Asianet Suvarna News Asianet Suvarna News

ದೈಹಿಕ ಸಂಬಂಧ ಬೆಳೆಸಿ ಮಗು ಪಡೆದ್ರೂ ಆತನ ವಿಳಾಸ ಗೊತ್ತಿಲ್ಲ… ಮಗಳ ಅಪ್ಪನಿಗಾಗಿ ಈಗ ಹುಡುಕಾಟ!

 ಜಗತ್ತು ವಿಚಿತ್ರವಾಗಿದೆ. ಅನೇಕರಿಗೆ ಆ ಕ್ಷಣ ಮುಖ್ಯವಾಗುತ್ತೆ ವಿನಃ ಭವಿಷ್ಯವಲ್ಲ. ಅಪರಿಚಿತನ ಜೊತೆ ಸಂಬಂಧ ಬೆಳೆಸಿ ಮಗು ಪಡೆದ ಮಹಿಳೆಯೊಬ್ಬಳು ಈಗ ಮಗಳಿಗಾಗಿ ತಂದೆ ಹುಡುಕಾಟ ನಡೆಸಿದ್ದಾಳೆ. 
 

Woman Searching Father Of Child Does Not Know His Name Address  roo
Author
First Published Dec 20, 2023, 3:45 PM IST

ಯಾವುದೇ ಸಂಬಂಧವಾದರೂ ಚೆನ್ನಾಗಿದ್ದರೆ ಅದಕ್ಕೊಂದು ಬೆಲೆ. ಗಂಡ-ಹೆಂಡತಿ, ತಂದೆ-ತಾಯಿಯರ ಸಂಬಂಧ ಚೆನ್ನಾಗಿದ್ದಾಗ ಮಾತ್ರ ಕುಟುಂಬದಲ್ಲಿ ನೆಮ್ಮದಿ ಇರುತ್ತೆ. ತಂದೆ ತಾಯಿ ಜಗಳವಾಡುತ್ತಿದ್ದರೆ ಅದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಹಾಗೇ ಆ ಮಗು ತಂದೆ ಅಥವಾ ತಾಯಿಯಲ್ಲಿ ಒಬ್ಬರನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ.

ಇಂದು ಎಷ್ಟೋ ಕಡೆಗಳಲ್ಲಿ ಮಕ್ಕಳಿಗೆ ತಂದೆಯ ಪ್ರೀತಿ (Love) ಸಿಗೋದಿಲ್ಲ. ಅತ್ಯಾಚಾರಕ್ಕೆ ಒಳಗಾದ ಇಲ್ಲವೆ ಇನ್ನಾವುದೋ ಕಾರಣಕ್ಕೆ ಪುರುಷನ ಜೊತೆ ದೈಹಿಕ ಸಂಬಂಧ ಬೆಳೆಸಿ ಗರ್ಭ ಧರಿಸಿದ ಮೇಲೆ ಯಾವುದೇ ರಕ್ಷಣೆಯಿಲ್ಲದೇ ಕಷ್ಟಪಡುವ ಅದೆಷ್ಟೋ ಹೆಣ್ಣು ಮಕ್ಕಳನ್ನು ನಾವು ನೋಡುತ್ತೇವೆ. ಇನ್ನು ಕೆಲವು ಮಹಿಳೆಯರು ಶೋಷಣೆಗೆ ಒಳಗಾಗಿ ಗಂಡನಿಂದ ದೂರ ಇರುತ್ತಾರೆ. ಅಂತವರ ಮಕ್ಕಳಿಗೆ ಸಹಜವಾಗಿ ತಂದೆಯ ಪ್ರೀತಿ ಸಿಗುವುದಿಲ್ಲ. ತಂದೆ ಬೇಕೆನ್ನುವ ಆಸೆ ಅವರಲ್ಲಿ ಹುಟ್ಟಿದರೂ ಕೆಲವರಿಗೆ ತಂದೆ ಯಾರೆಂದೇ ತಿಳಿದಿರುವುದಿಲ್ಲ. 

ಮಾಜಿ ಗಂಡ ಅಂದ್ರೆ ನಿನ್ನಂಗಿರ್ಬೇಕಪ್ಪ ಅಂತ ಹೃತಿಕ್​ ರೋಷನ್ ಕಾಲೆಳೀತಿರೋ ನೆಟ್ಟಿಗರು​: ಅಷ್ಟಕ್ಕೂ ಆಗಿದ್ದೇನು?

8 ವರ್ಷದ ಮಗಳಿಗೆ ತಂದೆಯನ್ನು ಹುಡುಕಿಕೊಟ್ಟ ತಾಯಿ : ಇಲ್ಲೊಬ್ಬ ಮಹಿಳೆ ಕೂಡ ತನ್ನ 8 ವರ್ಷದ ಮಗಳಿಗೆ ತಂದೆಯನ್ನು ಹುಡುಕುವ ಪ್ರಯತ್ನದಲ್ಲಿದ್ದಾಳೆ. ಈಕೆ 9 ವರ್ಷದ ಹಿಂದೆ ತಾನು ಗರ್ಭಿಣಿಯಾಗಲು ಕಾರಣವಾದ ಯುವಕನನ್ನು ಹುಡುಕುತ್ತಿದ್ದಾಳೆ. ಆದರೆ ಈಕೆಗೆ ಆತನ ವಿಳಾಸ, ಫೋನ್ ನಂಬರ್ ಯಾವುದೂ ತಿಳಿದಿಲ್ಲ. ತನ್ನ ಪ್ರೇಮಿಯ ಬಗ್ಗೆ ಈಕೆಗೆ ಕೇವಲ ಒಂದು ವಿಷಯ ಮಾತ್ರ ನೆನಪಿದೆ.

ಚೀನಾ (China)ದ ಚೂಂಗ್ ಚಿಂಗ್ ನಿವಾಸಿಯಾಗಿರುವ ಫೆಂಗ್ ಎನ್ನುವ ಮಹಿಳೆಯೇ ತನ್ನ ಮಗಳಿಗೆ ತಂದೆಯನ್ನು ಹುಡುಕಿಕೊಡುವ ಹಠ ತೊಟ್ಟಿದ್ದಾಳೆ. ಈಕೆ ಚೀನಾದ ರಾಷ್ಟ್ರೀಯ ದೂರದರ್ಶನದಲ್ಲಿ ತನ್ನ ಪ್ರೇಮಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾಳೆ. ರಾಷ್ಟ್ರೀಯ ದೂರದರ್ಶನ ಕಳೆದುಹೋದ ಸಂಬಂಧಿಕರು ಮತ್ತು ಸ್ನೇಹಿತರನ್ನು ಹುಡುಕಿಕೊಡುವ ಕಾರ್ಯಕ್ರಮ ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಫೆಂಗ್ ತನ್ನ ಮಗಳ ತಂದೆಯನ್ನು ಹುಡುಕಿಕೊಡಿ ಎಂದು ಕೇಳಿಕೊಂಡಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನ ವರದಿಯ ಪ್ರಕಾರ, ಫೆಂಗ್ ಅವಳಿಗೆ ತನ್ನ ಪ್ರಿಯಕರನ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ.  ಆತ ಒಂದು ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದ. ಆಗ ನಾನು ಆತನನ್ನು ಭೇಟಿ ಮಾಡಿದ್ದೆ. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆಯಿತು. ಆದರೆ ಒಂದೇ ವಾರಕ್ಕೆ ನಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ನಮ್ಮ ಸಂಬಂಧ ಅಲ್ಲೇ ಕೊನೆಯಾಯಿತು. ಕೆಲವು ತಿಂಗಳು ಕಳೆದ ನಂತರ ನಾನು ಗರ್ಭಧರಿಸಿದ್ದೇನೆ ಎನ್ನುವುದು ನನಗೆ ಗೊತ್ತಾಯಿತು ಎಂದು ಫೆಂಗ್ ಹೇಳಿದ್ದಾಳೆ. ಆತನ ವರ್ತನೆ ಸರಿಯಿಲ್ಲ ಎನ್ನುವ ಕಾರಣಕ್ಕೆ ಫೆಂಗ್ ತಾನು ಗರ್ಭಿಣಿಯಾಗಿರುವ ವಿಷಯವನ್ನು ಆತನಿಗೆ ಹೇಳಲೇ ಇಲ್ಲ.

ನಂಬಿಕೆಗಿಂತ ಮುಖ್ಯ ದಾಂಪತ್ಯದಲ್ಲಿ ಇನ್ನೇನಿದೆ? ಥ್ಯಾಂಕ್ಯೂ ಗೌತಮ್​ ಸರ್​ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​

ಗರ್ಭಿಣಿಯಾದ ಫೆಂಗ್ ನಂತರ ಮಗಳಿಗೆ ಜನ್ಮ ನೀಡಿದ್ದಳು. ಈಗ ಆಕೆಯ ಮಗಳಿಗೆ 8 ವರ್ಷ. ಫೆಂಗ್ ಈಗ ತನ್ನ ಮಗಳಿಗೆ ತಂದೆಯನ್ನು ಹುಡುಕಲು ಹೊರಟಿದ್ದಾಳೆ. ಫೆಂಗ್ ಗೆ ಆ ವ್ಯಕ್ತಿಯ ಗುರುತಿನ ಚೀಟಿಯಲ್ಲಿದ್ದ ವಿಳಾಸದಲ್ಲಿ ಚೂಂಗ್ ಚಿಂಗ್ ಎಂದು ಬರೆದಿತ್ತು ಮತ್ತು ಆತನ ಗೆಳೆಯ ಐಸ್ ಕ್ರೀಮ್ ಅಂಗಡಿಯನ್ನು ಹೊಂದಿದ್ದ ಎನ್ನುವುದು ಮಾತ್ರ ನೆನಪಿದೆ. ಇದರ ಹೊರತಾಗಿ ಆ ವ್ಯಕ್ತಿಯ ಬಗ್ಗೆ ಇನ್ಯಾವುದೇ ಮಾಹಿತಿ ಇರಲಿಲ್ಲ. ಫೆಂಗ್ ಳ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ದೂರದರ್ಶನದ ಕಾರ್ಯಕ್ರಮದ ಫಲವಾಗಿ ಕೊನೆಗೆ ಫೆಂಗ್ ತನ್ನ ಮಗಳ ತಂದೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾಳೆ. ಈಗ ತಂದೆ ತಾಯಿಯರಿಬ್ಬರೂ ಮಗಳ ಮುಂದಿನ ಭವಿಷ್ಯದ ಕುರಿತು ಚರ್ಚೆ ಮಾಡುತ್ತಿದ್ದಾರೆ.
 

Follow Us:
Download App:
  • android
  • ios