ತರ್ಲೆ ಮಾಡ್ತಿರೋ ಮಕ್ಕಳನ್ನು ನಿಭಾಯಿಸೋದು ಕಷ್ಟವಾಗ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿ

ತರ್ಲೆ ಮಾಡೋ ಮಕ್ಕಳು (Children) ಎಲ್ಲರಿಗೂ ಇಷ್ಟವಾಗುತ್ತಾರೆ. ಆದರೆ ಅವ್ರನ್ನು ನೋಡಿಕೊಳ್ಳೋ ತಂದೆ-ತಾಯಿಗೆ  ಮಾತ್ರ ಇದು ತಲೆನೋವಿನ ಕೆಲ್ಸ. ಕೆಲ ಪೋಷಕರು (Parents) ಪ್ರತಿ ಕ್ಷಣವೂ ಮಕ್ಕಳ ಹಿಂದೆ ಓಡಾಡಿ ಅವ್ರ ಸ್ವಭಾವ (Behaviour) ವನ್ನು ಸರಿಮಾಡಲು ನೋಡುತ್ತಾರೆ. ಆದ್ರೂ ಸುಲಭವಾಗಿ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ (Problem) ನಮ್ಮಲ್ಲಿದೆ ಈಝಿ ಸೊಲ್ಯೂಷನ್‌.

Helpful Tips For Parents To Handle Naughty Kids Vin

ಚಿಕ್ಕಂದಿನಲ್ಲಿ ಪ್ರತೀ ಮಕ್ಕಳು (Children)ತರ್ಲೆ ಸ್ವಭಾವವನ್ನು ಹೊಂದಿರುತ್ತಾರೆ. ಕೆಲವು ಮಕ್ಕಳಲ್ಲಿ ಕಡಿಮೆ ತರ್ಲೆ ಸ್ವಭಾವವಿದ್ದರೆ, ಕೆಲ ಮಕ್ಕಳಲ್ಲಿ ಇದು ಹೆಚ್ಚಿರುತ್ತದೆ. ಇಂಥಾ ಸಂದರ್ಭದಲ್ಲಿ ಮಗು ಕಿರುಚಿದರೆ ಅಥವಾ ಅಳುತ್ತಿದ್ದರೆ ಅಥವಾ ಗಲಾಟೆ ಮಾಡಿದರೆ ಪಾಲಕರು (Parents) ಕೋಪಗೊಳ್ಳುತ್ತಾರೆ ಮತ್ತು ಬೈಯುತ್ತಾರೆ. ಮಗುವಿನ ಇಂತಹ ವರ್ತನೆಯ (Behaviour) ಹಿಂದಿನ ಕಾರಣ ಏನು ಎಂದು ಹಲವರಿಗೆ ಅನೇಕ ಬಾರಿ ಆಶ್ಚರ್ಯವಾಗುತ್ತದೆ. ಆದರೆ ನೀವು ಈ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ ಮತ್ತು ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬೇಕಾಗಿಲ್ಲ. ನಿಮ್ಮ ತುಂಟತನದ ಮಗುವನ್ನು ನೀವು ಕೆಲವು ಸುಲಭ ರೀತಿಯಲ್ಲಿ ನಿಭಾಯಿಸಬಹುದು ಮತ್ತು ಅವನ ಮೇಲೆ ಕೋಪಗೊಳ್ಳುವುದನ್ನು ತಡೆಯಬಹುದು. ಅಂತಹ ಕೆಲವು ವಿಧಾನಗಳ ಬಗ್ಗೆ ನಾವು ಇಲ್ಲಿ ಹೇಳುತ್ತಿದ್ದೇವೆ, ಇದು ಹಠಮಾರಿ ಮಕ್ಕಳನ್ನು ನಿಭಾಯಿಸಲು ಪೋಷಕರಿಗೆ ಸಹಾಯ ಮಾಡುತ್ತದೆ.

ಕೆಲವು ಮಿತಿಗಳನ್ನು ಹೊಂದಿಸಿ: ನಿಮ್ಮ ಮಗು ಏನು ಹೇಳಿದರೂ ಒಪ್ಪಿಕೊಳ್ಳುವ ಅಭ್ಯಾಸ (Habit)ವನ್ನು ಬಿಡಿ. ಕೆಲವು ಮಿತಿಗಳನ್ನು ಹಾಕಿಕೊಳ್ಳಿ. ಪ್ರೀತಿಯಿಂದ ಮಾತನಾಡಿ ಆದರೆ ಮಗು ಕೋಪೋದ್ರೇಕವನ್ನು ತೋರಿಸಿದರೆ, ಅಂತಹ ನಡವಳಿಕೆಯು ಅವನ ಬೇಡಿಕೆಯನ್ನು ಪೂರೈಸುವುದಿಲ್ಲ ಎಂದು ಅವನಿಗೆ ವಿವರಿಸಿ. ಒಮ್ಮೆ ಅಥವಾ ಎರಡು ಬಾರಿ ತಪ್ಪಾಗಿ ವರ್ತಿಸುವ ಮಗುವಿನ ಬೇಡಿಕೆಯನ್ನು ನೀವು ಪೂರೈಸಿದರೆ, ಅವನು ಅದನ್ನು ಬಳಸಿಕೊಳ್ಳಬಹುದು.

Parenting Tips : ಮಕ್ಕಳ ಮುಂದೆ ಈ ಕೆಲಸ ಮಾಡದಂತೆ ನೋಡಿಕೊಳ್ಳಿ

ನಿಮ್ಮನ್ನು ಬದಲಾಯಿಸಿಕೊಳ್ಳಬೇಡಿ: ಪ್ರತಿದಿನ ಮಗುವನ್ನು ವಿಭಿನ್ನವಾಗಿ (Different) ಪರಿಗಣಿಸಬೇಡಿ. ಒಂದು ದಿನ ನೀವು ಮಗುವಿಗೆ ದೀರ್ಘಕಾಲದವರೆಗೆ ಟಿವಿ ವೀಕ್ಷಿಸಲು ನಿರಾಕರಿಸಿದರೆ ಮತ್ತು ಎರಡನೇ ದಿನ ಅವನಿಗೆ ಅನುಮತಿ ನೀಡಿದರೆ, ಮಗುವಿಗೆ ಇದರಿಂದ ಏನೂ ಅರ್ಥವಾಗುವುದಿಲ್ಲ. ಹೀಗಾಗಿ ಮಕ್ಕಳನ್ನು ಯಾವಾಗಲೂ ಒಂದೇ ರೀತಿ ಟ್ರೀಟ್ ಮಾಡಿ. ದಿನಕ್ಕೊಂದು ರೀತಿ ವರ್ತಿಸುವ ಅಭ್ಯಾಸವನ್ನು ಬಿಟ್ಟು ಬಿಡಿ.

ಮಗುವಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಿ: ಪ್ರತಿ ಬಾರಿಯೂ ಮಗುವಿಗೆ ಹಾಗೆ ಮಾಡು, ಹೀಗೆ ಮಾಡು ಎಂದು ಸಲಹೆ ನೀಡುತ್ತಾ ಕೂರಬೇಡಿ. ಮಕ್ಕಳಿಗೆ ಇದು ಇಷ್ಟವಾಗುವುದಿಲ್ಲ. ಎಲ್ಲಾ ವಿಷಯದಲ್ಲಿಯೂ ಪೋಷಕರು ನನ್ನನ್ನು ನಿರ್ಬಂಧಿಸುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಸ್ಪಲ್ಪ ಸ್ವಾತಂತ್ರ್ಯ (Freedom) ನೀಡಿ. ಸ್ವಂತ ಬಟ್ಟೆ, ಆಟಿಕೆ, ಆಹಾರವನ್ನು ಆಯ್ದುಕೊಳ್ಳಲು ಅವಕಾಶ ನೀಡಿ.

ತುಂಟತನದ ಪರಿಣಾಮಗಳನ್ನು ತಿಳಿಸಿ: ಮಗುವಿನ ತುಂಟತನದ ಪರಿಣಾಮಗಳು ಏನಾಗಬಹುದು ಎಂದು ಮಗುವಿಗೆ ತಿಳಿಸಿ ಮತ್ತು ಅದರಿಂದ ಅವನು ಹೆಚ್ಚು ಹಾನಿಗೊಳಗಾಗುತ್ತಾನೆ ಎಂಬುದನ್ನು ಹೇಳಿಕೊಡಿ. ಕುತಂತ್ರ ತೋರಿಸಿದರೆ ಅಥವಾ ಮಾತನಾಡದೆ ಕೂಗಿದರೆ ತೊಂದರೆಯಾಗಬಹುದು ಎಂದು ತಿಳಿಯಬೇಕು. ಈ ರೀತಿಯ ನಡವಳಿಕೆಯು ಸ್ವೀಕಾರಾರ್ಹವಲ್ಲ ಎಂದು ಅವರಿಗೆ ಗೊತ್ತಾದಾಗ ಅಂಥಾ ವರ್ತನೆಯನ್ನು ಬಿಟ್ಟು ಬಿಡುತ್ತಾರೆ.

ಮಕ್ಕಳಲ್ಲಿ ಇಂಥಾ ಕೆಟ್ಟ ಅಭ್ಯಾಸವಿರುತ್ತೆ, ಹೇಗಾದ್ರೂ ಬಿಡಿಸಿ ಬಿಡಿ, ಇಲ್ಲಾಂದ್ರೆ ಫ್ಯೂಚರ್ ತುಂಬಾ ಕಷ್ಟ !

ಕೋಪೋದ್ರೇಕವನ್ನು ಸಹಿಸಬೇಡಿ: ನಿಮ್ಮ ಮಗು ದೀರ್ಘಕಾಲದವರೆಗೆ ನಿರಂತರವಾಗಿ ಅಳುತ್ತಿದ್ದರೆ, ನಿಮ್ಮ ಮನಸ್ಸು ಕರಗುತ್ತದೆ ಮತ್ತು ಅವನ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತದೆ. ಆದರೆ ಪ್ರತಿ ಬಾರಿ ಮಗು ಅಳಿದಾಗ ಅಥವಾ ಕೋಪ (Angry)ಗೊಂಡಾಗ, ಅವನ ಬೇಡಿಕೆಯನ್ನು ಈಡೇರಿಸಬಾರದು. ಇದು ಮಗುವನ್ನು ಹಾಳು ಮಾಡುತ್ತದೆ. ಅಳುವುದು ಮತ್ತು ಕೂಗುವುದರಿಂದ ನನಗೆ ಬೇಕಾದ್ದೆಲ್ಲಾ ಸಿಗುತ್ತದೆ ಎಂದು ಮಗು ಭಾವಿಸುತ್ತದೆ.

ಮಕ್ಕಳ ಜೊತೆ ಕಿರುಚಬೇಡಿ: ಮಕ್ಕಳು ಸಿಟ್ಟು ಬಂದಾಗ ಸಾಮಾನ್ಯವಾಗಿ ಜೋರಾಗಿ ಕಿರುಚಾಡೋ ಅಭ್ಯಾಸವನ್ನು ಇಟ್ಟುಕೊಂಡಿರ್ತಾರೆ. ಇದರಿಂದ ನಿಮ್ಮ ಸಿಟ್ಟು ಸಹ ಹೆಚ್ಚಾಗುವುದು ಸಹಜ. ಹಾಗೆಂದು ನೀವು ಸಹ ದೊಡ್ಡ ದನಿಯಲ್ಲಿ ಕಿರುಚುತ್ತಾ ಕೂರಬೇಡಿ. ಹೀಗೆ ಮಾಡುವುದರಿಂದ ಮಗು ಮತ್ತಷ್ಟು ಹಠ ಸ್ವಭಾವನ್ನು ಮೈಗೂಡಿಸಿಕೊಳ್ಳುತ್ತದೆ. ಇದರ ಬದಲು ಶಾಂತವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿ. 

Latest Videos
Follow Us:
Download App:
  • android
  • ios