ದಾಂಪತ್ಯ ಜೀವನದಲ್ಲಿ ಶಾರೀರಿಕ ಸಂಬಂಧ ಕೂಡ ಬಹಳ ಮುಖ್ಯ. ಅದು ಸರಿಯಾಗಿದ್ದರೆ ದಾಂಪತ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಆದ್ರೆ ಮನೆಯಲ್ಲಿರೋರು ದಂಪತಿ ಒಂದಾಗೋಕೆ ಬಿಡದಿದ್ರೆ ಏನ್ ಮಾಡೋದು?
ಗಂಡ – ಹೆಂಡತಿ (Husband - Wife) ಮಧ್ಯೆ ಮಾತ್ರ ಭಿನ್ನಾಭಿಪ್ರಾಯ ಬರ್ಬೇಕೆಂದೇನೂ ಇಲ್ಲ. ಪತಿ – ಪತ್ನಿ ಚೆನ್ನಾಗಿದ್ದರೂ ಅವರನ್ನು ಒಂದು ಮಾಡಲು ಬಿಡದ ಅನೇಕರಿರ್ತಾರೆ. ಅನೇಕ ದಾಂಪತ್ಯ (Marriage ) ಹಾಳಾಗೋದು ಈ ಮೂರನೇಯವರಿಂದಲೇ ಅನ್ನೋದು ಬೇಸರದ ಸಂಗತಿ. ದಾಂಪತ್ಯದಲ್ಲಿ ಸರಸ – ಸಲ್ಲಾಪ ಇರ್ಲೇಬೇಕು. ಸಾಮರಸ್ಯದ ಜೀವನಕ್ಕೆ ದಂಪತಿ ಹತ್ತಿರವಾಗುವುದು ಬಹಳ ಮುಖ್ಯ. ಇಬ್ಬರು ಶಾರೀರಿಕವಾಗಿ ಒಂದಾದಾಗ ಮತ್ತಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಬ್ಬರ ಮಧ್ಯೆ ಭಾವನಾತ್ಮಕ ಬೆಸುಗೆ ಇಲ್ಲಿಂದಲೇ ಶುರುವಾಗೋದು ಅಂದ್ರೆ ತಪ್ಪಾಗೋದಿಲ್ಲ. ಇಷ್ಟೆಲ್ಲ ಏಕೆ ಹೇಳ್ತಿದ್ದೇವೆ ಅಂದ್ರೆ ಇಲ್ಲೊಬ್ಬ ಮಹಿಳೆಗೆ ಆಕೆತ ಪತಿ ಚಿಕ್ಕಮ್ಮ (Aunt) ನೇ ವಿಲನ್ ಆಗಿದ್ದಾಳೆ. ಅಷ್ಟಕ್ಕೂ ಆಕೆ ವಿರಹದ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೇವೆ.
ಆಕೆಗೆ ಈಗ 24 ವರ್ಷ. ಮದುವೆಯಾಗಿ ವರ್ಷ ಕಳೆದಿದೆ. ಪತಿ ವೈದ್ಯ. ಇಬ್ಬರು ಅತ್ತೆ – ಮಾವನಿಂದ ದೂರವಿದ್ದಾರೆ. ಆದ್ರೆ ಪತಿಯ ಚಿಕ್ಕಮ್ಮನ ಜೊತೆ ಇವರು ವಾಸವಾಗಿದ್ದಾರೆ. ಪತಿ ಚಿಕ್ಕಮ್ಮನಿಗೆ ಮದುವೆಯಾಗಿಲ್ಲ. ಆಕೆ ಪಾಲಕರು ಆಕೆ ಜೊತೆಗಿಲ್ಲ. ಹಾಗಾಗಿ ಪತಿ, ಚಿಕ್ಕಮ್ಮನನ್ನು ತಾಯಿ ರೀತಿಯಲ್ಲಿ ನೋಡಿಕೊಳ್ತಿದ್ದಾನೆ. ಮಹಿಳೆ ಹಾಗೂ ಆಕೆ ಗಂಡನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರ ಮಧ್ಯೆ ಪ್ರೀತಿಯಿದೆ. ಆದ್ರೆ ಇವರಿಬ್ಬರು ಒಂದಾಗಲು ಚಿಕ್ಕಮ್ಮ ಬಿಡ್ತಿಲ್ಲ. ಮಹಿಳೆಗೆ ಚಿಕ್ಕಮ್ಮನೇ ವಿಲನ್.
ಚಿಕ್ಕಮ್ಮನ ವಯಸ್ಸು 50 ವರ್ಷ. ಗಂಡ – ಹೆಂಡತಿ ಒಟ್ಟಿಗೆ ಇರಬೇಕೆನ್ನುವಷ್ಟರಲ್ಲಿ ಚಿಕ್ಕಮ್ಮನ ಸಮಸ್ಯೆ ಶುರುವಾಗುತ್ತದೆ.
ರಾತ್ರಿಯೂ ಕಾಟಕೊಡ್ತಾಳೆ ಚಿಕ್ಕಮ್ಮ : ಬೆಳಿಗ್ಗೆ ಹೋಗ್ಲಿ ರಾತ್ರಿಯೂ ಚಿಕ್ಕಮ್ಮ ಇವರನ್ನು ಬಿಡ್ತಿಲ್ಲ. ಇನ್ನೇನು ಇಬ್ಬರು ಒಂದಾಗ್ಬೇಕು ಎನ್ನುಷ್ಟರಲ್ಲಿ ಚಿಕ್ಕಮ್ಮನ ಒಂದೊಂದೇ ಅವತಾರ ಶುರುವಾಗುತ್ತದೆ. ಒಂದು ದಿನ ಯಾರೋ ಮನೆಗೆ ನುಗ್ಗಿದ್ರು ಎನ್ನುತ್ತ ಬರುವ ಚಿಕ್ಕಮ್ಮ ಇನ್ನೊಂದು ದಿನ ತಲೆ ಸುತ್ತಿದಂಗಾಗ್ತಿದೆ ಎನ್ನುತ್ತ ದಂಪತಿ ಕೋಣೆಗೆ ಬರ್ತಾಳೆ. ಮತ್ತೊಂದು ದಿನ ಹುಷಾರಿಲ್ಲ ಎನ್ನುತ್ತ ಕೋಣೆಗೆ ಬರ್ತಾಳೆ. ಒಟ್ಟಿನಲ್ಲಿ ಇಬ್ಬರು ಒಂದಾಗಲು ಅವಕಾಶವೇ ಸಿಗ್ತಿಲ್ಲ. ಚಿಕ್ಕಮ್ಮನ ಈ ಎಲ್ಲ ಅವತಾರ ಮುಗಿದ್ಮೇಲೆ ಇವರಿಗೆ ಸಂಬಂಧ ಬೆಳೆಸುವ ಮೂಡ್ ಇರೋದಿಲ್ಲ. ಚಿಕ್ಕಮ್ಮನ ಜೊತೆ ಇಬ್ಬರಲ್ಲಿ ಒಬ್ಬರು ಸದಾ ಇರ್ಲೇಬೇಕು. ಕೆಲಸದವರನ್ನು ನೇಮಕ ಮಾಡಿದ್ರೂ ಚಿಕ್ಕಮ್ಮ ಕೋಣೆ ಬಾಗಿಲು ತಟ್ಟೋದನ್ನು ಬಿಡ್ತಿಲ್ಲ.
ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್
ಚಿಕ್ಕಮ್ಮ ನಾಟಕವಾಡ್ತಿದ್ದಾಳಾ? : ಪದೇ ಪದೇ ಘಟನೆಗಳು ಮರುಕಳಿಸ್ತಾ ಇರೋದ್ರಿಂದ ಮಹಿಳೆಗೆ ಚಿಕ್ಕಮ್ಮ ನಾಟಕವಾಡ್ತಿದ್ದಾಳಾ ಎಂಬ ಅನುಮಾನ ಶುರುವಾಗಿದೆ. ಆದ್ರೆ ಇದನ್ನು ಹೇಳುವ ಧೈರ್ಯವಿಲ್ಲ. ಯಾಕೆಂದ್ರೆ ಪತಿ, ಚಿಕ್ಕಮ್ಮನನ್ನು ತುಂಬಾ ಪ್ರೀತಿಸ್ತಾನೆ. ಆಕೆ ಬಗ್ಗೆ ಅನುಮಾನಪಟ್ಟರೆ ದಾಂಪತ್ಯ ಹಾಳಾಗುವ ಸಾಧ್ಯತೆಯಿದೆ. ಪತಿಗೆ ವಿಷ್ಯ ಹೇಳದೆ, ಚಿಕ್ಕಮ್ಮನ ಸತ್ಯ ಹೇಗೆ ತಿಳಿದುಕೊಳ್ಳೋದು ಎಂಬ ಪ್ರಶ್ನೆ ಮಹಿಳೆಯನ್ನು ಕಾಡ್ತಿದೆ. ತಜ್ಞರ ಸಲಹೆ : ದಾಂಪತ್ಯದಲ್ಲಿ ಸಂಭೋಗ ಕೂಡ ಬಹಳ ಮುಖ್ಯ ಎನ್ನುವ ತಜ್ಞರು, ಉಪಾಯದಿಂದ ಅಪಾಯ ತಪ್ಪಿಸಿಕೊಳ್ಳುವಂತೆ ಹೇಳ್ತಿದ್ದಾರೆ. ಈ ವಿಷ್ಯವನ್ನು ಮನೆಯವರಿಗೆ ಹೇಳ್ಬೇಕೆಂದೇನೂ ಇಲ್ಲ. ಚಿಕ್ಕಮ್ಮನಿಗೆ ಮದುವೆಯಾಗಿಲ್ಲ. ಆಕೆಗೆ ಪ್ರೀತಿ ಸಿಕ್ಕಿಲ್ಲ. ತಂದೆ – ತಾಯಿ ಕೂಡ ಜೊತೆಗಿಲ್ಲ. ಹಾಗಾಗಿ ಆಕೆ ನಿಮ್ಮನ್ನು ನೋಡಿ ಅಸೂಯೆಪಡ್ತಿರಬಹುದು. ನಿಮ್ಮ ಪ್ರೀತಿಗೆ ಅಡ್ಡಿಯಾಗ್ತಿರಬಹುದು.
ತರ್ಲೆ ಮಾಡ್ತಿರೋ ಮಕ್ಕಳನ್ನು ನಿಭಾಯಿಸೋದು ಕಷ್ಟವಾಗ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿ
ನೀವಿಬ್ಬರೂ ಒಂದಷ್ಟು ಸಮಯವನ್ನು ಒಟ್ಟಿಗೆ ಕಳೆಯಲು ಪ್ಲಾನ್ ಮಾಡಿ. ಮನೆಯಿಂದ ಹೊರಗೆ ಹೋಗುವ ಪ್ಲಾನ್ ಮಾಡಿ. ಈ ಬಗ್ಗೆ ಚಿಕ್ಕಮ್ಮನಿಗೆ ಹೇಳಿ. ಅವರು ಒಪ್ಪಿಗೆ ನೀಡಿದ್ರೆ ನಾಟಕವಾಡ್ತಿಲ್ಲ ಎಂದರ್ಥ. ಒಪ್ಪಿಗೆ ನೀಡದೆ ಹೋದ್ರೆ ಖಂಡಿತ ನಾಟಕವಾಡ್ತಿದ್ದಾರೆ ಎಂದರ್ಥ. ಆಗ ನಿಮ್ಮ ಪತಿಗೆ ನೀವು ನಿಧಾನವಾಗಿ ವಿಷ್ಯ ತಿಳಿಸಬೇಕು. ಚಿಕ್ಕಮ್ಮನ ವಿಷ್ಯಕ್ಕೆ ನಿಮ್ಮ ದಾಂಪತ್ಯ ಸುಖ ಹಾಳು ಮಾಡಿಕೊಳ್ಳಬೇಡಿ ಎನ್ನುತ್ತಿದ್ದಾರೆ ತಜ್ಞರು.
