡಬೇಡಿ.
- ನೋಡಿ ಇದೆಲ್ಲ ನಾಟಕ, ನಿಂಗೆ ಅರ್ಥ ಆಗಲ್ವಾ? ನೀನು ಆರಾಮಾಗಿ ಇರು ಅಷ್ಟೇ. ನಿಮ್ಮ ಅಮ್ಮನನ್ನು ಚೆನ್ನಾಗಿ ನೋಡ್ಕೋಳಿ.
- ನಂಗೆ ಯಾಕೋ ಡೌಟ್ ಹೊಡಿತಾ ಇದೆ. ಇಬ್ರು ಪಬ್ಲಿಸಿಟಿಗೆ ಹೀಗೆ ಮಾಡ್ತಾ ಇದ್ದಾರೆ ಆಂತ. ಮಾಡೋಕೆ ಕ್ಯಾಮೆನೂ ಇಲ್ಲ. ಮನೆಯವರು ನೋಡಿದ ಸಂಬಂಧಗಳೆ ಜಾಸ್ತಿ ದಿನ ಉಳಿಯದ ಕಾಲ ತಲುಪಿಬಿಟ್ಟಿದ್ದೀವಿ. ಇನ್ನೂ ಸೋಶಿಯಲ್ ಮೀಡಿಯಾದ್ದು ಉಳಿತದ ಒಳ್ಳೆ ಮಕ್ಕಳಾಟ ಬಿಟ್ಟು ಉದ್ಧಾರ ಆಗೋದು ಹೇಗೆ ಆಂತ ನೋಡ್ಕೊಳ್ಳಿ
- ಮುಂದೆ ಯಾರನ್ನು ನಂಬಿ ಮೋಸ ಹೋಗ್ಬೇಡ, ಇದೊಂದು ಜೀವನದ ಪಾಠ ಅಂತ ತಿಳ್ಕೊ. ಇವನಿಗಿಂತ ಒಳ್ಳೆ ಮನಸ್ಸೂ ಹುಡುಗ ಸಿಕ್ತಾನೆ.
- ಯಾರು ಯಾರಿಗೆ ಮೋಸ ಮಾಡಿದ್ರು ಅನ್ನೋದು ಆ ಭಗವಂತ ಇದ್ದಿದ್ರೆ ಗೊತ್ತು ಮಾಡ್ಲಿ.....
- ಯಾವುದೇ ಕಾರಣಕ್ಕೂ ಕೆಟ್ಟ ನಿರ್ಧಾರ ತಗೋಬೇಡ, ಹೋದ್ರೆ ಹೋಗ್ತಾನೆ ಬಿಡು. ಅವನನ್ನು ನೋಡಿ ಹೊಟ್ಟೆ ಉರ್ಕೋಬೇಕು. ಆತರ ಬೆಳಿ. ನೀನು ನಿನ್ನ ಬುದ್ಧಿ ನಿನ್ನ ಕಲಿತುಕೊಂಡೆ, ಯಾರನ್ನು ನಂಬಬೇಡ.
