Asianet Suvarna News Asianet Suvarna News

#Feelfree: ಮೊದಲ ರಾತ್ರಿಯೇ ಕೊನೆಯ ರಾತ್ರಿ ಅಗಬಾರದು ಎಂದಿದ್ದರೆ...!

ಮೊದಲ ರಾತ್ರಿಯೇ ಸೆಕ್ಸ್‌ನಲ್ಲಿ ಮಧುರ ಅನುಭವ ಉಂಟಾಗುತ್ತದೆಂದು ನಿರೀಕ್ಷಿಸಬೇಡಿ. ನೀವು ಅದಕ್ಕಾಗಿ ಕೊಂಚ ಸಮಯ ಕಾಯಬೇಕಾದೀತು, ಸ್ವಲ್ಪ ಪ್ರಯತ್ನ ಪಡಬೇಕಾದೀತು. 

Do not expect your first night a real honeymoon in life
Author
Bengaluru, First Published Jan 10, 2021, 3:08 PM IST

ಪ್ರಶ್ನೆ 1: ನಾನು ಮುಂದಿನ ತಿಂಗಳು ಮದುವೆ ಆಗುತ್ತಿದ್ದೇನೆ. ಹುಡುಗಿ ನನಗೆ ಅಪರಿಚಿತೆ. ಅಂದರೆ ಹೆತ್ತವರು ನೋಡಿ ನಾನು ಮದುವೆ ಆಗುತ್ತಿರುವುದು. ಆಕೆಯ ಲೈಂಗಿಕ ಇಷ್ಟ- ಅನಿಷ್ಟಗಳ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ. ಆದರೆ ನಮ್ಮಿಬ್ಬರ ಪ್ರಥಮ ರಾತ್ರಿ ಸ್ಮರಣೀಯ ಆಗಿರಬೇಕು ಎಂಬ ಮನಸ್ಸಂತೂ ನನಗೆ ಇದೆ. ಇದನ್ನು ಸಾಧ್ಯವಾಗಿಸುವುದು ಹೇಗೆ?

ಪ್ರಶ್ನೆ 2: ನಾನು ಇತ್ತೀಚೆಗೆ ತಾನೇ ಮದುವೆಯಾದೆ. ಮದುವೆಯ ಮೊದಲ ರಾತ್ರಿ ಛತ್ರದ ತುಂಬ ನೆಂಟರಿಷ್ಟರು ಇದ್ದುದರಿಂದ ಏನೂ ಮಾಡಲಾಗಲಿಲ್ಲ. ಎರಡನೇ ರಾತ್ರಿ ನಮಗೆ ಏಕಾಂತ ಸಿಕ್ಕಿತು. ಆಕೆ ಸೆಕ್ಸ್‌ ಅನ್ನು ಇಷ್ಟಪಡಲಿಲ್ಲ ಅನಿಸಿತು. ನಾನು ಮುಂದುವರಿಯಲು ಹೊರಟಾಗ ಆಕೆ ತಡೆದಳು. ಇನ್ನೊಂದೆರಡು ದಿನ ಬಿಟ್ಟು ನೋಡೋಣ ಎಂದಳು. ಆದರೆ ನಾನು ಬಿಡಲಿಲ್ಲ. ಹುಡುಗಿಯರು ಬೇಡ ಎಂದರೆ ಬೇಕು ಎಂದಂತೆ ಅಲ್ಲವೇ- ಹಾಗೆ ನನ್ನ ಗೆಳೆಯರು ಹೇಳುತ್ತಿದ್ದರು. ಆದ್ದರಿಂದ ನಾನು ಮುಂದುವರಿದು ಸೆಕ್ಸ್ ಮಾಡಿಯೇಬಿಟ್ಟೆ. ಆದರೆ ಆಕೆಗೆ ಅದರಿಂದ ಆ ಭಾಗದಲ್ಲಿ ತೀರಾ ನೋವಾಯಿತು ಎಂದು ಆಕೆಯೇ ಹೇಳಿದಳು. ನಂತರ ಹದಿನೈದು ದಿನಗಳಾಯಿತು, ಆಕೆ ನನ್ನನ್ನು ಇನ್ನೊಮ್ಮೆ ಹತ್ತಿರ ಬರಲು ಬಿಟ್ಟಿಲ್ಲ. ಇನ್ನು ಮುಂದೆ ಸೆಕ್ಸ್‌ಗೆ ಆಕೆ ನನ್ನನ್ನು ಬಿಡುವಳೋ ಇಲ್ಲವೋ ಎಂಬ ಭಯ ಕಾಡುತ್ತಿದೆ. ಆಕೆಯನ್ನು ಒಲಿಸಿಕೊಳ್ಳುವುದು ಹೇಗೆ?

#Feelfree: ಆಪರೇಶನ್ ಮಾಡಿಸಿಕೊಂಡ್ರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತಾ? ...
 

ಉತ್ತರ: ನಿಮ್ಮಿಬ್ಬರ ಪ್ರಶ್ನೆಗೂ ಸೇರಿಸಿಯೇ ಉತ್ತರ ಕೊಡುತ್ತಿದ್ದೇನೆ. ಯಾಕೆಂದರೆ ನಿಮ್ಮಿಬ್ಬರ ಆತಂಕಗಳು ಬಹುತೇಕ ಒಂದೇ ಆಗಿವೆ. 
ಮೊದಲು, ನೀವು ಸೆಕ್ಸ್ ಎಂದರೆ ಏನೆಂದು ಅರಿತುಕೊಳ್ಳಬೇಕು. ತಾರುಣ್ಯದಲ್ಲಿ, ಮದುವೆಯಾದ ಹೊಸದರಲ್ಲಿ, ಸೆಕ್ಸ್ ನಡೆಸಲೇಬೇಕು ಎನ್ನುವ ಆತುರ, ದೇಹದ ಹುಮ್ಮಸ್ಸುಗಳು ಸಹಜ. ಅದಕ್ಕೆ ತಕ್ಕಂತೆ ಎಷ್ಟೋ ವರ್ಷಗಳಿಂದ ಕಾದ ಬಳಿಕ ಮದುವೆಯ ಮೂಲಕ ಅಪರೂಪವಾಗಿ ದೊರಕಿರುವ ದೈಹಿಕ ಸಾಂಗತ್ಯವೂ ಹತ್ತಿರದಲ್ಲೇ ಇರುವಾಗ, ಸೆಕ್ಸ್‌ಗೆ ಇನ್ನೇನೂ ತಡೆಯೇ ಇಲ್ಲ ಅನಿಸುವುದು ಸಹಜ. ಆದರೆ ಇದಿನ್ನೂ ಆರಂಭ ಮಾತ್ರ. ಸೆಕ್ಸ್‌ನ ಮೊದಲ ಪಾಠಗಳು ಇಲ್ಲಿಂದ ಆರಂಭವಾಗಬೇಕು. ಸೆಕ್ಸ್ ಕೂಡ ಜೀವನದ ಒಂದು ಅವಿಭಾಜ್ಯ ಅಂಗ. ದಾಂಪತ್ಯದ ಹೊಸದರಲ್ಲಿ ಅದು ಅನಿವಾರ್ಯವಾದ ಅಂಗವೂ ಹೌದು. ಗಂಡು- ಹೆಣ್ಣು ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳಲು ಬೆಡ್‌ರೂಂ ತುಂಬಾ ನೆರವಾಗುತ್ತದೆ. ವಾತ್ಸಾಯನ ಮಹರ್ಷಿ ಇದನ್ನು ಕಾಮಕಲೆ ಎನ್ನುತ್ತಾನೆ. ಇದೊಂದು ಕಲೆಯೂ, ಕೌಶಲ್ಯವೂ ಹೌದು. 

Do not expect your first night a real honeymoon in life


ಯಾವುದಕ್ಕೂ ಆತುರ ಇರಬಾರದು. ಮದುವೆಯಾದ ಮೊದಲ ದಿನವೇ ಸೆಕ್ಸ್ ಅನುಭವ ಪಡೆದುಬಿಡುತ್ತೇನೆ ಎಂಬ ಹಠ ಬೇಡ. ಸೆಕ್ಸ್ ಕೂಡ ಪ್ರೀತಿಯಂತೆಯೇ, ನಿಧಾನವಾಗಿ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಕಲೆ. ಗಂಡನಿಗೆ ಹೆಂಡತಿಯಾಗಲೀ ಹೆಂಡತಿಗೆ ಗಂಡನಾಗಲೀ ಒಂದೇ ದಿನದಲ್ಲಿ ಅರ್ಥವಾಗುವುದಿಲ್ಲವಷ್ಟೆ? ಒಂದಷ್ಟು ದಿನ ಒಟ್ಟಿಗೇ ಕಳೆದಾಗ ಇಬ್ಬರೂ ಒಬ್ಬರಿಗೊಬ್ಬರು ಅರ್ಥವಾಗಲು ತೊಡಗುತ್ತಾರೆ. ಹಾಗೇ ಒಂದೇ ದಿನದಲ್ಲಿ ಸೆಕ್ಸ್‌ನ ಬಗ್ಗೆ ಇನ್ನೊಬ್ಬರ ಅಭಿಪ್ರಾಯಗಳು ನಮಗೆ ಅರ್ಥವಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಈ ವಿಚಾರದಲ್ಲಿ ತಾಳ್ಮೆ ತುಂಬಾ ಅಗತ್ಯ. 

#Feelfree: ಗೊಂಬೆ ಜೊತೆಗೇ ಮೂಡ್ ಬರುತ್ತೆ, ಹೆಂಡ್ತಿ ಬೇಡ ಅನ್ಸುತ್ತೆ! ...

ಮೊದಲು ಗಂಡ- ಹೆಂಡತಿಯಾಗಲಿರುವವರು ಮದುವೆಗೂ ಮುನ್ನ ಒಂದೆರಡು ಬಾರಿ ಒಟ್ಟಿಗೆ ಕೂತು, ಹಲವು ವಿಚಾರಗಳಲ್ಲಿ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಬೇಕು. ಸಂಸಾರ, ಉದ್ಯೋಗ, ಅಡುಗೆ, ಕಲಿಕೆ, ಬಂಧುಗಳು- ಇತ್ಯಾದಿ ವಿಚಾರಗಳಲ್ಲಿ ಮಾತುಕತೆ ನಡೆದ ಬಳಿಕ ಸಂಗಾತಿಯ ಬಗ್ಗೆ ಒಂದು ಮನೋಚಿತ್ರ ನಿಮ್ಮಲ್ಲಿ ರೂಪುಗೊಳ್ಳುತ್ತದೆ. ಬಳಿಕ ಪ್ರೇಮದ ಬಗ್ಗೆ, ಮುಕ್ತವಾಗಿ ಮಾತಾಡುವಿರಾದರೆ ಕಾಮದ ಬಗ್ಗೆ ನಿಮ್ಮ ಆಸೆ, ಆಸಕ್ತಿ, ಆತಂಕ, ಭಯ, ಮುಜುಗರ ಇತ್ಯಾದಿಗಳನ್ನು ಹಂಚಿಕೊಳ್ಳಬಹುದು. ಪಾಶ್ಚಾತ್ಯರಲ್ಲಿ ಇದು ಸಹಜ. ಆದರೆ ಭಾರತೀಯರಲ್ಲಿ ಇನ್ನೂ ಕಾಮದ ಬಗ್ಗೆ ದಂಪತಿಗಳೇ ಮುಕ್ತವಾಗಿ ಮಾತನಾಡುವ ವಾತಾವರಣ ನಮ್ಮಲ್ಲಿ ರೂಪುಗೊಂಡಿಲ್ಲ. ಆದರೆ ಅದು ಅಗತ್ಯ. ಹೀಗೆ ನಿಮ್ಮ ಅಭಿಪ್ರಾಯ- ಆಸೆಗಳನ್ನು ಹಂಚಿಕೊಂಡ ಬಳಿಕವೇ ಇನ್ನೊಬ್ಬರ ದೇಹವನ್ನು ಮುಟ್ಟುವುದು ಸಲೀಸಾದ ಕ್ರಿಯೆ. ಹೆಣ್ಣುಮಕ್ಕಳು ಇನ್ನೊಬ್ಬರು, ಅವರು ಗಂಡನೇ ಆಗಿರಲಿ, ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಮೈಯನ್ನು ಮುಟ್ಟುವುದನ್ನು ಇಷ್ಟಪಡುವುದಿಲ್ಲ. ಅದು ಅಪರಾಧ ಕೂಡ. ಆದ್ದರಿಂದ, ಸೆಕ್ಸ್‌ಗೆ ಪರಸ್ಪರ ಸಮ್ಮತಿ ಅಗತ್ಯ. ಬಹುದಿನಗಳಿಂದ ಬೆಳೆದುಬಂದ ಒಂದು ಬಾಂಧವ್ಯವೂ ಅಗತ್ಯ. 

ಮೊದಲ ರಾತ್ರಿಯ ಅನುಭವ ಮೊದಲ ರಾತ್ರಿಯಂದೇ ಆಗಬೇಕೆಂದೇನಿಲ್ಲ. ಎರಡನೇ, ಮೂರನೇ, ಹತ್ತನೇ ರಾತ್ರಿಯೂ ಆಗಬಹುದು. ಅಲ್ಲಿಯವರೆಗೆ ಕಾಯುವ ತಾಳ್ಮೆ ಗಂಡಿಗೆ ಅಗತ್ಯ. ಸೆಕ್ಸ್‌ಗೆ ಸಜ್ಜಾಗಲು ಹೆಣ್ಣು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾಳೆ. ಆಕೆಯ ಸ್ವಂತ ಸಮಯ ತೆಗೆದುಕೊಳ್ಳಲಿ ಬಿಡಿ. ಇಷ್ಟು ದಿನವೇ ಕಾದಿದ್ದೀರಂತೆ, ಇನ್ನೊಂದಿಷ್ಟು ದಿನ ಕಾಯಲೇನು?

ಇನ್ನು, ಆತುರಗೆಟ್ಟು ಹೆಂಡತಿಯನ್ನು ನೋವಿಗೀಡುಮಾಡಿದ್ದೀರಿ. ಇದಕ್ಕಾಗಿ ಆಕೆಯ ಕ್ಷಮೆ ಯಾಚಿಸಿ. ತಾಳ್ಮೆ ಹಾಗೂ ಪ್ರೀತಿಗಳಿಂದ ಆಕೆಯ ಮನ ಗೆಲ್ಲಿ. ಉಳಿದದ್ದು ಸುಲಭವಾಗುತ್ತದೆ.

#Feelfree: ನಾನು ವಯಾಗ್ರಾ ತೆಗೆದುಕೊಳ್ಳಬಹುದೇ? ...


 

Follow Us:
Download App:
  • android
  • ios