ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್
ಕೋತಿಗಳು ಮನುಷ್ಯರಷ್ಟೇ ಬುದ್ಧಿವಂತ ಪ್ರಾಣಿಗಳು. ಇದು ಅನೇಕ ಬಾರಿ ಸಾಬೀತಾಗಿದೆ. ಈಗ ಮತ್ತೊಂದು ವಿಚಿತ್ರ ಘಟನೆ ಎಂದರೆ ತಾಯಿ ಕೋತಿಯೊಂದು ತನಗಾದ ಗಾಯಕ್ಕೆ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಬಂದಿದೆ.
ಪಾಟ್ನಾ: ಕೋತಿಗಳು ಮನುಷ್ಯರಷ್ಟೇ ಬುದ್ಧಿವಂತ ಪ್ರಾಣಿಗಳು. ಇದು ಅನೇಕ ಬಾರಿ ಸಾಬೀತಾಗಿದೆ. ಈಗ ಮತ್ತೊಂದು ವಿಚಿತ್ರ ಘಟನೆ ಎಂದರೆ ತಾಯಿ ಕೋತಿಯೊಂದು ತನಗಾದ ಗಾಯಕ್ಕೆ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಬಂದಿದೆ. ವಿಚಿತ್ರ ಎಂದರೂ ಇದು ಸತ್ಯ. ಬಿಹಾರದ (Bihar) ಸಸರಾಮ್‌ನಲ್ಲಿ (Sasaram) ಈ ಘಟನೆ ನಡೆದಿದೆ. ಕೋತಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಡಿಲಲ್ಲಿ ಮರಿಯನ್ನು ಇಟ್ಟುಕೊಂಡಿದ್ದ ತಲೆಯಲ್ಲಿ ಗಾಯಕ್ಕೊಳಗಾಗಿದ್ದ ಕೋತಿಯೊಂದು ಸೀದಾ ಮನುಷ್ಯರು ಚಿಕಿತ್ಸೆ ಪಡೆಯುವ ಚಿಕಿತ್ಸಾಲಯಕ್ಕೆ ಬಂದಿದೆ. ಕೋತಿಯ ತಲೆಯಲ್ಲಿ ಗಾಯ ನೋಡಿದ ವೈದ್ಯ ಡಾ. ಎಸ್.ಎಂ ಅಹ್ಮದ್ (Dr S M Ahmed) ಅದಕ್ಕೆ ಚಿಕಿತ್ಸೆ ನೀಡಿದ್ದಾರೆ. ಬಿಹಾರದ ಸಸರಾಮ್‌ನ (Sasaram) ಶಹಜಮಾ (Shahjama) ಪ್ರದೇಶದಲ್ಲಿರುವ ಮೆಡಿಕೊ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ಕ್ಲಿನಿಕ್‌ನೊಳಗೆ ಸೀದಾ ಬಂದು ರೋಗಿಗಳು ಮಲಗುವ ತಪಾಸಣಾ ಬೆಡ್ ಮೇಲೆ ಕೋತಿ ಕುಳಿತಿದೆ. ಕೂಡಲೇ ವೈದಯ ಅಹ್ಮದ್ ಅವರು ಅದರ ತಲೆಯಲ್ಲಿರುವ ಗಾಯ ನೋಡಿ ಅದಕ್ಕೆ ಚಿಕಿತ್ಸೆ ನೀಡಿದ್ದಾರೆ.
ಈ ಸುದ್ದಿ ಸುತ್ತಮುತ್ತಲ ಜನರಿಗೆ ತಿಳಿಯುತ್ತಿದ್ದಂತೆ ಜನರೆಲ್ಲ ಕೋತಿಯನ್ನು ನೋಡಲು ಕ್ಲಿನಿಕ್‌ಗೆ ದೌಡಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವೈದ್ಯ ಅಹ್ಮದ್ ಕೋತಿ ಆರಂಭದಲ್ಲಿ ಸ್ವಲ್ಪ ಹೆದರಿಕೊಂಡಿತ್ತು. ಆದರೆ ಈ ತಾಯಿ ಕೋತಿಯನ್ನು ನೋಡಿದಾಗ ಅದು ಸ್ವಲ್ಪ ಗಾಯಗೊಂಡಿರುವುದು ಕಂಡು ಬಂತು, ನಂತರ ಟೆಟನಸ್ (Tetanus) ನೀಡಿ ಅದರ ಮುಖಕ್ಕೆ ಮುಲಾಮ್ ಹಚ್ಚಿದೆ. ಈ ಪ್ರಕ್ರಿಯೆಯುದ್ದಕ್ಕೂ ಕೋತಿ ತಪಾಸಣಾ ಬೆಡ್ ಮೇಲೆ ಮಲಗಿತ್ತು ಎಂದು ವೈದ್ಯರು ಹೇಳಿದರು. ನಂತರ ಕೋತಿಯ ಗಾಯಕ್ಕೆ ಬ್ಯಾಂಡೇಜ್ ಮಾಡಲಾಯಿತು.
ಮರವೇರಿ ಕೋತಿಯ ಬೇಟೆಯಾಡಿದ ಚಿರತೆ: ರೋಚಕ ವಿಡಿಯೋ ವೈರಲ್
ಅಲ್ಲದೇ ಕೋತಿಯನ್ನು ನೋಡಲು ಸೇರಿದ್ದ ಜನರನ್ನು ಅಲ್ಲಿಂದ ತೆರಳುವಂತೆ ವೈದ್ಯರು ಮನವಿ ಮಾಡಿದರು ಏಕೆಂದರೆ ಜನರನ್ನು ನೋಡಿದ ಕೋತಿ ಬೆದರಿ ಅಲ್ಲಿಂದ ಹೋಗಲು ಭಯಪಟ್ಟರೆ ಎಂಬುದು ವೈದ್ಯರ ಚಿಂತನೆಯಾಗಿತ್ತು. ಮನುಷ್ಯರಿಗಿಂತ ಮಿಗಿಲಾಗಿಯೂ ಪ್ರಾಣಿಗಳ ನಡುವೆ ಇರುವ ಅನೋನ್ಯ ಸಂಬಂಧವನ್ನು ತೋರಿಸುವ ಅನೇಕ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇವರೇನೂ ಪ್ರಾಣೆಗಳೋ ಅಥವಾ ಮನುಷ್ಯರೋ ಎಂದು ಅವುಗಳು ವರ್ತಿಸುವ ರೀತಿ ನೋಡಿದಾಗ ಅನಿಸುವಷ್ಟು ಅವರ ನಡವಳಿಕೆಗಳು ನಮ್ಮಲ್ಲಿ ಬೆರಗು ಮೂಡಿಸುತ್ತವೆ. ಅದೇ ರೀತಿ ಇಲ್ಲೊಂದು ಕೋತಿಗಳ ವಿಡಿಯೋವೊಂದು ಎಲ್ಲರ ಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.
ಬೆಕ್ಕಿನೊಂದಿಗೆ ಪ್ರೀತಿಯಲ್ಲಿ ಬಿದ್ದ ಕೋತಿ: ತಬ್ಬಿ ಕಿಸ್ ಮಾಡಲೆತ್ನಿಸಿದ ವಾನರ
ಮನೆಗೆ ನೆಂಟರು ಬಂದಾಗ ಅಥವಾ ಅಪರೂಪದ ದೂರದ ಬಂಧುಗಳು ಆಗಮಿಸಿದಾಗ ಮನುಷ್ಯರಾದ ನಾವು ಹೇಗೆ ಆತ್ಮೀಯವಾಗಿ ವರ್ತಿಸುತ್ತೇವೆ? ಅವರನ್ನು ಹೇಗೆ ಬಿಗಿದಪ್ಪಿ ಸತ್ಕರಿಸುತ್ತೇವೆಯೋ ಅದೇ ರೀತಿ ಎರಡು ಕೋತಿಗಳು ಇಲ್ಲಿ ಪರಸ್ಪರ ಪ್ರೀತಿಯಿಂದ ತಬ್ಬಿಕೊಳ್ಳುತ್ತಿರುವ ರೀತಿ ಮನಸಿಗೆ ಸೋಜಿಗ ನೀಡುತ್ತಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಎರಡು ಕೋತಿಗಳು (Monkey) ಬೆನ್ನಿನ ಮೇಲೆ ಮರಿಗಳನ್ನು ಇಟ್ಟುಕೊಂಡಿವೆ. ಪರಸ್ಪರ ಹತ್ತಿರ ಬಂದು ಎರಡೂ ಗಟ್ಟಿಯಾಗಿ ತಬ್ಬಿಕೊಳ್ಳುತ್ತವೆ. ಜೊತೆಗೆ ಮತ್ತೊಂದು ಕೋತಿಯ ಬೆನ್ನಿನ ಮೇಲಿದ್ದ ಮರಿಯನ್ನು ಇನ್ನೊಂದು ಕೋತಿ ಎತ್ತಿಕೊಂಡು ತಬ್ಬಿ ಮುದ್ದಾಡುತ್ತಿದೆ. ಈ ವಿಡಿಯೋ ನೋಡತ್ತಿದ್ದಾರೆ. ಮನೆಗೆ ಬಂದ ನೆಂಟರ ಸಣ್ಣ ಮಕ್ಕಳನ್ನು ಮಾನವರಾದ ನಾವು ಹೇಗೆ ಎತ್ತಿಕೊಂಡು ಮುದ್ದಾಡುತ್ತೇವೆಯೋ ಅದೇ ರೀತಿ ಈ ಕೋತಿಗಳು ವರ್ತಿಸುತ್ತಾ ಪರಸ್ಪರ ಪ್ರೀತಿ ತೋರುತ್ತಿದ್ದು, ಇವುಗಳು ಮನುಷ್ಯರೋ ಪ್ರಾಣಿಗಳೋ ಎಂಬ ಸಂಶಯವನ್ನು ಮೂಡಿಸುತ್ತಿವೆ.