ಪ್ರಶ್ನೆ: ನನ್ನ ಮದುವೆಯಾಗಿ ಎರಡು ವರ್ಷವಾಗಿದೆ. ನನ್ನ ಗಂಡನ ಒಂದು ನಡವಳಿಕೆ ನನಗೆ ಭಾರೀ ಚಿಂತೆ ಉಂಟುಮಾಡಿದೆ. ಮದುವೆಯಾದ ಹೊಸದರಲ್ಲಿ ಇದು ಅಷ್ಟಾಗಿ ಇರಲಿಲ್ಲ ಅಥವಾ ನಾನು ಗಮನಿಸಿರಲಿಲ್ಲ. ಇತ್ತೀಚೆಗೆ ಅವರ ಈ ವರ್ತನೆ ಹೆಚ್ಚಾಗಿದೆ. ಅದೇನು ಎಂದರೆ, ಇತರರು ಸೆಕ್ಸ್ ಮಾಡುವುದನ್ನು ಕದ್ದು ನೋಡಲು ಅವರು ತುಂಬಾ ಇಷ್ಟಪಡುತ್ತಾರೆ. ಅವರು ಒಂದು ಬೈನಾಕ್ಯುಲರ್ ತಂದು ಇಟ್ಟುಕೊಂಡಿದ್ದಾರೆ. ನಮ್ಮ ಎತ್ತರದ ಫ್ಲ್ಯಾಟ್‌ನ ಕಿಟಕಿಯಿಂದ ಹಲವು ಮನೆಗಳ ಬೆಡ್‌ರೂಮ್ ಕಾಣಿಸುತ್ತದೆ. ನನ್ನ ಪತಿ ಬೈನಾಕ್ಯುಲರ್ ಮೂಲಕ ಅಲ್ಲಿ ನಡೆಯುವುದನ್ನು ವೀಕ್ಷಿಸುತ್ತಾರೆ. ವೀಕ್ಷಿಸಿದ ಬಳಿಕ ಅವರಿಗೆ ಉದ್ರೇಕವಾಗಿ, ಬಂದು ನನ್ನನ್ನು ಕೂಡುತ್ತಾರೆ. ಹಾಗೆ ವೀಕ್ಷಿಸಿದ ದಿನ ನಮ್ಮ ಮಿಲನ ಮಹೋತ್ಸವ ತುಂಬಾ ಚೆನ್ನಾಗಿ ನಡೆಯುತ್ತದೆ; ನನ್ನನ್ನು ತೃಪ್ತಿಪಡಿಸುತ್ತಾರೆ. ಹಾಗಾಗಿ ನಾನೂ ಅವರ ಈ ಅಭ್ಯಾಸಕ್ಕೆ ಅಡ್ಡಿ ಮಾಡಿಲ್ಲ. ಕೆಲವೊಮ್ಮೆ ಅವರು ನಾನು ನಗ್ನವಾಗಿ ಇರುವುದನ್ನೂ ಕದ್ದು ವೀಕ್ಷಿಸುವುದನ್ನು ನಾನು ಗಮನಿಸಿದ್ದೇನೆ. ನಾನು ಬಟ್ಟೆ ಬದಲಿಸುವಾಗ ಬೆಡ್‌ರೂಮ್ ಬಾಗಿಲಿನಿಂದ ಕದ್ದು ನೋಡುತ್ತಾರೆ. ಅದೇಕೆ ಹಾಗೆ, ನೇರವಾಗಿಯೇ ಒಳಬಂದು ನೋಡಬಹುದಲ್ಲಾ ಎಂದು ಆಹ್ವಾನ ನೀಡಿದರೆ, ನೇರವಾಗಿ ನೋಡಿದರೆ ಮಜಾ ಬರುವುದಿಲ್ಲ, ಕದ್ದು ನೋಡಿದರೆ ಉದ್ರೇಕವಾಗುತ್ತದೆ ಎನ್ನುತ್ತಾರೆ. ನಮ್ಮಲ್ಲಿ ಇರುವ ಗೆಸ್ಟ್ ರೂಮ್‌ಗೆ ಒಂದು ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಯಾರಾದರೂ ನಮ್ಮ ಗೆಳೆಯ- ಗೆಳತಿಯರು ಬಂದು ಉಳಿದುಕೊಂಡರೆ, ಅವರು ಡ್ರೆಸ್ ಬದಲಿಸುವುದು, ಸೆಕ್ಸ್ ಆಡುವುದನ್ನು ಕದ್ದು ನೋಡಿ ಉದ್ರೇಕಗೊಂಡು ನನ್ನನ್ನು ಖುಷಿಪಡಿಸುತ್ತಾರೆ. ಇವರ ಸಹವಾಸದಿಂದ ನನಗೂ ಈ ಚಟ ಅಂಟಿಕೊಡರೆ ಎಂಬ ಭಯವಾಗುತ್ತಿದೆ. ಇದುವರೆಗೂ ಅವರ ಈ ಚಟದಿಂದ ಯಾವ ಅಪಾಯವೂ ಆಗಿಲ್ಲ. ಆದರೆ ಇದರಿಂದ ತೊಂದರೆ ಆಗಬಹುದೇ?

ಉತ್ತರ: ಇದುವರೆಗಿನ ನಿಮ್ಮ ಮಾಹಿತಿಯಂತೆ, ಇದುವರೆಗೂ ಯಾವ ಅಪಾಯವೂ ಆಗಿಲ್ಲ. ಹೀಗೇ ಇದ್ದರೆ, ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗದೇ ಇದ್ದರೆ, ನಿಮಗೂ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಮ್ಮ ಗೆಸ್ಟ್ ರೂಮಿಗೆ ಸಿಸಿ ಕ್ಯಾಮೆರಾ ಹಾಕಿ, ನಿಮ್ಮ ಅತಿಥಿಗಳ ಚಟುವಟಿಕೆ ಕದ್ದು ವೀಕ್ಷಿಸುತ್ತಾರೆ ಅನ್ನುತ್ತೀರಲ್ಲಾ, ಇದು ತಪ್ಪಲ್ಲವೇ? ಇದು ನಿಮ್ಮ ಅತಿಥಿಗಳಿಗೆ ತಿಳಿದರೆ ನಿಮ್ಮ ಮಿತ್ರತ್ವಕ್ಕೇ ಧಕ್ಕೆ ಆಗಲಾರದೇ?

#Feelfree: ನಾನು ವಯಾಗ್ರಾ ತೆಗೆದುಕೊಳ್ಳಬಹುದೇ? ...

ಇನ್ನೊಂದು, ಈ ಬಗೆಯ ಕದ್ದು ನೋಡುವ ಆಸೆ ಎಲ್ಲರಲ್ಲೂ ಅಲ್ಪಸ್ವಲ್ಪ ಇದ್ದೇ ಇರುತ್ತದೆ. ಆರೋಗ್ಯಕರ ಲೈಂಗಿಕ ಹವ್ಯಾಸ ಇರುವವರು, ರೊಮ್ಯಾನ್ಸ್ ಮತ್ತು ಸೆಕ್ಸ್ ಬಗ್ಗೆ ಹೆಚ್ಚು ಆಸಕ್ತರಾಗಿರುವವರು, ಸೆಕ್ಸ್‌ನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಇಷ್ಟಪಡುವವರು ಇಂಥ ಕದ್ದು ನೋಡುವಿಕೆಯಲ್ಲಿ ಒಂದಲ್ಲ ಒಂದು ಬಾರಿ ತೊಡಗಿಯೇ ಇರುತ್ತಾರೆ, ಇದೇನೂ ಮಹಾ ತಪ್ಪಲ್ಲ. ಕದ್ದು ನೋಡುವುದು ನಮ್ಮ ಸೆಕ್ಸ್ ಆಸಕ್ತಿಯನ್ನೂ ಉದ್ರೇಕವನ್ನೂ ಹೆಚ್ಚಿಸುತ್ತದೆ ಎಂದು ಹೇಳುವುದಕ್ಕೆ ವೈಜ್ಞಾನಿಕ ಪುರಾವೆ ಏನೂ ಬೇಕಾಗಿಲ್ಲ. ನಮಗೆ ಗೊತ್ತೇ ಇದೆ. ಪೋರ್ನ್ ನೋಡುವುದು ಇನ್ನೇನು? ಅದೂ ಇತರರ ಲೈಂಗಿಕೆ ಕ್ರಿಯೆಯನ್ನು ಕದ್ದು ನೋಡುವಿಕೆಯೇ ಅಲ್ಲವೆ? 


ಇದನ್ನು ಇಂಗ್ಲಿಷ್‌ನಲ್ಲಿ ಸಾಮಾನ್ಯ ಮಾತಿನಲ್ಲಿ ಪೀಪಿಂಗ್ ಅಂತಲೂ. ಪಾರಿಭಾಷಿಕವಾಗಿ ಪೊವೆಯರಿಸಮ್ ಅಂತಲೂ ಕರೆಯುತ್ತಾರೆ. ಆದರೆ ಈ ಪರಿಪಾಠವೇ ಮುಂದೆ ಚಟವಾಗಿ ಪರಿಣಮಿಸಿದರೆ ಅದೊಂದು ಮಾನಸಿಕ ಗೀಳಾಗಿ ಪರಿವರ್ತನೆ ಆಗುತ್ತದೆ. ಅದನ್ನು ವೊವೆಯರಿಸ್ಟಿಕ್ ಡಿಸಾರ್ಡರ್ ಎನ್ನುತ್ತಾರೆ. ಇದೊಂದು ಮಾನಸಿಕ ಸಮಸ್ಯೆ ಹಾಗೂ ಇದಕ್ಕೆ ಚಿಕಿತ್ಸೆ ಬೇಕು, ಕೌನ್ಸೆಲಿಂಗ್ ಬೇಕು. ನೀವು ಕೆಲವು ವರ್ಷಗಳ ಹಿಂದೆ ಬಂದ 'ಕಾಡಿನ ಬೆಂಕಿ' ಎಂಬ ಸಿನಿಮಾವನ್ನು ನೋಡಿರಬಹುದು. ಅದರಲ್ಲಿ ನಾಯಕನಿಗೆ ಹೀಗೆ ಕದ್ದು ನೋಡುವ ಗೀಳು ಇರುತ್ತದೆ. ಅದರಿಂದಲೇ ಅವನು ಸೆಕ್ಸ್ ಪ್ರಚೋದನೆ ಪಡೆಯುತ್ತಿರುತ್ತಾನೆ. ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದೆ ಪಾಡು ಪಡುತ್ತಾನೆ.

#Feelfree: ಆಪರೇಶನ್ ಮಾಡಿಸಿಕೊಂಡ್ರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತಾ? ...

ನಿಮ್ಮ ಗಂಡ ಹಾಗಾಗುವುದು ಬೇಡ. ಅವರ ಈ ಹವ್ಯಾಸದ ಬಗ್ಗೆ ಒಂದು ನಿಗಾ ಇರಲಿ. ಅಕ್ಕಪಕ್ಕದವರ ಚಟುವಟಿಕೆಯನ್ನು ಕದ್ದು ನೋಡಿ ಪೆಟ್ಟು ತಿನ್ನುವ ಸ್ಥಿತಿ ಬರದಂತೆ ನೋಡಿಕೊಳ್ಳಿ. ಹಾಗೇ ಇತರ ಲೈಂಗಿಕ ಚಟುವಟಿಕೆಗಳ ಮೂಲಕ ಅವರ ಸೆಕ್ಸ್ ಆಸಕ್ತಿಯನ್ನು ಪ್ರಚೋದಿಸಿ ತಣಿಸುವ ವಿಧಾನಗಳನ್ನು ಕಂಡುಕೊಳ್ಳಿ. ಉದಾಹರಣೆಗೆ, ನೀವೇ ಅವರ ಪೀಪಿಂಗ್‌ಗೆ ಮಾಧ್ಯಮ ಆಗಬಹುದು; ನಿಮ್ಮ ಕ್ರಿಯೆಯನ್ನು ಚಿತ್ರೀಕರಿಸಿಕೊಂಡು ಅದನ್ನು ನೋಡಿ ಆನಂದ ಪಡಬಹುದು; ರೋಲ್‌ ಪ್ಲೇ ಮಾಡಿ ಅದರಿಂದ ಸುಖ ಅನುಭವಿಸಬಹುದು- ಹೀಗೆ ಹಲವು ಮಾರ್ಗಗಳಿವೆ. ಅನ್ಯರಿಗೆ ತೊಂದರೆ ಆಗದಂತೆ ಇವುಗಳನ್ನು ರೂಢಿಸಿಕೊಂಡು ಸುಖ ಪಡೆಯಿರಿ. 

#Feelfree: ಮೊದಲ ರಾತ್ರಿಯೇ ಕೊನೆಯ ರಾತ್ರಿ ಅಗಬಾರದು ಎಂದಿದ್ದರೆ...! ...